• ಜಿಶಾನ್ ಮಾನ್ವಿ
    ವಿದ್ಯಾರ್ಥಿ ಮುಖಂಡರು, ಮಾನ್ವಿ.

ನಾನು ಯೋಚ್ನೆ ಮಾಡ್ತಾ ಇದ್ದೆ, ಈ ಫೇಸ್ ಬುಕ್ ಬ್ಯಾನ್ ಆದ್ರೆ ಏನ್ ಆಗಬಹುದು ಎಂದು, ಆಷ್ಟು ಸುಲಭದಲ್ಲಿ ಆಗುವುದಿಲ್ಲ, ಅದು ಬೇರೆ ವಿಚಾರ,
ಹಲವಾರು ರೀತಿಯಲ್ಲಿ ಯೋಚನೆ ಮಾಡಿದ ನಂತರ ನನಗೆ ಅನ್ನಿಸಿದ್ದು, ಈ ಫೇಸ್ಬುಕ್ ಲೈಕ್ ಮೈಂಡೆಡ್ ಜನರ ಒಂದು ವೇದಿಕೆಯಾಗಿ ಬಿಟ್ಟಿದೆ. ನಾವು ಇಷ್ಟ ಪಡುವುದನ್ನೇ ತೋರಿಸೋದು, ಫಿಲ್ಟರ್ ಬಬಲ್ ಆಗಿರುವುದು, ಒಂದೆರೆಡು ತಿಂಗಳಿನಿಂದ ಮೋಸ್ಟ್ ರಿಲೆವೆಂಟ್ ಅಂತ, ನೀವು ಇಷ್ಟಪಡುವ ಕಾಮೆಂಟ್ ಗಳನ್ನು ಮಾತ್ರ ತೋರಿಸುವುದು, Echo Chamber ಆಗಿ ಮಾರ್ಪಾಟ್ಟಿರುವುದು, ನೀವು ಇಷ್ಟ ಪಡುವವರ ಪೋಸ್ಟ್ ಗಳನ್ನು ಮಾತ್ರ ತೋರಿಸುವುದು. ನಿಮ್ಮ ಸಿದ್ಧಾಂತಕ್ಕೆ ವಿರೋಧವಾಗಿರುವವರ ಸರ್ಕಲ್ ನಲ್ಲಿ ಏನು ಆಗ್ತಾ ಇದೆ ಎಂದು ತೋರಿಸದೆ ಇರುವುದು, ಬೇರೆ ದೃಷ್ಟಿಕೋನಗಳನ್ನು ತಿಳಿಯದೆ, ನೀವು ನಂಬಿರುವುದೇ ನಿಜ, ನೀವು ಮಾತಾಡುತ್ತಿರುವುದೇ ಸತ್ಯ, ಉಳಿದದ್ದೆಲ್ಲಾ ಸುಳ್ಳು ಎಂಬುವ ಮೆಂಟಾಲಿಟಿಯನ್ನು ಸೃಷ್ಟಿಸಿ ಸಮಾಜವನ್ನು ಡಿವೈಡ್ ಮಾಡುವುದರಲ್ಲಿ ಯಶಸ್ವಿಯಾಗಿರುವುದು, ಇದೆಲ್ಲವನ್ನು ಕಂಡರೆ ಇದರಿಂದ ಸಮಾಜಕ್ಕೆ ನಷ್ಟವೇ ಹೆಚ್ಚು ಎಂಬಂತೆ ಕಾಣುತ್ತದೆ. ನಾವು ನಮ್ಮದೇ ಜಗತ್ತಿನಲ್ಲಿ ಇದ್ದು ನಾವೇ ಶ್ರೇಷ್ಠ ಎಂದುಕೊಳ್ಳುವಂತೆ ಮಾಡಿಬಿಟ್ಟಿದೆ. ಇದರಲ್ಲಿ ಮುಳುಗಿದವರು ಗ್ರೌಂಡಲ್ಲಿ ಆಗುತ್ತಿರುವುದೇನು ಎಂಬುದನ್ನೇ ಮರೆತುಬಿಡುತ್ತಾರೆ.

ಕೆಲವು ದಿನಗಳ ಹಿಂದೆ ನೆಟ್ ಫ್ಲಿಕ್ಸ್ “ಸೋಶಿಯಲ್ ಡಿಲ್ಲೆಮಾ” ಎಂಬ ಡಾಕ್ಯುಮೆಂಟರಿಯನ್ನು ಮಾಡಿದೆ. ಅದರಲ್ಲಿ ಇ- ಮೇಲ್, ಗೂಗಲ್, ಅರ್ಕುಟ್, ಫೇಸ್ಬುಕ್,ಇನ್ಸ್ಟಗ್ರಾಮ್ ಹೀಗೆ ಹಲವಾರು ಸಂಸ್ಥೆಯ ಮಾಜಿ ಉದ್ಯೋಗಿಗಳು ಸುಮಾರು ರಹಸ್ಯ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ನೋಡಿದಾಗಿನಿಂದ ಈ ಸಾಮಾಜಿಕ ಜಾಲತಾಣಗಳು ನಾಗರಿಕ ಸಾಮಾಜವನ್ನು ಎಲ್ಲಿ ತಲುಪಿಸುತ್ತವೆ ಎಂಬುವುದೇ ಭಯ ವಾಗಿಬಿಟ್ಟಿದೆ. ಡಾಕ್ಯುಮೆಂಟರಿಯ ಕ್ಲೈಮೇಕ್ಸ್ ನಲ್ಲಿ, ಸಾಮಾಜಿಕ ಜಾಲತಾಣಗಳ ಕೊನೆ ಪರಿಣಾಮ ಏನಾಗಬಹುದು ಎಂದು ಒಬ್ಬ ಮಾಜಿ ಉದ್ಯಮಿಗೆ ಕೇಳಿದಾಗ, ಅವಳು ಹೇಳುವುದು “ಸಿವಿಲ್ ವಾರ್” ಎಂದು.

ಆದರೆ ಆಡಳಿತ ರೂಢ ಸರಕಾರಗಳು ಅಷ್ಟು ಸುಲಭವಾಗಿ ಇದನ್ನು ಬ್ಯಾನ್ ಮಾಡುವುದಿಲ್ಲ, ಇದರಿಂದ ದೊಡ್ಡ ಮಟ್ಟದ ತೆರಿಗೆ ಅಲ್ಲದೆ, ತಮ್ಮ ವಿಫಲತೆಯನ್ನು ಮರೆಮಾಚಲು, ಡ್ಯಾಮೇಜ್ ಕಂಟ್ರೋಲ್ ಮಾಡಲು, ಇವೆ ದೊಡ್ಡ ವೇದಿಕೆಗಳಾಗಿವೆ. ಇವರ ಐಟಿ ಸೆಲ್ ಗಳು ಇದೆ ವೇದಿಕೆ ಗಳನ್ನು ಉಪಯೋಗಿಸಿಕೊಂಡು ಮಾಡಿರುವ ಡ್ಯಾಮೇಜ್ ಅಷ್ಟಿಷ್ಟಲ್ಲ, ಇದನ್ನು ಮುಚ್ಚಿದರೆ ಇವರು ಸೃಷ್ಟಿಮಾಡಿರುವ ಭಕ್ತಗಣಕ್ಕೆ feed ಮಾಡುವುದು ಹೇಗೆ? ಪ್ರಶ್ನಿಸಿದರನ್ನು ದಿಫೆಮ್ ಮಾಡೋದು ಹೇಗೆ? ಜನರೆಲ್ಲಾ ಇವರ ಅಭಿಮಾನಿಗಳು ಆಗಿರಬೇಕಾದರೆ ಸಮಯಕ್ಕೆ ತಕ್ಕಂತೆ ಅವರ ತಲೆಗಳಿಗೆ ಏನಾದ್ರು ತುಂಬುತ್ತಾ ಇರಬೇಕಲ್ವಾ? ಅದು ಹೇಗೆ ಆಗುತ್ತೆ. ಇನ್ನು ಬೇರೆ ಪ್ಲಾಟ್ ಫಾರಂ ಗಳು ಇರಬಹುದು ಆದ್ರೂ ಇಷ್ಟು ವರ್ಷ ಕಷ್ಟ ಪಟ್ಟು ರೆಡಿಯಾಗಿರುವ ಪ್ಲಾಟ್ ಫಾರಂ ಹೋಗಿಬಿಡುತ್ತೆ. ಅದಕ್ಕೆ ಈ ಪವರ್ ಸೆಂಟರ್ ಗಳು ಅಷ್ಟು ಸುಲಭವಾಗಿ ಇದನ್ನು ಮುಚ್ಚುವುದಿಲ್ಲ ಎಂಬುವುದು ನನ್ನ ಅನಿಸಿಕೆ.

ಇದರ ನಷ್ಟ ನನ್ನಂತಹವರಿಗೆ ಏನಾಗಬಹುದು ಎಂದು ಯೋಚನೆ ಮಾಡಿದಾಗ, ನಾವು ಏನಾದ್ರು ಹೇಳಿಕೊಳ್ಳಲು ಇದೊಂದು ಪ್ಲಾಟ್ ಫಾರಂ ಇತ್ತು, ನಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಲು ಒಂದು ವೇದಿಕೆ ಇತ್ತು, ಮಾಧ್ಯಮಗಳು ಸುಳ್ಳು ಗಳನ್ನು ಹಬ್ಬಿಸಿದಾಗ ಸತ್ಯ ಬೆರೆಯದ್ದೇ ಆಗಿದೆ ಎಂದು ತೋರಿಸಲಿಕ್ಕೆ ಒಂದು “ಪೀಪಲ್ಸ್ ಮೀಡಿಯಾ” ಎಂದು ಇತ್ತು, ಅದೂ ತಲುಪುವುದು ಒಂದು ಸೀಮಿತ ವರ್ಗಕ್ಕೆ, ಒಂದು Echo Chamber ಗೆ ಮಾತ್ರ. ಅದು ಹೋಗಬಹುದು ಅಷ್ಟೇ. ಈ ವೇದಿಕೆಗಳಿಂದ ಸಮಾಜಕ್ಕೆ ಆಗಿರುವ ನಷ್ಟವನ್ನು ಕಂಡರೆ ಲಾಭ ನಗಣ್ಯ. ಈ ಫೇಸ್ಬುಕ್ ಟ್ವಿಟರ್ಗಳು,ಫಿಲ್ಟರ್ ಗಳನ್ನು ಹಾಕಿಕೊಂಡು ಸ್ಟೇಟ್ ನ ಗುಲಾಮರಾಗಿ ಜನರಿಗೆ ಮೋಸ ಮಾಡುವುದಕ್ಕಿಂತ ಬ್ಯಾನ್ ಆಗುವುದೇ ಒಳ್ಳೆಯದ್ದು. ಅದುನೂ ಶಾಶ್ವತವಾಗಿ ಆಗಬೇಕು. ಇಲ್ಲಿ ಬರೆದುಕೊಂಡು ಜವಾಬ್ದಾರಿ ಮುಗಿತು ಎಂದು ಕೂರುವುದಕ್ಕಿಂತ ಜನರ ಮಧ್ಯೆ ಹೋಗಿ ಮಾತಾಡುವುದು, ಜನರೊಟ್ಟಿಗೆ ಬೆರೆತು, ಅವರ ಕಷ್ಟ ಸುಖಗಳನ್ನು ಅರಿತು ಕೆಲಸ ಮಾಡುವುದು ನೈಜ ಕರ್ತವ್ಯವಾಗಬೇಕು.

LEAVE A REPLY

Please enter your comment!
Please enter your name here