ಕೋಮು ಸಾಮರಸ್ಯ ಮತ್ತು ಇಸ್ಲಾಂ ಧರ್ಮ
ಭಾಗ – 5

ಲೇಖಕರು :ಶೌಕತ್ ಅಲಿ.ಕೆ ಮಂಗಳೂರು

ಖಲೀಫಾ ಉಮರ್ ರ ಕಾಲದಲ್ಲಿ ಅಮ್ರ್ ಬಿನ್ ಆಸ್ ಗವರ್ನರ್ ಆಗಿದ್ದರು. ಅವರ ಆಡಳಿತ ಸೀಮೆಯಲ್ಲಿ ಯಾರೋ ಒಬ್ಬರು ವಿಗ್ರಹದ ಮೂಗು ಕತ್ತರಿಸಿದರು. ಆ ಧರ್ಮದ ಕೋಪೋದ್ರಿಕ್ತ ಜನರು ಬಂದು ಗವರ್ನರ್ ಅಮ್ರ್ ಬಿನ್ ಆಸ್ ರನ್ನು ಭೇಟಿ ಆದರು.

ಅಮ್ರ್ ಬಿನ್ ಆಸ್ ಹೇಳಿದರು, ನಿಮ್ಮ ಆರೋಪ ಸತ್ಯವೆಂದು ನಂಬುತ್ತೇನೆ. ನಿಮ್ಮ ಜೊತೆಯಲ್ಲಿ ಇರುವವರ ಕಣ್ಣುಗಳನ್ನು ನೋಡಿದರೆ ಸತ್ಯ ಎಂದು ತಿಳಿಯಲು ಅದು ಸಾಕು. ನನ್ನ ವಿಶ್ವಾಸ ವಿಗ್ರಹಾರಾಧನೆಯನ್ನು ಒಪ್ಪುವುದಿಲ್ಲ ನಿಜ. ಆದರೆ ವಿಗ್ರಹಾರಾಧನೆ ಮಾಡುವವರನ್ನು ನಾನೆಂದೂ ತಡೆಯಲಿಲ್ಲ. ವಿಗ್ರಹಗಳನ್ನು ನಾಶ ಪಡಿಸಲು ನಾನು ಯಾರನ್ನೂ ನೇಮಿಸಲಿಲ್ಲ. ಆದರೂ ಹಾಗೆ ಆಗಿದೆ. ಇದರಿಂದ ನನಗೆ ತುಂಬಾ ವಿಷಾದ ಆಗಿದೆ. ವಿಷಾದ ನಿಮ್ಮ ನಷ್ಟಕ್ಕೆ ಪರಿಹಾರ ಅಲ್ಲ. ಕೂಡಲೇ ನಿಮ್ಮ ವಿಗ್ರಹವನ್ನು ಹಳೆಯ ರೂಪಕ್ಕೆ ತರಲು ಆಜ್ಞೆ ಹೊರಡಿಸುತ್ತೇನೆ” ಎಂದರು.

ಆದರೆ ಕೋಪೋದ್ರಿಕ್ತ ಜನರಿಗೆ ಇದರಿಂದ ಸಮಾಧಾನ ಆಗಲಿಲ್ಲ. ಅದರ ಮೂಗು ಜೋಡಿಸಲು ಸಾಧ್ಯವಿಲ್ಲ ಎಂದರು. ಅದಕ್ಕೆ ಅಮ್ರ್ ಬಿನ್ ಆಸ್ ಹೇಳಿದರು, ಅಂತಹದ್ದೇ ಇನ್ನೊಂದು ವಿಗ್ರಹ ಮಾಡಲು ಆಜ್ಞಾಪಿಸುತ್ತೇನೆ….

ಆಗ ಅವರು, ಇಲ್ಲ ಬೇರೆ ವಿಗ್ರಹ ಬೇಡ, ಅದೇ ವಿಗ್ರಹ ಬೇಕು ಅದರೊಂದಿಗೆ ನಮಗೆ ಭಾವನಾತ್ಮಕ ಸಂಬಂಧ ಇದೆ ಎಂದು ಉತ್ತರಿಸಿದರು.

ಕೊನೆಗೆ ಅಮ್ರ್ ಬಿನ್ ಆಸ್ ರಿಗೆ ಏನೂ ತೋಚಲಿಲ್ಲ. ಅವರು ಬಂದ ಜನರಲ್ಲಿ ಹೇಳಿದರು, ಹಾಗಾದರೆ ನೀವೇ ಒಂದು ಪರಿಹಾರ ಸೂಚಿಸಿ.
ಅದಕ್ಕೆ ಅವರು ಹೇಳಿದರು, ಮುಹಮ್ಮದರ ಮೂರ್ತಿ ಮಾಡಿ ಅದರ ಮೂಗು ಕತ್ತರಿಸಲು ಅನುಮತಿ ಮಾಡಿ ಕೊಡಬೇಕು.

ಅಮ್ರ್ ಬಿನ್ ಆಸ್ ರಿಗೆ ಕೋಪ ಬಂತು, ಆದರೂ ಅವರು ಸಂಯಮ ವಹಿಸಿ ಹೇಳಿದರು, ಮುಹಮ್ಮದ್ (ಸ) ರವರ ಮೂರ್ತಿ ಮಾಡುವುದಕ್ಕಿಂತ ನಾನು ಸಾಯುವುದೇ ಲೇಸು. ಸಹೋದರಾ ಅದರ ಬದಲಿಗೆ ನಮ್ಮ ಪೈಕಿ ಯಾರದಾದರೂ ಮೂಗು ಕತ್ತರಿಸಿದರೆ ತಮಗೆ ಸಮಾಧಾನ ಆಗಬಹುದೇ?

ಅದಕ್ಕವರು ಇದು ನ್ಯಾಯಯುತವಾಗಿದೆ. ನಮಗೆ ಯಾರ ಮೂಗು ಬೇಕೆಂದು ನಾಳೆ ಸಮಾಲೋಚನೆ ಮಾಡಿ ತಿಳಿಸುತ್ತೇವೆ ಎಂದು ಹೋದರು.
ಮರುದಿನ ಅವರ ನಾಯಕರು ಧಾರ್ಮಿಕ ಪಂಡಿತರು ಎಲ್ಲರೂ ದರಬಾರಿಗೆ ಹಾಜರಾದರು.

ಅಮ್ರ್ ಬಿನ್ ಆಸ್ ಹೇಳಿದರು, ನಿಮ್ಮ ಮತ್ತು ಅನುಯಾಯಿಗಳ ನೋವು ನಾನು ಚೆನ್ನಾಗಿ ಬಲ್ಲೆನು. ಈ ದೊಡ್ಡ ಅಪರಾಧ ಎಸಗಿದವ ನಮ್ಮ ಪೈಕಿ ಯಾರಾದರೂ ಒಬ್ಬ ಆಗಿರಬಹುದು. ನಾನು ಅವರ ನಾಯಕ ಆಗಿದ್ದೇನೆ. ಇದೋ ನನ್ನ ಮೂಗು ಕತ್ತರಿಸಿ ತೆಗೆಯಿರಿ ಎಂದು ಖಡ್ಗವನ್ನು ಅವರ ಕೈಗೆ ನೀಡಿದರು. ಆಗ ಅಲ್ಲಿದ್ದ ಒಬ್ಬ ವ್ಯಕ್ತಿ ತಾನು ವಿಗ್ರಹದ ಮೂಗು ಕತ್ತರಿಸಿದ ಪಾಪಿ ಮತ್ತು ಅಪರಾಧಿ ಆಗಿದ್ದೇನೆ. ನನ್ನ ಮೂಗು ಕತ್ತರಿಸಲು ಆಜ್ಞೆ ನೀಡಿರಿ ಎಂದು ಕೇಳಿಕೊಂಡರು.
ಅಮ್ರ್ ಬಿನ್ ಆಸ್ ಆಜ್ಞೆ ಕೊಡುವ ಮುಂಚೆಯೇ ಅವರ ನಾಯಕನ ಮನಸ್ಸು ಕರಗಿತು. ಅವರು ಅವನಿಗೆ ಕ್ಷಮೆ ನೀಡಿ ಹೇಳಿದರು,ಈ ತಪ್ಪು ಒಪ್ಪಿಕೊಂಡನೂ ತಾವೂ ಕೃತಾರ್ಥರು.
ನಿಮ್ಮ ಮೂಗು ಕತ್ತರಿಸುವುದು ದೊಡ್ಡ ಅಪರಾಧವಾದೀತು. ನಿಮ್ಮ ನ್ಯಾಯ ಪ್ರಜ್ಞೆ ನಿಜಕ್ಕೂ ಆಶ್ಚರ್ಯಕರವಾಗಿದೆ. ನಿಮ್ಮ ನ್ಯಾಯ ಪ್ರಜ್ಞೆ ನಮ್ಮ ಪಾಲಿಗೆ ಉಚಿತ ನಷ್ಟ ಪರಿಹಾರ ಆಗಿದೆ. ನಾವು ಈಗ ಸಂತೃಪ್ತರಾಗಿದ್ದೇವೆ.
ಕೊನೆಯ ಅಮ್ರ್ ಬಿನ್ ಆಸ್ ಅವರನ್ನು ಪ್ರೀತಿ ಮತ್ತು ಗೌರವಾದರದಿಂದ ಬೀಳ್ಕೊಟ್ಟರು.

ಇಂತಹ ನೂರಾರು ಸೌಹಾರ್ದದ ಘಟನೆ ಇಸ್ಲಾಂ ಮತ್ತು ಮುಸ್ಲಿಮರ ಚರಿತ್ರೆಯಲ್ಲಿ ತುಂಬಿ ತುಳುಕಿದೆ. ಅನ್ಯ ಧರ್ಮೀಯರ ವಿಶ್ವಾಸ, ಸ್ವಾತಂತ್ರ್ಯ, ಮಠ, ಪುರೋಹಿತರಿಗೆ ಇಸ್ಲಾಂ ನೀಡುವ ಭದ್ರತೆ ವಾಗ್ದಾನಕ್ಕೆ ಇದೊಂದು ಜ್ವಲಂತ ಉದಾಹರಣೆಯಾಗಿದೆ. ಧರ್ಮ ವಿಶ್ವಾಸ ನಂಬಿಕೆ ಎಂಬುದು ಅವರಿಗೂ ಅವರ ದೇವರಿಗೂ ಇರುವ ಸಂಬಂಧ ಆಗಿದೆ. ನಾವು ಪರಸ್ಪರ ಧರ್ಮ ವಿಚಾರಗಳನ್ನು ಪರಿಚಯಿಸಬಹುದೇ ಹೊರತು ಯಾರಿಗೂ ಯಾವುದನ್ನು ವೈಯಕ್ತಿಕವಾಗಿ, ಅಧಿಕಾರಯುತವಾಗಿ ಹೇರುವಂತಿಲ್ಲ….ಇದುವೇ ಇಸ್ಲಾಂ ಮಾನವೀಯ ಮತ್ತು ಧಾರ್ಮಿಕ ಸೌಹಾರ್ದಕ್ಕೆ ಕೊಡುವ ಮಹತ್ವ ಆಗಿದೆ.

ಇಸ್ಲಾಂ ಧರ್ಮ ಇತರರ ಧಾರ್ಮಿಕ ಚಿಹ್ನೆಗಳಿಗೆ ನೀಡುವ ಭದ್ರತೆ, ರಕ್ಷಣೆಯ ಬಗ್ಗೆ ಈ ಘಟನೆಯಿಂದ ಅರಿಯಬಹುದು. ಇತರರ ಧಾರ್ಮಿಕ ವಿಶ್ವಾಸ, ಸ್ವಾತಂತ್ರ್ಯ, ಅವರ ಮಠ ಪುರೋಹಿತರಿಗೆ ಇಸ್ಲಾಂ ಕೊಡುವ ಭದ್ರತೆ, ಗೌರವಗಳಿಂದ ಇಸ್ಲಾಮೀ ಚರಿತ್ರೆ ತುಂಬಿ ತುಳುಕುತ್ತದೆ.

ಇಸ್ಲಾಂ ಏಕದೇವಾರಾಧನೆಯನ್ನು ಭೋದಿಸುತ್ತದೆ ನಿಜ. ಆದರೆ ಅದೇ ಸಂದರ್ಭದಲ್ಲಿ ನಮ್ಮ ಧಾರ್ಮಿಕ ಆಚಾರ ವಿಚಾರಗಳು ಪರಸ್ಪರ ದ್ವೇಷದ ಸಂಕೇತ ಆಗಬೇಕು ಎಂದು ಭಾವಿಸುವುದಿಲ್ಲ. ಧರ್ಮ ವಿಶ್ವಾಸ ನಂಬಿಕೆ ಎಂಬುದು ಮನುಷ್ಯ ಮತ್ತು ಅವನ ದೇವರ ಮಧ್ಯೆ ಇರುವ ವಿಷಯ ಆಗಿದೆ. ಆದರೆ ನಮ್ಮ ಭಿನ್ನತೆಗಳು ಮಾನವೀಯ ಧಾರ್ಮಿಕ ಸೌಹಾರ್ದ ಸಂಬಂಧಗಳನ್ನು ನಾಶ ಪಡಿಸಬಾರದು. ವಿಚಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬಹುದು. ಆದರೆ ಯಾವುದೇ ವಿಚಾರಗಳನ್ನು ವೈಯಕ್ತಿಕ, ಆಡಳಿತಾತ್ಮಕವಾಗಿ ಯಾರೂ ಯಾವ ಧರ್ಮದವರೂ ಹೇರುವುದು ತಪ್ಪಾಗಿದೆ.

ಸರ್ ಥಾಮಸ್ ಅರ್ನಾಳ್ಡ್ ಹೀಗೆ ಬರೆದಿದ್ದಾರೆ:

“ಮುಅವಿಯಾರು (661-680) ಕ್ರೈಸ್ತರನ್ನು ಧಾರಾಳವಾಗಿ ನೌಕರಿಗೆ ನೇಮಿಸಿದದರು. ಆಡಳಿತ ವಂಶದ ಇತರರೂ ಆ ವಾಡಿಕೆಯನ್ನು ಮುಂದುವರಿಸಿದರು. ಕ್ರೈಸ್ತರು ಹಲವೊಮ್ಮೆ ರಾಜಾನಿಯಲ್ಲಿ ಉನ್ನತ ಹುದ್ದೆಗಳನ್ನು ವಹಿಸಿದ್ದರು. ಆಸ್ಥಾನ ಕವಿಯಾಗಿದ್ದ ಅಲ್ ಅಖ್ತಲ್ ಓರ್ವ ಕ್ರೈಸ್ತರಾಗಿದ್ದರು. ಡಮಾಸ್ಕಸ್‍ನ ಸಾತ್ವಿಕನಾಗಿದ್ದ ಯೋಹಾನನ ತಂದೆಯು ಖಲೀಫ ಅಬ್ದುಲ್ ಮಲಿಕ್‍ರ ಸಲಹೆಗಾರರಾಗಿದ್ದರು. ಖಲೀಫ ಅಲ್ ಮುಅïತಸಿಯವರ ಕಾಲದಲ್ಲಿ ಇಬ್ಬರು ಕ್ರೈಸ್ತ ಸಹೋದರರು ಅವರ ನಂಬಿಗಸ್ಥ ಸಹಚರರಾಗಿದ್ದರು. ಅದರಲ್ಲಿ ಸಲ್‍ಮುಯ್ಯ ಎಂಬವರಿಗೆ ಸರಿಸುಮಾರು ವಿದೇಶಾಂಗ ಕಾರ್ಯದರ್ಶಿಯ ಸ್ಥಾನವಿತ್ತು. ಅವರು ಸಹಿ ಹಾಕದ ರಾಜಕೀಯ ದಾಖಲೆಗಳಿಗೆ ಬೆಲೆಯಿರಲಿಲ್ಲ. ಇಬ್ರಾಹೀಮ್ ಎಂಬ ಇನ್ನೊಬ್ಬರು ರಾಜ ಮೊಹರಿನ ಸಂರಕ್ಷಕರಾಗಿದ್ದರು. ಅವರಿಗೆ ಸಾರ್ವಜನಿಕ ಬೊಕ್ಕಸದ ಉಸ್ತುವಾರಿಯನ್ನು ನೀಡಲಾಗಿತ್ತು. ವಸ್ತುತಃ ಸಾರ್ವಜನಿಕ ಬೊಕ್ಕಸದ ಮಹತ್ವದ ದೃಷ್ಟಿಯಿಂದ ಪರಿಗಣಿಸಿದರೆ ಆ ಹುದ್ದೆಗೆ ಓರ್ವ ಮುಸ್ಲಿಮನನ್ನೇ ನೇಮಿಸಬೇಕಾಗಿತ್ತು.

“ಇಬ್ರಾಹೀಮ್‍ನೊಡನೆ ಖಲೀಫರಿಗೆ ಭಾರೀ ಪ್ರೀತಿಯಿತ್ತು. ರೋಗಪೀಡಿತನಾಗಿದ್ದಾಗ ಅವರು ಇಬ್ರಾಹೀಮ್‍ನನ್ನು ಸಂದರ್ಶಿಸಿದ್ದರು. ಆತನ ಮರಣದಿಂದ ಖಲೀಫರಿಗೆ ತೀವ್ರ ದುಃಖವಾಗಿತ್ತು. ಮೃತದೇಹವನ್ನು ಸಂಸ್ಕರಿಸುವುದಕ್ಕಿಂತ ಮುಂಚೆ ಅರಮನೆಗೆ ತರುವಂತೆ ಆಜ್ಞಾಪಿಸಿದದರು. ಅಲ್ಲಿ ಕ್ರೈಸ್ತ ಧರ್ಮವಿಧಿಗಳನ್ವಯ ಮರಣೋತ್ತರ ಕ್ರಿಯೆಗಳನ್ನು ನೆರವೇರಿಸಲಾಯಿತು.”

ಅವರೇ ಮುಂದುವರಿಸುತ್ತಾರೆ: “ಅಲ್ ಮುಅïತದ್‍ರ ಆಡಳಿತ ಕಾಲದಲ್ಲಿ ಅಂಬರ್‍ನ ರಾಜ್ಯಪಾಲರಾಗಿದ್ದ ಉಮರ್ ಬಿನ್ ಯೂಸುಫ್ ಓರ್ವ ಕ್ರೈಸ್ತರಾಗಿದ್ದರು. ಓರ್ವ ಕ್ರೈಸ್ತನು ಯೋಗ್ಯನಾಗಿದ್ದರೆ ಆ ಹುದ್ದೆಯನ್ನು ಆತನಿಗೆ ನೀಡಬಹುದೆಂದು, ನೇಮಕವನ್ನು ಅಂಗೀಕರಿಸಿ ಖಲೀಫರು ಹೇಳಿದ್ದರು. ಅಲ್‍ಮುಅïತಮಿದ್‍ರ ಕಾಲದಲ್ಲಿ ವಸ್ತುತಃ ಖಲೀಫರಾಗಿದ್ದ ಅಲ್‍ಮುವಫ್ಫಿಕ್ ಸೇನೆಯ ಉಸ್ತುವಾರಿಯನ್ನು ಇಸ್ರಾಈಲ್ ಎಂಬ ಓರ್ವ ಕ್ರೈಸ್ತನಿಗೆ ನೀಡಿದ್ದರು. ಅವರ ಪುತ್ರ ಅಲ್ ಮುಅïತದಿದ್‍ನಿಗೆ ಮಾಲಿಕ್ ಬಿನ್ ವಲೀದ್ ಎಂಬ ಕ್ರೈಸ್ತ ಕಾರ್ಯದರ್ಶಿಯಿದ್ದನು. ತರುವಾಯ ಅಲ್‍ಮುಕ್ತದಿರ್‍ನ ಕಾಲದಲ್ಲಿ ರಕ್ಷಣಾ ಖಾತೆಯ ಮೇಲ್ವಿಚಾರಣೆಯನ್ನು ಓರ್ವ ಕ್ರೈಸ್ತ ವಹಿಸಿದ್ದನು.

“ದಕ್ಷಿಣ ಪರ್ಶಿಯಾ ಮತ್ತು ಇರಾಕ್‍ನಲ್ಲಿ ಆಡಳಿತ ನಡೆಸಿದ ಬುವೈಹಿದ್ ವಂಶದ ಅದ್ದೌಲನ ಪ್ರಧಾನ ಮಂತ್ರಿಯು ನಾಸಿರ್ ಬಿನ್ ಹಾರೂನ್ ಎಂಬೋರ್ವ ಕ್ರೈಸ್ತನಾಗಿದ್ದ. ಹಲವು ವರ್ಷಗಳ ಕಾಲ ಸರಕಾರಿ ಕಚೇರಿಗಳಲ್ಲಿ ವಿಶೇಷತಃ ಆರ್ಥಿಕ ಇಲಾಖೆಯಲ್ಲಿ ಕ್ರೈಸ್ತರೇ ಅಧಿಕಾರಿಗಳಾಗಿದ್ದರು. ಕೆಲಕಾಲದ ಬಳಿಕ ಈಜಿಪ್ಟ್‍ನಲ್ಲಿಯೂ ಅದೇ ಸ್ಥಿತಿಯಿತ್ತು. ಅಲ್ಲಿ ಹಲವೊಮ್ಮೆ ನೌಕರಿಯು ಕ್ರೈಸ್ತರ ಏಕಸ್ವಾಮ್ಯವಾಗಿತ್ತು. ವಿಶೇಷತಃ ವೈದ್ಯ ವೃತ್ತಿ.”

LEAVE A REPLY

Please enter your comment!
Please enter your name here