ಲೇಖಕರು: ಅಬೂಕುತುಬ್  ಮಂಗಳೂರು
 ಸಾಮಾಜಿಕ ಚಿಂತಕರು 

ಓದುವಿಕೆ ಜ್ಞಾನದ ಪ್ರಮುಖ ಬಾಗಿಲಾಗಿದೆ. ಈ ಬಾಗಿಲಿನ ಮೂಲಕ ನಾವು ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ವಿವಿಧ ಕ್ಷೇತ್ರಗಳ ಬಗ್ಗೆ ಅರಿಯಬಹುದು. ದುರದೃಷ್ಟವಶಾತ್ ಇಂದು ಪುಸ್ತಕಗಳ ಸ್ಥಾನದಲ್ಲಿ ಡಿಜಿಟಲ್ ಮಾಧ್ಯಮಗಳ ಹಾವಳಿ ಹೆಚ್ಚಾಗಿದೆ. ಮಕ್ಕಳು ಪುಸ್ತಕಗಳ ಓದುವಿಕೆಗಿಂತ ಡಿಜಿಟಲ್ ಸಾಧನಗಳಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಒಂದು ವೇಳೆ ಅವರು ಪುಸ್ತಕಗಳನ್ನು ಓದುತ್ತಿದ್ದರೂ,ಮಾಧ್ಯಮಗಳು ಹೆಚ್ಚು ಪ್ರಚಾರ ಮಾಡಿರುವ ವಾಣಿಜ್ಯೀಕರಣ ಗೊಳ್ಳುವ ಕೃತಿಗಳನ್ನೇ ಅವರು ಆಯ್ಕೆ ಮಾಡುತ್ತಾರೆ. ವಲ್ರ್ಡ್ ಬುಕ್ ಡೇ ದಿನ ಗಳನ್ನು ಆಚರಿಸುವ ಮೂಲಕ ಓದುವ ಹವ್ಯಾಸವನ್ನು ಬೆಳೆಸಲು ಉತ್ತೇಜನ ನೀಡಲಾಗುತ್ತದೆ. ಮಕ್ಕಳಲ್ಲಿ ಪುಸ್ತಕ ಪ್ರೇಮವನ್ನು ಉಂಟು ಮಾಡುವುದೂ ಇದರ ಉದ್ದೇಶವಾಗಿದೆ. ಮಕ್ಕಳಲ್ಲಿ ಓದುವ ಹವ್ಯಾಸವನ್ನು ಇನ್ನಷ್ಟು ಬೆಳೆಸುವ ಅಗತ್ಯ ಇದೆ.

ಹಿಂದೆ ಮಕ್ಕಳು ದೈಹಿಕ ಶಕ್ತಿ ಸಾಮಥ್ರ್ಯವನ್ನು ವೃದ್ಧಿಸುವ ಆಟೋಟ ಗಳನ್ನು ಆಡುತ್ತಿದ್ದರು ಮತ್ತು ಕೃತಿಗಳ ಮೂಲಕ ತಮ್ಮ ಬೌದ್ಧಿಕ ಬೆಳವಣಿಗೆ ಯನ್ನೂ ಪೂರೈಸುತ್ತಿದ್ದರು. ಇದೊಂದು ರೀತಿಯ ಸಂತುಲಿತ ಪ್ರಕ್ರಿಯೆ ಆಗಿತ್ತು. ಇಂದು ಮಕ್ಕಳು ಒಂದೆಡೆ ವೀಡಿಯೊ ಗೇಮ್ಐಪ್ಯಾಡ್ಟ್ಯಾಬ್ ಮುಂತಾದ ಆಟೋಟಗಳನ್ನು ಮಾತ್ರ ಆಡಿ ಮನ ರಂಜನೆಯನ್ನು ಪಡೆದುಕೊಳ್ಳುತ್ತಾರೆ. ಅದರ ಜೊತೆ ಅವರಲ್ಲಿ ಶಾರೀರಿಕ ಶಕ್ತಿ ಯನ್ನು ವೃದ್ಧಿಸುವ ಆಟೋಟಗಳಲ್ಲಿ ಆಸಕ್ತಿ ಕಡಿಮೆ ಆಗುತ್ತಿದೆ.

ಓದುವ ಹವ್ಯಾಸದಿಂದ ಮಕ್ಕಳಲ್ಲಿ ತಾವು ಓದುತ್ತಿರುವ ಪಾತ್ರಗಳ ಬಗ್ಗೆ ಹೆಚ್ಚು ಆಸಕ್ತಿ ಅನುಕರಣೆ ಉಂಟಾಗು ತ್ತದೆ. ಕಾರ್ಟೂನುಗಳನ್ನು ನೋಡಿದರೂ ಮಕ್ಕಳು ಅದೇ ರೀತಿ ತಮ್ಮ ಸ್ವಭಾವ ಮಾತುಗಳನ್ನು ಪುನರಾವರ್ತನೆ ಮಾಡು ವುದು ಗಮನಕ್ಕೆ ಬಂದಿರಬಹುದು. ಇಂದಿನ ಡಿಜಿಟಲ್ ಭರಾಟೆಯಲ್ಲಿ ಉತ್ತಮ ಪುಸ್ತಕಗಳು ಕೇವಲ ಕಪಾಟು ಗಳಿಗೆ ಸೀಮಿತಗೊಳ್ಳುತ್ತಿವೆ. ಮಾರು ಕಟ್ಟೆಯ ಮತ್ತು ಜಾಹೀರಾತುಗಳ ಕೊರತೆಯೂ ಇದಕ್ಕೆ ಕಾರಣವಾಗಿರ ಬಹುದು. ಇದು ತೃತೀಯ ರಾಷ್ಟ್ರಗಳಲ್ಲಿ ಮಾತ್ರ ಇಂತಹ ಸನ್ನಿವೇಶ ಹೆಚ್ಚು ಕಾಣ ಸಿಗುತ್ತದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ನಮಗಿಂತ ಹೆಚ್ಚು ತಂತ್ರ ಜ್ಞಾನ ಆವಿಷ್ಕಾರಗಳು ಆಗಿದ್ದರೂ ಅವರಲ್ಲಿ ಓದುವಪುಸ್ತಕ ಖರೀದಿಸುವ ಸಂಸ್ಕøತಿಗಳು ಇನ್ನೂ ಕಡಿಮೆ ಆಗಿಲ್ಲ ದಿರುವುದೇ ಅವರ ಮುಂದುವರಿಯು ವಿಕೆಯ ಗುಟ್ಟಾಗಿದೆ.

ಓದುವ ಮಾದರಿಯನ್ನು ರೂಪಿಸಬೇಕು:
ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಯ ಬೇಕಾದರೆ ಮೊದಲು ಹೆತ್ತವರು ಸ್ವತಃ ಅಂತಹ ಮಾದರಿಯನ್ನು ಜೀವನದಲ್ಲಿ ತೋರ್ಪಡಿಸಬೇಕು. ಮಕ್ಕಳಲ್ಲಿ ಹೆತ್ತವರ ದೊಡ್ಡವರ ಅಭ್ಯಾಸಗಳನ್ನು ಅವರು ಅನುಕರಣೆ ಮಾಡುವ ಸ್ವಭಾವ ಇರುತ್ತದೆ. ಓದುವುದರಿಂದ ಸಿಗುವ ಮಾನಸಿಕ ಸಂತೃಪ್ತಿ,ಜ್ಞಾನದ ಹೆಚ್ಚಳವ್ಯಕ್ತಿತ್ವದ ನಿರ್ಮಾಣದ ಕುರಿತು ಮಕ್ಕಳ ಮುಂದೆ ಪ್ರಸ್ತುತ ಪಡಿಸಬೇಕು. ಇದರಿಂದ ಸಿಗುವ ಪ್ರಯೋಜನದ ಬಗ್ಗೆ ಮಕ್ಕಳಲ್ಲಿ ಜಿಜ್ಞಾಸೆ ಮೂಡಿ ಅಂತಹ ಭಾವನೆಗಳನ್ನು ಸೃಷ್ಟಿಸಲು ಪ್ರಯತ್ನ ಪಡಬೇಕು.

ಪುಸ್ತಕ ಪ್ರೇಮವನ್ನು ಚಿಕ್ಕಂದಿನಲ್ಲೇ ಬೆಳೆಸಬೇಕು:
ಮಕ್ಕಳು ಬೆಳೆಯುವ ಹೊತ್ತಿಗೆ ಅವರಲ್ಲಿ ಪುಸ್ತಕ ಪ್ರೇಮವನ್ನು ಬೆಳೆಸ ಬೇಕು. ಅಂತಹ ವಾತಾವರಣವನ್ನು ಮನೆಯಲ್ಲಿ ನಿರ್ಮಾಣ ಮಾಡಬೇಕು. ಮಕ್ಕಳು ನಿದ್ದೆಗೆ ಜಾರುವುದಕ್ಕಿಂತ ಮುಂಚಿತವಾಗಿ ಪುಸ್ತಕಗಳ ಮೇಲೆ ಕಣ್ಣೋಡಿಸುವ ಪರಿಪಾಠ ಬಹಳ ಉತ್ತಮ. ಮಕ್ಕಳಿಗಾಗಿ ಖರೀದಿಸುವ ಆಟಿಕೆಗಳಲ್ಲಿ ವಿವಿಧ ಮನರಂಜನಾ ಪುಸ್ತಕಗಳನ್ನು ಖರೀದಿಸಬೇಕು.

ಜೋರಾಗಿ ಓದುವುದು:
ಮಕ್ಕಳಿಗೆ ಓದುವ ಹವ್ಯಾಸ ಬೆಳೆ ಸುವ ಇನ್ನೊಂದು ಮಾರ್ಗ ಮಕ್ಕಳಿಗೆ ಪುಸ್ತಕ ಗಳನ್ನು ಓದಿ ಕೇಳಿಸುವುದು. ಊಟದ ಸಂದರ್ಭದಲ್ಲಿ ಅಥವಾ ಇನ್ನಿತರ ಬಿಡು ವಿನ ವೇಳೆಯಲ್ಲಿ ಮಕ್ಕಳಿಗೆ ಕಥೆ ಇನ್ನಿತರ ಪ್ರವಾದಿಗಳ ಸಹಾಬಿಗಳ ಸಾಧಕರ ಚರಿತ್ರೆಯನ್ನು ಓದಿ ಕೇಳಿಸಬೇಕು. ಇದು ಸಣ್ಣ ಮಕ್ಕಳಿಗೆ ಸೂಕ್ತ ಕ್ರಮವಾಗಿದೆ. ಇದರಿಂದ ಮಕ್ಕಳಲ್ಲಿ ಪುಸ್ತಕ ಪ್ರೇಮ ಉಂಟಾಗಬಹುದು.

ಮಕ್ಕಳಿಗೆ ಆಯ್ಕೆ ಇರಬೇಕು:
ಮಕ್ಕಳ ಮುಂದೆ ವಿವಿಧ ಪುಸ್ತಕ ಗಳಿರಬೇಕು. ಚಿತ್ರಗಳಿರುವಕ್ವಿಝ್ ಪುಸ್ತಕಗಳುಕಥೆ,ಕವನವಿವಿಧ ಆಟಗಳಿಂದ ಕೂಡಿದ ಪುಸ್ತಕಗಳಿದ್ದರೆ ಮಕ್ಕಳು ತಮ್ಮ ಆಸಕ್ತಿಯಂತೆ ಅವು ಗಳನ್ನು ಆಯ್ಕೆ ಮಾಡುತ್ತಾರೆ. ಇದರಿಂದ ಅವರ ಅಭ್ಯಾಸ ಮತ್ತು ಹವ್ಯಾಸಗಳಲ್ಲಿ ಓದುವಿಕೆಯೂ ಒಳಗೊಳ್ಳುತ್ತದೆ. ಹಾಗೆಯೇ ಪ್ರಾಣಿ ಪಕ್ಷಿಗಳ,ಡೈನಾಸಾರ್ ಗಳವಸ್ತು ಸಂಗ್ರಹಾಲಯ,ನೈಸರ್ಗಿಕ ಇತಿಹಾಸಯಾತ್ರಾ ಸ್ಥಳಗಳ ಮಾಹಿತಿ ನೀಡುವ ಪುಸ್ತಕಗಳೂ ಬಹಳ ಪ್ರಯೋಜನಕಾರಿಯಾಗಿದೆ.

ಲೈಬ್ರೆರಿ ಭೇಟಿ :
ಮಕ್ಕಳನ್ನು ಮಾಲ್‍ಗಳಿಗೆವಿಹಾರ ಸ್ಥಳಗಳಿಗೆ ಕೊಂಡು ಹೋಗುತ್ತೇವೆ. ಅದೇ ಸಂದರ್ಭದಲ್ಲಿ ಸಣ್ಣ ವಯಸ್ಸಲ್ಲೇ ಅವರನ್ನು ಲೈಬ್ರೆರಿಗಳಿಗೆ ಭೇಟಿ ನೀಡುವಂತೆ ಮಾಡಬೇಕು. ಅವರಿಗಾಗಿ ಪ್ರತ್ಯೇಕವಾಗಿ ವ್ಯವಸ್ಥೆಗೊಳಿಸಲಾಗಿರುವ ಮಕ್ಕಳ ವಿಭಾಗವನ್ನು ತೋರಿಸಬೇಕು. ಅದರಿಂದ ಇಷ್ಟವಾಗುವ ಪುಸ್ತಕಗಳನ್ನು ಪಡೆಯುವಂತೆ ಪ್ರೇರೇಪಿಸಬೇಕು ಮತ್ತು ಅದಕ್ಕಾಗಿ ಸಹಾಯ ಮಾಡಬೇಕು.

ಸ್ವಯಂ ಗ್ರಂಥಾಲಯ:
ಮಕ್ಕಳ ಹೆಸರಿಗೆ ಅವರದೇ ಆದ ಲೈಬ್ರರಿ ಯನ್ನು ವ್ಯವಸ್ಥೆ ಮಾಡಬೇಕು. ಅದರಲ್ಲಿ ಅವರು ಓದುವ ಪುಸ್ತಕಗಳುಓದಿ ಮುಗಿಸಿದ ಪುಸ್ತಕಗಳು ಎಲ್ಲವೂ ಇರಬೇಕು. ಹೀಗೆ `ಪುಸ್ತಕ ನಿಧಿ’ ಎಂಬ ಪರಿಕಲ್ಪನೆಯನ್ನು ಮಕ್ಕಳಲ್ಲಿ ಬೆಳೆಸಬೇಕು. ಮಕ್ಕಳ ಬಟ್ಟೆ ಬರೆಗಳಿಗಾಗಿ ಹಣ ನೀಡುವಂತೆ ಮಕ್ಕಳ ಬೌದ್ಧಿಕ ಬೆಳವಣಿಗೆಗಾಗಿ ಕೇವಲ ಪುಸ್ತಕ ಖರೀದಿ ಗೆಂದೇ ಮಕ್ಕಳಿಗೆ ಹಣವನ್ನು ನೀಡಿ ಗೌರವಿಸ ಬೇಕು. ಹೀಗೆ ಅವರ ಗ್ರಂಥಾಲಯವನ್ನು ಆಧುನೀಕರಿ ಸುತ್ತಿರಬೇಕು. ಹಾಗೆಯೇ ಮಕ್ಕಳ ಗ್ರಂಥಾಲಯಕ್ಕೆ ಉಡುಗೊರೆಯನ್ನು ನೀಡಬೇಕು. ಈದ್‍ನ ಸಂದರ್ಭದಲ್ಲಿ,ಫಲಿತಾಂಶದ ಸಂದರ್ಭದಲ್ಲಿ ವಿಶೇಷ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬೇಕು.

ಮಕ್ಕಳ ಹೆಸರಿಗೆ ಮ್ಯಾಗಝಿನ್ ತರಿಸುವುದು:
ಮಕ್ಕಳ ಹೆಸರಿಗೆ ಮ್ಯಾಗಝಿನ್ ಮತ್ತು ಪತ್ರಿಕೆಗಳನ್ನು ಮನೆಗೆ ತರಿಸಬೇಕು. ಚಿಕ್ಕ ವಯಸ್ಸಿನಲ್ಲಿ ತಮ್ಮ ಹೆಸರಿಗೆ ಬರುವ ಪತ್ರಿಕೆಗಳನ್ನು ನೋಡಿ ಅವರಿಗೆ ತುಂಬಾ ಖುಷಿಯಾಗುತ್ತದೆ ಮತ್ತು ಮನೆಯಲ್ಲಿ ತಮಗೂ ಗೌರವ ಸಿಗುತ್ತದೆ ಎಂಬ ಭಾವನೆ ಮೂಡುತ್ತದೆ. ಖುರ್ರಮ್ ಮುರಾದ್‍ರವರ ಮನೆಗೆ ಅವರ ಹೆಸರಿನಲ್ಲಿ ಪತ್ರಿಕೆಗಳು ಬರುತ್ತಿತ್ತು. ಅದನ್ನು ತೆಗೆದು ಓದಲು ವಿಶೇಷವಾದ ಆಸಕ್ತಿಯನ್ನು ಅವರು ತೋರಿಸುತ್ತಿದ್ದರು.
ಹೀಗೆ ಹೆತ್ತವರು ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸಬೇಕು. ಹಿಂದೆ ಮನೆಗಳಿಗೆ ಪ್ರವೇಶಿಸಿದ ಕೂಡಲೇ ಶೋಕೇಸ್‍ನಲ್ಲಿ ಪುಸ್ತಕಗಳನ್ನು ಕಾಣಬಹುದಿತ್ತು. ಆದರೆ ಇಂದು ಆಟಿಕೆಗಳು,ಅಂದ ಚೆಂದದ ಗೊಂಬೆಗಳು ಕಾಣುತ್ತಿವೆ. ಇವುಗಳು ವೈಚಾರಿಕ ಅಧಃಪತನಕ್ಕೆ ಕಾರಣವಾಗ ಬಹುದು. ಜೀವನಜೀವನ ಧ್ಯೇಯ ಮತ್ತು ಜೀವನದ ಗುರಿಯ ಬಗ್ಗೆ ಅವರಿಗೆ ಅಂತಹುದೇ ಕಲ್ಪನೆ ಮೂಡಬಹುದು.
ಮಕ್ಕಳಿಗೆ ನೀಡುವ ಅತ್ಯುತ್ತಮ ಉಡುಗೊರೆ ಶಿಕ್ಷಣ ಮತ್ತು ತರಬೇತಿ ಯಾಗಿದೆ” ಎಂದು ಪ್ರವಾದಿ(ಸ) ಹೇಳಿದ್ದಾರೆ. ಓದುವಿಕೆ ತರಬೇತಿಯಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸುತ್ತದೆ. ಒಂದು ಪುಸ್ತಕ ಓದುವುದಕ್ಕೆ ಮುಂಚೆ ಒಂದು ವ್ಯಕ್ತಿತ್ವ ಇದ್ದರೆ ಆ ಪುಸ್ತಕವನ್ನೂ ಓದಿದ ಬಳಿಕ ವ್ಯಕ್ತಿತ್ವ ಬದಲಾಗಿರುತ್ತದೆ. ಮಾಹಿತಿಯಲ್ಲಿ,ಬುದ್ಧಿಯಲ್ಲಿಯುಕ್ತಿ ಯಲ್ಲಿ,ಮಾನಸಿಕತೆಯಲ್ಲಿ ಬೆಳವಣಿಗೆ ಬದಲಾವಣೆಯುಂಟಾಗುತ್ತದೆ. ಜಗತ್ತಿನಲ್ಲಿ ಅಪ್ರತಿಮ ಸಾಧನೆ ಮಾಡಿದವರೆಲ್ಲಾ ಓದುವ ಹವ್ಯಾಸವನ್ನು ಹೊಂದಿದ್ದರು. ಈ ನಿಟ್ಟಿನಲ್ಲಿ ಮಕ್ಕಳಿಗೆ ಈ ಕ್ಷೇತ್ರದಲ್ಲಿ ಬಂಡವಾಳ ಹೂಡುವ ಅಗತ್ಯವಿದೆ. ಈ ಬಂಡವಾಳವು ನಿರಂತರ ಫಲ ನೀಡುವ ಬಂಡವಾಳವಾಗಿದೆ.

1 COMMENT

  1. ಉತ್ತಮ ಲೇಖನ. ಹಲವಾರು ಮಾಹಿತಿಯನ್ನು ನೀಡುತ್ತದೆ. ಶಿಕ್ಷಕರು ಹಾಗೂ ಪಾಲಕರಿಗೆ ಉಪಯುಕ್ತ

LEAVE A REPLY

Please enter your comment!
Please enter your name here