About

ಇಂಕ್‍ಡಬ್ಬಿ. ಕಾಂ ಇದು ಒಂದು ಅನ್ಲೈನ್ ಪೋರ್ಟಲ್”ಆಗಿದ್ದು, ಇಲ್ಲಿ ವಿದ್ಯಾರ್ಥಿ, ಯುವಕರ ಮತ್ತು ಕ್ಯಾಂಪಸ್ ಧ್ವನಿಗಳು ಹೊರಹೊಮ್ಮುತ್ತವೆ. ಮೌಲ್ಯಧಾರಿತ ಮತ್ತು ನೈತಿಕತೆಯುಕ್ತ ಸಾಮಾಜಿಕ ಬದಲಾವಣೆಗಾಗಿ ಪ್ರಜಾಸತ್ತಾತ್ಮಕ ಮತ್ತು ಸ್ಪಂದನಾಶೀಲ ಕ್ಯಾಂಪಸ್ಸಿನ ಭಾಗವಹಿಸುವಿಕೆಗೆ ಶ್ರಮಿಸುವುದು ಇದರ ಉದ್ದೇಶವಾಗಿದೆ. ಬೃಹತ್ ಪ್ರಮಾಣದಲ್ಲಿ ಇದರ ಪ್ರಾಥಮಿಕ ಲಕ್ಷ್ಯವು ವಿದ್ಯಾರ್ಥಿ, ಯುವಕರು ಮತ್ತು ಭಾರತೀಯ ಕ್ಯಾಂಪಸ್‍ಗಳ ಸಮಸ್ಯೆಗಳು ಮತ್ತು ಸವಾಲುಗಳಾಗಿರುವುವು. ಸಮಾಜದ ಪ್ರಚಲಿತ ವಿದ್ಯಾಮಾನಗಳ ಕುರಿತ ವಿದ್ಯಾರ್ಥಿ-ಯುವಕರ ದೃಷ್ಟಿಕೋನ ಮತ್ತು ಅಭಿಪ್ರಾಯಗಳನ್ನು ಮುನ್ನೆಲೆಗೆ ತರಲು ಒತ್ತು ನೀಡುತ್ತದೆ.
ಇಂಕ್‍ಡಬ್ಬಿ. ಕಾಂ ಮುಖ್ಯ ಭೂಮಿಕೆಯಲ್ಲಿ ಚರ್ಚೆಯನ್ನು ಪ್ರಚೋದಿಸಲ್ಪಡಬಹುದಾದ ಕ್ಯಾಂಪಸ್ ಮತ್ತು ಶೈಕ್ಷಣಿಕ ವಿಚಾರಗಳಿಗೆ ಮಹತ್ವ ನೀಡುತ್ತದೆ. ವೆಬ್‍ಸೈಟ್ ಉತ್ಪಾದಿಸುವ ವಿಷಯಗಳು ಸ್ವಯಂ ಬರಹಗಾರರಿಂದಲೇ ನೀಡಿರುವುದಾಗಿರುತ್ತದೆ. ಕ್ಯಾಂಪಸ್ ಜರ್ನೋ ನಮ್ಮ ಪ್ರಮುಖ ಇಂಟರ್ನ್‍ಶಿಪ್ ಕಾರ್ಯಕ್ರಮ, ಅದರಲ್ಲಿ ವಿದ್ಯಾರ್ಥಿ ಮತ್ತು ಯುವಕರು ಸ್ವಯಂ ಆಸಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್.ಐ.ಓ), ಕರ್ನಾಟಕ ಇದರ ಮೀಡಿಯಾ ವಾಚ್ ವಿಭಾಗವು ಇಂಕ್‍ಡಬ್ಬಿ. ಕಾಂ ನ್ನು ನಿರ್ವಹಿಸುತ್ತದೆ.