• ಸದ್ರುದ್ದೀನ್ ವಿ.

ಅತಿಯಾದ ಮಾನಸಿಕ ನೋವು ಅನುಭವಿಸುತ್ತಿರುವ ವ್ಯಕ್ತಿಯೋರ್ವರು ನಿಮ್ಮ ಮುಂದೆ ನಿಂತಿದ್ದಾರೆ. ಆಗ ಅವರನ್ನು ಸಾಂತ್ವನ ಪಡಿಸುವ ಮೊದಲ ಹೆಜ್ಜೆ ಯಾವುದು?

ಕಾಲೇಜು ವಿದ್ಯಾರ್ಥಿಯಾಗಿದ್ದ ಕಾಲ ದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ತರಬೇತಿ ಶಿಬಿರವೊಂದರಲ್ಲಿ ಓರ್ವ ಸಂಪನ್ಮೂಲ ವ್ಯಕ್ತಿಯು ಕೇಳಿದ ಪ್ರಶ್ನೆಯಿದು. ಅದಕ್ಕೆ ನನ್ನ ಉತ್ತರ ಏನಾಗಿತ್ತು? ಎಂದು ಈಗ ನೆನಪಿಲ್ಲ. ಆದರೆ ಈಗ ಯಾರಾದರೂ ಕೇಳಿದರೆ ನನ್ನ ಇದುವರೆಗಿನ ಅನುಭವದ ಆಧಾರದಲ್ಲಿ ನೀಡುವ ಉತ್ತರ ಹೀಗಿರುತ್ತದೆ. ಆ ವ್ಯಕ್ತಿಯನ್ನು ಅಪ್ಪಿಕೊಳ್ಳುತ್ತೇನೆ. ನನ್ನ ಭುಜಕ್ಕೆ ಒರಗಲು ಅಗತ್ಯವಿರುವಷ್ಟು ಸಮಯ ಅವನಿಗೆ ಒದಗಿಸುವೆ. ನಡು ನಡುವೆ ತಲೆಯನ್ನು ನೇವರಿಸಿ, ನಿನ್ನೊಂದಿಗೆ ನಾನೂ ಇದ್ದೇನೆ ಎಂದೂ ಹೇಳುತ್ತಿರುತ್ತೇನೆ. ಕೈಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತೇನೆ… ಹೀಗೆ ಸ್ವಲ್ಪ ಹೊತ್ತು ಭುಜಕ್ಕೆ ಒರಗಿದ ಕಾರಣದಿಂದ ಆ ವ್ಯಕ್ತಿಯ ಕೋಪ, ದುಃಖ ಕರಗಿ ಹೋಗಿರುತ್ತದೆ. ತನ್ನ ಅಸಹಾಯಕ ಪರಿಸ್ಥಿತಿಯಲ್ಲಿ ತನಗೆ ಶಕ್ತಿಯಾಗಿ ಇನ್ನೋರ್ವ ವ್ಯಕ್ತಿಯಿದ್ದಾರೆ ಎಂಬುದು ಆ ವ್ಯಕ್ತಿಯನ್ನು ಮುನ್ನಡೆಯಲು ಪ್ರೇರೇಪಿಸುತ್ತದೆ.

ಮನುಷ್ಯ ಶರೀರದಲ್ಲಿ ಅತ್ಯಂತ ಬಲವುಳ್ಳ ಎಲುಬುಗಳಲ್ಲಿ ತೋಳಿನ ಎಲುಬೂ ಒಂದು. ಅಥವಾ ಭುಜದ ಎಲುಬು. ಕೈಗಳು ಭುಜದಿಂದ ಕೆಳಗೆ ಇಳಿದಿರುತ್ತದೆ. ನಾವು ಕೈಯಲ್ಲಿ ಭಾರವಾದ ವಸ್ತುಗಳನ್ನು ಎತ್ತುವುದು ಕೇವಲ ಕೈಗಳ ಸಹಾಯದಿಂದಲ್ಲ. ಯಾಕಾಗಿ ನಮ್ಮ ಈ ಭುಜಕ್ಕೆ ಇಷ್ಟೊಂದು ಬಲ ನೀಡಿರಬಹುದು. ಮಾರ್ಕೆಟ್‍ನಿಂದ, ಶಾಪಿಂಗ್ ನಡೆಸಿ ಸಾಮಾನುಗಳನ್ನು ಹೊತ್ತೊಯ್ಯಲು ಆಗಿರಬಹುದೇ? ಅದಕ್ಕೆ ಮಾತ್ರವಲ್ಲ, ಇತರರನ್ನು ನಮ್ಮ ಭುಜಕ್ಕೆ ಒರಗಿಸಿ ಸಾಂತ್ವನ ಧೈರ್ಯ ತುಂಬಲು ಕೂಡಾ ಈ ಬಲವನ್ನು ನೀಡಲಾಗಿದೆ. ನಮ್ಮ ಭುಜವು ಒಂದು ಶಕ್ತಿಯಾಗಿ, ಕರುಣೆಯಾಗಿ, ಅನುಕಂಪವಾಗಿ ಮನುಷ್ಯರ ಮನಸಾಕ್ಷಿಯಲ್ಲಿ ಹರಿಯಬೇಕು. ಅದು ಅವರಿಗೆ ಹೊಸ ಜೀವನದ ದಿಕ್ಕನ್ನು ತೋರಿಸಬೇಕು. ನೀವು ಬೇರೆ ಬೇರೆ ರೀತಿಯ ಬಳ್ಳಿಗಳನ್ನು ನೋಡಿರಬಹುದು. ಸುಗಂಧಪೂರಿತವಾದ ಬಳ್ಳಿಗಳು ಸುಂದರವಾಗಿ ಹಬ್ಬುವಂತವುಗಳು ಸುಂದರ ಹೂಗಳನ್ನು ಅರಳಿಸುವವು… ಆದರೆ ಅದಕ್ಕೆ ಒಂದು ಆಧಾರವಿದ್ದರೆ ಮಾತ್ರ ಅದು ಹಬ್ಬಲು, ಹೂ ಅರಳಲು ಸಾಧ್ಯ. ಕೆಲವು ಬಳ್ಳಿಗಳಿಗೆ ಆರಂಭದಲ್ಲಿ ಸ್ವಲ್ಪ ಆಧಾರ ನೀಡಿದರೆ ಸಾಕಾಗುತ್ತದೆ. ಇನ್ನು ಕೆಲವಕ್ಕೆ ಒಂದು ಹಂತದಲ್ಲಿ ಆಧಾರ ನೀಡಿದರೆ ನಂತರ ಸ್ವಂತ ಬಲದಲ್ಲಿ ಅದು ಮುಂದುವರಿಯುತ್ತದೆ. ಕೆಲವುಗಳಲ್ಲಿ ನಡು ನಡುವೆ ಸಪೋರ್ಟ್ ಸಿಕ್ಕಿದರೂ ಸಾಕಾಗುತ್ತದೆ.
ಕೆಲವು ಮನುಷ್ಯರೂ ಈ ಬಳ್ಳಿಗಳಂತಿರುತ್ತಾರೆ. ಅವರಿಗೆ ಬೆಂಬಲ ನೀಡಿದರೆ ಮಾತ್ರ ಅವರು ಮುಂದೆ ಸಾಗಲು ಸಾಧ್ಯ. ತಾವು ಮುಗ್ಗರಿಸಿದ ಗುಂಡಿಗಳಿಂದ ಮೇಲೆತ್ತಲು, ಪುನಃ ಎಡವದಿರಲು, ಒಂಟಿಯಾಗುವಾಗ ಜೊತೆಗೂಡಲು, ಕಣ್ಣೀರು ಒರೆಸಲು, ಸ್ವಲ್ಪ ಹೊತ್ತು ಪಕ್ಕದಲ್ಲಿ ಕೂತು ಮಾತನಾಡಲು, ದುಃಖ ಸಂಕಟಗಳನ್ನು ಹಂಚಿಕೊಳ್ಳಲು… ಹೀಗೆ ತಾವು ಬದುಕುತ್ತೇವೆಂದು ಅವರು ತಿಳಿದುಕೊಳ್ಳಲು, ನಮ್ಮ ಬೆಂಬಲಕ್ಕಾಗಿ ಕಾಯುತ್ತಿರುವ ಅನೇಕರು ನಮ್ಮ ಸುತ್ತ ಮುತ್ತಲೂ ಇದ್ದಾರೆ. ಆದರೆ ನಮಗೆ ಅದನ್ನು ವೀಕ್ಷಿಸುವ ಕಣ್ಣುಗಳು ಬೇಕು ಚಾಚುವ ಕರಗಳು ಬೇಕು.
ಒಳಗೊಳಗೇ ಬೇಯುತ್ತಿರುವ ಹಲವು ಮನುಷ್ಯ ಜೀವಗಳ ನಡುವೆ ನಾವು ಬದುಕುತ್ತಿದ್ದೇವೆ. ಅವರಲ್ಲಿ ಕೆಲವರನ್ನು ಹೊರಗಿನಿಂದ ನೋಡುವಾಗ ಅವರ ಒಳಗಿನ ಬಿಸಿಯ ಅರಿವಾಗುವುದಿಲ್ಲ. ದಾರಿದ್ರ್ಯವಿಲ್ಲದ ಆರ್ಥಿಕತೆ ಇರಬಹುದು, ಉದ್ಯೋಗ, ಕುಟುಂಬಿಕರು ಸಹಕಾರ್ಯ ಕರ್ತರು ಎಲ್ಲಾ ಇರಬಹುದು. ಹೊರಗಿ ನಿಂದ ಸತ್ಯತೆ ಭಾಸವಾದರೂ ಅವರ ಪಕ್ಕದಲ್ಲಿ ಕೂತು ಸ್ವಲ್ಪ ಹೊತ್ತು ಮಾತನಾಡಿ ದರೆ ನಮಗೆ ಅವರು ಯಾರೂ ಇಲ್ಲದಂತೆ ಇದ್ದಾರೆ ಎಂಬ ಅರಿವಾಗುತ್ತದೆ. ಹಲ ವಾರು ರೀತಿಯ ನೋವುಗಳನ್ನು ನೊಂದು ಕೊಂಡು ಅವರು ಬದಕುತ್ತಾರೆಂದು ತಿಳಿಯುತ್ತದೆ. ಜನರಿಂದ ಒಂಟಿಯಾದ ಭಾವನೆಯಿಂದ ನರಳುತ್ತಿದ್ದಾರೆಂದೂ ತಿಳಿದು ಬರುತ್ತದೆ. ಅದು ಉನ್ನತ ಕಂಪೆನಿಗಳಲ್ಲಿ ಉದ್ಯೋಗ ಮಾಡುವ ದಂಪತಿಗಳ ಕುಟುಂಬ. ಬುದ್ಧಿ, ಆರೋಗ್ಯ, ಸೌಂದರ್ಯ, ಸಂಪತ್ತು ಎಲ್ಲವೂ ಮೇಳೈಸಿರುವ ಐದು ಗಂಡು ಮಕ್ಕಳು. ಎಲ್ಲರೂ ಉನ್ನತ ವಿದ್ಯಾಭ್ಯಾಸ ಪಡೆದವರು. ಹಣಕ್ಕೂ ಹೆಸರಿಗೂ ಕೊರತೆಯಿಲ್ಲ. ಆದರೆ ಪ್ರೀತಿ, ಸ್ನೇಹ, ಶಾಂತಿಯನ್ನು ಅನುಭವಿ ಸುವ ಅದೃಷ್ಟವಿಲ್ಲದ ಕುಟುಂಬ. ಅತ್ತು ಕರಗಿದ ಕಣ್ಣುಗಳೊಂದಿಗೆ ಬಾಡಿದ ಮುಖದಿಂದ ಒಂದು ದಿನ ಓರ್ವ ಮಗ ನನ್ನ ಬಳಿಗೆ ಬಂದ. ಅವಗಣನೆಯ ಮಾನಸಿಕ-ಶಾರೀರಿಕ ಹಿಂಸೆಗಳ ನೋವು ಗಳ ಕುರಿತು ಆ ನಮ್ಮ ಸಮಾಲೋಚನೆಯ ಆರಂಭ ದಿನಗಳಲ್ಲಿ ಹೆಚ್ಚು ಮಾತನಾಡಿ ದೆವು. ಅವರ ಅಳಲು, ದುಃಖ ದುಮ್ಮಾನ ಮನವರಿಕೆಯಾದ ನಂತರ ಇದು ಹೊರಗೆ ಮಿನುಗುತ್ತಿರುವ ಒಂದು ಸುಂದರ ಮನೆಯ ಕುಟುಂಬದ ನೋವುಗಳು, ನಿಟ್ಟಿಸಿರುಗಳು ಅರಿವಾಯಿತು. ಗೌರವ, ಸಮಾಜದ ಸ್ಥಾನಮಾನ, ಪದವಿಗಳ ಕಾರಣದಿಂದ ಯಾವುದನ್ನೂ ಯಾರೊಂದಿಗೂ ಹಂಚಿಕೊಳ್ಳಲು ಸಾಧ್ಯ ವಾದ ಸಾಂತ್ವನ ಪಡೆಯಲು ಸಾಧ್ಯವಾಗದ ಬಂಧಿಗಳು ಅವರು.
ನೋವು, ಸಂಕಟಗಳನ್ನು ಹೇಳಿ ಕೊಳ್ಳಲು ಇಷ್ಟಪಡುವವರೂ ಇದ್ದಾರೆ. ಆದರೆ ಅದನ್ನು ಆಲಿಸುವವರೇ ಇಲ್ಲ. ಕೇಳುವ ಜನರಿದ್ದರೆ ಅವರು ಕಿಲೋ ಮೀಟರ್ ದೂರವೂ ಬರುತ್ತಾರೆ. ನೋಡ ಬೇಕು, ಸ್ವಲ್ಪ ಮಾತನಾಡು ಅಷ್ಟೇ ಅವರ ಉದ್ದೇಶ. ಮರಳಿ ಹೋಗುವಾಗ ಕಣ್ಣೀರು ಮಳೆ ತೊಯ್ದು ಹೋದ ಸಾಂತ್ವನವಿರುತ್ತದೆ. “ಯಾರ ಬಳಿಯಾದರೂ ಹೇಳಿಕೊಳ್ಳದಿದ್ದರೆ ನನಗಿನ್ನೂ ನಿಯಂತ್ರಿಸಲು ಸಾಧ್ಯವಿಲ್ಲ” ಫೆÇೀನ್‍ನ ಆಚೆ ಕಡೆಯಿಂದ ಅವಳ ನಿಟ್ಟುಸಿರು ಕೇಳುತ್ತಿತ್ತು. ಕುಟುಂಬವಿದೆ, ಸಂಬಂಧಿಕರಿದ್ದಾರೆ, ಗೆಳೆಯರಿದ್ದಾರೆ. ಆದರೂ ಒಂಟಿಯಾದೆ. ನನ್ನನ್ನು ಅರ್ಥ ಮಾಡಿಕೊಳ್ಳುವವರು ಯಾರೂ ಇಲ್ಲ! ಹಲವೊಮ್ಮೆ ಎಲ್ಲರಿದ್ದೂ ಕೂಡಾ ನಾವು ಒಂಟಿಯಾಗುತ್ತೇವೆ. ನಮ್ಮನ್ನು ಕೇಳಲು, ಮನಸ್ಸು ತೆರೆದು ಮಾತನಾಡಲು ಯಾರೂ ಇಲ್ಲದೆ ಹೋಗುತ್ತದೆ! ನೀವು ಆಲೋಚಿಸಿ ದ್ದೀರಾ? ನಮಗೆ ಮಾತನಾಡಲು ನಾಲಗೆ
ಒಂದೇ ಇರುವುದು. ಆದರೆ ಕೇಳಲು ಕಿವಿ ಗಳು ಎರಡು ನೋಡಲು ಕಣ್ಣುಗಳು, ಹಿಡಿಯಲು 2 ಕೈಗಳು, ನಡೆಯಲು ಎರ ಡೆರಡು ಕಾಲುಗಳು ಇದೆ. ಇತರರೊಡನೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಅವರ ಮಾತನ್ನು ಆಲಿಸಿ. ಉತ್ತಮ ಮಾತನಾಡುವ ಸಾಮಥ್ರ್ಯವಿರುವುದು ದೊಡ್ಡ ಸಾಮಥ್ರ್ಯ ವೆಂದು ಹೇಳುತ್ತಾರೆ. ಆದರೆ ಕೇಳುಗನಾಗು ವುದು ಅದಕ್ಕಿಂತಲೂ ಶ್ರೇಷ್ಠ ಗುಣವಾಗಿದೆ. ಸಮಾಜ ಸೇವಕರ ಸಂದರ್ಶನಕ್ಕಾಗಿ ಬಂದವರೆಲ್ಲಾ ಒಂದು ಪ್ರಶ್ನೆಗೆ ಒಂದೇ ರೀತಿಯ ಉತ್ತರವನ್ನು ನೀಡಿದ್ದು ಓರ್ವ ಸಮಾಜ ಸೇವಕನ ಒಳ್ಳೆಯ ಗುಣ ಯಾವುದು? ಉತ್ತಮ ಕೇಳುಗನಾಗುವುದು. ತಾನು ಅಧ್ಯಯನ ಮಾಡಿದ ವಿಷಯವನ್ನು ಯಾಂತ್ರಿಕವಾಗಿ ಅವರು ಹೇಳಿರಬಹುದು. ಆದರೆ ಜೀವನದಲ್ಲಿ ಎದುರಿಸುವ ವಾಸ್ತವ ಪ್ರಶ್ನೆಯ ನೈಜ ಉತ್ತರವೂ ಇದೆ ಆಗಿದೆ. ಪ್ರಶ್ನೋತ್ತರಗಳಿಂದ ಜೀವನ ಉಂಟಾಗು ವುದಲ್ಲ. ಜೀವನದಿಂದ ಪ್ರಶ್ನೆಗಳು ಉಂಟಾಗಿ, ಜೀವನದಿಂದಲೇ ಉತ್ತರವನ್ನು ಕಂಡು ಹಿಡಿಯಬೇಕು.
ತೆರೆದ ಕಣ್ಣುಗಳಿಂದ ಹೊರ ಜಗತ್ತಿಗೆ ಕಾಲಿರಿಸಿದರೆ ನಮಗೆ ಜೀವನದ ದರ್ಶನ ವಾಗುತ್ತದೆ. ಆಡಂಬರದ ಕಾರುಗಳು, ತೂಗು ಹಾಕಿರುವ ಫ್ಯಾಶನ್ ವಸ್ತ್ರಗಳು ಹಾಗೂ ಹೊಸ ಹೊಸ ಉತ್ಪನ್ನಗಳಿರುವ ಅತ್ಯುತ್ತಮ ಶಾಪ್‍ಗಳೆಲ್ಲ ನಮ್ಮ ಕಣ್ಣುಗಳು ನೆಚ್ಚಿರುತ್ತದೆ. ಅದನ್ನು ಖರೀದಿಸಲು ಸಾಧ್ಯ ವಾಗಲಿಲ್ಲವಲ್ಲಾ ಎಂಬ ಒಂದು ನೋವಾ ದರೂ ಮನದಲ್ಲಿ ಉಂಟಾಗುತ್ತದೆ. ಆದರೆ ಲೋಕವೆಂದರೆ ಇದು ಮಾತ್ರವಲ್ಲ, ರಸ್ತೆಯ ಬದಿಗಳಲ್ಲಿ ಬಿದ್ದುಕೊಂಡಿರುವ ಮನುಷ್ಯ ಜೀವಗಳನ್ನು ಕಾಣಬಹುದು. ಸರಿಯಾಗಿ ನಡೆಯಲು ತ್ರಾಣವಿಲ್ಲದವರು, ಆಹಾರ ನೀರು ಸಿಗದೆ ಕಂಗಾಲಾಗಿರುವ ಅವರು, ತಲೆಚಾಚಲು ಒಂದು ಸೂರು ಇಲ್ಲದವರು ಇವರೆಲ್ಲಿರುತ್ತಾರೆ. ಆಸ್ಪತ್ರೆಯ ವಾರ್ಡುಗಳಲ್ಲಿ ನಡೆದರೆ, ಔಷಧಿಗೆ ಕೂಡಾ ಹಣವಿಲ್ಲದೆ ದಿಕ್ಕೆಟ್ಟು ನಿಂತಿರುವ ಮನುಷ್ಯರನ್ನು ನೋಡ ಬಹುದು ನಿಜ, ಅದರಲ್ಲಿ ಕಳ್ಳಕಾಕರು ವಂಚಕರು ಇರಬಹುದು. ಆದರೆ ಹಾಗೆಯೇ ಹೇಳಿ ನೈಜ ನೋವುಗಳನ್ನು ನಮಗೆ ಕಾಣದಂತೆ ನಟಿಸಲು ಸಾಧ್ಯವೇ?
ಆಹಾರ ಸಿಗದೆ, ಹಸಿವಿನಿಂದ ಸಹಿಸ ಲಾಗದೆ ಬಸ್‍ಸ್ಟ್ಯಾಂಡ್‍ನ ಶೌಚಾಲಯದ ನೀರನ್ನು ಅಲ್ಲಿನ ಮಗ್‍ನಿಂದ ಕುಡಿಯು ವವರನ್ನು ಕಂಡಿದ್ದೇನೆ. ಬಸ್‍ಗೆ ಹತ್ತಲು ಇಪ್ಪತ್ತು ರೂಪಾಯಿಯಿಲ್ಲದೆ ದುಃಖಿಸುತ್ತಿದ್ದ ವೃದ್ಧೆಯನ್ನು ನೋಡಿದ್ದೇನೆ. ತನ್ನ ಗುಡಿಸಲಿನಲ್ಲಿ ಒಂದು ಕಟ್ಟು ಊಟವನ್ನು ತರುವ ಸಮಾಜ ಸೇವಕರನ್ನು ಕಾಯು ತ್ತಿರುವ ಅಜ್ಜಿಯನ್ನು ಅರಿತಿದ್ದೇನೆ. ಹೀಗೆ ಬದುಕಿನ ದಾರಿಗಳಲ್ಲಿ ಕತ್ತಲು ಆವರಿಸಿ, ದಿಕ್ಕು ತೋಚದಂತಾಗಿರುವ ಅದೆಷ್ಟು ಮನುಷ್ಯರು! ಅವರನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಅವರ ಕಣ್ಣುಗಳನ್ನೇ ನೋಡಬೇಕು. ಮಣ್ಣಿಗೆ ಇಳಿದು, ಜನರ ಮಧ್ಯೆ ವ್ಯವಹರಿಸಿ, ಗುಡ್ಡೆ, ಓಣಿಗಳಲ್ಲಿ, ಬೀದಿ ಬೀದಿಗಳಲ್ಲಿ ಸಂಚರಿಸಿ ಬದುಕು ಏನೆಂದು ತಿಳಿಯಬೇಕು. ಅಂತಾದರೆ ನಿಮಗರಿವಿಲ್ಲದೆ ನಿಮ್ಮಿಂದ ಒಳಿತು ಹರಿದು ಹೋಗುತ್ತದೆ. ಸಹ ಕಾರ್ಯಕರ್ತರೊಂದಿಗೆ, ಸಂಬಂಧಿಕರೊಂದಿಗೆ, ಸಹಯಾತ್ರಿಕ ರೊಂದಿಗೆ ಒಮ್ಮೆ ಮನಬಿಚ್ಚಿ ಮಾತನಾಡಿ ನೋಡಿ. ಅವರನ್ನು ಕೇಳಿ ತಿಳಿದುಕೊಳ್ಳಿ. ನೋವು, ಸಂಕಟಗಳ ನಡುವೆಯೂ ಸ್ನೇಹ ಸ್ಪರ್ಶದ ಅನುಭವವಾಗುತ್ತದೆ. ನೀವು ಉತ್ತಮ ಸಮಾಜ ಸೇವಕರಾಗಲು ಓರ್ವ ನೈಜ ಮನುಷ್ಯನಾಗಲು ದೊಡ್ಡ ಮೊತ್ತವೇನೂ ಬೇಕಾಗಿಲ್ಲ. ಸುಮ್ಮನೆ ಕುಳಿತಿರುವ ಸಮಯದಲ್ಲಿ ಸ್ವಲ್ಪ ಮನಸ್ಸು ಮಾಡಿದರೆ ಸಾಕು. ಮನೆಯಿಂದ ಹೊರ ಬರುವಾಗ, ಹೊಟೇಲಿನಿಂದ ಹೊರಗೆ ಬರುವಾಗ ನಾವು ತಿಂದ ಆಹಾರದಲ್ಲಿ ಒಂದು ಪಾಲು ಪ್ಯಾಕೆಟ್ ಮಾಡಿ ಕೈಯಲ್ಲಿರಲಿ. ದಾರಿಯಲ್ಲಿ ಎಲ್ಲಾದರೂ ಅದರ ಹಕ್ಕುದಾರ ಇರಬಹುದು. ರಸ್ತೆ ಬದಿಯಲ್ಲಿ ವಿವಶವಾಗಿರುವ ವ್ಯಕ್ತಿ ಕಂಡರೆ ಹಸ್ತಚಾಚಿ ಎಬ್ಬಿಸಿ ಕೈ ಮುಖ ತೊಳೆದು ಕೊಟ್ಟು ಸ್ವಲ್ಪ ಆಹಾರ ನೀಡಿ ನೋಡಿ. ಅವರು ನಿಮ್ಮಲ್ಲಿ ದೇವನನ್ನು ಕಾಣುತ್ತಾರೆ. ನೀವು ಅವರಿಂದ ದೇವನನ್ನು ಅನುಭವಿಸು ತ್ತೀರಿ. ಆರಾಧನೆಗಳಂತೆ, ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚಾಗಿ ನಿಮಗೆ ಆಧ್ಯಾ ತ್ಮಿಕತೆಯ ಅನುಭವವಾಗುತ್ತದೆ.
ಮರಣಾನಂತರ ವಿಚಾರಣೆಯ ಒಂದು ದೃಶ್ಯವನ್ನು ಪ್ರವಾದಿ(ಸ)ರು ವಿವರಿಸುತ್ತಾರೆ: “ನಮ್ಮ ಕರ್ಮಗಳ ಲೆಕ್ಕವನ್ನು ನಡೆಸುವ ದಿನದಲ್ಲಿ ದೇವನು ಓರ್ವನೊಡನೆ ಕೇಳುತ್ತಾನೆ, ನಾನು ರೋಗಿಯಾಗಿದ್ದಾಗ ನೀನು ನನ್ನನ್ನು ಏಕೆ ಸಂದರ್ಶಿಸಿಲ್ಲ?” ಆತನ ಉತ್ತರ: “ದೇವಾ, ನೀನು ಲೋಕ ರಕ್ಷಕನಲ್ಲವೇ? ನಾನು ಹೇಗೆ ನಿನ್ನನ್ನು ಭೇಟಿಯಾಗಲಿ?” ನನ್ನ ಇಂತಿಂತಹ ದಾಸನು ರೋಗಿಯಾದದ್ದು ನಿನಗೆ ತಿಳಿದಲ್ಲವೇ? ನೀನು ಆ ರೋಗಿ ಯನ್ನು ಸಂದರ್ಶಿಸಿದ್ದರೆ ಅಲ್ಲಿ ನನ್ನನ್ನು ಕಾಣುತ್ತಿದ್ದೆ. ನಂತರ ಪ್ರಶ್ನೆ: “ನಾನು ನಿನ್ನೊಂದಿಗೆ ಆಹಾರ ಕೇಳಿದೆ. ನೀನು ನನಗೆ ನೀಡಲಿಲ್ಲ.” “ದೇವಾ, ನೀನು ವಿಶ್ವದ ಅನ್ನದಾತನಲ್ಲವೇ? ನಾನು ಹೇಗೆ ಆಹಾರ ನೀಡಲಿ?” ನನ್ನ ಇಂತಹ ದಾಸ ಆಹಾರವನ್ನು ಕೇಳಿದಾಗ ನೀನು ನೀಡಲಿಲ್ಲ. ಆಹಾರ ನೀಡಿದ್ದರೆ ನಿನಗೆ ಅಲ್ಲಿ ನನ್ನನ್ನು ಕಾಣಲು ಸಾಧ್ಯವಾಗುತ್ತಿತ್ತು. ಮೂರನೇಯ ಪ್ರಶ್ನೆ! “ನಾನು ನಿನ್ನೊಂದಿಗೆ ನೀರು ಕೇಳಿದೆ. ನೀನು ನೀಡಲಿಲ್ಲ.” ದೇವಾ, ನೀನು ಜಗದ್ರಕ್ಷಕನಲ್ಲವೇ? ನಾನು ನಿನಗೆ ಹೇಗೆ ಕುಡಿಸಲಿ? “ನನ್ನ ಇಂಥಹ ದಾಸ ನಿನ್ನೊಂದಿಗೆ ನೀರು ಕೇಳಿದ, ಆದರೆ ನೀನು ನೀಡಲಿಲ್ಲ. ನೀಡಿರುತ್ತಿದ್ದರೆ ನಿನಗೆ ಅಲ್ಲಿ ನನ್ನನ್ನು ಕಾಣಬಹುದಾಗಿತ್ತು.”

LEAVE A REPLY

Please enter your comment!
Please enter your name here