• ಮರ್ಯಮ್ ಶಹೀರಾ

ಮಹಿಳೆ-ಹಕ್ಕು ಮತ್ತು ಸ್ವಾತಂತ್ರ್ಯ ಎಂಬ ವಿಷಯವನ್ನು ಅವಲೋಕಿಸಿದಾಗ ಜಗತ್ತಿನಲ್ಲಿ ಮಹಿಳೆಯರ ಪರವಾಗಿ ಮಾತನಾಡಿದ ಮೂರು ವರ್ಗಗಳನ್ನು ಕಾಣಬಹುದಾಗಿದೆ. ಈ ಮೂರು ವರ್ಗಗಳ ಹಿಂಬಾಲಕರು ಇಂದಿಗೂ ಸಮಾಜದಲ್ಲಿ ಪ್ರಬಲರಾಗಿದ್ದಾರೆ. ಮಹಿಳೆ ಯರ ಸಮಸ್ಯೆಗಳಲ್ಲಿ ಅವರ ವ್ಯಕ್ತಿತ್ವ, ಜೀವನ ಮತ್ತು ಸಮಸ್ಯೆಗಳ ಬಗ್ಗೆ ಜಗತ್ತಿನೊಂದಿಗೆ ಮಾತನಾಡಿದ ಈ ಮೂರು ವರ್ಗಗಳಲ್ಲಿ ಒಂದು ಎಲ್ಲ ಧರ್ಮಗಳಲ್ಲಿರುವ ಪುರೋಹಿತ ವರ್ಗ ವಾಗಿದೆ. ಎರಡನೆಯದು ಧರ್ಮ ನಿರಪೇಕ್ಷರಾದ ಭೌತಿಕವಾದಿಗಳ ವರ್ಗವಾಗಿದೆ. ಮೂರನೆಯದು ಪ್ರವಾದಿಗಳ ವರ್ಗ. ಮಹಿಳಾ ಸಬಲೀಕರಣದ ಬಗ್ಗೆ ಮಾತಾಡುವಾಗ ಸ್ತ್ರೀ ವಿಮೋಚನೆಯ ಬಗೆಗಿನ ಮಾತುಗಳನ್ನು ಕೇಳುವಾಗ ನಿಜವಾಗಿ ನಮ್ಮ ರಕ್ಷಕರು ಯಾರು? ಶೋಷಕರು ಯಾರು? ನಮ್ಮನ್ನು ದಾರಿ ತಪ್ಪಿಸುತ್ತಿರುವವರು ಯಾರು? ಎಂಬುದನ್ನು ಚೆನ್ನಾಗಿ ಅರಿತುಕೊಂಡು ಪ್ರಜ್ಞಾ ಪೂರ್ವಕವಾಗಿ ಮುಂದಡಿ ಇಡಬೇಕಾದ ಅಗತ್ಯ ಸ್ತ್ರೀ ಸಮಾಜಕ್ಕಿದೆ.

ಇತಿಹಾಸದಲ್ಲಿ ಎಲ್ಲ ಧರ್ಮಗಳಲ್ಲಿರುವ ಪುರೋಹಿತ ವರ್ಗವು ಸ್ತ್ರೀಯರನ್ನು ಅಂಗೀಕರಿಸಿ ಅವರ ವ್ಯಕ್ತಿತ್ವಕ್ಕೆ ಬೆಲೆ ಕಲ್ಪಿಸಿದ್ದುಂಟೇ? ಅವರ ಹಕ್ಕುಗಳನ್ನು ಅಂಗೀಕರಿಸಿಕೊಟ್ಟಿದೆಯೇ ಎಂದು ಅವ ಲೋಕಿಸಿದರೆ ಪೌರೋಹಿತ್ಯವು ಎಂದೂ ಅದನ್ನು ಮಾಡಲಿಲ್ಲವೆಂದೇ ಮನವರಿಕೆ ಯಾಗುತ್ತದೆ. ಪೌರೋಹಿತ್ಯವು ಸ್ತ್ರೀಯರ ಸ್ವಾತಂತ್ರ್ಯವನ್ನು ಅಪಹರಿಸಿತು ಎಂಬುದೇ ಸತ್ಯ. ಸ್ತ್ರೀಯರನ್ನು ಕೀಳಾಗಿ ಕಾಣುತ್ತಾ, ಅವರಿಗೆ ಮೇರೆಗಳನ್ನು ನಿಶ್ಚಯಿಸಿ ಅವರ ಸ್ವಾತಂತ್ರ್ಯವನ್ನು ನಾಶಪಡಿಸಲಾಯಿತು. ಸ್ತ್ರೀಯೆಂದರೆ ಪುರುಷರ ಜೊತೆಯಲ್ಲಿರ ಬೇಕಾದವಳಲ್ಲ. ಅವಳು ಪುರುಷನಿಗಿಂತ ಕೀಳು, ವ್ಯಕ್ತಿತ್ವವಿಲ್ಲದವಳು, ಹುಟ್ಟು ಪಾಪಿಯಗಿದ್ದಾಳೆ. ಆದಮರನ್ನು ದಾರಿ ತಪ್ಪಿಸಿರುವುದು ಅವಳೇ. ನಿಷೇಧಿತ ವೃಕ್ಷದ ಫಲವನ್ನು ತಿನ್ನಲು ಆದಮರನ್ನು ಪ್ರೇರೇಪಿಸಿದ್ದು ಅವಳೇ. ಆ ಪಾಪದ ಫಲವಾಗಿ ಆಕೆಗೆ ಸಿಕ್ಕಿದ ಶಿಕ್ಷೆಯು ಗರ್ಭಧಾರಣೆ ಮತ್ತು ಹೆರಿಗೆಯ ಸಂಕಷ್ಟಕ್ಕೆ ಸಿಲುಕಿಸ ಲಾಗಿತ್ತು ಎಂದು ಜಗತ್ತಿಗೆ ಕಲಿಸಿದ್ದು ಪೌರೋಹಿತ್ಯವಾಗಿತ್ತು. “ನಃ ಸ್ತ್ರೀ ಸ್ವಾತಂತ್ರ್ಯ ಮರ್ಹತಿ” ಮಹಿಳೆಗೆ ಸ್ವಾತಂತ್ರ್ಯವಿಲ್ಲವೆಂಬು ದನ್ನು ಕಲಿಸಿಕೊಟ್ಟದ್ದೂ ಪೌರೋಹಿತ್ಯ ವಾಗಿತ್ತು. ಮಹಿಳೆಗೆ ಸಂಪತ್ತಿನಲ್ಲಿ ಅಧಿ ಕಾರವಿದೆಯೇ? ಹತ್ತಿರದ ಸಂಬಂಧಿಕರು ಬಿಟ್ಟು ಹೋದ ಸಂಪತ್ತಿನಲ್ಲಿ  ಆಕೆಗೆ ಪಾಲಿಲ್ಲ ಎಂದು ಸಾರಿದ್ದೂ ಪೌರೋಹಿತ್ಯವಾಗಿದೆ.

ಸ್ತ್ರೀಗೆ ಹೊರಗೆ ಹೋಗುವ ಸ್ವಾತಂತ್ರ್ಯವಿಲ್ಲ, ಆಕೆ ಮನೆಯಿಂದ ಹೊರ ಹೋಗುವುದು ಅಪಾಯಕಾರಿ ಎಂದು ಹೇಳಿಕೊಟ್ಟದ್ದೂ ಪೌರೋಹಿತ್ಯವಾಗಿದೆ. ಎಲ್ಲಿಯವರೆಗೆಂದರೆ ಅವಳ ಹಕ್ಕುಗಳನ್ನು ಕಬಳಿಸಿದ್ದು ಮಾತ್ರವಲ್ಲ ಆರಾಧನೆಯ ಸ್ವಾತಂತ್ರ್ಯವನ್ನು ಆಕೆಗೆ ನಿಷೇಧಿಸ ಲಾಯಿತು. ದೇವಾಲಯಗಳು ಮತ್ತು ಮಸೀದಿಗಳಿಗೆ ಪ್ರವೇಶಿಸಲೂ ಆಕೆಗೆ ಅನುಮತಿ ನೀಡಲಿಲ್ಲ. ಇದೆಲ್ಲವನ್ನೂ ಜಗತ್ತಿನ ಮುಂದೆ ಸಾರಿದ್ದು ಪೌರೋ ಹಿತ್ಯವಾಗಿತ್ತು. ಆದ್ದರಿಂದ ಸ್ತ್ರೀಯರು ಪೌರೋಹಿತ್ಯವನ್ನು ಅರಿಯಬೇಕು. ನಮ್ಮ ರಕ್ಷಕರು ಯಾರು? ಶೋಷಕರು ಯಾರು? ಎಂಬುದನ್ನು ಅರ್ಥ ಮಾಡಿಕೊಳ್ಳಲು ನಮಗೆ ಸಾಧ್ಯವಾಗಬೇಕು.

ಇನ್ನು ಭೌತಿಕವಾದಿಗಳಾದ ಎರಡನೆಯ ವರ್ಗ. ಇಝಂಗಳು, ಸಂಘ ಟನೆಗಳು ಸ್ತ್ರೀವಾದಿಗಳೆಂದು ಹೇಳಿ ಫೆಮಿನಿಸಂನ ವಕ್ತಾರರು ಮಾಡಿದ್ದೇನು? ಪುರೋಹಿತಶಾಹಿಗಳಿಗೆ ತೀರಾ ವಿರುದ್ಧವಾದ ನಡೆ ಈ ವರ್ಗದ್ದು. ಅಡುಗೆ ಕೋಣೆಯ ನಾಲ್ಕು ಗೋಡೆಗಳಿಂದ ಹೊರತಂದು ಸಮಾಜದ ಮಧ್ಯದಲ್ಲಿ, ರಸ್ತೆಯಲ್ಲಿ ತಂದು ನಿಲ್ಲಿಸಿ ಆಕೆಯ ಲಜ್ಜೆಯನ್ನು ಕಳಚಲಾಯಿತು. ಸ್ತ್ರೀಯನ್ನು ಸ್ತ್ರೀಯಾಗಿ ಮಾರ್ಪಡಿಸುವುದು ಆಕೆಯ ಲಜ್ಜಾಗುಣ ತಾನೆ! ಈ ಭೌತಿಕವಾದಿಗಳು ಆಕೆಯ ಲಜ್ಜೆಯನ್ನು ಅಪಹರಿಸಿ, ಅನಿಯಂತ್ರಿತ ಸ್ವಾತಂತ್ರ್ಯದ ಪರವಾನಿಗೆಯನ್ನು ಆಕೆಯ ಧರ್ಮ ವಿರೋಧಿಯಾಗಿ ಮಾಡಿ, ಆಕೆಯನ್ನು ನಾಶಪಡಿಸಿದರು ಎಂದು ಅಧ್ಯಯನ ಮಾಡಿದರೆ ಅತಿ ಸುಲಭದಲ್ಲಿ ಅರ್ಥಮಾಡಿಕೊಳ್ಳಬಹುದು. ಉಪ್ಪಿನಿಂದ ಕರ್ಪೂರದವರೆಗೆ ಉತ್ಪನ್ನಗಳನ್ನು ಮಾರಬೇಕಾದರೆ ಅದಕ್ಕೆ ಸ್ತ್ರೀಯರ ಅರೆನಗ್ನ ಶರೀರವನ್ನು ಮಾಧ್ಯಮವಾಗಿ ಮಾಡಬೇಕೆಂಬಷ್ಟರ ಮಟ್ಟಿಗೆ ಜಗತ್ತು ಇಂದು ಅಧಃಪತನಗೊಂಡಿದೆ.
ಇನ್ನು ಇತಿಹಾಸದ ಮೂರನೆಯ ವರ್ಗ ಪ್ರವಾದಿಗಳದ್ದಾಗಿದೆ. ಪ್ರವಾದಿಗಳು ದೇವನ ವತಿಯಿಂದ ನೇಮಿಸಲ್ಪಟ್ಟ ಆತನ ಪ್ರತಿನಿಧಿಗಳಾಗಿದ್ದಾರೆ. ಸ್ತ್ರೀಯರ ಬಗ್ಗೆ ಅವರೇನು ಹೇಳಿದ್ದರೆಂದು ನೋಡೋಣ. ಸ್ತ್ರೀಯರು ಸ್ವತಂತ್ರ ವ್ಯಕ್ತಿತ್ವ ಹೊಂದಿದವಳಾಗಿದ್ದಾಳೆ ಎಂದು ಅವರು ಜಗತ್ತಿಗೆ ಸಾರಿದರು. ಪ್ರವಾದಿಗಳು ಹೇಳಿದರು: ಮಹಿಳೆಯೆಂದರೆ ಸ್ವಂತ ಅಸ್ತಿತ್ವ ಹೊಂದಿದವಳಾಗಿದ್ದಾಳೆ. ಆಕೆ ಪುರುಷರ ನೆರಳಲ್ಲ. ಬದಲಾಗಿ ಪುರುಷ ನಂತೆಯೇ ಸ್ವತಂತ್ರ ಅಸ್ತಿತ್ವ ಹೊಂದಿ ದವಳು. ಪುರುಷನ ಸಮಾನಳು. ಸ್ತ್ರೀ-ಪುರುಷರ ಮಧ್ಯೆ ಭೇದ ಭಾವವನ್ನು ಸೃಷ್ಟಿಕರ್ತನಾದ ದೇವನು ಅಂಗೀಕರಿಸುವುದಿಲ್ಲ. ಸ್ತ್ರೀ-ಪುರುಷ ಸಮಾನತೆಯನ್ನು ಸಾರುವಂತಹ ಅನೇಕ ದೇವ ವಚನಗಳನ್ನು ನಾವು ಕಾಣಬಹುದಾಗಿದೆ. ಆದ್ದರಿಂದ ಅವರ ಘನತೆ ಗೌರವ ವನ್ನು ಅಂಗೀಕರಿಸಿ ಅವಳನ್ನು ಎರಡ ನೆಯ ದರ್ಜೆಯವಳೆಂದು ಪರಿಗಣಿಸದೆ ಅವಳಿಗೆ ಮರ್ಯಾದೆ ಕೊಡಬೇಕಾಗಿದೆ. ಮಾನವನೆಂಬ ನೆಲೆಯಲ್ಲಿ ಆಕೆಯ ವ್ಯಕ್ತಿತ್ವವನ್ನು ಸೃಷ್ಟಿಕರ್ತ ಅಂಗೀಕರಿಸಿದ್ದಾನೆ.
“ನಾವು ಆದಮರ ಸಂತತಿಯನ್ನು ಗೌರವಿಸಿದ್ದೇವೆ.” ಎಷ್ಟೋ ಸೂಕ್ತಗಳು ಪವಿತ್ರ ಕುರ್‍ಆನಿ ನಲ್ಲಿ ಕಾಣಬಹುದಾಗಿದೆ. ಆದ್ದರಿಂದ ಪ್ರವಾದಿಗಳ ಶಿಕ್ಷಣದಂತೆ ಮನುಷ್ಯನ ಜಯಾಪಜಯ ಅವನ ಸದ್ವಿಚಾರ ಮತ್ತು ಸದಾಚಾರವನ್ನು ಹೊಂದಿಕೊಂಡಿದೆ. ಮಹಿಳೆಯನ್ನು ಮಹಿಳೆಯಾಗಿರುವ ಕಾರಣಕ್ಕಾಗಿ ನಿಕೃಷ್ಟವೆಂದು ಪರಿಗಣಿಸಿ ಮಾನವತೆಯ ಉನ್ನತ ಮಟ್ಟದಿಂದ ದೂರ ಎಸೆಯುವ ಮತ್ತು ಪುರುಷ ನನ್ನು ಪುರುಷನಾಗಿರುವ ಕಾರಣಕ್ಕಾಗಿ ವಿಶ್ವಸಿಂಹಾಸನದ ಹಕ್ಕುದಾರನೆಂದು ಬಗೆಯುವ ಸಿದ್ಧಾಂತಗಳು ಅದು ಯಾವ ಧರ್ಮದಲ್ಲೇ ಇರಲಿ ಅದು ಅಜ್ಞಾನದ ಸಿದ್ಧಾಂತಗಳಾಗಿವೆ.

ಜೀವನದ ಜಂಜಡ ಮತ್ತು ಏರಿಳಿತಗಳಲ್ಲಿ ಎಲ್ಲ ಕಾಲಗಳಲ್ಲಿಯೂ ಸ್ತ್ರೀ-ಪುರುಷರು ಪರಸ್ಪರ ಸಹಕಾರಿಗಳಾಗಿದ್ದರು. ಜೀವನದ ಹೊರೆಯನ್ನು ಇಬ್ಬರೂ ಹೊತ್ತಿದ್ದರು. ನಾಗರಿಕತೆಯ ಉನ್ನತಿಯು ಇಬ್ಬರ ಐಕ್ಯದಿಂದಲೇ ಉಂಟಾಗಿದೆ. ಸಂಸ್ಕøತಿ ಮತ್ತು ನಾಗರಿಕತೆಯ ಕ್ರಾಂತಿಗಳೆಲ್ಲ ಸ್ತ್ರೀ ಮತ್ತು ಪುರುಷರ ಪ್ರಯತ್ನಗಳ ಫಲವೆಂಬುದನ್ನು ಪವಿತ್ರ ಕುರ್‍ಆನ್ ಹೇಳುತ್ತದೆ.
“ಸತ್ಯವಿಶ್ವಾಸಿಗಳಾದ ಪುರುಷರು ಮತ್ತು ಸ್ತ್ರೀಯರು ಪರಸ್ಪರ ಆಪ್ತರು. ಅವರು ಒಳಿತುಗಳನ್ನು ಆದೇಶಿಸುತ್ತಾರೆ ಮತ್ತು ಕೆಡುಕುಗಳಿಂದ ತಡೆಯುತ್ತಾರೆ. ನಮಾಝ ಸಂಸ್ಥಾಪಿಸುತ್ತಾರೆ, ಝಕಾತ್ ಕೊಡುತ್ತಾರೆ ಹಾಗೂ ಅಲ್ಲಾಹ್ ಮತ್ತು ಅವನ ಪ್ರವಾದಿಯ ಅನುಸರಣೆ ಮಾಡುತ್ತಾರೆ. ಇವರ ಮೇಲೆ ಅಲ್ಲಾಹನ ಕರುಣೆ ಅವತೀರ್ಣಗೊಂಡೇ ತೀರು ವುದು.” (9: 71)
ಪ್ರವಾದಿ ಮುಹಮ್ಮದ್(ಸ)ರ ಆಗ ಮನಕ್ಕಿಂತ ಮೊದಲು ಮಹಿಳೆಯನ್ನು ಒಂದು ನಿರುಪಯುಕ್ತವೆಂದು ಬಗೆದು ಆಕೆಯನ್ನು ಕಾರ್ಯರಂಗದಿಂದ ದೂರ ಸರಿಸಲಾಗಿತ್ತು. ಅಕೆಯನ್ನು ಅವನತಿಯ ಪಾತಾಳಕ್ಕೆ ತಳ್ಳಲಾಗಿತ್ತು. ಅದರ ನಂತರ ಮಹಿಳೆಯ ಪ್ರಗತಿಯ ಯಾವ ನಿರೀಕ್ಷೆಯೂ ಉಳಿದಿರಲಿಲ್ಲ. ಲೋಕದ ಈ ವರ್ತನೆಯ ಬಗ್ಗೆ ಪ್ರವಾದಿಯವರು(ಸ) ಪ್ರತಿಭಟನೆಯ ಸ್ವರ ಮೊಳಗಿಸಿದರು. ಅವರು ಹೇಳಿದರು ಜೀವನವು ಪುರುಷ ಮತ್ತು ಸ್ತ್ರೀ ಇಬ್ಬರನ್ನು ಅವಲಂಬಿಸಿದೆ. ಮಹಿಳೆ ಛೀಮಾರಿ ಹಾಕಲಿಕ್ಕಿರುವವಳಲ್ಲ. ಆಕೆಯನ್ನು ಜೀವನದ ರಾಜ ಮಾರ್ಗದಿಂದ ದೂರ ಸರಿಸಲಿಕ್ಕಲ್ಲ. ಏಕೆಂದರೆ ಪುರುಷ ಅಸ್ತಿತ್ವಕ್ಕೆ ಒಂದು ಉದ್ದೇಶವಿರುವಂತೆ ಸ್ತ್ರೀಯ ಸೃಷ್ಟಿಯ ಹಿಂದೆಯೂ ಒಂದು ಧ್ಯೇಯವಿದೆ.
ಪ್ರವಾದಿಯವರು(ಸ) ಮಹಿಳೆಯನ್ನು ನಿಂದ್ಯತೆಯ ಸ್ಥಾನದಿಂದ ಶೀಘ್ರವಾಗಿ ಮೇಲೆತ್ತಿದರು. ಆಕೆಗೆ ಹಕ್ಕು ಅಧಿ ಕಾರಗಳನ್ನು ದಯಪಾಲಿಸಿದರು. ಅಬ್ದುಲ್ಲಾ ಬಿನ್ ಉಮರ್(ರ)ರವರ ಮಾತೇ ಇದಕ್ಕೆ ಸಾಕ್ಷಿಯಾಗಿದೆ. ಅವರು ಹೇಳುತ್ತಾರೆ, “ಪ್ರವಾದಿಯವರ(ಸ) ಕಾಲದಲ್ಲಿ ನಾವು ನಮ್ಮ ಮಹಿಳೆಯರೊಂದಿಗೆ ಮಾತನಾಡಲು ಮತ್ತು ನಿಸ್ಸಂಕೋಚವಾಗಿ ವರ್ತಿಸಲು ಹೆದರುತ್ತಿದ್ದೆವು. ನಮ್ಮ   ಕುರಿತು ಏನಾದರೂ ದೇವವಿಧಿ ಅವ ತೀರ್ಣಗೊಳ್ಳುವುದೋ ಎಂದು ನಾವು ಹೆದರುತ್ತಿದ್ದೆವು.”
ಪ್ರವಾದಿಯವರ(ಸ) ಈ ಶೋಷಿತ ವರ್ಗದ ಪರವಾಗಿ ನೀಡಿರುವ ಬೋಧನೆಗಳು ಇಂದಿಗೂ ಅಪ್ರತಿಮವಾಗಿದೆ. ತಂದೆ-ತಾಯಿಗಳ ಹಕ್ಕು ಬಾಧ್ಯತೆಗಳಲ್ಲಿ ಮಕ್ಕಳ ಮೇಲೆ ಅತಿ ಹೆಚ್ಚು ಹಕ್ಕು ತಾಯಿ ಮೇಲಾಗಿರುತ್ತದೆ. ಈ ಲೋಕವು ಲೋಕದ ಸಂಪತ್ತಾಗಿದೆ. ಅತ್ಯುತ್ತಮ ಸಂಪತ್ತು ಸಚ್ಚರಿತಳಾದ ಪತ್ನಿಯಾಗಿ ದ್ದಾಳೆ. ಹೆಣ್ಣು ಮಕ್ಕಳ ಪಾಲನೆ   ಪೋಷಣೆ ಮಾಡುವುದರ ಮೂಲಕ ಆಕೆ ಸ್ವರ್ಗಕ್ಕೆ ದಾರಿಯಾಗಿದ್ದಾಳೆ ಎಂದ ಪ್ರವಾದಿಯವರ(ಸ) ಈ ಶಿಕ್ಷಣದಿಂದಾಗಿ ಜನರ ವಿಚಾರ-ಆಚಾರಗಳಲ್ಲಿ ಕ್ರಾಂತಿಯುಂಟಾಯಿತು. ತಮ್ಮ ಕರುಳ ಕುಡಿಗಳನ್ನು ಜೀವಂತ ಹೂಳುವುದಕ್ಕೂ ಹೇಸದಂತಹ ವ್ಯಕ್ತಿಗಳು ಮತ್ತು ಆ  ಬಗ್ಗೆ ಯಾವುದೇ ಪಶ್ಚಾತ್ತಾಪ ಇಲ್ಲದ ಜನರು ತಮ್ಮ ಜೀವನದ ಅತ್ಯಮೂಲ್ಯ ಸಂಪತ್ತೆಂಬಂತೆ ಅವರ ಪಾಲನೆ-ಪೋಷಣೆಯನ್ನು ಮಾಡ ತೊಡಗಿದರು. ತಮ್ಮ ಕರುಳ ಕುಡಿಗಳಿಗೇ ಅಭಯವಿಲ್ಲದಂತಹ ಜನರಲ್ಲಿ ಇತರರ ಸಂತತಿಗಳನ್ನು ಸಂರಕ್ಷಿಸುವ ಭಾವನೆ ಬೆಳೆಯಿತು. ಮಹಿಳೆಯೊಂದಿಗೆ ಪ್ರೀತಿ ವಾತ್ಸಲ್ಯದ ವ್ಯವಹಾರವನ್ನೇ ಅರಿಯ ದವರು ತಮ್ಮ ಕೊನೆಯುಸಿರಿನ ತನಕ ಈ ಶೋಷಿತ ವರ್ಗದ ಬಗ್ಗೆ ಚಿಂತಿತ ರಾಗಿರುತ್ತಿದ್ದರು. ಇತಿಹಾಸ ಪುಟಗಳಲ್ಲಿ ಇಂತಹ ವಿಚಾರ ಕ್ರಾಂತಿಯು ತುಂಬಿ ತುಳುಕುತ್ತಿವೆ.

ಹೌದು. ಅಕ್ರಮ ಅನ್ಯಾಯಗಳನ್ನು ದಮನಿಸಿ ನಿಯಂತ್ರಿಸುವಷ್ಟು ಶಕ್ತಿ ಈ ಬೋಧನೆಗಳಲ್ಲಿದೆ. ಅವುಗಳನ್ನು ದೃಢವಾಗಿ ನಂಬುವ ವ್ಯಕ್ತಿಯು ಮಹಿಳೆ ಯರ ಕುರಿತು ನ್ಯಾಯದ ಮೇರೆಯನ್ನು ಮೀರುವ ಮತ್ತು ಆಕೆಯನ್ನು ಅಸಹಾಯಕ, ದುರ್ಬಲೆ ಎಂದು ಬಗೆದು ಅಕ್ರಮ ವೆಸಗುವ ಸಾಧ್ಯತೆಯೇ ಇಲ್ಲ. ಆದ್ದರಿಂದ ಇನ್ನು ಯಾರಾದರೂ ಆಕೆಯ ಹಕ್ಕು ಗಳಲ್ಲಿ ಹಸ್ತಕ್ಷೇಪ ನಡೆಸುತ್ತಾನೆ ಎಂದಾಗಿ ದ್ದರೆ ಅವನ ವಿಶ್ವಾಸವು ಸಂಶಯಾ ಸ್ಪದವಾಗಿದೆ. ಆದ್ದರಿಂದ ಮಹಿಳೆಯರ ಮೇಲಾಗುತ್ತಿರುವ ಅನ್ಯಾಯ ಅಕ್ರಮಗಳು ಕೊನೆಯಾಗಬೇಕು. ಪ್ರವಾದಿಯವರು(ಸ) ಕಟ್ಟಿ ಬೆಳೆಸಿದ ಸ್ತ್ರೀಯರನ್ನು ಗೌರವಿಸುವಂತಹ ಸಮಾಜ ಬೆಳೆದು ಬರಬೇಕು, ಈಗಲೂ ಪ್ರವಾದಿಯವರ(ಸ) ಬೋಧನೆಗಳನ್ನು ಆಳವಡಿಸಿದ್ದೇ ಆದರೆ ಖಂಡಿತವಾಗಿಯೂ ಅಂತಹ ಸಮಾಜ ನಿರ್ಮಾಣವಾಗುವ ಕಾಲ ದೂರವಿಲ್ಲ ಎಂಬ ಭರವಸೆಯನ್ನು ನೀಡಿದರೆ ಅತಿಶಯೋಕ್ತಿಯೆನಿಸಲಾರದು.

LEAVE A REPLY

Please enter your comment!
Please enter your name here