ರಿಯಾಝ್ ಅಹ್ಮದ್ ಸಂಶೋಧಕರು, ಸೆಂಟರ್ ಫಾರ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಅನಾಲಿಸೀಸ್

ಕಂಠಪಾಠದ ಕಲಿಕೆ ಎಂಬುವುದು ಅರ್ಬುದ ರೋಗ ಇದ್ದಂತೆ. ಅದು ಶಾಲೆಗೆ ಹೋಗುತ್ತಿರುವ ಭಾರತದ 250 ಮಿಲಿಯನ್ ಮಕ್ಕಳ ಭವಿಷ್ಯವನ್ನು ನುಂಗಿಬಿಡುತ್ತದೆ.

“ನಾಲ್ಕು ಸ್ನೇಹಿತರು ಚಿತ್ರಮಂದಿರಕ್ಕೆ ಹೋಗಿ, ಒಂದೇ ಸಾಲಿನಲ್ಲಿ ಜೊತೆಯಾಗಿ ಕುಳಿತುಕೊಳ್ಳಲು ಯಾವೆಲ್ಲಾ ದಾರಿಗಳಿಂದ ಸಾಧ್ಯ? ಎಂಬುವುದನ್ನು ನನಗೆ ತೋರಿಸಿರಿ.”

ಈ ಸಾಮಾನ್ಯ ಪ್ರಶ್ನೆಯನ್ನು ಒಬ್ಬ ಪರೀಕ್ಷಣಾಧಿಕಾರಿ 10 ವರ್ಷಗಳ ಹಿಂದೆ ನಮ್ಮ ಶಾಲೆಗೆ ಬಂದಾಗ ಕೇಳಿದ್ದು ನನ್ನನ್ನು ಕಾಡಿತು. ಆರಂಭದಲ್ಲಿ ಇದು ಸರಳ ಎಂಬಂತೆ ತೋಚಿತು. ನಾನು “4 ಕ್ರಮಗುಣಿತದ(4 x 3 x 2 x 1) ಸಮೀಕರಣ 24” ಎಂದು ಉತ್ತರಿಸಿದೆ. ಇದು ನಾನು 8ನೇ ತರಗತಿಯಿಂದ ಕಂಠಪಾಠಗೊಳಿಸಿದ್ದ ಸೂತ್ರವಾಗಿತ್ತು. ನಂತರದಲ್ಲಿ ಮತ್ತೋರ್ವ ಪರೀಕ್ಷಣಾಧಿಕಾರಿ ಅದನ್ನು ಸ್ವಲ್ಪ ಬೆಳೆಸಿ, “ಈ ನಾಲ್ಕು ಬಣ್ಣದ ಮಣಿಗಳನ್ನು ತೆಗೆದುಕೊಳ್ಳಿರಿ, ಈ ಮೂಲಕ ನೀವು ಯಾವ ರೀತಿಯಾಗಿ ಉತ್ತರವನ್ನು ಕಂಡುಕೊಳ್ಳುವಿರೆಂದು ನಾನು ನೋಡಬಯಸುತ್ತೇನೆ” ಎಂದರು. ನನಗೆ ಏನೂ ಹೊಳೆಯಲಿಲ್ಲ. ಈ ಮಣಿಗಳನ್ನು ಯಾವ ರೀತಿಯಾಗಿ ಜೋಡಿಸಬೇಕೆಂದು ನನಗೆ ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ನಾನು ಗಣಿತದ ಸೂತ್ರಗಳನ್ನು ಅದರ ಅರ್ಥವೇನೆಂದು ತಿಳಿಯದೆಯೇ ಅದನ್ನು ಕಂಠಪಾಠ ಮಾಡಿಕೊಂಡಿದ್ದೆ. ನಾನು ಶಾಲೆ ಮುಗಿಸಿ ಇಂದಿಗೆ 10 ವರ್ಷ ಕಳೆದರೂ ಯಾವುದೇ ಹೆಚ್ಚಿನ ಬದಲಾವಣೆಗಳಾಗಲಿಲ್ಲ.

ಕಂಠಪಾಠದ ಕಲಿಕೆ ಎಂಬುವುದು ಅರ್ಬುದ ರೋಗವಿದ್ದಂತೆ. ಅದು ಶಾಲೆಗೆ ಹೋಗುತ್ತಿರುವ ಭಾರತದ 250 ಮಿಲಿಯನ್ ಮಕ್ಕಳ ಭವಿಷ್ಯವನ್ನು ನುಂಗಿಬಿಡುತ್ತದೆ. ಶೇಕಡಾ 10ರ ರಿಯಾಯಿತಿಯಲ್ಲಿ ಮಾರಲಾದ ಅಂಗಿಯೊಂದರ ಬೆಲೆಯನ್ನು ಲೆಕ್ಕ ಹಾಕಲು 14 ರಿಂದ 18 ವರ್ಷದ ಮಕ್ಕಳಲ್ಲಿ ಕೇವಲ 40 ಶೇಕಡಾ ಮಕ್ಕಳಿಗೆ ಮಾತ್ರ ಸಾಧ್ಯವಾಗುತ್ತದೆ. ಶೇಕಡಾ 60ಕ್ಕಿಂತ ಕಡಿಮೆ ಮಕ್ಕಳಿಗೆ ಮಾತ್ರ ಅನಲಾಗ್ ಗಂಟೆಯಲ್ಲಿ ಸಮಯವನ್ನು ಅರಿಯಲು ತಿಳಿದಿದೆ. ಇದು ಪ್ರಥಮ್ ಶಿಕ್ಷಣದ ವಾರ್ಷಿಕ ಸ್ಥಿತಿ(ಏಸರ್)2017ರ ವರದಿಯು ಕಂಡುಕೊಂಡ ದುಃಖಕರವಾದ ಸಂಗತಿಗಳಾಗಿವೆ. ಉತ್ತಮವೆಂದು ಪರಿಗಣಿಸಲಾಗಿರುವ ಖಾಸಗಿ ಶಾಲೆಯ ಸ್ಥಿತಿಯು ಹೆಚ್ಚೇನು ಹೇಳುವಂತಿಲ್ಲ. 2008ರಲ್ಲಿ ವಿಪ್ರೋ ಎಜುಕೇಶನಲ್ ಇನಿಶಿಯೇಟಿವ್ಸ್ ನಡೆಸಿದ ಅಧ್ಯಯನದಂತೆ ಕ್ರಿಟಿಕಲ್ ಗಣಿತ ಮತ್ತು ವಿಜ್ಞಾನದ ತತ್ವಗಳಲ್ಲಿ ಅಂತರಾಷ್ಟ್ರೀಯ ಗುರುತಿಸಿವಿಕೆಯನ್ನು ಕಂಡುಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ.

ಹೆಚ್ಚಿನೆಲ್ಲಾ ಭಾರತೀಯ ಪದವೀಧರರು ಉರು ಹಚ್ಚುವುದರ ಮೂಲಕ ಕಲಿಯುವುದನ್ನು ಶಾಲೆಯಿಂದ ಕಾಲೇಜುವರೆಗೆ ಮುಂದುವರಿಸುತ್ತಾರೆ. ಆದ್ದರಿಂದ ಅವರು ಆಧುನಿಕ ಉದ್ಯೋಗಗಳು ಬಯಸುವ ಚಿಂತನಾ ಕೌಶಲ್ಯದೊಂದಿಗೆ ಹೊಂದಿಕೊಳ್ಳಲು ಅಸಮರ್ಥರಾಗುತ್ತಾರೆ. ಎಕಾನಾಮಿಸ್ಟ್ ಮ್ಯಾಗಝಿóನ್ ಮಾಡಿರುವ ವರದಿಯಂತೆ ಭಾರತದ ಇಂಜಿನಿಯರ್ ಪದವೀಧರರಲ್ಲಿ ಕೇವಲ ಶೇಕಡಾ 25ಕ್ಕಿಂತ ಕಡಿಮೆ ಅಭ್ಯರ್ಥಿಗಳು ಉದ್ಯೋಗಕ್ಕೆ ಅರ್ಹರಾಗಿದ್ದಾರೆ. ಮ್ಯಾಟ್ಲ್ ನಡೆಸಿರುವ ಅಧ್ಯಯನ ತಿಳಿಸುವಂತೆ, ಉತ್ಪಾದನಾ ಉದ್ಯಮಕ್ಕೆ ಅಗತ್ಯವಿರುವ ಸಾಫ್ಟ್‍ವೇರ್ ಇಂಜಿನಿಯರ್‍ಗಳಲ್ಲಿ ಶೇಕಡಾ 5ಕ್ಕಿಂತ ಕಡಿಮೆ ಇಂಜಿನಿಯರುಗಳಿಗೆ ಮಾತ್ರ ವಿಶ್ಲೇಷಣಾತ್ಮಕತೆಯ ಕೌಶಲ್ಯವಿದೆ.

ಕಂಠಪಾಠದ ಕಲಿಕಾ ಪದ್ಧತಿಯು ಯಾಕೆ ಉಳಿದುಕೊಂಡಿದೆ. ಪಠ್ಯ ಪುಸ್ತಕದಲ್ಲಿ ಏನಿದೆ ಎಂಬುದನ್ನು ಮಕ್ಕಳಿಗೆ ತಿಳಿಸುವುದು ಮತ್ತು ಅವರು ಅದನ್ನು ಕಂಠಪಾಠ ಮಾಡಿ ಪುನರುತ್ಪತಿ ಮಾಡುವ ಅಭ್ಯಾಸವು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿರುವ ಕಠಿಣ ವಿಲಕ್ಷಣವಾಗಿದೆ.

‘ಹೇಳುವುದು’- ಇದು ಶಿಕ್ಷಕರಿಂದ ವಿದ್ಯಾರ್ಥಿಗಳೆಡಗೆ ಮಾಹಿತಿ ಪ್ರಸಾರವಾಗುವ ಒಂದು ವಿಧ ಮತ್ತು ಭಾರತದ ಹೆಚ್ಚಿನೆಲ್ಲಾ ತರಗತಿಗಳು ಇದೇ ರೀತಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಸಮಾಜದಲ್ಲಿ ವಯಸ್ಕರು-ಮಕ್ಕಳ ನಡುವೆ ನಡೆಯುವ ಸಂವಹನ ಇದೇ ಪ್ರಬಲ ರೂಢಿಯಲ್ಲಿಯಾಗಿದೆ. ವಯಸ್ಕರು ಮಕ್ಕಳಿಗೆ ಸೂಚನೆಯನ್ನು ಕೊಡುತ್ತಾ ಮತ್ತು ಅದನ್ನು ಪುನರಾವರ್ತಿಸುತ್ತಾ ಇರುತ್ತಾರೆ. ಹಾಗೆ ಮಕ್ಕಳು ಮಾಹಿತಿಯನ್ನು ಅರ್ಥೈಸದೆ, ಅವಲೋಕಿಸದೇ ಮತ್ತು ವಿಮರ್ಶಿಸದೇ ಹೀರಿಕೊಳ್ಳುತ್ತಾರೆ. ಅದು ಸ್ವತಃ ಕಲಿಯುವ ಅವರ ಸಾಮಥ್ರ್ಯವನ್ನು ಕುಂಠಿತಗೊಳಿಸುತ್ತದೆ.

ನಮ್ಮ ಪಠ್ಯಕ್ರಮವು ಭಾರೀ ಪಾಠ ಪುಸ್ತಕಗಳಿಂದ ಘಟನೆಗಳನ್ನು, ಸೂತ್ರಗಳನ್ನು ಮತ್ತು ವ್ಯಾಖ್ಯೆಗಳನ್ನು ಕಂಠಪಾಠ ಮಾಡಲು ಒತ್ತಾಯಿಸುತ್ತದೆ. ನ್ಯಾಶನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಟ್ರೈನಿಂಗ್ ನ ಪ್ರಾಥಮಿಕ ಶಿಕ್ಷಣದ ಬೋಧನಾ ಕ್ರಮ ಮೇಲೆ ನಡೆಸಿರುವ ಅಧ್ಯಯನದಂತೆ ಕೇವಲ 14% ಭಾರತೀಯ ತರಗತಿಗಳು ಪಾಠ ಪುಸ್ತಕಗಳ ಹೊರತಾಗಿರುವ ಬೋಧನಾ ಪರಿಕರಗಳನ್ನು ಉಪಯೋಗಿಸುತ್ತಾರೆ. ಮಕ್ಕಳು ಭಾಗಾಕಾರದ ಪರಿಕಲ್ಪನೆಯನ್ನು ಬೇರ್ಪಡಿಸುವಿಕೆಯ ಚಿಹ್ನೆ “¼”  ಪಾಠ ಪುಸ್ತಕದಲ್ಲಿ ಕಂಡ ಕೂಡಲೇ ಒಳಗೊಳ್ಳುತ್ತಾರೆ. ಆದರೆ, ನಿಜ ಜೀವನದ ವಿಷಯದಲ್ಲಿ ಇದೇ ನಾಲ್ಕನೆಯ ಒಂದು ಪರಿಕಲ್ಪನೆಯನ್ನು ಒಳಗೊಳ್ಳಲು ಕಷ್ಟಪಡುತ್ತಾರೆ.

ಪರೀಕ್ಷಾ ವ್ಯವಸ್ಥೆಯು ಪಠ್ಯ ಪುಸ್ತಕದ ವಿಷಯವನ್ನು ಪುನರುತ್ಪತಿ ಮಾಡುವುದಕ್ಕೆ ಫಲಿತಾಂಶವನ್ನು ಕೊಡುತ್ತದೆ ಹೊರತು ಸ್ವತಂತ್ರ ತಾರ್ಕಿಕತೆಗೆ ಅಲ್ಲ. ಬ್ರಿಟಿಷ್ ಶಿಕ್ಷಣ ಸಂಶೋಧಕನಾದ ನಿವ್ಯೂಮಾನ್ ಬರ್ಡೇಟ್ಟ್‍ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(ಅಃSಇ) ಯ ಪ್ರಶ್ನೆ ಪತ್ರಿಕೆಗಳ ಅಧ್ಯಯನ ನಡೆಸಿದನು. ಆತನ ಕಂಡುಕೊಳ್ಳುವಿಕೆಯಂತೆ ಅಃSಇ ಯು ಹೆಚ್ಚಾಗಿ ಘಟನೆಗಳ ನೇರ ಪುನರುತ್ಪತಿ ಮತ್ತು ಹಳೇ ಪ್ರಶ್ನೆಗಳ ಶೈಲಿಯ ಪುನರಾವರ್ತನೆಯನ್ನೇ ಬಯಸುತ್ತದೆ. ಕೇವಲ ಕೆಲವೇ ಪ್ರಶ್ನೆಗಳು ಅವಲೋಕನಾತ್ಮಕ ತಾರ್ಕಿಕತೆಯನ್ನು ಗಮನಿಸುತ್ತದೆ. ಮಕ್ಕಳಿಗೆ “ಪರೀಕ್ಷೆಗೆಂದು ಕಲಿಸಲಾಗುವುದು” ಅದರಲ್ಲಿ ಪ್ರಶ್ನೆಗಳ ಶೈಲಿಯನ್ನು ಮತ್ತು ಸೂತ್ರಗಳನ್ನು ತುಂಬಬೇಕಿರುವುದನ್ನು ತಿಳಿಸಲಾಗುತ್ತದೆ ಎಂಬುದರಲ್ಲಿ ಆಶ್ಚರ್ಯ ಪಡಬೇಕಿಲ್ಲ.

ಕಂಠಪಾಠದ ಕಲಿಕೆಯಲ್ಲಿಯೂ ಕೂಡಾ ಖಂಡಿತವಾಗಿಯೂ ಚಾಂಪಿಯನ್‍ಗಳ ಪಾಲಿದೆ. ಹೆಚ್ಚಿವುಗಳು ಲೋಲಕವು ಇನ್ನೊಂದು ದಿಕ್ಕಿನಲ್ಲಿ ಅತಿಯಾಗಿ ತೇಲಾಡುವ ಪಶ್ಚಿಮದಲ್ಲಾಗಿದೆ. ಟೆಡ್ ಹಾರ್ಲೀ ಎಂಬ ಬ್ರಿಟಿಷ್ ಗಣಿತಜ್ಞನು ಕೇಳುತ್ತಾನೆ, ಯೋಜನೆ ಮತ್ತು ಅನ್ವೇಷನೆಯ ವಿಧಾನಗಳ ಮೂಲಕ ಸಾವಿರಾರು ವರ್ಷಗಳ ಸಮಯ ತೆಗೆದು ಅಭಿವೃದ್ಧಿ ಪಡಿಸಿದ ವಿಷಯದ ಮೂಲಭೂತ ವಿಚಾರವನ್ನು ನಾವು ಅನ್ವೇಷಿಸಲು ಮತ್ತು ಕಲಿಯಲು ಸಾಧ್ಯವೇ? ಖಂಡಿತವಾಗಿಯೂ, ಪ್ರಕೃತಿಯ ಎಲ್ಲಾ ನಿಯಮಗಳನ್ನು ಮಕ್ಕಳು ಅವರಷ್ಟಕ್ಕೆ ಅನ್ವೇಷಿಸಲು ಕಷ್ಟವಾಗಬಹುದು. ಭಾರತದಲ್ಲಿ ವಿದ್ಯಾರ್ಥಿಗಳು ವಿಜ್ಞಾನವನ್ನು ಪುಸ್ತಕದಿಂದಲೂ ಮತ್ತು ಅಲ್ಪಭಾಗವನ್ನು ಪ್ರಯೋಗ ಮಾಡುತ್ತಾ ಕಲಿಯುತ್ತಾರೆ. ಆದ್ದರಿಂದ ಹೆಚ್ಚಿನ ಸಂದರ್ಭಗಳಲ್ಲಿ ಅವರಿಗೆ ತತ್ವಗಳ ಕುರಿತು ಆಳವಿಲ್ಲದ ಜ್ಞಾನವು ಲಭಿಸುತ್ತದೆ. ಮಾನಸಿಕ ಅಂಕಗಣಿತದಂತಹ ನಿರಂತರವಾಗಿ ಅಭ್ಯಾಸ ಮಾಡುವ ಕಾರ್ಯವು “ಕ್ರಿಯಾ ಸ್ಮರಣೆಯನ್ನು”(Woಡಿಞiಟಿg ಒemoಡಿಥಿ)  ಸ್ವತಂತ್ರಗೊಳಿಸುತ್ತದೆ ಎಂದು ಅಮೇರಿಕಾದ ಜ್ಞಾನ ಮೀಮಾಂಸ ವಿಜ್ಞಾನಿ ಹೆಲೆನ್ ಅಬದ್ಝೀಯವರು ವಾದಿಸುತ್ತಾರೆ. ಇದು ಹೆಚ್ಚಿನ ಪ್ರಭಾವದ ಸಮಸ್ಯೆಯನ್ನು ಬಗೆಹರಿಸಲು ಸಹಕಾರ ನೀಡುತ್ತದೆ ಎಂದು ಆಕೆ ಹೇಳುತ್ತಾಳೆ. ಕೆಲವರು ಇದನ್ನು ವಿರೋಧೀಸುತ್ತಾ, ಮಗ್ಗಿಯನ್ನು ಕಂಠಪಾಠ ಮಾಡುವುದು ಸಮಸ್ಯೆಯನ್ನು ವೇಗವಾಗಿ ಬಗೆಹರಿಸಲು ಸಹಕಾರಿ ಎಂದೂ ವಾದಿಸಬಹುದು. ಭಾರತದಲ್ಲಿ ಹೆಚ್ಚಿನ ಮಕ್ಕಳು “ಮೂರು ಎರಡ್ಲಿ ಆರು” ಎಂದು ಬಾಯಿ ಪಾಠವಾಗಿ ಹೇಳುತ್ತಾರೆ. ಆದರೆ, ಕೆಲವರು ಮಾತ್ರ ಅದು ಎರಡನ್ನು ಮೂರು ಸಲ ಕೂಡಿಸಿದರೂ ಅದುವೇ ಎಂದು ಅರಿತಿದ್ದಾರೆ. ಆದ್ದರಿಂದ ಮಗ್ಗಿಯಲ್ಲಿ ಸಣ್ಣ ಪದ ವ್ಯತ್ಯಾಸವಾದರೂ ಅವರು ಗಲಿಬಿಲಿಗೊಳ್ಳುತ್ತಾರೆ.

ವಿಷಯದ ಕಂಠಪಾಠ, ಉಪದೇಶಾತ್ಮಕ ಸೂಚನೆ ಮತ್ತು ಕಲಿಕೆಯ ಸ್ಥಳದಲ್ಲಿ ಕಟ್ಟುನಿಟ್ಟಿನ ಶಿಸ್ತು. ಆದರೆ, ಅದು ಇಡೀ ಕಲಿಕಾ ಸಮಯವನ್ನು ಉಪಯೋಗಿಸಿಕೊಳ್ಳುವುದಿಲ್ಲ. ಮೆಕ್‍ಕಿನ್ಸೀ ಮಾಡಿರುವ ಪಿಸಾ ದ ಆವಲೋಕನದಂತೆ ಬೇರೆ-ಬೇರೆ ಶಿಕ್ಷಕರು ಬೋಧಿಸಿ ಮತ್ತು ವಿಚಾರಣಾಧಾರಿತ ಸೂಚನೆಯಿಂದ ಉತ್ತಮ ಫಲಿತಾಂಶ ಲಭಿಸುತ್ತದೆ. ಪಠ್ಯಕ್ರಮವು ಕಡಿಮೆ ವಿಷಯ ಕೇಂದ್ರಿತವಾಗಿರಬೇಕು. ಆದರೆ, ಆಳವಾದ ವಿಷಯ ವಿಚಾರವನ್ನು ಹೊಂದಿರಬೇಕು. ವಿವಿಧ ಅನುಭವ ಕಲಿಕೆಯ ಜೊತೆಗೆ ಪಾಠ ಪುಸ್ತಕವನ್ನು ಉಪಯೋಗಿಸಿಕೊಳ್ಳಬೇಕು. ಪರೀಕ್ಷೆಗಳು ತರ್ಕ ಬದ್ಧತೆಯ ಕೌಶಲ್ಯವನ್ನು ಪರಿಶೀಲಿಸಬೇಕೇ ಹೊರತು ಕೇವಲ ವಸ್ತುಸ್ಥಿತಿಯ ಪುನರ್ ಸಂಗ್ರಹವನ್ನಲ್ಲ.

ಪ್ರತಿಯೊಬ್ಬ ಮಗುವು ಕಂಠಪಾಠದಿಂದ ಹೊರತಾದ ಶಿಕ್ಷಣವನ್ನು ಪಡೆಯಲು ಅರ್ಹನಾಗಿದ್ದಾನೆ. ಮತ್ತು ನಮ್ಮ ಅನುಭವದಂತೆ ಕಂಠಪಾಠದ ಕಲಿಕೆಗೆ ಗುಣೌಷಧಿಯಿದೆ ಎಂದು ತೋರಿಸುತ್ತದೆ.

 

 

1 COMMENT

LEAVE A REPLY

Please enter your comment!
Please enter your name here