ಕೋಲ್ಡ್ ಕೇಸ್ : ಒಂದು ಹೆಣ್ಣಿನ ಪ್ರತಿಕಾರದ ಕಥೆ. (ಚಿತ್ರ ವಿಮರ್ಶೆ)
ಕೋಲ್ಡ್ ಕೇಸ್ ಅಮೆಝಾನ್ ಪ್ರೈಮ್ ಓಟಿಟಿ ಯಲ್ಲಿ ಬಿಡುಗಡೆ ಗೊಂಡ ಕ್ರೈಮ್ ಥ್ರಿಲ್ಲರ್ ಹಾರರ್ ಮಲಯಾಳಂ ಮೂವಿ. “ಕೋಲ್ಡ್ ಕೇಸ್” ಎಂಬ ಹೆಸರಿನಂತೆ ಅದು ಒಂದು ತಣ್ಣಗಿನ ಪ್ರತಿಕಾರದ ಕಥೆ. ಚಿತ್ರದ ಟ್ರೈಲರ್ ನಲ್ಲಿ ತನಿಖೆಗೆ ಸಂಭಂದಿಸಿದ ಚಿತ್ರವೆಂದು ವಿವರಿಸಿತ್ತು.
ನದಿ ತೀರದಲ್ಲಿ ಮೀನುಗಾರರ ಬಲೆಗೆ ಬೀಳುವ ಒಂದು ಬುರುಡೆಯಿಂದ ಕಥೆ ಚಲಿಸುತ್ತದೆ. ಬುರುಡೆ ಕೊಲೆಯಾದ ಹೆಣ್ಣಿನದ್ದಾಗಿದೆ ಎಂದು ತಿಳಿದಾಗ ಕಥೆಗೊಂದು ತಿರುವು ಪಡೆದುಕೊಳ್ಳುತ್ತದೆ. ತನಿಖೆ ನಡೆಸುವ ಎ. ಸಿ. ಪಿ ಸತ್ಯಜಿತ್ ನಲ್ಲಿ ಸಿನಿಮಾ ಸಂಚಾರ ಆರಂಭಿಸುತ್ತದೆ. ಸತ್ಯಜಿತ್ ಆಗಿ ಪೃಥ್ವಿ ರಾಜ್ ಸುಕುಮಾರನ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಕಥೆ ಕೊನೆಯವರೆಗೂ ನಿಧಾನ ಗತಿಯಲ್ಲಿ ಚಲಿಸುತ್ತದೆ ಆದರೂ ಎಲ್ಲೂ ಬೋರು ಹೊಡೆಸುವುದಿಲ್ಲ. ದೊಡ್ಡ ಕುತೂಹಲದ ಕಡೆಗೆ ಸಿನಿಮಾ ಪ್ರೇಕ್ಷಕರನ್ನು ಒಯ್ಯುದಿಲ್ಲ ಬೂತ ಪ್ರೇತಗಳ ನಂಬಿಕೆಗಳೊಂದಿಗೆ ಇತರ ಪಾತ್ರಗಳ ನಾಟಕೀಯ ರಂಗಗಳು ಅಧಿಕವೆನಿಸದೆ ಇರಲಾರದು. ವಿಜ್ಞಾನ ಮತ್ತು ಆದ್ಯಾತ್ಮದ ಜುಗಲ್ಬಂಧಿಯಾಗಿ ಸಿನಿಮಾ ಮುಂದುವರಿಯುತ್ತದೆ . ವೀಕ್ಷಕನ ನಂಬಿಕೆಯನ್ನು ಸಿನಿಮಾ ಗೌರವಿಸುತ್ತದೆ.
ಅನ್ಯವಾಗಿ ಸತ್ತು ಹೋದವರ ದೆವ್ವ ಬೂತಗಳು ತಮ್ಮ ಪ್ರತಿಕಾರ ತೀರಿಸಲು ಮನುಷನನ್ನೇ ಅವಲಂಬಿಸಿರುತ್ತದೆ ಎಂಬ ಶತಮಾನಗಳ ವಾದವನ್ನು ಸಿನಿಮಾ ವಿಮರ್ಶಿಸಿ ಯಂತ್ರಗಳಲ್ಲಿಯೂ ಬೂತಗಳ ಆಕರ್ಷಣೆ ಇದೆ ಎಂಬ ಹೊಸ ಚರ್ಚೆಯನ್ನು ಸಿನಿಮಾ ಹುಟ್ಟು ಹಾಕುತ್ತದೆ.
ವೀಕ್ಷಕನ ನಿರೀಕ್ಷೆಯಂತೆ ಸಿನಿಮಾ ಮುಕ್ತಾಯವಾಗದೆ. ಕೆಲವು ಕುರುಹುಗಳನ್ನು ಬಿಟ್ಟು ಮುಂದಿನ ಭಾಗಗಳಿಗೆ ಕಾಯಿರಿ ಎಂದು ತಿಳಿಸುತ್ತದೆ. ಅದಿತಿ ಬಾಲನ್, ಅನಿಲ್ ನೆಡುಂಬಂಗಾಡ್, ಪೂಜಾ ಮೋಹನ್ ರಾಜ್, ರಾಜೇಶ್ ಹೆಬ್ಬಾರ್ ಆನಂದ್ ಮೊದಲಾದವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ತನು ಬಾಲಾಕ್ ನಿರ್ದೇಶಿಸಿದ್ದಾರೆ, ಶ್ರೀನಾಥ್ ಚಿತ್ರಕತೆ ಬರೆದಿದ್ದಾರೆ, ಒಂದು ಬಾರಿ ನೋಡಬಹುದಾದ ಚಿತ್ರ. ಇದು ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆ ಗೊಂಡಿದೆ.