-ಪ್ರೋ. ಜೋಸ್ಲಿನ್ ಲೋಬೋ

ಡೀನ್, ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯ, ಮಂಗಳೂರು

ನೀವು ಜನರೊಂದಿಗೆ ಪರಸ್ಪರ ಸಂಭಾಷಣೆ ನಡೆಸುವುದನ್ನು ಬಯಸುತ್ತೀರ? ನಿಮಗೆ ಪ್ರತಿಕೂಲ ಸ್ಥಿತಿಯಲ್ಲಿರುವವರಿಗೆ ಮತ್ತು ಅಸಹಾಯಕರಿಗೆ ಸಹಕರಿಸುವ ಇಚ್ಛಾಶಕ್ತಿ ಇದೆಯೇ? ಈ ಮೇಲಿನ ಪ್ರಶ್ನೆಗಳಿಗೆ ನಿಮ್ಮ ಉತ್ತರವು ಸಕಾರಾತ್ಮಕವಾಗಿದ್ದರೆ, ಸವಾಲಿನ ಮತ್ತು ಉತ್ತೇಜಕವಾದ ಸಮಾಜ ಕಾರ್ಯ ವೃತ್ತಿಗೆ ಸ್ವಾಗತ.

ಸಮಾಜ ಕಾರ್ಯವನ್ನು ದಾನ ಮತ್ತು ಸಮಾಜ ಸೇವೆ ಎಂದು ಅರ್ಥೈಸಿರುವವರು, ಸಮಾಜ ಕಾರ್ಯ ವೃತ್ತಿಯನ್ನು ತಪ್ಪಾಗಿ ಗ್ರಹಿಸುವ ಸಾಧ್ಯತೆಗಳಿವೆ. ಸಮಾಜ ಕಾರ್ಯ ವೃತ್ತಿಯು ವ್ಯಕ್ತಿ, ಸಮುದಾಯ ಮತ್ತು ಸಮಾಜದ ಒಟ್ಟು ಕಲ್ಯಾಣವನ್ನು ಬಯಸುವ ಶಿಸ್ತಾಗಿದೆ. ಕಳೆದ ಕೆಲವು ದಶಮಾನಗಳಿಂದ ಭಾರತದಲ್ಲಿ ಸಮಾಜ ಕಾರ್ಯವು ಬಹುಬೇಡಿಕೆಯ ವೃತ್ತಿಯಾಗಿ ಬೆಳೆಯುತ್ತಿದೆ. ಅದು ಜ್ಞಾನದ ಒಂದು ಅಂಗವಾಗಿ ಬದಲಾಗಿದೆ, ಸಂಸ್ಥೆಗಳಲ್ಲಿ ಶೈಕ್ಷಣಿಕ ಶಿಸ್ತಾಗಿ ಬೋಧಿಸಲಾಗುತ್ತದೆ ಮತ್ತು ಈ ಕ್ಷೇತ್ರದಲ್ಲಿ ಬೃಹತ್ ಸಂಖ್ಯೆಯ ಜನರು ಉದ್ಯೋಗ ನಿರತರಾಗಿದ್ದಾರೆ.

ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ ವ್ಯಕ್ತಿಯೋರ್ವನಿಗೆ ಜೀವನದ ಎಲ್ಲಾ ನಡೆಯಲ್ಲಿ ಮತ್ತು ಎಲ್ಲಾ ಪರಿಸ್ಥಿತಿಯಲ್ಲಯೂ ನೀವು ಸೇವೆಯನ್ನು ಒದಗಿಸಬಹುದು. ನೀವು ಸೇವೆ ಸಲ್ಲಿಸುವ ಪರಿಧಿಯ ಮಿತಿಯು ವಿಶಾಲ ಮತ್ತು ವಿಭಿನ್ನವಾಗಿದೆ. ನಿಮ್ಮ ಕೆರಿಯರ್‍ನ ಒಂದು ಹಂತದಲ್ಲಿ ನೀವು ಶಿಶು ರಕ್ಷಣಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸಬಹುದು ಅಥವಾ ಸಂಬಂಧವು ಕೆಡುತ್ತಿರುವ ದಂಪತಿಗಳನ್ನು ಸರಿದೂಗಿಸಬಹುದು ಅಥವಾ ಮದ್ಯಪಾನ ಮತ್ತು ಡಗ್ಸ್ ವ್ಯಸನಿಗಳಿಗೆ ಹೊರಬರಲು ಸಹಾಯ ಮಾಡಬಹುದು. ಅಲ್ಲದೆ, ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ ವರ್ಗ ಅಥವಾ ಲಿಂಗದ ಆಧಾರದಲ್ಲಿ ತಾರತಮ್ಯವನ್ನು ಅನುಭವಿಸಿರುವವರಿಗೆ ಪ್ರತಿಪಾದಿಯಾಗಿಯೂ ಪಾತ್ರ ನಿರ್ವಹಿಸಬಹುದು. ನೀವು ಶಾಲಾ ವ್ಯವಸ್ಥೆಯಲ್ಲಿ ಅಥವಾ ವಿಶ್ವವಿದ್ಯಾಲಯ ಕೌನ್ಸಿಲಿಂಗ್ ಕೇಂದ್ರಗಳಲ್ಲಿ ಸೇವೆ ಒದಗಿಸಬಹುದು. ನೀವು ಮಾನಸಿಕ ರೋಗದಿಂದ ಬಳಲುತ್ತಿರುವವರಿಗೆ ಕೌನ್ಸಿಲ್ ಮಾಡಬಹುದು ಅಥವಾ ಸೈಕೋಲಾಜಿಕಲ್ ಸಮಸ್ಯೆಯನ್ನು ಎದುರಿಸುತ್ತಿರವವನಿಗೆ ಸೈಕೋಲಾಜಿಕಲ್ ಸೇವೆಯನ್ನೂ ಒದಗಿಸಬಹುದು.

ನೀವು ಆತ್ಮಹತ್ಯೆ ತಡೆ ಸೇವೆಗಾಗಿ ವಿಪತ್ತು ನಿರ್ವಹಣಾ ಸಾಮರ್‍ಥ್ಯದಲ್ಲಿಯೂ ಕಾರ್ಯನಿರ್ವಹಿಸಬಹುದು. ಯುವ ಅಪರಾಧಿಗಳ ವಸತಿ ವ್ಯವಸ್ಥೆಯಲ್ಲಿ, ವಯಸ್ಕರ ಕಾರಗೃಹದಲ್ಲಿ ಅಥವಾ ಮನೋವೈದ್ಯಕೀಯ ಸಂಸ್ಥೆಗಳಲ್ಲಿ ನೀವು ಕಾರ್ಯ ಒದಗಿಸಬಹುದು. ಅಲ್ಲದೆಯೂ, ಕೈಗಾರಿಕೆಗಳ ಮಾಲೀಕರು ಮತ್ತು ನೌಕರರ ನಡುವಿನ ಕನ್ಸಲ್ಟಿಂಗ್(ವಿಚಾರಣಾ) ಆಗಿ ಅವರ ಆರೋಗ್ಯ ಮತ್ತು ಉತ್ಪಾದಕತೆಗೆ ಉಂಟಾಗುವ ಸಮಸ್ಯೆಯನ್ನು ಬಗೆಹರಿಸುವಲ್ಲಿಯೂ ಸೇವೆ ನೀಡಬಹುದಾಗಿದೆ.

ಶೈಕ್ಷಣಿಕತೆ

ಸಮಾಜ ಕಾರ್ಯದಲ್ಲಿ ಕೆರಿಯರ್ ನಿರ್ಮಿಸಲು ನೀವು ಮೂರು ವರ್ಷದ ಪದವಿ ಕಾರ್ಯಕ್ರಮವಾದ ಬ್ಯಾಚುಲರ್ಸ್ ಇನ್ ಸೋಶಿಯಲ್ ವರ್ಕ್(ಬಿ.ಎಸ್.ಡಬ್ಲ್ಯೂ)ಗೆ ದಾಖಲಾಗಬಹುದು ಮತ್ತು ಉನ್ನತ ಶಿಕ್ಷಣವನ್ನು ಮಾಸ್ಟರ್ಸ್ ಇನ್ ಸೋಶಿಯಲ್ ವರ್ಕ್(ಎಂ.ಎಸ್.ಡಬ್ಲ್ಯೂ)ನಲ್ಲಿ ಗಳಿಸಬಹುದು. ಭಾರತದಲ್ಲಿ ನೀವು ಯಾವುದೇ ಪದವಿಯನ್ನು ಹೊಂದಿದ್ದರೂ ಎಂ.ಎಸ್.ಡಬ್ಲ್ಯೂ ಆಯ್ಕೆ ಮಾಡಿಕೊಳ್ಳಬಹುದು. ಅಲ್ಲದೆ ಇಂದಿರಾ ಗಾಂಧೀ ನ್ಯಾಶನಲ್ ಓಪನ್ ಯುನಿವರ್ಸಿಟಿ(IGNOU)ನಲ್ಲಿ ದೂರ ಶಿಕ್ಷಣವನ್ನು ಆಯ್ದುಕೊಳ್ಳಬಹುದು.

1936ನೇ ಇಸವಿಗೆ ಮುಂಬೈಯಲ್ಲಿ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸಯನ್ಸ್ ಆರಂಭಗೊಂಡ ನಂತರದಲ್ಲಿ ಸಮಾಜ ಕಾರ್ಯವನ್ನು ಒದಗಿಸುವ ಅನೇಕ ಸಂಸ್ಥೆಗಳು ಭಾರತದಲ್ಲಿ ತಲೆ ಎತ್ತಿದೆ. ಲೆಕ್ಕಾಚಾರದ ಪ್ರಕಾರವಾಗಿ ದೇಶಾಧ್ಯಂತ ಸಮಾಜ ಕಾರ್ಯ ಶಿಕ್ಷಣವನ್ನು ಒದಗಿಸುವ 350ಕ್ಕೂ ಮಿಕ್ಕಿ ಸಂಸ್ಥೆಗಳು ಅಥವಾ ವಿಭಾಗಗಳಿವೆ, ಅದರಲ್ಲೂ ಕರ್ನಾಟಕದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ(70ಕ್ಕೂ ಅಧಿಕ) ಇದೆ.

ಎಲ್ಲಾ ಹಂತದಲ್ಲಿಯೂ ಸಮಾಜ ಕಾರ್ಯದ ತರಬೇತಿಯಲ್ಲಿ ಕ್ಷೇತ್ರ ಕಾರ್ಯ(Field Work) ಪ್ರಮುಖ ಘಟಕವಾಗಿದೆ. ತರಗತಿಗಳು ಸೈದ್ಧಾಂತಿಕ ಜ್ಞಾನವನ್ನು ನೀಡಿದರೆ, ಕ್ಷೇತ್ರ ಕಾರ್ಯವು ಮಾಡುವುದರೊಂದಿಗೆ ಕಲಿಯುವುದನ್ನು ಶಕ್ತಗೊಳಿಸುತ್ತದೆ. ಈ ಘಟಕವು ವೃತ್ತಿಪರವಾದ ಬೆಳವಣಿಗೆಗೆ ಮಹತ್ವಪೂರ್ಣವಾಗಿದೆ.

ವಿಶಾಲ ವ್ಯಾಪ್ತಿ

ಸಮಾಜ ಕಾರ್ಯದ ಕ್ಷೇತ್ರವು ವಿಶಾಲ ಮತ್ತು ವಿಭಿನ್ನವಾಗಿರುವುದರಿಂದ, ಅದನ್ನು ನಾಲ್ಕು ವಿಸ್ತಾರವಾದ ವಿಭಾಗವಾಗಿ ವಿಂಗಡಿಸಲಾಗಿದೆ.  ಸಮುದಾಯದೊಂದಿಗಿನ ಕಾರ್ಯ, ವೈದ್ಯಕೀಯ ಮತ್ತು ಮನೋವೈದ್ಯ ಸಮಾಜ ಕಾರ್ಯ, ಕುಟುಂಬಗಳೊಂದಿಗಿನ ಕಾರ್ಯ, ಮಹಿಳೆ ಮತ್ತು ಮಕ್ಕಳು ಹಾಗು ಅಪರಾಧಿಗಳು. ಉದ್ಯೋಗಕ್ಕೆ ಸಂಬಂಧಿಸಿದಂತೆ ಮೂರು ವಿಶಾಲ ಕ್ಷೇತ್ರಗಳಾದ ಸರಕಾರಿ, ಸರಕಾರೇತರ ಸಂಸ್ಥೆ(NGO) ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು ಒಳಗೊಂಡಿದೆ. ವೃತ್ತಿ ಪರ ಸಾಮಾಜಿಕ ಕಾರ್ಯಕರ್ತರು ಸರಕಾರದ ವಿವಿಧ ಇಲಾಖೆಗಳ ಮತ್ತು ಸರಕಾರೇತದ ಸಂಸ್ಥೆಗಳ ಆಡಳಿತಾತ್ಮಕ, ನಿರ್ವಹಣೆ ಮತ್ತು ನೀತಿ ನಿರ್ಮಾಣದ ಸ್ಥಾನದಲ್ಲಿ ಕಾಣುವ ಸಾಧ್ಯತೆಗಳಿವೆ. ಅಂತರಾಷ್ಟ್ರೀಯ ಸಂಸ್ಥೆಗಳು ಕೂಡಾ ಸಮಾಜ ಕಾರ್ಯಕ್ಕೆ ವಿಫುಲ ಅವಕಾಶವನ್ನು ಒದಗಿಸುತ್ತಾದೆ.

ಸಾಮಾಜಿಕ ಕಾರ್ಯಕರ್ತನು ವಿವಿಧ ವ್ಯವಸ್ಥೆಯಲ್ಲಿ ಉದ್ಯೋಗವನ್ನು ಪಡೆಯಬಹುದು. ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಲ್ಲಿ, ಮನೋವೈದ್ಯ ವಾರ್ಡುಗಳಲ್ಲಿ, ಶಿಶು ಮಾರ್ಗದರ್ಶನ ಮತ್ತು ವೈದ್ಯಕೀಯ ಸಮಾಜ ಕಾರ್ಯದ ಇತರ ಕ್ಷೇತ್ರಗಳಲ್ಲಿ ಕಾಣಬಹುದು. ಮದ್ಯಪಾನ ಮತ್ತು ಮಾದಕ ವ್ಯಸನ ನಿರ್ಮೂಲನ ಕೇಂದ್ರಗಳಲ್ಲಿ, ರಿಮಾಂಡ್ ಹೋಮ್, ಅನಾಥಾಲಯ, ವೃದ್ಧ ಸದನ, ಕುಟುಂಬ ಕಲ್ಯಾಣ ಸಂಸ್ಥೆ, ಉಪಶಾಮಕ ಕಾಳಜಿ ಸಂಸ್ಥೆಗಳಲ್ಲಿ ಅವರು ಮುಖ್ಯ ಪಾತ್ರ ವಹಿಸುತ್ತಾರೆ. ಶೈಕ್ಷಣಿಕ ಕ್ಷೇತ್ರಗಳಲ್ಲಿ ಶಾಲಾ ಸಾಮಾಜಿಕ ಕಾರ್ಯಕರ್ತನಾಗಿ ಅಥವಾ ಕೌನ್ಸೆಲರ್‍ ಗಳಾಗಿ ಉದ್ಯೋಗಿಗಳಾಗುತ್ತಾರೆ. ಸಮುದಾಯ ಸಂಬಂಧಿ ಸಂಸ್ಥೆಗಳಲ್ಲಿ ಸಮುದಾಯ ಸಂಘಟಕರಾಗಿ ಮತ್ತು ಕ್ಷೇತ್ರ ವಿಸ್ತರಣಾ ಕಾರ್ಯಕರ್ತರ ಪಾತ್ರವನ್ನು ಸಮಾಜಿಕ ಕಾರ್ಯಕರ್ತರು ನಿರ್ವಹಿಸುತ್ತಾರೆ. ಕಾರ್ಪೋರೇಟ್ ವಿಭಾಗದಲ್ಲಿ ಮಾನವ ಸಂಪನ್ಮೂಲ(HR) ಕಲಿತ ವಿದ್ಯಾರ್ಥಿಗಳಿಗೆ ಪ್ರತಿಫಲದಾಯಕವಾದ ಉದ್ಯೋಗಗಳಾದ HR ವೃತ್ತಿಪರತೆ ಮತ್ತು ನಿರ್ವಹಣಾ ಕನ್ಸಲ್ಟೆಂಟ್‍ಗಳಾಗಿ ಲಭಿಸುತ್ತದೆ.

ಅರ್ಹತೆ

ಸಮಾಜ ಕಾರ್ಯವು ಅರ್ಥೈಸುವಿಕೆ ಮತ್ತು ಚಿಂತನೆಯ ವಿಚಾರವಾಗಿ ಪರಿಪಕ್ವತೆಯನ್ನು ಬಯಸುತ್ತದೆ. ನೀವು ನಿಮ್ಮ ವೈಯಕ್ತಿಕ ಆಧ್ಯತೆಗಳು ಮತ್ತು ಪೂರ್ವಾಗ್ರಹಗಳಿಗಿಂತ ಮೇಲೆ ಬೆಳೆಯಬೇಕಾಗಿದೆ. ಜನರನ್ನು ಅವರು ಇರುವಂತೆಯೇ ಒಪ್ಪಿಕೊಳ್ಳಬೇಕಾಗಿದೆ. ಸಮಾಜ ಕಾರ್ಯವು ಜನರೊಂದಿಗೆ ಕೆಲಸ ಮಾಡಲು ಮತ್ತು ಸಾಮಾಜಿಕ ಸಮಸ್ಯೆಗಳನ್ನು ಎದುರುಗೊಳ್ಳಲು ಇಚ್ಛೆ ಇರುವವರಿಗೆ ಪ್ರತಿಫಲದಾಯಿಕವಾದ ವೃತ್ತಿ ಆಗಿದೆ. ಈ ಕ್ಷೇತ್ರವು ನಿಮ್ಮ ಅರ್ಹತೆ ಹಾಗು ವರ್ತನೆಯನ್ನು ಅವಲಂಭಿಸಿದೆ ಮತ್ತು ಇದು ಹೆಚ್ಚಿನ ಸಂತೃಪ್ತಿ ಮತ್ತು ಅರ್ಥವನ್ನು ಹೊಂದಿರುವ ವೃತ್ತಿಯನ್ನು ಅರಸುವವರಿಗಾಗಿದೆ. ಪರಾನುಭೂತಿ, ತಾಳ್ಮೆ ಮತ್ತು ಈ ವೃತ್ತಿಗೆ ಅಗತ್ಯವಿರುವ ವ್ಯತಿರಿಕ್ತ ಸನ್ನಿವೇಶಕ್ಕೆ ಬೇಕಾದ ಸಾಮರ್ಥ್ಯ ಬೃಹತ್ ಪ್ರಮಾಣದಲ್ಲಿ ಅಗತ್ಯವಾಗಿದೆ.

ಸಮಹಾರಗೊಳಿಸಲು, ಇಂದು ವಿವಿಧ ಕ್ಷೇತ್ರಗಳಲ್ಲಿ ಕೆರಿಯರ್ ಅವಕಾಶವನ್ನು ಹೊಂದಿಕೊಂಡು ಬೆಳೆಯುತ್ತಿರುವ ಒಂದು ವೃತ್ತಿಯಾಗಿದೆ ಸಮಾಜ ಕಾರ್ಯ- ಬುಡಕಟ್ಟಿನಿಂದ ಕಾರ್ಪೋರೇಟ್ ಕ್ಷೇತ್ರದವರೆಗೂ ಇದರ ಕಾರ್ಯ ವ್ಯಾಪ್ತಿ ಇದೆ. ವಾಸ್ತವ ಸಂತೃಪ್ತಿ ಏನೆಂದರೆ ಮಾನವ ಕುಲಕ್ಕೆ ಸಹಾಯ ಮಾಡುವ ಮತ್ತು ಹಕ್ಕುಗಳಿಂದ ವಂಚಿತರಾದವರಿಗೆ ಕೆಲಸ ಮಾಡುವುದಾಗಿದೆ.

 

ಕೃಪೆ: ಡೆಕ್ಕನ್ ಹೆರಾಲ್ಡ್

LEAVE A REPLY

Please enter your comment!
Please enter your name here