Friday, March 22, 2024

ಸೌಹಾರ್ದತೆ : ಒಂದು ಜೀವನ ಕ್ರಮ

ಲೇಖಕರು :  ಇಸ್ಮತ್ ಪಜೀರ್ ದೇಶದ ತುಂಬಾ ಕೋಮುವಾದ ಮತ್ತು ಅಸಹಿಷ್ಣುತೆಯ ವಿಷವಾಯು ಹಬ್ಬಿ ಉಸಿರುಗಟ್ಟುವ ವಾತಾವರಣವಿರುವ ಈ ಕಾಲದಲ್ಲಿ ಸೆಕ್ಯುಲರಿಸಮ್ ಎಂಬ ಒಣ ಸಿದ್ಧಾಂತ ಕೆಲಸಕ್ಕೆ ಬಾರದು. ಕಳೆದ ಹನ್ನೆರಡು ವರ್ಷಗಳಿಂದ ಕೋಮು ಸೌಹಾರ್ದ ಚಳವಳಿಯ ಕಾರ್ಯಕರ್ತನಾಗಿ ನನ್ನ ಇತಿಮಿತಿಯಲ್ಲಿ ದುಡಿಯುತ್ತಿರುವ ನನಗೊಂದು ಸಿದ್ಧಾಂತವಿದೆ. ಇದು ಜಾತ್ಯಾತೀತತೆಯನ್ನು ಒಪ್ಪಿ ಅದಕ್ಕಾಗಿ ಕೆಲಸ ಮಾಡುವವರಿಗೆ ಪ್ರಯೋಜನಕ್ಕೆ...

ಇತಿಹಾಸ ಐತಿಹ್ಯ ಪುರಾಣ

ಲೇಖಕರು: ಚರಣ್ ಐವರ್ನಾಡು ಐತಿಹ್ಯ ಮತ್ತು ಇತಿಹಾಸಗಳೆರಡೂ ಸಂಸ್ಕೃತ ಮೂಲದ ಪದಗಳು. "ಹೀಗೆ ಇತ್ತು" ಎಂಬುದು ಇದರ ಅರ್ಥ. ಆದರೆ ಈ ಎರಡೂ ಪದಗಳು ಒಂದೇ ಮೂಲದವರಾದರೂ ಬೌದ್ಧಿಕ ವಲಯ ಇವೆರಡನ್ನೂ ಪ್ರತ್ಯೇಕಿಸುತ್ತದೆ. ಐತಿಹ್ಯವು "ಹಿಂದೆ ಇತ್ತು" ಎಂಬಲ್ಲಿಂದ ಅನೇಕ ವೈಭವೀಕೃತ ಮಾರ್ಪಾಡುಗಳೊಂದಿಗೆ ಅತಿಮಾನುಷವೂ, ಅಸಹಜವೂ, ಅಸ್ವಾಭಾವಿಕವೂ ಆಗುತ್ತದೆ. ಈಗ ಈ "ಐತಿಹ್ಯ" ಪದವು ಇಂಗ್ಲೀಷಿನ Legend...

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ನೆನಪು ಮಾತ್ರ.

ಕನ್ನಡದ ಹೆಸರಾಂತ ಲೇಖಕ, ನಾಟಕಗಾರ, ನಿರ್ದೇಶಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಇನ್ನು ಕೇವಲ ನೆನಪಾಗಿಯೇ ಉಳಿದಿದ್ದಾರೆ. ಸದಾ ಜಾತ್ಯಾತೀತ ತತ್ವವನ್ನು ಮೈಗೋಡಿಸಿಕೊಂಡು, ತಾನು ನಂಬಿದ ತತ್ವವನ್ನು ಕೊನೆಯವರೆಗೂ ಪಾಲಿಸಿಕೊಂಡು ಬಂದವರು. ಗಿರೀಶ್ ಕಾರ್ನಾಡ್ ಅಗಲಿಕೆಯಿಂದ ನಮ್ಮ ದೇಶಕ್ಕೆ ಮಾತ್ರವಲ್ಲದೆ ಈಡೀ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರೆ ತಪ್ಪಾಗಲಾರದು. ಸಾಹಿತ್ಯ, ಚಿತ್ರರಂಗ,...

ಮಸೀದಿ ಮೇಲೋ ಕಲ್ಪವೃಕ್ಷ ತೆಂಗು ಮೇಲೋ

ಇದು ಇತ್ತೀಚೆಗೆ ನಾನು ವಾಟ್ಸಾಪಿನಲ್ಲಿ ವೀಕ್ಷಿಸಿದ ಒಂದು ಮಲಯಾಳಂ ಚಿತ್ರಣದ ಬರಹ ರೂಪ. ಮಲಯಾಳಂ ಅರಿಯದವರಿಗೂ ತಲಪಲಿ ಎಂಬ ಉದ್ದೇಶದಿಂದ ಬರೆಯುತ್ತಿದ್ದೇನೆ. ಕೆಲವು ವರ್ಷಗಳ ಹಿಂದಿನ ಕತೆ. ಕೇರಳದ ಮಲಪ್ಪುರಂ ಜಿಲ್ಲೆಯ ಒಂದು ಹಳ್ಳಿಯದು. ಆ ಹಳ್ಳಿಯಲ್ಲಿ ಹಂಚಿನ ಮೇಲ್ಚಾವಣಿಯ ಹಳೆಯ ಮಸೀದಿಯೊಂದಿತ್ತು. ಅದರ ಪಕ್ಕವೇ ಹಿಂದೂ ಕುಟುಂಬವೊಂದು ವಾಸವಾಗಿತ್ತು. ಆ ಹಿಂದೂ ಕುಟುಂಬದವರ ಅಂಗಳದಲ್ಲಿ ಒಳ್ಳೆಯ...

ಜಸ್ಟೀಸ್ ಫೋರ್ ಪಾಯಲ್: ಕ್ಯಾಂಪಸ್ ಜಾತಿ ತಾರತಮ್ಯ ಕ್ಕೆ ಇನ್ನೊಂದು ಬಲಿ

ಲೇಖಕಿ: ನೂರಾ ಸಲಾಂ ಅನುವಾದ: ತಶ್ರೀಫ ಉಪ್ಪಿನಂಗಡಿ ಸರ್ವರಿಗೂ ಉತ್ತಮ ಶಿಕ್ಷಣ ದೊರಯಬೇಕೆಂಬ ಕನಸು ನಮ್ಮ ದೇಶದಲ್ಲಿ ಇನ್ನೂ ಕನಸಾಗಿಯೇ ಉಳಿದಿದೆ. ಸಮಾಜದಲ್ಲಿ ಬೇರೂರಿರುವ ಜಾತೀಯತೆಯ ಕರಗಳಿಗೆ ಇನ್ನೊಂದು ಜೀವವು ಬಲಿಯಾಗಿದೆ.ಉನ್ನತ ಶಿಕ್ಷಣ ಪಡೆದು ಖ್ಯಾತ ವೈದ್ಯರಾಗಬೇಕೆಂಬ ಗುರಿಹೊಂದಿದ್ದ ಡಾ/ಪಾಯಲ್ ಎಂಬ ಯುವ ವೈದ್ಯೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡಾ.ಪಾಯಲ್ ತದ್ವಿ(26ವರ್ಷ) ಸಲೀಂ ತದ್ವಿ ಹಾಗೂ ಅಬೇದಾ ತದ್ವಿ ಪುತ್ರಿ....

ಸಾಧನೆಗೆ ನಿಲುಕದ್ದು ಯಾವುದೂ ಇಲ್ಲ!

ಬಿಂತಿಯಾಸೀನ್,ಹತ್ತಿಮತ್ತೂರು ಹಾವೇರಿ ಜಿಲ್ಲೆ. ಜಗತ್ತಿನಲ್ಲಿ ಪ್ರತಿಯೊಬ್ಬರು ತಾನೋರ್ವ ಸಾಧಕನಾಗದಿದ್ದರೂ ಸಾಮಾನ್ಯರ ನಡುವೆ ನೇರ ಮಾರ್ಗದಲ್ಲಿರಬೇಕೆಂದು ಬಯಸುತ್ತಾರೆ. ಸೋಲು ಕಂಡಾಗಲೆಲ್ಲ ಹಿಂದಡಿ ಇಡುವವರೂ ಇದ್ದಾರೆ, ಅದನ್ನು ಮೆಟ್ಟಿನಿಂತು ಮುಂದೆ ತಮ್ಮ ಗೆಲುವಿನ ಗುರಿಯನ್ನು ಪಡೆಯುವವರೂ ಇದ್ದಾರೆ. ಸಾಧನೆಗೆ ವಯಸ್ಸಾಗಲಿ, ಕೌಟುಂಬಿಕ ಸ್ಥಿತಿಯಾಗಲಿ ಅಡ್ಡಿಬಾರದು. ಎದುರಾಳಿ ಎಷ್ಟೇ ಪ್ರಬಲನಾಗಿದ್ದರೂ ಆತನನ್ನು ಅರಿಯುವ ಕೆಲಸಕ್ಕೆ ಕೈಹಾಕುವುದು ಸಾಧನೆಯ ಮುಂದಿರುವ ದೊಡ್ಡ...

ದೇವರುಗಳೇ ನೀರಿನ ಅಭಾವ ಎದುರಿಸುತ್ತಿದ್ದಾರೆ!

ಲಕ್ಷಾಂತರ ಹಣ ಖರ್ಚು ಮಾಡಿ ಕೊಳವೆ ಬಾವಿ ಕೊರೆಸುವ ಅನೇಕ ದೈವ ಭಕ್ತರು ಧರ್ಮಸ್ಥಳಕ್ಕೋ, ಮಂತ್ರಾಲಯಕ್ಕೋ, ಕುಕ್ಕೆ ಸುಬ್ರಮಣ್ಯಕ್ಕೋ ಒಳ್ಳೆಯ ನೀರು ಸಿಗಲಿ ಎಂದು ಹರಕೆ ಹೊರುತ್ತಾರೆ. ಕೆಲವರು ಕಾಣಿಕೆಯನ್ನೂ ನೀಡುತ್ತಾರೆ. ದುರಾದೃಷ್ಟವಶಾತ್ ಈ ಬಾರಿ ಆ ದೇವರುಗಳೇ ನೀರಿನ ಅಭಾವ ಎದುರಿಸುತ್ತಿವೆ. ಅನೇಕ ಸಂಕಷ್ಟಗಳಿಗೆ ಪರಿಹಾರ ಒದಗಿಸುತ್ತಾರೆ ಎಂದು ನಂಬಲಾದ ದೇವರುಗಳೇ ಸ್ವತಃ ಕಷ್ಟಕ್ಕೆ...

“ಅರೆಬಿಕ್ ಕಾಲಿಗ್ರಾಫಿ” ಅದ್ಭುತ ಕಲೆಯ ಮಾಂತ್ರಿಕ : ಖಲೀಲುಲ್ಲಾ ಚೆಮ್ನಾಡ್

ವ್ಯಕ್ತಿ ಪರಿಚಯ ಕಾಲಿಗ್ರಾಫಿ (Calligraphy)ವಿಶ್ವದ ಅತ್ಯಂತ ಪುರಾತನ ಕಲೆಯಲ್ಲಿ ಒಂದು. 'ಕೊಲೆನ್' 'ಗ್ರಾಫಿಕ್' ಎಂಬ ಗ್ರೀಕ್ ಭಾಷೆಯ ಪದಪ್ರಯೋಗದಿಂದ ಬಳಕೆಯಾದ ಕಾಲಿಗ್ರಾಫಿಯೂ ವಿಶ್ವದ ಎಲ್ಲಾ ಭಾಷೆಯಲ್ಲಿಯೂ ಅದರದ್ದೇ ಆದ ಶೈಲಿಯಲ್ಲಿ ಪ್ರಸಿದ್ದವಾಗಿದೆ. ಭಾರತದಲ್ಲಿ ಅಷ್ಟೇನು ಪರಿಚಿತ ಮತ್ತು ಪ್ರಾಮುಖ್ಯತೆ ಇಲ್ಲದಿದ್ದರೂ ಚಾಲ್ತಿಯಲ್ಲಿದೆ. ಗೋಡೆ ಬರಹ, ಆಮಂತ್ರಣ ಪತ್ರಿಕೆ, ಸಿನಿಮಾ ಟೈಟಲ್ ಗಳಿಗೆ ಸೀಮಿತವಾಗಿದೆ. ದೇವನಗಿರಿ,ಇಂಡಿಯನ್ ಕಾಲಿಗ್ರಾಫಿ, ನಾರಾಯಣ ಪಟ್ಟದರಿಯವರ ಮಲಯಾಳಂ ಶೈಲಿಯೂ ಬಳಸಲಾಗುತ್ತದೆ....

ಹಲವು ಧರ್ಮಗಳ ಸಂಗಮ ಭೂಮಿ,ಭಾರತ

ಕವನ ಉಪ್ಪಿನಂಗಡಿ BA 1st Year GPU College Uppinangady ಪೀಠಿಕೆ: ಭಾರತ ವಿವಿಧತೆಯಲ್ಲಿ ಏಕತೆಯನ್ನು ಮೆರೆಯುವ ದೇಶ. ಭಾರತದಲ್ಲಿರುವ ಧರ್ಮಗಳು, ವಿವಿಧ ಜನಾಂಗಗಳು,ಸಾಂಸ್ಕøತಿಕ ವೈವಿಧ್ಯಗಳು ಮತ್ತು ಭಾಷೆಗಳಲ್ಲಿರುವ ವೈವಿದ್ಯತೆ ಜಗತ್ತಿನ ಇನ್ಯಾವ ದೇಶಗಳಲ್ಲಾಗಲಿ ಇಲ್ಲ. ಈ ದೇಶದಲ್ಲಿ ಹಿಂದೂಗಳು, ಮುಸಲ್ಮಾನರು, ಕ್ರೈಸ್ತರು, ಜೈನರು,ಬೌಧ್ದರು, ಪಾರಸಿಗಳು ಮತ್ತು ಇದೀಗ ಲಿಂಗಾಯಿತ ಧರ್ಮ(ಶರಣ ಪರಂಪರೆ) ಸೇರಿದಂತೆ ವಿವಿಧ ಧರ್ಮಗಳಿವೆ. ಅಧಿಕೃತ ಅಂಕಿ–ಅಂಶಗಳ ಪ್ರಕಾರ ಭಾರತದಲ್ಲಿ 1,618/-ಭಾಷೆಗಳಿವೆ. ಇಂತಹ ವೈವಿಧ್ಯತೆಯ...

ಕಾಲದ ಬೇಡಿಕೆಗೆ ಫೇಸ್ಬುಕ್ ಎಂಬ ಜಾಲದ ಸಹಕಾರ

ಲೇಖಕಿ: ರಹೀನಾ ತೊಕ್ಕೊಟ್ಟು "ಸರ್ವೇ ಜನಾ ಸುಖೀನೋಭವತು""(ಸರ್ವರಿಗೂ ಸುಖವಾಗಲಿ ) "ರಬ್ಬನಾ ಆತಿನಾ ಫಿದ್ದುನ್ಯಾ ಹಸನತನ್ ..."( ಓ ನನ್ನ ಪ್ರಭುವೇ ಎಲ್ಲರಿಗೂ ಒಳಿತನ್ನು ದಯಪಾಲಿಸು) ಭಾಷೆ ವಿಭಿನ್ನ. ಆಶಯ ಒಂದೇ,ಅನನ್ಯವಾದದು. ಈ ಫೇಸ್ಬುಕ್ ಏನೋ ಒಂದು ರೀತಿಯ ವಿಶೇಷ ಶಕ್ತಿ ಹೊಂದಿದೆ ಅಂತಾ ಅನಿಸಲ್ವಾ ? ನಿಮಗೆ? ಸುತ್ತ ಮುತ್ತ ಏನೇ ಕಂಡರೂ ಫೇಸ್ಬುಕ್ ನೆನಪಾಗುತ್ತೆ...

MOST COMMENTED

ನಾನೂ ಮಗುವನ್ನು ಕೊಂದೆ…

ಕಥೆ ಹಂಝ ಮಲಾರ್ ನಾನು ಮಗುವನ್ನು ಕೊಂದೆ... ಅಲ್ಲಲ್ಲ, ನಾನು ಮಗುವನ್ನು ಕೊಂದಿದ್ದೇನೆ... ಯಾವ ಹಂತಕನಿಗೂ ಕಡಿಮೆಯಿಲ್ಲದೆ ಶಿಕ್ಷೆಗೆ ನಾನು ಸಿದ್ಧವಾಗಿದ್ದೇನೆ... ನನಗೆ ಶಿಕ್ಷೆ ಕೊಡುವವರು ಯಾರು? ಸಮಾಜವಾ? ನಾವು ನಂಬಿದ ದೇವರಾ?... ನನಗೊಂದೂ ಗೊತ್ತಾಗುತ್ತಿಲ್ಲ. ಸಮಾಜಕ್ಕೆ ನಾನೀಗಲೂ ಆದರ್ಶ...

HOT NEWS