Wednesday, December 11, 2019

ಕಲೆ ಮತ್ತು ಸಂಸ್ಕೃತಿ

ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣದ ಸಂದೇಶವನ್ನು ಎತ್ತಿ ಹಿಡಿದ `ಬಿಗಿಲ್’

ಲೇಖಕರು:ಮುಹಮ್ಮದ್ ಝಾಮೀರ್ ಕೆ.ಪಿ ಪಕ್ಕಲಡ್ಕ ಯುವ ನಿರ್ದೇಶಕ ಆಟ್ಲಿ (Atlee) ನಿರ್ದೇಶನದ ಈ ಚಿತ್ರ, ತಮಿಳು ನಟ ತಲಪತಿ ವಿಜಯ್ ಹಾಗೂ ನಯನತಾರ ನಟನೆಯ ಈ ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ. ನಿರ್ದೇಶಕ ಅಟ್ಲಿ ಕಳೆದ ಸಿನಿಮಾದ ಹಾಗೆ ಈ ಸಿನಿಮಾದಲ್ಲೂ ಉತ್ತಮ ಸಂದೇಶದೊಂದಿಗೆ ಬಂದಿದ್ದಾರೆ. ಚಿತ್ರದಲ್ಲಿ ಫುಟ್‌ಬಾಲ್ (Football) ರೌಡಿಸಮ್ (Raudisom) ಬಗ್ಗೆ ಇರುವುದರೊಂದಿಗೆ, ಮಹಿಳೆಯರ ಸಮಸ್ಯೆಯನ್ನು ಕೂಡ...

“ಶೂದ್ರರಾಗೋಣ ಬನ್ನಿ” ಶ್ರಮಸಹಿತ ಸರಳ ಬದುಕಿನೆಡೆಗೆ ಪ್ರೀತಿಯ ಕರೆ

ಪುಸ್ತಕ ವಿಮರ್ಶೆ -ಮಹಮ್ಮದ್ ಶರೀಫ್ ಕಾಡುಮಠ ಲೇಖಕರು; ಪ್ರಸನ್ನ ಹೆಗ್ಗೋಡು ಕೃತಿ; ಶೂದ್ರರಾಗೋಣ ಬನ್ನಿ ಪ್ರಕಾಶಕರು ; ಒಂಟಿದನಿ ಪ್ರಕಾಶನ ಬೆಲೆ; ರೂ. 140. ‘ಶೂದ್ರರಾಗೋಣ ಬನ್ನಿ’ ಒಂದು ಅತ್ಯುತ್ತಮ, ಉಪಯುಕ್ತ ಕೃತಿ. ಮಹತ್ವದ ಕೃತಿಯೂ ಹೌದು. ಆಧುನಿಕ ತಂತ್ರಜ್ಞಾನಗಳ ಜೊತೆಗೆ ಯಂತ್ರ ನಾಗರಿಕತೆಗೆ ಮನಸೋತು ಅವುಗಳಿಂದ ಅಭಿವೃದ್ಧಿಯನ್ನು ಆಶಿಸುತ್ತಾ, ಇರುವ ನೆಮ್ಮದಿಯನ್ನು ಕಳೆದುಕೊಂಡು ಮತ್ತೆ ಅದರದೇ ಹುಡುಕಾಟದಲ್ಲಿ...

ಕನ್ನಡ ನಾಡಿಗೆ ಸಲಾಂ

ಬರೆದವರು: ಎಂ.ಅಶೀರುದ್ದೀನ್ ಅಲಿಯಾ, ಮಂಜನಾಡಿ. ಕರುನಾಡು ಕಾರುಣ್ಯದ ಗೂಡು ಪ್ರೀತಿಯ ಹರಸಿ, ಸ್ನೇಹವ ಬೆರಸಿ ನೆರಳನ್ನು ಚಾಚಿದ ಹೆಮ್ಮೆಯ ನಾಡಿಗೆ ಸಲಾಂ ಸಲಾಂ ಜೋಗದ ಜುಳು ಜುಳು ನಾದದ ಸಾಗರದಲೆಗಳ, ಸಾಲು ಮರಗಳ ಕಾವೇರಿಯ ಒಡಲಿನ ಸಹ್ಯಾದ್ರಿಯ ಮಡಿಲಿನ ಹಸಿರು ಸಿಂಗಾರದ ನಾಡಿಗೆ ಸಲಾಂ ಸಲಾಂ ಸಾಹಿತ್ಯ ಸಂಗೀತ ಸಂಸ್ಕೃತಿಯ ಹಿರಿಮೆಯ ಗಳಿಸಿದ ಕೋಟೆ ಕೊತ್ತಲ ಶಿಲ್ಪ ವರ್ಣದ ಕಲೆಗಳುದಾಯಿಸಿದ ಗತ ಕಾಲದ ವೈಭವ ಸಾರುವ ಇತಿಹಾಸದ ಬೀಡಿಗೆ ಸಲಾಂ ಸಲಾಂ ರನ್ನ, ಪಂಪ, ಹರಿಹರ ಕನಕ, ಕಬೀರ,...

ಝರಿಯಂತೆ ಧುಮುಕುತಿರು

(ಕುಸುಮ ಷಟ್ಪದಿ) ಬರೆದವರು: ನಾಗರಾಜ ಖಾರ್ವಿ ಪದವೀಧರ ಶಿಕ್ಷಕ ಸ.ಹಿ.ಪ್ರಾ.ಶಾಲೆ. ಕಲ್ಮಂಜ. ಬಂಟ್ವಾಳ ಹುಟ್ಟಿನೀಂ ಕುಲವಲ್ಲ ಪಟ್ಟಿರ್ದು ಫಲಮಿಲ್ಲ ನೆಟ್ಟ ತರು ನೆಟ್ಟವಗೆ ಫಲಗೊಡುವುದೇ? ಬಿಟ್ಟು ಬಿಡುತಲಿ ಮೋಹ ನಟ್ಟಿರುಳು ಅಲೆದಾಡಿ ಪಟ್ಟು ಬಿಡದೆಯೆ ಜಾನ ಯೋಗಿ ಪಡೆವ|| ಕಣ್ಣುಗಾಣದ ಕುರುಡ ಬಣ್ಣ...

ಹೇ…ರಾಮ್….

ನಿನಗೆ ಹಣ ಬೇಡ ಆ ನೋಟಲಿ ಮಾತ್ರ ನೀನಿರುವಿ ಗೋಡ್ಸೆಯ ಪಿಸ್ತೂಲಿಗಿರುವ ದೇಶಭಕ್ತಿ...! ನಿನ್ನ ಕೈಯ ತುಂಡು ಕೋಲಿಗಿಲ್ಲ... ಕ್ಷಮಿಸಿ ಬಿಡು ಬಾಪೂ...! ಕುರುಡು ಕಾಂಚಾಣ ಝಣಝಣ ಬೆಲೆಬಾಳುವ ಕೋಟು ಸೂಟಿನಲ್ಲಿರುವ ದೇಶ ಭಕ್ತಿ ... ನಿನ್ನ ತುಂಡುಡುಗೆಯಲ್ಲಿ ಇಲ್ಲ ಕ್ಷಮಿಸಿ ಬಿಡು ಬಾಪೂ...! ದ್ವೇಷಿಸುವ ಕೊಲ್ಲುವ ಮನಸ್ಥಿತಿಗಿರುವ ದೇಶಭಕ್ತಿ...! ಜೀವಜಂತುಗಳಲ್ಲಿ ನಮಗಿರುವ ಪ್ರೇಮದ ಮೂರ್ತಸ್ವರೂಪವೇ ಅಹಿಂಸೆ ಎಂಬ ನಿನ್ನ ಮನಸ್ಥಿತಿಯಲ್ಲಿಲ್ಲ ಕ್ಷಮಿಸಿ ಬಿಡು ಬಾಪೂ....! ಹೊಡಿ ಬಡಿ ಕೊಲ್ಲು ಅಕ್ರಮ ಅನ್ಯಾಯದಲ್ಲಿರುವ ದೇಶಭಕ್ತಿ....! ಪ್ರೇಮ ತುಂಬಿದ...

ಯಶದ ದಿಶೆಗೆ ರಸದ ರಹದಾರಿ ‘ದಿ ಅಲ್ಕೆಮಿಸ್ಟ್’ ನ ಕನ್ನಡ ಅನುವಾದ ರಸವಾದಿ

- ಮಹಮ್ಮದ್ ಶರೀಫ್ ಕಾಡುಮಠ ‘ರಸವಾದಿ’, ಪೋರ್ಚುಗೀಸ್ ಲೇಖಕ ಪಾವ್ಲೋ ಕೊಯ್ಲೋ ಅವರ ಸುಪ್ರಸಿದ್ಧ ಕಾದಂಬರಿ ‘ದಿ ಅಲ್ಕೆಮಿಸ್ಟ್’ ನ ಕನ್ನಡ ಅನುವಾದ. ಕನ್ನಡದ ಲೇಖಕ ಅಬ್ದುಲ್ ರಹೀಮ್ ಟೀಕೆಯವರು ಈ ಅನುವಾದವನ್ನು ಬಹಳ ಸುಂದರವಾಗಿ, ಸರಳ ಭಾಷಾ ಶೈಲಿಯಲ್ಲಿ ಅಚ್ಚುಕಟ್ಟಾಗಿ ಮಾಡಿದ್ದಾರೆ. 1988ರಲ್ಲಿ ಮೊದಲು ರಚಿಸಲ್ಪಟ್ಟ ‘ದಿ ಅಲ್ಕೆಮಿಸ್ಟ್’, ಜಗತ್ತಿನ 80ರಷ್ಟು ಭಾಷೆಗಳಿಗೆ ಅನುವಾದಗೊಂಡಿದ್ದಲ್ಲದೆ...

ಅಶಾಶ್ವತ ಈ ಜೀವನ

ಕವನ ಓ ಮಾನವ, ಸತ್ಯವನ್ನು ಯಾರಲ್ಲೂ ಹುಡುಕದಿರು ನಿನಗೆ ನೀ ಸತ್ಯವಿಶ್ವಾಸಿಯಾಗು ಅಂದು ನೀ ಕಾಣಬಲ್ಲೆ ಲೋಕವಿಡೀ ಸತ್ಯವಿಶ್ವಾಸಿಗಳ ಮಳೆಯ ಓ ಮಾನವ, ಯಾರನ್ನೂ ಕ್ರೂರಿಗಳೆಂದು ನೀ ದೂರದಿರು ಯಾರು ಕ್ರೂರಿಯಾದರೇನು? ಆ ನಿನ್ನ ದೂರುವಿಕೆಯೆ ಕ್ರೂರತನಕ್ಕಿಂತ ಮೇಲ್ಮೆ ಅಲ್ಲವೇ ನೀ ಕ್ಷಮಿಸುವವನಾಗು ನಿನ್ನ ಕ್ಷಮಿಸುವವನು ಇನ್ನೊಬ್ಬನಿರುವನು ಮರೆಯದಿರು, ಆತನೇ ಲೋಕ ಸಂಪಾಲಕನು ಓ ಮಾನವ, ನೀ ನಡೆ ಲೋಕ ಪ್ರವಾದಿವರ್ಯರು ನಡೆಸಿದ ದಾರಿಯಲ್ಲಿ ಅದಲ್ಲದೆ ಒಂದೆಜ್ಜೆಯು ಮುಂದಿಡುವವನಾಗದಿರು ನಿನ್ನದೆ ಮಾತಿನಲ್ಲಿ ನಗುವೊಂದು ಬೀರು ಎಲ್ಲರನ್ಕಂಡು ಪ್ರೀತಿಯ...

ನಾನೂ ಮಗುವನ್ನು ಕೊಂದೆ…

ಕಥೆ ಹಂಝ ಮಲಾರ್ ನಾನು ಮಗುವನ್ನು ಕೊಂದೆ... ಅಲ್ಲಲ್ಲ, ನಾನು ಮಗುವನ್ನು ಕೊಂದಿದ್ದೇನೆ... ಯಾವ ಹಂತಕನಿಗೂ ಕಡಿಮೆಯಿಲ್ಲದೆ ಶಿಕ್ಷೆಗೆ ನಾನು ಸಿದ್ಧವಾಗಿದ್ದೇನೆ... ನನಗೆ ಶಿಕ್ಷೆ ಕೊಡುವವರು ಯಾರು? ಸಮಾಜವಾ? ನಾವು ನಂಬಿದ ದೇವರಾ?... ನನಗೊಂದೂ ಗೊತ್ತಾಗುತ್ತಿಲ್ಲ. ಸಮಾಜಕ್ಕೆ ನಾನೀಗಲೂ ಆದರ್ಶ ವ್ಯಕ್ತಿ. ನನ್ನನ್ನು ಅನುಕರಣೆ ಮಾಡುವ ಅಭಿಮಾನಿಗಳ ಸಂಖ್ಯೆ ಒಂದಿಷ್ಟು ಹೆಚ್ಚಾಗಿದೆ ಅಂದರೆ ಉತ್ಪ್ರೇಕ್ಷೆಯಾಗಲಾರದು. ನಾನು ರಾಜಕೀಯ ಪುಢಾರಿಯಲ್ಲ. ಸರಕಾರದ ಅಥವಾ...

ನಾನೊಂದು ನದಿ

ನಾನೊಂದು ನದಿ ಹಳ್ಳ ಹೊಲ ಜಲಪಾತದಲಿ ಸೇರಿ ಹರಿದ ಮಳೆ ಹನಿಗಳೇ ನನ್ನ ಜೀವಾಳ ಬೆಟ್ಟ ಜಿಗಿದು ಕಾಡು ಮೇಡು ಅಲೆದು ಹಾಯಾಗಿ ಹರಿಯುವೆ ಹರಿಯುವುದೇ ನನ್ನ ಜೀವನ ಕುಡಿಯಲು ಕುಡಿಸಲು ಹಸಿರ ಬೆಳೆಸಲು ನನ್ನೊಡಲ ಉಸಿರ ಕೊಡುವೆ ರೈತರಿಗೆ ಅನ್ನದಾತರಿಗೆ ನಂಬಿಕೊಂಡು ಬದುಕು ಕಟ್ಟಿದವರಿಗೆ ನನ್ನೊಡಲ ಹರಿದು ಜೀವ ಹೀರಿ ಮುಳ್ಳು ನಾಟಿ ಎಂಜಲು ಉಗಿದು ಅಡ್ಡಗೋಡೆಯ ಕಟ್ಟಿ ಹರಿಯಲು ಬಿಡದವರ ಬಿಟ್ಟೆನೆಂದುಕೊಂಡೆಯಾ... ಬಂಡಾಯವೆದ್ದು ತಿರುಗಿ ಹರಿಯುವೆ ಮನ ಬಂದಂತೆ ನೆರೆಯಾಗಿ ನೊರೆ ನೂರೆಯಾಗಿ ತೊರೆಯಾಗಿ ಪ್ರವಾಹದಲುಕ್ಕಿ ಪ್ರಬಲವಾಗಿ ಹರಿಯುವೆ ನನ್ನೊಳಗಿನ...

ಮತ್ತೆ ಬಂದಿದೆ ಅಷ್ಟಮಿ

ಬರೆದವರು: ನಾಗರಾಜ ಖಾರ್ವಿ ಶಿಕ್ಷಕ ಸ.ಹಿ.ಪ್ರಾ. ಶಾಲೆ ಕಲ್ಮಂಜ ಬಂಟ್ವಾಳ ತಾಲೂಕು ಮತ್ತೆ ಬಂದಿದೆ ಗೋಕುಲಾಷ್ಟಮಿ... ಇಷ್ಟ ಬಯಕೆಯ ಬೇಡಲು| ಕೃಷ್ಣವೆಂಬ ಇಷ್ಟ ದೇವರ ಹಾಡಲು ಕೊಂಡಾಡಲು|| ಕಂಸ ದೈತ್ಯನ ದ್ವಂಸ ಮಾಡಿದ ಹಿಂಸೆ ಬಯಸದ ಮನವದು| ಎಮ್ಮ ಮನಸಿನ ಹಿಂಸೆ ಭಾವನೆ ತೊಲಗಿಸೈ ಪರಮಾತ್ಮನೆ|| ಪ್ರೀತಿಯಿಂದಲಿ ಬೇಡಿ ಬಂದಿಹ ಜನರ ಸಲಹೋ ದೇವನೆ| ಜಗವ ಪಾಲಿಸಿ ಬೆಳಕ ತೋರಿಸಿ ಮಾರ್ಗದೋರೋ ಪಾಲನೆ|| ಬುವಿಯ ತುಂಬಿಹ ದ್ವೇಷ ಅಸೂಯೆ ತಮವ ತೊಲಗಿಸಿ ಕಾಯೋ ನೀ| ಜೊತೆಗೆ ಬಾಳವ ವ್ರತವ ಕಲಿಸೋ ಕರವ ಪಿಡಿಯುತ ದೇವನೆ||

MOST COMMENTED

ಮುಹರ್ರಮ್ ಎಂಬ ಪವಿತ್ರ ತಿಂಗಳು

(ಇತಿಹಾಸದ ಪೂರ್ವ ಅವಲೋಕನ) ಉಮರ್ ಫಾರೂಕ್ (ಅಧ್ಯಾಪಕರು, ಸ್ಕೂಲ್ ಆಫ್ ಕುರ್ ಅನಿಕ್ ಸ್ಟಡೀಸ್ ತಲಪಾಡಿ ಮಂಗಳೂರು) ಆಕಾಶಗಳನ್ನು ಭೂಮಿಯನ್ನು ಸೃಷ್ಟಿಸಿದ ದಿನದಂದು ಅಲ್ಲಾಹನು ದಾಖಲಿಸಿರುವ ಪ್ರಕಾರ ಅಲ್ಲಾಹನ ಬಳಿ ತಿಂಗಳುಗಳ ಸಂಖ್ಯೆ ಹನ್ನೆರಡಾಗಿದೆ. ಅವುಗಳ ಪೈಕಿ...

HOT NEWS