
ಭಕ್ತಿಯಲ್ಲೊಂದು ಶ್ರೇಷ್ಠ ಭಕುತಿ
ಮನದಲ್ಲಿ ಸದಾ ಮೂಡಿದಾಕೃತಿ
ನನ್ನೀ ತನು-ಮನ ತಣಿಸುವ
ಭಾರತ ಖಂಡದೊಳು ಮೊಳಗುವ ಸ್ತ್ರುತಿ
ಮಾನವನ ಎಲ್ಲೆಮೀರಿದ ಸಂಸ್ಕೃತಿ
ಹೇಗೆ ಹಬ್ಬುವವು ದೇಶದ ಕೀರುತಿ
ತನ್ನ ಪ್ರಯೋಗ, ಪ್ರಯೋಜನಗಳಿಗೆ
ಒಡೆಯುತಿರುವನವನು ಸುಂದರ ಪ್ರಕೃತಿ
ಎಲ್ಲಿದೇ ಮಾನವ ನಿನ್ನ ಮನುಷ್ಯ ಜಾತಿ
ರಕ್ತಸಿಕ್ತ ಅಧ್ಯಾಯದ ಪರಿಕಲ್ಪನೆಯ ಕೃತಿ
ಕರಗಳಲಿ ಸಿಕ್ಕರೂ ಓದಲಸಾಧ್ಯ ಎಮಗೆ
ಮನದೊಳಿಲ್ಲದೆ ಇರಲೇಬೇಕಾದ ದೇಶಭಕ್ತಿ
ಹೆಣ್ಣಿನ ಸ್ಥಾನ ಪವಿತ್ರವೆಂದು ಹೇಳುತಿ
ಗೌರವ ಸಮರ್ಪಣೆ ಕೂಡ ಮಾಡುತಿ
ತನ್ನ ಪ್ರತೀ ಆಮಿಷಗಳಿಗೆ ಮರುಳಾಗಿ
ಲೆಕ್ಕಿಸದೇ, ಹೆಣ್ಣು-ಹೊನ್ನನ್ನೇ ದೋಚುತಿ
ಹಾಡು ಹಗಲೇ ಪಾಪ ಕೃತ್ಯಕ್ಕೆ ಕೈ ಹಾಕುತಿ
ತನ್ನ ಪಾಪಗಳನ್ನು ಅದು ಹೇಗೆ ತೊಳೆಯುತಿ
ಸಾಕು ಇನ್ನಾದರೂ ನಿಲ್ಲಿಸಿ ಬಿಡು
ಎಲ್ಲೂ ಸಲ್ಲದ ನಿನ್ನ ಢಾಂಭಿಕ ಭಕುತಿ
ಮಾನವ ನೀ ಯಾಕಾದರೂ ಹೊಡೆದಾಡುತಿ
ಧರ್ಮದ ಹೆಸರಿನಲ್ಲಿ ದ್ವೇಷ ಕಾರುತಿ
ದುರಾಸೆ, ಗರ್ವ, ದುಷ್ಟತನವ ಬಿಟ್ಟು
ನೀ ಎಂದು ನೈಜ ಮಾನವನಾಗುತಿ?
ಭಕ್ತಿಯಲ್ಲೊಂದು ಶ್ರೇಷ್ಠ ಭಕುತಿ
ಸೇರಿ ಹಬ್ಬಿಸುವ ಭಾರತದ ಕೀರ್ತಿ
ಮರೆತು ಬಿಡಲೇ ಬೇಡ, ಓ ಮಾನವ
ಧರ್ಮದ ಪ್ರಮುಖ ಅಂಗವೇ ದೇಶ ಭಕ್ತಿ