ಲೇಖಕರು:ಮೌಲಾನ ವಹೀದುದ್ದೀನ್ ಖಾನ್

ಸೂರ್ಯ ನಮ್ಮ ಈ ಭೂಮಿಗಿಂತ 12 ಲಕ್ಷ ಪಟ್ಟು ದೊಡ್ಡದಾಗಿದ್ದು 9.5 ಕೋಟಿ ಮೈಲುಗಳ ಅಂತರದಲ್ಲಿದ್ದಾನೆ, ಆದರೂ ಅದರ ಪ್ರಕಾಶ ಮತ್ತು ಬಿಸಿಲು ಯಾವುದೇ ಅಡೆತಡೆ ಇಲ್ಲದೆ ನಮಗೆ ತಲುಪುತ್ತದೆ. ಈ ಸೂರ್ಯನು ಪ್ರಪಂಚದ ಒಂದು ಚಿಕ್ಕ ಗ್ರಹವಾಗಿದ್ದು, ಹತ್ತಿರವಿರುವ ಕಾರಣದಿಂದಲೇ ನಮಗೆ ದೊಡ್ಡದಾಗಿ ಗೋಚರಿಸುತ್ತಾನೆ. ಹೆಚ್ಚಿನ ನಕ್ಷತ್ರಗಳು ಸೂರ್ಯನಿಗಿಂತ ಬಹಳ ಹಿರಿದಾಗಿವೆ ಮತ್ತು ಹೆಚ್ಚಿನ ಪ್ರಕಾಶ ಹೊಂದಿದೆ. ಪ್ರಕಾಶ ಮತ್ತು ಶಾಖಪೂರಿತವಾದ ಈ ಅಂತರಿಕ್ಷದಲ್ಲಿ ಅಗಣಿತ ನಕ್ಷತ್ರಗಳು ಹರಡಿಕೊಂಡಿವದೆ.
ಸಹಸ್ರಾರು ಕೋಟಿ ವರ್ಷಗಳಿಂದ ಉರಿಯುತ್ತಿದ್ದರೂ ಅವುಗಳ ಶಾಖವು ಕಡಿಮೆಯಾಗಿಲ್ಲ. ಸೂರ್ಯನು ಗ್ರಹಮಂಡಲದ ಚಿಕ್ಕದೊಂದು ಗ್ರಹವಾಗಿದೆ ಮತ್ತು ನಮಗೆ ಸಮೀಪವಿರುವ ಕಾರಣದಿಂದಲೇ ಬೃಹತ್ ಆಕಾರದಲ್ಲಿ ಕಾಣುತ್ತಿದೆ. ಹೆಚ್ಚಿನ ನಕ್ಷತ್ರಗಳು ಸೂರ್ಯನಿಗೆ ಎಷ್ಟೋ ಪಟ್ಟು ದೊಡ್ಡದಾಗಿದ್ದು ಹೆಚ್ಚಿನ ಪ್ರಕಾಶ ಉಳ್ಳದ್ದಾಗಿದೆ. ಪ್ರಕಾಶ ಮತ್ತು ಶಾಖದ ಮಹಾಲೋಕವೇ ನಕ್ಷತ್ರ ಪುಂಜವೆಂದು ಕರೆಯಲಾಗುತ್ತದೆ ಮತ್ತು ಲೆಕ್ಕವಿಲ್ಲದಷ್ಟು ಅಂತರಿಕ್ಷದಲ್ಲಿ ಹರಡಿಕೊಂಡಿದೆ. ಕೋಟ್ಯಾನು ಕೋಟಿ ವರ್ಷಗಳಿಂದ ಉರಿಯುತ್ತಿದ್ದರು ಅದರ ಶಾಖ ಭಂಡಾರವೇ ಕುಂದಿಲ್ಲ.

ನಕ್ಷತ್ರಗಳಿಗೆ ಈ ನಿರಂತರ ಶಕ್ತಿ ಹೇಗೆ ಉಂಟಾಯಿತು?
ಹಾನ್ಸ್ ಬೀಟಾ(ಊಚಿಟಿs ಃeಣಚಿ)ನು ಖಗೋಳಶಾಸ್ತ್ರದಲ್ಲಿ ಬಹಳ ಸಂಶೋಧನೆ ನಡೆಸಿದ ನಂತರ, “ಅದರ ಒಳಗುಟ್ಟು ಕಾರ್ಬನ್ ಸೈಕಲ್ ಆಗಿದೆ” ಎಂದನು. ಈ ಸಂಶೋಧನೆಗಾಗಿ 1967ರಲ್ಲಿ ಅವನಿಗೆ ನೋಬಲ್ ಬಹುಮಾನವನ್ನು ನೀಡಲಾಯಿತು.
ಡಾ. ಬೀಟಾ(ಜನನ 1906) ಕಾರ್ಬನ್ ಸೈಲಕ್‍ನ ಈ ವೈಜ್ಞಾನಿಕ ಸಂಶೋಧನೆಯನ್ನು ನಡೆಸಿದನು. ಅದು ಅವನ ಮಟ್ಟಿಗೆ ವರ್ಣಾತೀತ ಸಂತೋಷದ ಗಳಿಗೆಯಾಗಿತ್ತು. ಅವನ ಮಡದಿ ರೋಜ್ ಬೀಟಾ ಹೇಳಿದಳು ನಾವು ನ್ಯೂ ಮೆಕ್ಸಿಕೋದ ಮರುಭೂಮಿಯ ವಾತವರಣದಲ್ಲಿ ಅಕಾಶದಲ್ಲಿ ನಕ್ಷತ್ರಗಳು ಬಹಳ ವಿಸ್ಮಯಕರವಾಗಿ ಪ್ರಕಾಶಿಸುತ್ತಿದ್ದವು. ತಲೆ ಎತ್ತಿ ಮೇಲೆ ನೋಡಿದ ರೋಜ್ ಬೀಟಾ ಉದ್ಗಾರ ಹೀಗಿತ್ತು. ಆಕಾಶದ ನಕ್ಷತ್ರಗಳ ಪ್ರಕಾಶ ಆದಷ್ಟು ಉಜ್ವಲವಾಗಿದೆ. ಡಾ. ಬೀಟಾನು ಹೀಗೆಂದನು ನಿನಗೆ ತಿಳಿದಿದೆಯೇ ಈ ನಕ್ಷತ್ರಗಳು ಹೇಗೆ ಪ್ರಕಾಶಿಸುತ್ತವೆ ಎಂದು ಕಂಡು ಹಿಡಿದ ಏಕೈಕ ವಿಜ್ಞಾನಿಯ ಬಳಿ ನೀನು ನಿಂತಿರುವೆ.

Do you realize just now you are standing next to the only human, who knows why the shine at all.

ನಕ್ಷತ್ರಗಳಲ್ಲಿ ಕಾರ್ಬನ್ ಸೈಕಲ್ ಇದೆ ಎಂಬುವುದು ಬೀಟಾನ ಸಂಶೋಧನೆಗಳಲ್ಲಿ ಮುಖ್ಯವಾಗಿತ್ತು. ಆದರೆ, ಇನ್ನೊಂದು ಪ್ರಶ್ನೆ ನಕ್ಷತ್ರಗಳಲ್ಲಿ ಕಾರ್ಬನ್ ಸೈಕಲ್ ಹೇಗೆ ಬಂದಿತು. ಈ ಮಹಾ ರಹಸ್ಯವನ್ನು ಸತ್ಯವಿಶ್ವಾಸಿಯು ದೇವನ ರೂಪದಲ್ಲಿ ಕಾಣುತ್ತಿದ್ದಾನೆ. ದೇವವಿಶ್ವಾಸವು ಒಂದು ಡಿಸ್ಕವರಿಯಾಗಿದೆ ಮತ್ತು ಎಲ್ಲಾ ಸಂಶೋಧನೆಗಿಂತ ಹಿರಿದಾದ ಸಂಶೋಧನೆಯಾಗಿದೆ. ಆದರೆ, ದೊಡ್ಡ ವಿಸ್ಮಯವೇನೆಂದರೆ ವಿಜ್ಞಾನಿಗಳು ಯಾವುದೇ ಚಿಕ್ಕ ಸಂಶೋಧನೆಯ ನಂತರವು ಅವರಲ್ಲಿ ಯಾವುದೇ ಪ್ರಭಾವವಿಲ್ಲ. ಪ್ರಾಯಶಃ ದೇವನಲ್ಲಿ ವಿಶ್ವಾಸವಿದೆ ಎಂದು ವಾದಿಸುವವರು ದೇವನನ್ನು ಸಂಶೋಧಿಸಿ ಪಡೆದಿಲ್ಲವೇನೋ.
ಮೌಲಾನ ವಹೀದುದ್ದೀನ್ ಖಾನ್

ಅನು: ತಲ್ಹಾ ಇಸ್ಮಾಯಿಲ್ ಕೆ.ಪಿ

LEAVE A REPLY

Please enter your comment!
Please enter your name here