ಲೇಖಕರು: ಜಾವಿದ್ ಕಂದಗಲ್, ಇಳಕಲ್.

ಸಾಧನೆ ಅಂತ ಹೇಳಿದರೆ ಅಂದುಕೊಂಡದ್ದನ್ನು ಛಲದಿಂದ ಮಾಡುವುದು, ಕಷ್ಟಗಳ ಸರಮಾಲೆ ಬಂದಾಗಲೂ ಎದೆಗುಂದದೆ ಧೈರ್ಯದಿಂದ ಎದುರಿಸಿ ಮುನ್ನುಗ್ಗಿ ಗುರಿಯನ್ನು ತಲುಪುವಂತಹದೆ ಸಾಧನೆ. ಕೈಯಲ್ಲಿ ಕಾಸಿಲ್ಲದಿದ್ದಾಗ, ತನ್ನವರು ನಡುದಾರಿಯಲ್ಲಿ ಕೈಬಿಟ್ಟಾಗ, ಇನ್ನು ಯಾರ ಸಹಾಯವೂ ಇಲ್ಲದಿರುವಾಗ, ಮತ್ತೆ ಇನ್ನೊಬ್ಬರ ಬಳಿ ಕೈಯೊಡ್ಡುವ ಪರಿಸ್ಥಿತಿ ನಿರ್ಮಾಣವಾದಾಗ, ಮನಸ್ಸು ಭಾರವಾಗಿ ಮೊರೆ ಇಡುತ್ತಾ ಸೃಷ್ಟಿಕರ್ತನಲ್ಲಿ ಗೋಗರೆದು ಪ್ರಾರ್ಥಿಸಿತು. ದೇವನ ಸಹಾಯವು ಮತ್ತೆ ಧಾವಿಸಿತು ಭರವಸೆಯನ್ನು ಕಳೆದುಕೊಂಡ ಜೀವನದಲ್ಲಿ ಆಶಾಕಿರಣವು ಉದ್ಭವಿಸಿತು. ದೇವನ ಸಹಾಯವು ಸ್ನೇಹಿತನ ರೂಪದಲ್ಲಿ ಧಾವಿಸಿತು. ಅಂದುಕೊಂಡದ್ದನ್ನು ಮಾಡಿ ತೋರಿಸುವ ಛಲ ನನ್ನಲ್ಲಿ ಮೂಡಿತು.

ಒಂದು ಬಹುದೊಡ್ಡ ಕನಸನ್ನು ಹೊತ್ತಿದ್ದೆ, ಅದನ್ನು ಕಾರ್ಯ ರೂಪದಲ್ಲಿ ಜಾರಿಗೆ ಬರಲು ಸಹಾಯ ಮಾಡಿದ್ದು ನನ್ನ ಆತ್ಮೀಯ ಗೆಳೆಯರಲ್ಲಿ ಒಬ್ಬರಾದ ಸಹೋದರ ಉಸ್ಮಾನ್ ಗಣಿ ಶಿವನಗುತ್ತಿ ಮತ್ತು ಆತನ ಕುಟುಂಬದ ಸದಸ್ಯರು ಹಾಗೂ ಆ ಕನಸಿಗೆ ಸ್ಪೂರ್ತಿಯಾಗಿ ಬೆನ್ನು ತಟ್ಟಿ ನಾನಿದ್ದೇನೆ ಎಂದು ಧೈರ್ಯ ತುಂಬಿದವರೇ ಆತ್ಮೀಯ ಗೆಳೆಯ ಮತ್ತು ಶಿಕ್ಷಕ ಲಿಯಾಕತ್ ಶೇಕ್. ಸಹೋದರರೇ ಆ ಕನಸಿನ ಹೆಸರೇ “ಇಂಡಿಯನ್ ಕೋಚಿಂಗ್ ಸೆಂಟರ್ (ಐಸಿಸಿ)” ಹೌದು ಸಹೋದರರೇ ಐಸಿಸಿ ಯ ಸ್ಥಾಪನೆಯ ಉದ್ದೇಶ ಬಹಳ ಸ್ಪಷ್ಟವಾಗಿದೆ, ಇಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಕಂಡುಬರುವ ಕುಂದು ಕೊರತೆಗಳನ್ನು ಅಥವಾ ಗುಣಮಟ್ಟ ಇಲ್ಲದ ಶಿಕ್ಷಣದಿಂದಾಗಿ ಸರಿಯಾದ ರೀತಿಯ ಶಿಕ್ಷಣ ಪಡೆಯದ ವಿದ್ಯಾರ್ಥಿಗಳಿಗೆ ಮತ್ತು ಆರ್ಥಿಕವಾಗಿ ಸಬಲೀಕರಣರಲ್ಲದ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳನ್ನೊಳಗೊಂಡ ಉತ್ತಮ ಗುಣಮಟ್ಟದ ಮತ್ತು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಬೆಳೆಸಬೇಕು ಎಂಬ ಧ್ಯೇಯದೊಂದಿಗೆ ಪ್ರಾರಂಭಿಸಲಾಯಿತು, ಸದ್ಯ ಈ ಸಂಸ್ಥೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತರಬೇತುಗೊಳಿಸುತ್ತಾ ಇತ್ತಿಚೆಗೆ ಅಂದರೆ ಸಪ್ಟೆಂಬರ್ 10 2022ಕ್ಕೆ ತನ್ನ ಒಂದು ವರ್ಷದ ಪಯಣವನ್ನು ಸಾಧನೆಯ ಹಾದಿಯಲ್ಲಿ ಮುಂದುವರಿಸುತ್ತಿದೆ.

ಹಲವು ವಿಭಿನ್ನ ಕ್ಲಾಸಸ್ ಗಳ ಚಿತ್ರಣ.

ಈ ಸಾಧನೆಗೆ ಪರೋಕ್ಷವಾಗಿ ಪ್ರೇರಕ ಶಕ್ತಿಯಾಗಿದ್ದು, ನಾನು ಅತಿ ಹೆಚ್ಚು ಗೌರವಿಸುವ ಮತ್ತು ಪ್ರೀತಿಸುವ ಎಸ್.ಐ.ಓ ಎಂಬ ಸಂಘಟನೆ. ಹೌದು ಖಂಡಿತವಾಗಿಯೂ ಈ ಸಾಧನೆಯ ಹಾದಿಯತ್ತ ನನ್ನೊಬ್ಬನಿಂದ ಮಾತ್ರ ಬರಲಿಕ್ಕೆ ಸಾಧ್ಯವಿರಲಿಲ್ಲ, ಅದು ಅಸಾಧ್ಯವೂ ಆಗಿತ್ತು. ಆದರೆ ಆ ಅಸಾಧ್ಯವನ್ನು ಸಾಧ್ಯವನ್ನಾಗಿ ಮಾಡಲು ನನ್ನೊಂದಿಗೆ ಕೈ ಜೋಡಿಸಿದವರೇ ನನ್ನ ಎಸ್ಐಓ ಸಂಘಟನೆಯ ಸಹೋದರರು. ಅಂದೊಮ್ಮೆ ನಾನು ಲಿಯಾಖತ್ ಮತ್ತು ಉಸ್ಮಾನ್ ಮೂರು ಜನ ಸಾಮಾನ್ಯವಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಮಾತನಾಡುತ್ತಿದ್ದೆವು. ಮಾತು ಮುಂದುವರೆಯುತ್ತಾ ನಮ್ಮಲ್ಲಿ ಒಬ್ಬರು ನಾವೇ ಸ್ವತಃ ಒಂದು ಶಾಲೆಯನ್ನು ತೆರೆದರೆ ತುಂಬಾ ಉತ್ತಮ ಎಂದರು, ಅದಕ್ಕಾಗಿ ಏನೆಲ್ಲಾ ಪ್ರಯತ್ನ ಮಾಡಿದೆವು ಆದರೆ ಹಲವಾರು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ,

ಮುಂದೆ ಆಲೋಚನೆ ಹುಟ್ಟಿಕೊಂಡಿದ್ದೆ ಈ ಕೋಚಿಂಗ್ ಸೆಂಟರ್ ಅನ್ನು ಪ್ರಾರಂಭಿಸಬೇಕು ಅಂತ, ಮೂವರು ಚರ್ಚಿಸಿ ತೀರ್ಮಾನಕ್ಕೆ ಬಂದೆವು ಮೊದಲು ಕೋಚಿಂಗ್ ಕ್ಲಾಸಸ್ ಗಳನ್ನು ತೆಗೆಯೋಣ ಎಂದು ತೀರ್ಮಾನಿಸಿದವು. ಆದರೆ ಅದಕ್ಕೆ ಹೆಸರೇನು ಇಡಬೇಕು ಅಂತ ತೋಚದೆ ಇದ್ದಾಗ ನಮಗೆ ಸಹಾಯ ಮಾಡಿದ್ದೆ ಎಸ್ ಐ ಓ. ಅದು ಹೇಗೆಂದರೆ ಎಸ್ ಐ ಓ ಸಂಘಟನೆಯ ವತಿಯಿಂದ ನಡೆಸಲಾಗುವ ಮಕ್ಕಳ ಕಾರ್ಯಕ್ರಮದ “ಐಸಿಸಿ”(ICT) ಎಂಬ ಹೆಸರು ನಮಗೆ ಪ್ರೇರಕವಾಯಿತು. ಐಸಿಸಿ ಅಂತ ಹೇಳಿದರೆ ಇಸ್ಲಾಮಿಕ್ ಚಿಲ್ಡ್ರನ್ ಸರ್ಕಲ್ ಆದರೆ ಅದನ್ನು ನಾವು “ಇಂಡಿಯನ್ ಕೋಚಿಂಗ್ ಸೆಂಟರ್”(ಐಸಿಸಿ) ಎಂದು ನಮ್ಮ ಕೋಚಿಂಗ್ ಸೆಂಟರ್ ಗೆ ನಾಮಕರಿಸಿದೆವು.

ವಿಜ್ಞಾನದ ಪ್ರಾಯೋಗಿಕ ತರಗತಿ ನಡೆಸುತ್ತಿರುವ ಶಿಕ್ಷಕರಾದ ಶೇಕ್ ಲಿಯಾಕತ್.

ಎಸ್ ಐ ಓ ಸಂಘಟನೆಯಲ್ಲಿ ಕಲಿತ ಮಾನವೀಯತೆಯ ಪಾಠಗಳನ್ನು ಕಾರ್ಯ ರೂಪದಲ್ಲಿ ತರಲು ಈ ಕೋಚಿಂಗ್ ಸೆಂಟರ್ ನಮಗೆ ಮಾರ್ಗವಾಯಿತು ಮತ್ತು ನಮ್ಮ ಜೀವನೋಪಾಯಕ್ಕೂ ಕೂಡ ಒಂದು ದಾರಿಯಾಯಿತು. ಎಸ್ ಐ ಓ ನಾವು ಸದಾ ನಿನಗೆ ಆಭಾರಿ ಏಕೆಂದರೆ ನಮ್ಮಲ್ಲಿ ಮನುಷ್ಯತ್ವದ ಪಾಠಗಳನ್ನು ಬಿತ್ತಿದದ್ದಕ್ಕಾಗಿ, ಸ್ವತಂತ್ರವಾಗಿ ಆಲೋಚಿಸುವ ಶಕ್ತಿಯನ್ನು ನೀಡಿದ್ದಕ್ಕಾಗಿ, ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಲು ಕಲಿಸಿದ್ದಕ್ಕಾಗಿ ಹೀಗೆ ಹಲವಾರು ಜೀವನ ವಿವಿಧ ರಂಗಗಳಲ್ಲಿ ನಮ್ಮನ್ನು ತರಬೇತುಗೊಳಿಸಿದ ನಿನಗೆ ತುಂಬು ಹೃದಯದ ಧನ್ಯವಾದಗಳು.

ಸಹೋದರರೇ ನಮ್ಮ ಐಸಿಸಿ ಕೋಚಿಂಗ್ ಸೆಂಟರ್ ಪ್ರಾರಂಭವಾದಾಗಿನಿಂದ ಇಂದಿನ ತನಕ ಕೇವಲ ಶಾಲಾ ಸಿಲೆಬಸ್ ಮಾತ್ರವಲ್ಲದೆ, ಮನುಷ್ಯನಿಗೆ ಅತ್ಯಂತ ಅವಶ್ಯಕವಾಗಿರುವ ಮಾನವೀಯ ಮೌಲ್ಯಗಳು, ನೈತಿಕ ಮೌಲ್ಯಗಳೊಂದಿಗೆ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳ ಅವಶ್ಯಕತೆಗಾನುಸಾರ ಪಾಠವನ್ನು ಮಾಡುತ್ತಾ ಪಾಲಕರಲ್ಲಿ ಸಂತೃಪ್ತಿಯನ್ನು ಕಾಣುತ್ತಾ ಮುಂದೊಂದು ದಿನ ಹೆಮ್ಮೆರವಾಗಿ ಅನೇಕರಿಗೆ ದಾರಿ ದೀಪವಾಗಿ ಬೆಳೆದು ಹಲವು ಸಾಧಕರಿಗೆ ಸಾಧನೆಯ ಮಾರ್ಗವಾಗುವತ್ತ ಸಾಗುವಂತಾಗಲಿ ಎಂದು ಪ್ರಾರ್ಥಿಸುತ್ತಾ, ತಾವೆಲ್ಲರೂ ನಮಗೆ, ನಿಮ್ಮ ಸಹಾಯ ಸಹಕಾರ ನೀಡುತ್ತಾ ತಮ್ಮ ಪ್ರಾರ್ಥನೆಯಲ್ಲಿ ನಮ್ಮನ್ನು ನೆನಪಿನಲ್ಲಿಡಿ ಎಂದು ಕೇಳಿಕೊಳ್ಳುತ್ತೇನೆ.

ಜಾವೀದ್ ಕಂದಗಲ್, ಸಹ ಸಂಸ್ಥಾಪಕರು ಐಸಿಸಿ ಕೋಚಿಂಗ್ ಸೆಂಟರ್. ಇಳಕಲ್

LEAVE A REPLY

Please enter your comment!
Please enter your name here