ವಿಮರ್ಶೆ : ವೆಬ್ ಸೀರೀಸ್

  • ನಿಹಾಲ್ ಮುಹಮ್ಮದ್ ಕುದ್ರೋಳಿ

ಕೊನೆಗೂ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವು ಕನಿಷ್ಠ ಪಕ್ಷ ಒಂದು ರಾಜಕೀಯ ವೆಬ್ ಸರಣಿಯನ್ನು ಹೊಂದಿದೆ. ವಾಸ್ತವದ ಸುತ್ತ ಹೆಣೆದಿರುವ ಯಾವುದೇ ರಾಜಕೀಯ ಚಲನಚಿತ್ರಗಳು ಅಥವಾ ವೆಬ್ ಸರಣಿಗಳನ್ನು ನಮಗೆ ಕಾಣಲು ಸಾಧ್ಯವಾಗದಿರುವುದು ವಿಷಾದಕರ ಸಂಗತಿ ಮತ್ತು ಅದಕ್ಕೆ ಅನೇಕ ಕಾರಣಗಳಿವೆ.
ತಾಂಡವ ವೆಬ್ ಸಿರೀಸ್ ನ ಕುರಿತು ಹೇಳುವುದಾದರೆ, ಈ ಕಥೆಯು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ರಾಜಧಾನಿಯಲ್ಲಿ ನಡೆಯುವಂತಹ ಎರಡು ರೀತಿಯ ರಾಜಕೀಯ ಹೋರಾಟಗಳ ಸುತ್ತ ಹೆಣೆಯಲಾಗಿದೆ.

ಒಂದು ಕಡೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿಯಾಗಲು ಯುದ್ಧ ಮತ್ತು ಇನ್ನೊಂದು ಕಡೆ ವಿಎನ್‌ಯು (ವಿವೇಕಾನಂದ ರಾಷ್ಟ್ರೀಯ ವಿಶ್ವವಿದ್ಯಾಲಯ) ಹೆಸರಿನ ರಾಷ್ಟ್ರದ ಪ್ರತಿಷ್ಠಿತ ಕೇಂದ್ರ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷೀಯ ಚುನಾವಣೆ. ಉಳಿದದ್ದನ್ನು ಅರ್ಥಮಾಡಿಕೊಳ್ಳಲು ನೀವು ಸಾಕಷ್ಟು ಸ್ಮಾರ್ಟ್ ಎಂದು ನಾನು ಭಾವಿಸುತ್ತೇನೆ.

ಪ್ರಮುಖ ಪಾತ್ರವನ್ನು ಸೈಫ್ ಅಲಿ ಖಾನ್ ಅವರು ಸಮರ್ ಪ್ರತಾಪ್ ಸಿಂಗ್, ಎರಡು ಬಾರಿ ಪ್ರಧಾನಿಯಾದ ದೇವ್ಕಿ ನಂದನ್ (ಟಿಗ್ಮಂಶು ಧುಲಿಯಾ) ರವರ ಮಗನಾಗಿ ಬಣ್ಣ ಹಚ್ಚಿದ್ದಾರೆ. ಮತ್ತೊಂದು ಪ್ರಮುಖ ಪಾತ್ರಕ್ಕೆ ಡಿಂಪಲ್ ಕಪಾಡಿಯಾ ರವರು ಜೀವ ತುಂಬಿದ್ದಾರೆ. ಅನುರಾಧಾ ಕಿಶೋರ್, ಗೆಳತಿ ಅಥವಾ ನೀವು ಪ್ರಧಾನ ಮಂತ್ರಿಯ ಪ್ರೇಯಸಿ ಎಂದೂ ಹೇಳಬಹುದು. ಇನ್ನೊಂದು ಬದಿಯಲ್ಲಿ ಝೀಶಾನ್ ಅಯೂಬ್ ವಿಎನ್‌ಯುನಲ್ಲಿ ಕಲಿಯುತ್ತಿರುವ ಎಡಪಂಥೀಯ ವಿದ್ಯಾರ್ಥಿ ಶಿವಶೇಖರ್ ಪಾತ್ರವನ್ನು ನಿರ್ವಹಿಸುತ್ತಿರುವುದು ನಾವು ನೋಡಬಹುದು. ಕೃತಿಕಾ ಕಾಮ್ರಾ ಅವರು ಶಿವನ ಸಹಚರ ಸನಾ ಮಿರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಪ್ರಮುಖ ಅಂಶವೆಂದರೆ ಸುನಿಲ್ ಗ್ರೋವರ್ ಅವರು ಗುರ್ಪಾಲ್ ಚೌಹಾನ್, ಸಮರ್ ಪ್ರತಾಪ್ ಸಿಂಗ್ ರವರ ಕಾರ್ಯದರ್ಶಿಯಾಗಿ ಅಥವಾ ಬಲಗೈ ನಂಟನಾಗಿ ನಿರ್ವಹಿಸಿದ ಪಾತ್ರ.

ಪ್ರದರ್ಶನವು ಥ್ರಿಲ್ಲರ್ ಅಥವಾ ಬೆರಗುಗೊಳಿಸುವಂತಿಲ್ಲವಾದರೂ, ಭಾರತೀಯ ರಾಜಕೀಯದ ವಾಸ್ತವತೆಯನ್ನು ಪರದೆಯ ಮೇಲೆ ತೋರಿಸಿದ್ದಕ್ಕಾಗಿ ಶ್ಲಾಘನೆಗೆ ಅರ್ಹವಾಗಿದೆ. ನಾವು ಈ ಹಿಂದೆ ಕೆಲವು ರಾಜಕೀಯ ಕಾದಂಬರಿಗಳನ್ನು ನೋಡಿದ್ದೇವೆ ಆದರೆ ವಾಸ್ತವವನ್ನು ಕಾದಂಬರಿಯೊಂದಿಗೆ ಬೆರೆಸುವ ಮೊದಲ ಪ್ರಯತ್ನಗಳಲ್ಲಿ ಇದೂ ಒಂದು.

ರೈತರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಓರ್ವ ಮುಸ್ಲಿಂ ವಿದ್ಯಾರ್ಥಿ ನಾಯಕನನ್ನು ಪೊಲೀಸರು ಬಂಧಿಸುವಂತಹ ಸನ್ನಿವೇಶವನ್ನು ನಾವು ಮೊದಲನೆಯ ಭಾಗದಲ್ಲಿ ಕಾಣಬಹುದು. ಆತನ ಮುಸ್ಲಿಂ ಎಂಬ ಐಡೆಂಟಿಟಿ ಯಾವ ರೀತಿ ಆತನಿಗೆ ಭಯೋತ್ಪಾದಕನೆಂಬ ಪಟ್ಟವನ್ನು ನೀಡುತ್ತದೆ ಮತ್ತು ಯುಎಪಿಎ ಕಾಯ್ದೆಯಡಿಯಲ್ಲಿ ಬುಕ್ ಮಾಡಲಾಗುತ್ತದೆಯೆಂಬುದನ್ನು ನಾವು ನೋಡುತ್ತೇವೆ, ಇದನ್ನು ವಕೀಲರು ಆಧುನಿಕ-ದಿನದ ಟಾಡಾ ಎಂದೂ ಕರೆಯುತ್ತಾರೆ. ಪಾತ್ರವು ಯಾರನ್ನು ಹೋಲುತ್ತದೆಯೆಂದು ನೀವು ಈಗಾಗಲೇ ಊಹಿಸಿರಬಹುದು.
ತಮ್ಮ ರಾಜಕೀಯ ನಾಯಕರನ್ನು ತೃಪ್ತಿಪಡಿಸಲು ಮುಗ್ಧ ಜೀವಗಳನ್ನು ಬಲಿ ಪಡೆಯಲು ಪೊಲೀಸರು ಶಾಂತಿಯುತ ಪ್ರತಿಭಟನೆಗಳನ್ನು ಹೇಗೆ ಹಿಂಸಾತ್ಮಕವಾಗಿ ಪರಿವರ್ತಿಸುತ್ತಾರೆ ಎಂಬುದನ್ನು ಈ ಸರಣಿಯು ತೋರಿಸುತ್ತದೆ. ಸಂಜಯ್ ಗಾಂಧಿಯ ವಿಧಿ ಇಂದಿರಾಗಾಂಧಿಯ ಕೈಯಲ್ಲಿ, ಅದೇ ರೀತಿ ತುರ್ತು ಪರಿಸ್ಥಿತಿಯ ಸಂದರ್ಭದ ಉಲ್ಲೇಖಗಳನ್ನು ಈ ಸಿರೀಸ್ ನಲ್ಲಿ ಕಾಣಬಹುದು. ನಾವು ಭಾರತದ ರಾಜಕೀಯ ಮತ್ತು ವಿದ್ಯಾರ್ಥಿ ರಾಜಕೀಯದ ಕರಾಳ ಭಾಗವನ್ನು ನೋಡುತ್ತೇವೆ. ಈ ವೆಬ್ ಸರಣಿಯೂ ಪ್ರಧಾನ ಮಂತ್ರಿ ಹುದ್ದೆಯಲ್ಲಿನ ಮತ್ತೊಂದು ಬದಲಾವಣೆಯೊಂದಿಗೆ ಎರಡನೆಯ ಭಾಗದಲ್ಲಿ ಉತ್ತರಿಸಬಹುದಾದ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ತಾಂಡವ್ ವೆಬ್ ಸಿರೀಸ್ ನ ಕೆಲವು ನ್ಯೂನ್ಯತೆಗಳೆಂದರೆ, ದೇವ್ಕಿ ನಂದನ್ ತನ್ನ ಮಗ ಸಮರ್ ಪ್ರತಾಪ್ ಸಿಂಗ್ ನಿಂದ ಕೊಲ್ಲಲ್ಪಟ್ಟ ನಂತರ ಮುಂದಿನ ಪ್ರಧಾನಿ ಯಾರು ಎಂಬ ಬಗ್ಗೆ ನಡೆದ ಎಲ್ಲಾ ನಾಟಕಗಳ ನಡುವೆಯೂ ವಿರೋಧ ಪಕ್ಷದ ಕೊರತೆ ಎದ್ದು ಕಾಣುತ್ತದೆ. ಶಿವನ ಪಾತ್ರದಲ್ಲಿ ಝೀಶಾನ್ ಅಯೂಬ್ ರ ಉತ್ತಮ ನಟನೆಯ ಹೊರತಾಗಿಯೂ ವಿದ್ಯಾರ್ಥಿ ಚಳುವಳಿ ಅಥವಾ ಪ್ರತಿಭಟನೆಗಳು ಪ್ರೇಕ್ಷಕರ ಮೇಲೆ ಹೆಚ್ಚಿನ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಪ್ರತಿಭಟನೆಗಳು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಎಲ್ಲಾ ಪ್ರತಿಭಟನೆಗಳ ಮಿಶ್ರಣದಂತೆ ಕಾಣುತ್ತಿದ್ದವು.
ಕೆಲವು ದೃಶ್ಯಗಳ ಮೇಲೆ ನಿರ್ದಿಷ್ಟ ಸಮುದಾಯದ ಧಾರ್ಮಿಕ ಭಾವನೆಗಳಿಗೆ ದಕ್ಕೆ ಯುಂಟಾಗಿದೆ ಎಂಬ ಆರೋಪದಿಂದಾಗಿ ಈ ವೆಬ್ ಸರಣಿಯು ಟೀಕೆ- ಆಕ್ರೋಶಗಳಿಗೆ ಗುರಿಯಾಗುತ್ತಿದೆ.
ಲೈಲಾ ದ ಹಾಗೆ ತಾಂಡವ್‌ನ ಸೀಸನ್ 2 ಅನ್ನು ನಮಗೆ ವೀಕ್ಷಿಸಲು ಸಾಧ್ಯವಾಗದಿರಬಹುದೆಂದು ತೋರುತ್ತಿದೆ.

LEAVE A REPLY

Please enter your comment!
Please enter your name here