ಲೇಖಕರು:ನೀರಜ್ ನಾಥ್
ವಿದ್ಯಾರ್ಥಿ, ಎಂ.ಎ(ಮಾನವ ಸಂಪನ್ಮೂಲ ನಿರ್ವಹಣೆ), ಜೆ.ಎಂ.ಐ ದೆಹಲಿ

ಪ್ರಪ್ರಥಮ ಶಿಕ್ಷಕಿ, ನಿಮ್ಮ ಮೊದಲ ಮತ್ತು ಜೀವನಪೂರ್ತಿಯ ಆತ್ಮೀಯ ಗೆಳತಿ, ಸಂಪೂರ್ಣ ಕಾಳಜಿ ನೀಡುವವಳು, ನಿಸ್ವಾರ್ಥ ಪ್ರೀತಿಯ ಸಾಕಾರ ಮೂರ್ತಿ ಈ ಎಲ್ಲಾ ವಿಶೇಷಗಳು ಒಂದು ಹೆಸರಿನೊಂದಿಗೆ ಕೂಡಿಕೊಂಡಿದೆ- ಅದು ಅಮ್ಮ. ಅದಾಗಿಯೂ ತಾಯಿಯೂ ನಮ್ಮ ಜೀವನದಲ್ಲಿ ವಹಿಸುವ ಪಾತ್ರವನ್ನು ತಿಳಿಸಲು ಅವರು ನಮ್ಮ ಬಳಿ ಬರುವುದಿಲ್ಲ.
ನಮ್ಮ ಶಾಲೆಗಳಲ್ಲಿ ನಮಗೆ ಪ್ರಬಂಧವನ್ನು ಬರೆಯಲು ಪ್ರಥಮವಾಗಿ ನೀಡುವ ವಿಷಯ “ನನ್ನ ತಾಯಿ”. ಆ ಹಂತದಲ್ಲಿ ನಮ್ಮ ಜೀವನದಲ್ಲಿ ಸರ್ವವ್ಯಾಪಿಯಾಗಿ ಆವರಿಸಿಕೊಂಡಿರುವ ಆ ಜೀವದ ಬಗ್ಗೆ ನಾವು ಕೆಲವು ಗೆರೆಗಳನ್ನು ಬರೆಯಲು ಸೋತು ಹೋಗುತ್ತೇವೆ. ಆಕೆಯ ಹೆಸರಿನ ನಂತರ ತುಂಬಾ ಏನೂ ಬರೆಯಲು ಸಾಧ್ಯವಾಗುವುದಿಲ್ಲ. ವರ್ಷಗಳು ಕಳೆದವು ಆದರೆ, ಈಗಲೂ ತಾಯಿಯ ಪಾತ್ರದ ಒಂದು ಭಾಗದ ಕುರಿತು ಕೂಡ ಒಂದು ವಾಕ್ಯ ರಚಿಸಿ ಅದಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ.
ಆಕೆಯು ನಿಮಗೆ ಪ್ರಥಮವಾಗಿ ಒಂದು ಪದವನ್ನು ಮಾತನಾಡಲು ಕಲಿಸಿದ ಸಂಧರ್ಭ ನಿಮಗೆ ನೆನಪಿದೆಯಾ? ಆ ಗಳಿಗೆಯಲ್ಲಿ ಆಕೆ ಅನುಭವಿಸಿದ ಖುಷಿಯನ್ನು ನಿಮಗೆ ಊಹಿಸಲು ಸಾಧ್ಯವೇ? ಅಥವಾ ಆಕೆ ನಿಮ್ಮ ಕೈ ಹಿಡಿದು ಆ ಉರುಟಾದ ಅಕ್ಷರ ‘ಅ’ ಅನ್ನು ಬರೆಯಲು ನಿಮಗೆ ಸಹಾಯ ಮಾಡಿದ ಸಂಧರ್ಭ? ಅದು ನೀವು ಮೊಟ್ಟಮೊದಲು ಅಕ್ಷರ ಬರೆದ ಸಂಧರ್ಭ. ನನಗೆ ಆ ಯಾವ ಕ್ಷಣಗಳೂ ನೆನಪಿಲ್ಲ. ನಮ್ಮ ಬರೆವಣಿಗೆಯ ಸಾಮಥ್ರ್ಯ ಮತ್ತು ಸಂವಹನದ ಭಾಷಾ ಕೌಶಲ್ಯಕ್ಕೆ ಅಭಿನಂದನೆಗಳು ಗಳಿಸಿದಾಗ ಆ ಹಳೇಯ ಕ್ಷಣಗಳ ಬಗ್ಗೆ ನಮಗೆ ಕಾಳಜಿಯೇ ಇರುವುದಿಲ್ಲ. ಆ ಎಲ್ಲಾ ಅಭಿನಂದನೆಗಳು ಓರ್ವಾಕೆ ಒಂದು ಮಗುವಿನ ಕಲಿಕೆಗೆ ತನ್ನನ್ನು ಮೀಸಲಿರಿಸಿದ್ದರಿಂದಾಗಿದೆ. ಎಲ್ಲವೂ ಆ ಆದಿ ಸ್ಪೂರ್ತಿಯಿಂದ. ಯಾವಾಗ ಆಕೆ ನಮ್ಮೊಂಗಿಗೆ ಆಕೆಯ ಸ್ಮಾರ್ಟ್ ಫೋನ್ ಉಪಯೋಗಿಸುವುದರ ಕುರಿತು ವಿಚಾರಿಸುತ್ತಾಲೋ, ನಾವು ಹೇಗೆ ಉತ್ತರಿಸುತ್ತೇವೆ? ನಮಗೆಲ್ಲಾ ಗೊತ್ತು, ಆದ್ದರಿಂದ ನಾನು ಅದಕ್ಕೆ ಉತ್ತರಿಸಲು ಬಯಸುವುದಿಲ್ಲ.
ನನಗೆ ತುಸು ಜ್ವರವಿದ್ದರೆ ಅಥವಾ ನನಗೆ ಏನೋ ಅಸೌಖ್ಯ ಭಾವ ಅನಿಸುತ್ತಿದೆ ಎಂದು ನಾನು ಹೇಳಿದಾಗ ನನ್ನ ತಾಯಿ ಇಡೀ ರಾತ್ರಿ ಮಲಗದೇ ಜಾಗೃತರಾಗಿರುವುದು ನನಗೆ ಈಗಲೂ ನೆನಪಿದೆ. ಇಡೀ ರಾತ್ರಿ ನನ್ನ ಪಕ್ಕದಲ್ಲಿ ಕೂತು ನನಗೆ ಹಿತ ನೀಡುವ ಪ್ರಯತ್ನ ಮಾಡುತ್ತಿದ್ದಳು. ಆಕೆ ಸಂಪೂರ್ಣ ಕಾಳಜಿ ನೀಡುವವಳು. ಆಕೆಯ ಪ್ರಾಯ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಕಾಯಿಲೆ ಬಿದ್ದಾಗ ನಾನು ಅದೇ ರೀತಿ ಕಾಳಜಿಯನ್ನು ತೋರಿಸುತ್ತೇನೆಯೇ? ನಮಗೆಲ್ಲಾ ಗೊತ್ತು, ಆದ್ದರಿಂದ ನಾನು ಅದಕ್ಕೆ ಉತ್ತರಿಸಲು ಬಯಸುವುದಿಲ್ಲ.
ಇಲ್ಲ. ಆಕೆ ನನ್ನೊಂದಿಗೆ ಯಾವತ್ತೂ ತಿರುಗಿ ಏನನ್ನೂ ಕೇಳಿದವಳಲ್ಲ, ಬದಲಾಗಿ ನನ್ನ ಚಿಕ್ಕ ದೋಣಿಗೆ ಆಧಾರವಾಗಿದ್ದಳು. ಓರ್ವ ಉತ್ತಮ ವ್ಯಕ್ತಿಯಾಗಲು ಮಾತ್ರ ಆಕೆ ನನ್ನೊಂದಿಗೆ ಕೇಳಿದ್ದು. ಆಕೆ ಜೀವಂತ ವಿದ್ದರೂ ಇಲ್ಲದಿದ್ದರೂ ನನಗೆ ಯಶಸ್ವಿ ಮಾತ್ರ ಸಿಗಲೆಂದು ಪ್ರತಿದಿನ ದೇವರಲ್ಲಿ ಪ್ರಾರ್ಥಿಸುತ್ತಿದ್ದಳು. ನಿಸ್ವಾರ್ಥತೆಯ ಪರಿಪೂರ್ಣತೆ. ಯಾವಾಗ ಆಕೆಗೆ ಸ್ವಂತ ಕಾಳಜಿಯನ್ನು ಮಾಡಲು ಸಾಧ್ಯವಾಗುವುದಿಲ್ಲವೋ, ಆಗ ನಾನು ಆಕೆಯ ಕಾಳಜಿಯನ್ನು ಮಾಡುವೆನೇ? ಅಥವಾ ನಾನು ನನ್ನ “ಕುಟುಂಬ” ಮತ್ತು ವೃತ್ತಿ ಸಂಬಂಧಿತ ವಿಚಾರದಲ್ಲಿ ಅತಿಯಾಗಿ ನಿರತನಾಗಿರುವೆನೆ? ಅದನ್ನು ಉತ್ತರಿಸಲು ನನಗೆ ಸಾಧ್ಯವಿಲ್ಲ. ನನಗೆ ಅದು ಗೊತ್ತಿಲ್ಲ.
ಆಕೆ ಇದೆಲ್ಲವನ್ನು ನನಗೆ ಕಲಿಸಿದಲು, ಆದರೂ ಆ ಜ್ಞಾನವನ್ನು ಆಕೆಗೆ ಕೃತಜ್ಞತೆಯ ಒಂದು ಸಾಲನ್ನು ಬರೆಯಲು ಬಳಸಲು ನನಗೆ ಆಗುತ್ತಿಲ್ಲ. ನನಗೆ ಗೊತ್ತು ನಾನು ಬರೆದರೂ ಆಕೆ ಒಂದು ಸಿಂಪಲ್ ನಗುವಿನೊಂದಿಗೆ ಅದನ್ನು ಬದಿಗೆ ಸರಿಸುತ್ತಾಳೆ. ನಾನು ಆಕೆಗೆ ಕೃತಜ್ಞನಾಗಿರಬೇಕೆಂದು ಆಕೆ ಬಯಸುವುದಿಲ್ಲ. ಆದರೆ, ಇದೇ ಕಾಳಜಿಯನ್ನು ನಾನು ಇತರರ ಬಗ್ಗೆ ಹೊಂದಲು ಆಶಿಸುತ್ತಾಳೆ. ಆಕೆಗೆ ಅಗತ್ಯವಿರುವಾಗ ಅವಳ ಪೀಳಿಗೆಯು ಬಳಿಯಿರಬೇಕೆಂದು ಆಕೆ ಇಚ್ಛಿಸುತ್ತಾಳೆ. ನಾನು ಇರುತ್ತೇನೆಂದು ವಾಗ್ದಾನ ಮಾಡುತ್ತೇನೆ ಮತ್ತು ನನ್ನ ತಾಯಿಯು ನನಗೆ ವಾಗ್ದಾನವನ್ನು ಉಳಿಸಿಕೊಳ್ಳುವುದನ್ನು ಕಲಿಸಿದ್ದಾಳೆ.

-ನೀರಜ್ ನಾಥ್
ವಿದ್ಯಾರ್ಥಿ, ಎಂ.ಎ(ಮಾನವ ಸಂಪನ್ಮೂಲ ನಿರ್ವಹಣೆ), ಜೆ.ಎಂ.ಐ ದೆಹಲಿ
ಕೃಪೆ: ದಿ ಕಂಪಾನಿಯನ್.ಇನ್

LEAVE A REPLY

Please enter your comment!
Please enter your name here