ಎಂ . ಅಶೀರುದ್ದೀನ್ ಮಂಜನಾಡಿ

ಕಳೆದ ವರ್ಷ ಕೇರಳದ ಕಲ್ಲಿಕೋಟೆ ಜಿಲ್ಲೆಯ ಒಬ್ಬ ಯುವಕನಿಂದಾಗಿ ಕಾಣಿಸಿಕೊಂಡ ನಿಫಾ ವೈರಸ್ ಕೇರಳ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿಯೂ ಆತಂಕವನ್ನುಂಟು ಮಾಡಿತ್ತು. ಬಾವಳಿಗಳಿಂದ ಅಥವಾ ಅವುಗಳು ತಿಂದ ಹಣ್ಣುಗಳಿಂದಾಗಿ ಮನುಷ್ಯ ನಿಂದ ಮನುಷ್ಯನಿಗೂ ಪ್ರಾಣಿಗಳಿಂದ ಪ್ರಾಣಿಗಳಿಗೂ ಹರಡುವ ಒಂದು ಸಾಂಕ್ರಾಮಿಕ ರೋಗ. ತಲೆನೋವು, ಜ್ವರ, ವಾಂತಿ, ಮೂರ್ಛೆ, ವಾಕರಿಕೆ, ನಿಶಕ್ತಿ ಕಾಣಿಸಿಕೊಲ್ಲುವುದು ರೋಗದ ಲಕ್ಷಣಗಳು. ಸಾಮಾನ್ಯವಾಗಿ ವ್ಯಕ್ತಿ ವೈರಸ್​​ ಸೋಂಕಿಗೀಡಾದ ನಂತರ,ಇದರ ಲಕ್ಷಣಗಳು ಗೊತ್ತಾಗಲು 14 ದಿನಗಳು ಬೇಕಾಗಬಹುದು. ಕೊಮಾಕ್ಕೆ ಜಾರಬಹುದು ಮತ್ತು ಮೆದುಳಿನ ಮೇಲೆ ತೀವ್ರ ಪರಿಣಾಮ ಬೀಳುವ ಸಾಧ್ಯತೆಗಳಿವೆ. ಕೀಟಗಳಿಂದ ಸೂಕ್ಷ್ಮಾಣುಗಳಿಂದ ಅವುಗಳು ಹರಡಿದ ಆಹಾರಗಳನ್ನು ತಿನ್ನುವುದರಿಂದ ರೋಗ ಹರಡಬಹುದು ಎನ್ನಲಾಗುತ್ತದೆ.
ನಿಫಾ ವೈರಸ್ ನಾಡಿನ ಜನತೆಯನ್ನು ಭಯಬೀತರನ್ನಾಗಿಸಿತಲ್ಲದೆ ಒಬ್ಬರನ್ನೊಬ್ಬರು ಪರಸ್ಪರ ಮಾತಾಡಲು ಹೆದರುವಂತ ಪರಿಸ್ಥಿವರೆಗೆ ತಲುಪಿತ್ತು. ವೈರಸ್ ಬಾದಿಸಿದ ಕುಟುಂಬದವರ ಸ್ಥಿತಿಯಂತು ದಾರುಣವಾಗಿತ್ತು ಸಾಮೂಹಿಕ ಬಹಿಷ್ಕಾರಕ್ಕಿಂತ ಕಡೆಯಾಗಿತ್ತು.

ಈ ಶೋಚನೀಯ ಪರಿಸ್ಥಿಯು ಕೇರಳದ ಆರೋಗ್ಯ ಸಚಿವಾಲಯಕ್ಕೆ ದೊಡ್ಡ ಸವಾಲಾಗಿತ್ತು. ಕೇವಲ 21 ದಿವಸದಲ್ಲಿ ಸರಕಾರ ಆರೋಗ್ಯ ಸಚಿವಾಲಯ ಊರಿನ ಜನರ ಸಹಕಾರದಿಂದ ಜನರನ್ನು ರಕ್ಷಿಸಲು ಜೀವ ಒತ್ತೆ ಇಟ್ಟು ಮಾಡಿದ ಸಾಹಸ ಪ್ರಶಂಸನೀಯ. ಈ ಹೋರಾಟದ ಕಥೆಯ ಚಿತ್ರಣ ವೇ “ವೈರಸ್”

ವೈರಸ್, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಸರಿಯಾಗಿ ಕೆಲಸ ಸಿಗದೆ ಕಷ್ಟದಿಂದ ಜೀವನ ಸಾಗಿಸುವ ಕಾರ್ಮಿಕ ವರ್ಗದ ಹೋರಾಟದಿಂದ ಸಿನಿಮ ಆರಂಭಿಸಿ ತುರ್ತು ಘಟಕ ವಿಭಾಗದಲ್ಲಿ ದಿನನಿತ್ಯ ನಡೆಯುವ ಘಟನೆಗಳನ್ನು ಮೆಲುಕು ಹಾಕುತ್ತಾ ಸಿನಿಮ ಸಂಚರಿಸುತ್ತದೆ. ಸಿನಿಮ ಕೇವಲ ಒಂದು ಕತೆಯನ್ನು ಮಾತ್ರ ಹೇಳದೆ ಒಂದು ನಾಯಕನಿಗೆ ಮಾತ್ರ ಪ್ರಾಮುಖ್ಯತೆ ನೀಡದೆ ಎಲ್ಲರು ಅವರವರ ಜೀವನದ ಕತೆಯಲ್ಲಿ ಅವರವರೇ ನಾಯಕರು ಎಂಬುದನ್ನು ಸಿನಿಮ ಸೂಚಿಸುತ್ತದೆ. ಸೋಂಕು ಹರಡುವ ರೀತಿಯನ್ನು ಮತ್ತು ಅದರ ಮೂಲವನ್ನು ಪತ್ತೆಹಚ್ಚುವುದರ ಜೊತೆಗೆ ಪ್ರೀತಿ ಪ್ರೇಮದ, ನೋವಿನ, ಹಸಿವಿನ, ಭಯದ, ಕರುಣೆಯ, ತ್ಯಾಗದ,ಪ್ರಾರ್ಥನೆಯ, ಸಾಹಸದ,ಕಥೆಯು ಪ್ರತಿಯೊಂದು ಪಾತ್ರದಲ್ಲಿಯೂ ಇದೆ. ಎಲ್ಲರೂ ಅವರವರ ಪಾತ್ರಕ್ಕೆ ಮನಸ್ಸಿಗೆ ನಾಟುವಂತೆ ಜೀವ ತುಂಬಿದ್ದಾರೆ.

ಸಂಭಾಷಣೆ ಶೈಲಿಯೂ ಭಾವನಾತ್ಮಕವಾಗಿ ಹೆಚ್ಚು ಗಾಂಭೀರ್ಯತೆಯನ್ನು ತೋರಿಸುತ್ತದೆ. ಸೋಂಕಿನ ಚಿಕಿತ್ಸೆಯ ಮದ್ದಿನ ಬಗ್ಗೆ ಕುಂಜಾಕೊ ಬಾಬಾನ್ ಹೇಳುವ “There is no vaccination no treatment protocol” ಹೇಳುವ ರೀತಿಯೂ ಅದ್ಭುತವಾಗಿದೆ. ತನ್ನ ಮಗನಿಂದ ಎಲ್ಲರಿಗೆ ಈ ಸೋಂಕು ಹರಡಿದೆ ಎಂದು ತಿಳಿದ ಮಗನ ತಾಯಿ ಹೇಳುವ “ಎಂಡೆ ಮೋನಲ್ಲೆ ಎಲ್ಲಾರ್ಕುಂ ಕೊಡ್ತದ್ “(ನನ್ನ ಮಗನಲ್ಲವೆ ಎಲ್ಲರಿಗೂ ಕೊಟ್ಟದ್ದು)ನಿಫಾ ಸೋಂಕು ಬಾಧಿತ ವ್ಯಕ್ತಿಯನ್ನು ಚಿಕಿತ್ಸೆಗೆಯ್ಯುತ್ತಾ ಕೊನೆಯುಸಿರೆಳೆದ ನರ್ಸ್ ಲಿನಿ(ರೀಮಾ ಕಲ್ಲಿಂಗಲ್) ಕೊನೆಯ ಬಾರಿ ತನ್ನ ಪತಿಯ ಕರೆ ಬಂದಾಗ ಹೇಳುವ ಮಾತು “ಆಲುಕ್ಕಾರ್ಕ್ ಅಸುಗಂ ವನ್ನಾಲ್ ನೂಕಾದಿರಿಕ್ಕಾನ್ ಪಟ್ಟುವೋ”( ಜನರಿಗೆ ರೋಗ ಬಾದಿಸಿದರೆ ನೂಡದಿರಲಿಕ್ಕಾಗುತ್ತದೆಯೆ ) ಇತ್ಯಾದಿ ಸಂಭಾಷಣೆ ಶೈಲಿ ಉತ್ತಮವಾಗಿದೆ.

ಆಶಿಕ್ ಅಬು ನಿರ್ದೇಶನದ ಈ ಸಿನಿಮ ವನ್ನು ರೀಮಾ ಕಲ್ಲಿಂಗಲ್ ನಿರ್ಮಿಸಿದ್ದಾರೆ ರಾಜೀವ್ ರವಿಯವರ ಛಾಯಾಗ್ರಹಣ, ಮುಹ್ಸಿನ್ ಪೆರಾರಿ, ಸುಹಾಸ್ ಶರಫು,ಚಿತ್ರಕಥೆ ಯನ್ನು ಚೆನ್ನಾಗಿ ಬರೆದಿದ್ದಾರೆ ನೈಜ ಹೋರಾಟಗಾರರಿಗೆ ಹೊಂದಿಕೊಂಡಂತೆ ಪಾತ್ರಗಳನ್ನು ನೀಡಲಾಗಿದೆ ಆರೋಗ್ಯ ಮಂತ್ರಿಯಾಗಿ ರೇವತಿ, ಕಲ್ಲಿಕೋಟೆ DC ಯಾಗಿ ಟೊವಿನೂ ಥೋಮಸ್ ಮಣಿಪಾಲ್ ವೈರಸ್ ರಿಸರ್ಚ್ ಸೆಂಟರ್ ನ ಡಾಕ್ಟರ್ ವೇಷದಲ್ಲಿ ಕುಂಜಾಕೊ ಬಾಬಾನ್ ರಹ್ಮಾನ್, ಆಸೀಫ್ ಅಲಿ, ಇಂದ್ರಜಿತ್, ಇಂದ್ರನ್ಸ್, ಸೌಬಿನ್ ಶಾಹಿರ್, ಶ್ರೀನಾಥ್ ಬಾಸಿ, ನಿರ್ದೇಶಕ ಝಕರಿಯ ಜೊಜು ಜಾರ್ಜ್,ನಟಿ ಪಾರ್ವತಿ, ರಮ್ಯಾ ನಂಬಿಶರನ್, ಮಡೋನ ಸೆಬಾಷ್ಟಿಯನ್, ರೀಮಾ ಕಲ್ಲಿಂಗಲ್ , ಮೊದಲಾದ ಬಹು ತಾರಂಗಣವಿರುವ ಚಿತ್ರ. ಎಲ್ಲೂ ಕಳಪೆ ಅಥವಾ ಅಶ್ಲೀಲ ದೃಶ್ಯವೋ ಇಲ್ಲ ಎಲ್ಲರದ್ದು ಒಬ್ಬರನ್ನೊಬ್ಬರು ಮೆರಿಸುವಂತ ಅಧ್ಭೂತ ನಟನೆ. ನಿಫಾ ವೈರಸ್ ನ ಬಗ್ಗೆ ತಿಳಿದ ಅದನ್ನು ಅನುಭವಿಸಿದ,ಹಾಗೂ ಸೃಜನ ಶೀಲ ಸಿನಿ ಪ್ರೀಯರಿಗೆ ಸಿನಿಮ ಎಲ್ಲೂ ಬೋರು ಹೂಡಿಸಲಾರದು. ಎಲ್ಲರೂ ನೋಡಲೇ ಬೇಕಾದ ಸಿನಿಮ.

1 COMMENT

  1. ಉತ್ತಮ ವಿಶ್ಲೇಷಣೆ..
    ಜತೆಗೆ ಮೆಡಿಕಲ್ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳಿಗೆ ಈ ಸಿನೆಮಾದಲ್ಲಿ ಕಲಿಕೆಗೆ ಅನುಕೂಲವಾಗಬಹುದು

LEAVE A REPLY

Please enter your comment!
Please enter your name here