ಹೇಡಿ ಸಾವರ್ಕರ್ ವೀರನಾದ ಕಥೆ ಭಾಗ -೩

  • ಸುವರ್ಣ ಹರಿದಾಸ್

ರಾಷ್ಟ್ರೀಯ ಚಳವಳಿಗೆ ಹಿಂದಿನಿಂದ ತಿವಿದ ಸಾವರ್ಕರ್ :
ಹಿಂದೂ ಮಹಾಸಭಾ ಮತ್ತು ಸಾವರ್ಕರ್ ಅವರ ದೇಶಭಕ್ತಿ ಅಲ್ಲಿಗೆ ಮುಗಿಯುವುದಿಲ್ಲ. ಹಿಂದೂ-ಮುಸ್ಲಿಂ ಐಕ್ಯತೆಯನ್ನು ಮುರಿದು ಕೋಮುವಾದವನ್ನು ಉತ್ತೇಜಿಸುವ ಅವರ ಪ್ರಯತ್ನಗಳ ಜೊತೆಗೆ, ಸಾವರ್ಕರ್ ಅವರು ಕಾಂಗ್ರೆಸ್ ಮತ್ತು ಕಾಂಗ್ರೆಸ್ ನೇತೃತ್ವದ ಸ್ವಾತಂತ್ರ್ಯ ಚಳವಳಿಯನ್ನು ವಿರೋಧಿಸಲಾರಂಭಿಸಿದನು. 1942 ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸುವ ಬದಲು, ಸಾವರ್ಕರ್ ನೇತೃತ್ವದ ಹಿಂದೂ ಮಹಾಸಭಾ ಬ್ರಿಟಿಷ್ ಸರ್ಕಾರಕ್ಕೆ ಬೆಂಬಲ ಘೋಷಿಸಿತು. ಕಾಂಗ್ರೆಸ್ ಹೋರಾಟಗಳಿಗಿಂತ ಬ್ರಿಟಿಷರೊಂದಿಗಿನ ಪ್ರಾಯೋಗಿಕ ರಾಜಕೀಯ ಸಹಕಾರವು ಹೆಚ್ಚು ಅಪೇಕ್ಷಣೀಯ ಮತ್ತು ಉಪಯುಕ್ತವಾಗಿದೆ ಎಂಬುದು ಸಾವರ್ಕರ್ ಅವರ ಸಮರ್ಥನೆ.

ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಗಾಂಧೀಜಿ ಸಾವರ್ಕರ್ ಅವರನ್ನು ಭೇಟಿ ಮಾಡಿ ತಮ್ಮ ಸಂಘಟನೆಯ ಬೆಂಬಲವನ್ನು ಕೋರಿದರು. ಸಭೆಯ ನಂತರ ಗಾಂಧಿ ಬಗ್ಗೆ ಬರೆದಿದ್ದಾರೆ:
“ನಾನು ಸಾವರ್ಕರ್ ಮತ್ತು ಅವರ ಸ್ನೇಹಿತರಿಂದ ಬೆಂಬಲವನ್ನು ಕೋರಲು ಪ್ರಯತ್ನಿಸಿದೆ. ನಾನು ಸಾವರ್ಕರ್ ಅವರ ಮನೆಗೆ ಹೋದೆ. ಅವನ ಬೆಂಬಲ ಸಿಗುತ್ತದೆ ಎಂದು ನಾನು ಆಶಿಸುತ್ತಿದ್ದೆ ಆದರೆ ನಾನು ವಿಫಲವಾಗಿದೆ.” (ಮಹಾತ್ಮಾಗಾಂಧಿ, Collected Works of Mahathma Gandhi. Vol.70)

ಹಿಂದೂ ಮಹಾಸಭೆಯ ಮತ್ತು ಸಾವರ್ಕರನ ಅಭಿಪ್ರಾಯ 1942ರ ಹಿಂದೂ ಮಹಾಸಭಾ ಅಧಿವೇಶನದಲ್ಲಿ ಘೋಷಿಸಲಾಯಿತು.
“ನಾನು ನನ್ನ ಹಿಂದೂ ಸಹೋದರರಿಗೆ ಸರಿಯಾದ ಕರೆಯನ್ನು ಕೊಡುತ್ತೇನೆ. ನಿಮ್ಮಲ್ಲಿ ಯಾರಿಗಾದರೂ ಸರಕಾರಿ ಕೆಲಸ, ಸರಕಾರದಲ್ಲಿ ಉಪಕಾರವಿರುವುದಾದರೆ ಅದನ್ನು ಭದ್ರಪಡಿಸಿ ಅದೇ ಸ್ಥಾನದಲ್ಲಿ ಮುಂದುವರಿದು ತನ್ನ ದಿನದ ಕೆಲಸದಲ್ಲಿ ಮುಂದುವರಿಯಬೇಕು.”

1942 ರಲ್ಲಿ ಸುಭಾಷ್ ಚಂದ್ರ ಬೋಸ್ ನೇತೃತ್ವದಲ್ಲಿ ರೂಪುಗೊಂಡ ಭಾರತೀಯ ರಾಷ್ಟ್ರೀಯ ಸೇನೆಯ ವಿರುದ್ಧ ಸಾವರ್ಕರ್ ಮತ್ತು ಹಿಂದೂ ಮಹಾಸಭಾ ಮತ್ತೊಂದು ಹೆಜ್ಜೆ ಇಟ್ಟರು. ಹಿಂದೂ ಮಹಾಸಭಾ ದೇಶಾದ್ಯಂತ ಮಿಲಿಟರಿ ನೇಮಕಾತಿ ಮಂಡಳಿಗಳನ್ನು ಸ್ಥಾಪಿಸಿತು ಮತ್ತು ಬ್ರಿಟಿಷ್ ಸೈನ್ಯದಲ್ಲಿ ಹಿಂದೂ ಪ್ರಾತಿನಿಧ್ಯವನ್ನು ಪಡೆದುಕೊಂಡಿತು. ಅದೇ ಹಿಂದೂ ಮಹಾಸಭಾದ ಬೆಂಬಲಿಗರು ಸಹ ಸುಭಾಷ್ ಚಂದ್ರ ಬೋಸ್ ಸಾವಿನ ಹಿಂದಿನ ರೂವಾರಿಗಳು ಎಂಬ ಆರೋಪವೂ ಇದೆ.

ಹಿಂದೂ ಮಹಾಸಭಾ ಬೆಂಬಲದೊಂದಿಗೆ ಬ್ರಿಟಿಷರಿಗೆ ಭಾರತದಲ್ಲಿ ತಮ್ಮ ವಸಾಹತುಶಾಹಿ ಆಡಳಿತವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಆಗಸ್ಟ್ 15, 1947 ರಂದು ಭಾರತ ಸ್ವತಂತ್ರವಾಯಿತು. ಭಾರತ ಮತ್ತು ಪಾಕಿಸ್ತಾನ ವಿಭಜನೆಯ ನಂತರ ದೇಶದ ಹಲವಾರು ಭಾಗಗಳಲ್ಲಿ ಗಲಭೆಗಳು ನಡೆದವು. ಕೋಮುವಾದದ ಬೀಜಗಳು ಮೊಳಕೆಯೊಡೆಯಲು ಪ್ರಾರಂಭಿಸುತ್ತಿದ್ದವು. ಅದರಲ್ಲಿ ಸಾವರ್ಕರನ ಹಿಂದೂ ಮಹಾಸಭೆಯ ಪಾಲು ಸಣ್ಣದೇನಲ್ಲ ಎಂದು ಸ್ವತಂತ್ರ ಭಾರತದ ಪ್ರಥಮ ಪ್ರಧಾನ ಮಂತ್ರಿ ನೆಹರು ಉಲ್ಲೇಖಿಸುತ್ತಾರೆ.

“ನಾನು ಖೇದಪಡುತ್ತೇನೆ, ಹಿಂದೂ ಮಹಾಸಭಾ ಸೇರಿದಂತೆ ಹಿಂದೂ ಸಂಘಟನೆಗಳ ಕಾರ್ಯಗಳು ಕೋಮುವಾದ ಮತ್ತು ದೇಶದ್ರೋಹದಿಂದ ಕೂಡಿದ ಪ್ರತಿಫಲವಾಗಿದೆ” (ಜವಾಹರಲಾಲ್ ನೆಹರು, Recent Essays and Writings)

ರಾಜಾ ಹರಿಸಿಂಗ್ ಅವರ ಆಳ್ವಿಕೆಯಲ್ಲಿ ಕಾಶ್ಮೀರ ರಾಜಪ್ರಭುತ್ವವಾಗಿತ್ತು. ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳುವ ಭಾರತೀಯ ಸಂವಿಧಾನದ 370 ನೇ ವಿಧಿಯ ಪರಿಕಲ್ಪನೆಗೆ ವಿರುದ್ಧವಾಗಿ ನಾವು ಇದನ್ನು ಸ್ಪಷ್ಟವಾಗಿ ನೋಡುತ್ತೇವೆ. ಸಾವರ್ಕರ್ ಅವರ ಕಲ್ಪನೆಯನ್ನು ಕೈಗೊಂಡಿದ್ದರೆ, ಇಂದು ಭಾರತದ ದೇಶವು ಅನೇಕ ಭಾಗಗಳಲ್ಲಿ ಚದುರಿಹೋಗುತ್ತಿತ್ತು.

ಭಾರತವನ್ನು ಇಬ್ಭಾಗ ಮಾಡಿದ ಸಾವರ್ಕರ್:
ಸ್ವತಂತ್ರ್ಯದ ನಂತರ ಭಾರತವನ್ನು ಎರಡು ಭಾಗವಾಗಿ ವಿಭಜಿಸುವುದಕ್ಕೆ ಸಮ್ಮತಿಸಿದ ಸಾವರ್ಕರ್ ಪಂಜಾಬಿನ ಸಿಕ್ಕರಿಗೆ ಮಾತ್ರವಾಗಿ ಮೂರನೇ ಒಂದು ರಾಷ್ಟ `ಸಿಕ್ಕಿಸ್ತಾನ್’ ಆಗಮನವನ್ನು ಸಹ ಸ್ವಾಗತ ಮಾಡಿದ್ದರು. ಆ ಕಾಲದಲ್ಲಿ ಕೇರಳದಂತೆ ಇತರ ಸ್ವಾಯತ್ತ ಪ್ರದೇಶಗಳ ನಿರ್ವಹಣೆಗೆ ಸಾವರ್ಕರ್ ಒಲವು ತೋರಿದರು. 1947 ಜೂನ್ 18 ಅಂದಿನ ತಿರುವಿದಾಂಕೂರ್ ದಿವಾನರಾಗಿದ್ದ ಸರ್. ಸಿ.ಪಿ. ರಾಮಸ್ವಾಮಿ ಅಯ್ಯರಿಗೆ ಕಳುಹಿಸಿದ ಅನುಮೋದನಾ ಸಂದೇಶ ಅದಕ್ಕೆ ಸಾಕ್ಷಿಯಾಗಿದೆ. ರಾಜಾ ಹರಿಸಿಂಗ್ ಅವರ ಆಳ್ವಿಕೆಯಲ್ಲಿ ಕಾಶ್ಮೀರ ರಾಜಪ್ರಭುತ್ವವಾಗಿತ್ತು. ಕಾಶ್ಮೀರ ಭಾರತದ ಅವಿಭಾಜ್ಯ ಘಟಕವೆಂದು ಹೇಳುವ ಭಾರತೀಯ ಸಂವಿಧಾನದ 370ನೇ ವಿಧಿ ಪ್ರಸ್ತಾಪಿಸುವ ತೀರ್ಮಾನಕ್ಕಿಂತ ವಿರುದ್ಧವಾಗಿತ್ತು ಸಾವರ್ಕರ್ ತೀರ್ಮಾಣವೆಂದು ನಮಗೆ ಸ್ಪಷ್ಟವಾಗಿ ತಿಳಿದು ಬರುವುದು. ಒಂದುವೇಳೆ ಸಾವರ್ಕರ್ ಅವರ ಕಲ್ಪನೆಯನ್ನು ಕೈಗೊಂಡಿದ್ದರೆ, ಇಂದು ಭಾರತದ ದೇಶವು ಅನೇಕ ಭಾಗಗಳಲ್ಲಿ ಚದುರಿಹೋಗುತ್ತಿತ್ತು.

ಸಾವರ್ಕರೊಂದಿಗಿರುವ ಭಾರತೀಯ ಜನತಾ ಪಕ್ಷದ ನಿಲುವು:
ಈ ರೀತಿಯಲ್ಲಿ ಸ್ವಾತಂತ್ರ್ಯ ಚಳವಳಿಯನ್ನು ಅದು ಎತ್ತಿ ತೋರಿಸುವ ಭಾರತ ಎಂಬ ಪರಿ ಕಲ್ಪನೆಯ ಮೌಲ್ಯವನ್ನು ದುರ್ಬಲಗೊಳಿಸಲು ಭಾರತದ ಆದರ್ಶಗಳನ್ನು ಹಾಳುಮಾಡಲು ಶ್ರಮವಹಿಸಿದ ಸಾವರ್ಕರ್ ಬ್ರಿಟೀಷ್ ಕ್ಷಮಾಪಣೆಯೊಂದಿಗೆ ಜೈಲು ವಿಮೋಚಿತನಾಗುತ್ತಾರೆ. ಆದರೆ 2003 ರಲ್ಲಿ ಅಂದಿನ ಬಿಜೆಪಿ ನೇತೃತ್ವದ ವಾಜಪೇಯಿ ಸರ್ಕಾರವು ಕೆಟ್ಟ ಇತಿಹಾಸ ಹೊಂದಿರುವ ವ್ಯಕ್ತಿಗೆ ಭಾರತ್ ರತ್ನ ನೀಡುವ ತೀರ್ಮಾನದ ಮೂಲಕ ತನ್ನ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿತು.

ಹಿಂದು ರಾಷ್ಟ್ರ ಬರಬೇಕೆಂಬ ನಮ್ಮ ಆಗ್ರಹವನ್ನು ಕಪಟ ರಾಷ್ಟ್ರೀಯವಾದಿಗಳು ಕೋಮುವಾದವೆಂದು ಮೂರ್ಖತನವೆಂದು, ಹಿಂಜರಿಕೆಯೆಂದು, ಮಾನವನ ಬೆಳವಣಿಗೆಗೆ ಇರುವ ಎಚ್ಚರಿಕೆಯೆಂದು ಕರೆಯುತ್ತಾರೆ. (ವಿ.ಡಿ.ಸಾವರ್ಕರ್, Nehru’s Nightmare- Hindu Raj Carpet Knights)

ವಿ.ಡಿ.ಸಾವರ್ಕರ್ ಹಿಂದೂ ಕೋಮುವಾದವನ್ನು ರಾಷ್ಟ್ರೀಯತೆಯ ಹೆಸರಿನಲ್ಲಿ ರಹಸ್ಯವಾಗಿ ಬಿತ್ತರಿಸುವವರಾಗಿದ್ದರು. ಅದನ್ನು ವಿರೋಧಿಸಿದವರು, ಧಾರ್ಮಿಕ ಸೌಹಾರ್ದತೆಗೆ ಶ್ರಮಿಸಿದವರು ಎಲ್ಲರೂ ಸ್ವಾಭಾವಿಕವಾಗಿ ಅವರ ವಿರೋಧಿಗಳಾದರು. ಹಿಂದು-ಮುಸ್ಲಿಮ್ ಐಕ್ಯಕ್ಕಾಗಿ ನೆಲೆನಿಂತಿದ್ದ ಅಹಿಂಸಾ ವಾದಿಯಾಗಿದ್ದ ಗಾಂಧೀಜಿಯನ್ನು ಅವರ ಚಿಂತನೆಗಳನ್ನು ತೀವ್ರವಾಗಿ ಟೀಕಿಸಿದ ಸಾವರ್ಕರ್. ಸ್ವಾತಂತ್ರ್ಯದ ನಂತರ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಗುರಿ ಹೊಂದಿದ್ದರು. ಆದ್ದರಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಅದರ ನೇತೃತ್ವದ ರಾಷ್ಟ್ರೀಯ ಚಳವಳಿ ಹಿಂದುತ್ವದ ಒಂದೇ ಶ್ರೇಣಿಯ ಶತ್ರುಗಳಾದರು. ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಸಂಪೂರ್ಣವಾಗಿ ಅಸಹಕಾರ ನೀಡದ್ದು ಮಾತ್ರವಲ್ಲದೇ, ಬ್ರಿಟೀಷರಿಗೆ ಜನಬಲ ನೀಡಿ ಸಹಾಯವನ್ನು ಮಾಡಿದ್ದರು.

ಮುಂದುವರಿಯುವುದು…

ಮೂಲ ಮಲಯಾಳಂ ಅನುವಾದ : ಎಂ ಅಶೀರುದ್ದೀನ್ ಅಲಿಯಾ ಮಂಜನಾಡಿ
ಕೃಪೆ : http://bodhicommons.org/

LEAVE A REPLY

Please enter your comment!
Please enter your name here