ಹೇಡಿ ಸಾವರ್ಕರ್ ವೀರನಾದ ಕಥೆ ಭಾಗ -೨

  • ಸುವರ್ಣ ಹರಿದಾಸ್

ಹಿಂದುತ್ವ ವಿಷಬೀಜಕ್ಕೆ ಬಲಿಯಾದ ಸಾವರ್ಕರ್:
ಅವರು ತಮ್ಮ ಅಮೂಲ್ಯ ಮತ್ತು ರಚನಾತ್ಮಕ ವರ್ಷಗಳನ್ನು ಭಾರತದ ಸ್ವಾತಂತ್ರ್ಯ ಚಳವಳಿಗೆ ಬೇಕಾಗಿ ಉಪಯೋಗಿಸಲು ಸಾಧ್ಯವಾಗದ ಕೊರತೆಯನ್ನು ಅರ್ಥೈಯಿಸಿಕೊಂಡಾಗಿದೆ ಸಾವರ್ಕರ್ ಕ್ಷಮಾಪನ ಮಾಡಿರುವುದು ಎಂಬ ರೀತಿಯಲ್ಲಿ ಸಾವರ್ಕರ್ ಬ್ರಿಟೀಷರಿಗೆ ಮಾಡಿರುವ ದಯಾ ಅರ್ಜಿಯನ್ನು ಸಂಘ ಪರಿವಾರದ ಬೆಂಬಲಿಗರು ವಾದಿಸುತ್ತಾರೆ. ಆದರೆ ಇದು ವಾಸ್ತವಕ್ಕೆ ವಿರುದ್ಧವಾಗಿದೆ. ಸಾವರ್ಕರ್ ಕೋಮುವಾದವನ್ನು ಉತ್ತೇಜಿಸಲು ಮತ್ತು ರಾಷ್ಟ್ರೀಯತಾವಾದಿ ಸ್ವಾತಂತ್ರ್ಯ ಚಳವಳಿಯನ್ನು ಹಿಂದಿನಿಂದ ಚುಚ್ಚಲು ಪ್ರಯತ್ನಿಸಿದರು.

1921 ರಲ್ಲಿ ಸೆಲ್ಯುಲಾರ್ ಕಾರಾಗೃಹದಿಂದ ಬಿಡುಗಡೆ ಗೊಳಿಸಲ್ಪಟ್ಟಿದ್ದ ಸಾವರ್ಕರ್ ಅವರನ್ನು ಪುಣೆಯ ಯೆರ್ವಾಡಾ ಕಾರಾಗೃಹದಲ್ಲಿ ಜನವರಿ 1927 ರವರೆಗೆ ದಾಖಲಿಸಲಾಯಿತು.ಈ ಅವಧಿಯಲ್ಲಿ. ಎ. ಮರಾಠ ಎಂಬ ಕಾವ್ಯನಾಮದಲ್ಲಿ “ಹಿಂದುತ್ವದ ಮೂಲಭೂತ ಪ್ರಮಾಣಗಳಲ್ಲಿ” (Essentials of Hindutva) ಎಂಬ ಪುಸ್ತಕವನ್ನು ಅವರು ಬರೆಯುತ್ತಾರೆ. ಈ ಪುಸ್ತಕವು ಹಿಂದೂ ಪ್ರತ್ಯೇಕತಾವಾದವನ್ನು ಪ್ರೋತ್ಸಾಹಿಸುವ ಉದ್ದೇಶಪೂರ್ವಕ ಪ್ರಯತ್ನವಾಗಿತ್ತು. ಕ್ರೈಸ್ತ ಮತ್ತು ಮುಸ್ಲಿಮ್ ಜನ ವಿಭಾಗವನ್ನು ಸಂಪೂರ್ಣವಾಗಿ ವಿಮರ್ಶಿಸಿ ಬೌದ್ಧರ ಹತ್ಯಾಕಾಂಡವನ್ನು ಪರೋಕ್ಷವಾಗಿ ಸಮರ್ಥಿಸಲು ಪ್ರಯತ್ನಿಸಿದರು ಈ ಪುಸ್ತಕದ ಹಿಂಬಲದೊಂದಿಗೆ ಸಾವರ್ಕರ್ ಹಿಂದೂ ಮಹಾಸಭೆಯಲ್ಲಿ ತನ್ನ ಸ್ಥಾನ ಬಲಪಡಿಸಿದನು.

“ನಮ್ಮ ದೇಶ ನಿವಾಸಿಗಳಾದ ಮಹಮ್ಮದಿಗಳನ್ನು ಮತ್ತು ಕ್ರೈಸ್ತ ಅನುಯಾಯಿಗಳನ್ನು ಹಿಂದುಗಳಾಗಿ ಪರಿಗಣಿಸಲು ಸಾಧ್ಯವಿಲ್ಲ. ಹಿಂದುಗಳಂತೆ ಹಿಂದುಸ್ಥಾನ್ ಅವರ ಮಾತೃಭೂಮಿಯಾದರೂ ಅದವರ ಪುಣ್ಯಭೂಮಿಯಲ್ಲ ಅವರ ಪುಣ್ಯಭೂಮಿ ಅರೇಬಿಯಾ ಮತ್ತು ಫೆಲೆಸ್ತೀನ್ ಆಗಿದೆ.” ಹಿಂದುತ್ವದ ಮೂಲಭೂತ ಪ್ರತಿಜ್ಞೆಗಳು. ((Essentials of Hindutva)) ಎಂಬ ಪುಸ್ತಕಗಳಲ್ಲಿ ವಿ.ಡಿ. ಸಾವರ್ಕರ್ ಬರೆದ ಕೋಮುವಾದವನ್ನು ಹರಡುವ ಮಾತುಗಳಾಗಿವೆ.

ಆರ್.‌ಎಸ್‌.ಎಸ್‌ನ ಸಂಸ್ಥಾಪಕ ಹೆಡ್ಗೆವಾರ್ ಅವರು 1925 ರ ಏಪ್ರಿಲ್‌ನಲ್ಲಿ ರತ್ನಾಗಿರಿಯಲ್ಲಿ ಸಾವರ್ಕರ್ ಅವರನ್ನು ಭೇಟಿಯಾದರು. ಈ ಸಭೆಯ ಕೆಲವು ತಿಂಗಳ ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸ್ಥಾಪಿಸಲಾಯಿತು.

ಸಾವರ್ಕರನ ಬ್ರಿಟಿಷ್ ಶರಣಾಗತಿ:
ರತ್ನಾಗಿರಿಯಲ್ಲಿ ತಂಗಿದ್ದಾಗ, ಸಾವರ್ಕರ್ ಅವರು ನಿರುದ್ಯೋಗ ಪಿಂಚಣಿಯಾಗಿ ಬ್ರಿಟಿಷ್ ಸರ್ಕಾರದಿಂದ ತಿಂಗಳಿಗೆ 60 ರೂಪಾಯಿಗಳನ್ನು ಪಡೆದರು. ಇದನ್ನು 100 ರೂ.ಗೆ ಹೆಚ್ಚಿಸುವಂತೆ ಕೇಳಿಕೊಂಡು ಬ್ರಿಟಿಷರಿಗೆ ಪತ್ರ ಬರೆದಿದ್ದನ್ನು ಇತಿಹಾಸದಲ್ಲಿ ಉಲ್ಲೇಖವಿದೆ. ([Joglekar, Jaywant (1 October 2006). Veer Savarkar Father of Hindu Nationalism. p. 103) ರಾಜಕೀಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ರತ್ನಾಗಿರಿಯಿಂದ ನಿರ್ಗಮಿಸುವ ನಿಷೇಧಗಳ ಹೊರತಾಗಿಯೂ, ಸಾವರ್ಕರ್ ಹಿಂದೂ ಮಹಾಸಭೆಯ ಪುನರುಜ್ಜೀವನಕ್ಕೆ ಸಾವರ್ಕರ್ ನೇತೃತ್ವ ನೀಡಿದರು.

ಬ್ರಿಟೀಷ್ ಸರಕಾರದ ಮೌನ ಸಮ್ಮತ ಇದೆಯೆಂಬ ಸಂಶಯವನ್ನು ಬಲಪಡಿಸುವ ರೀತಿಯಲ್ಲಾಗಿತ್ತು ಹಿಂದೂ ಮಹಾಸಭಾ ಕಾರ್ಯವು ಮತ್ತಷ್ಟು ಬಲಗೊಂಡಿತು. 1937ರಲ್ಲಿ ಸಂಘಟನೆಯ ಅಧ್ಯಕ್ಷನಾಗಿ ಸಾವರ್ಕರ್ ಅಧಿಕೃತವಾಗಿ ಆಯ್ಕೆಯಾದರು. ಆ ಸಮಯದಲ್ಲಿ, “ವಿಭಜನೆ ಮತ್ತು ನಿಯಮ” ದ ಬ್ರಿಟಿಷ್ ತಂತ್ರದ ಮತ್ತೊಂದು ಆವೃತ್ತಿಯಾಗಿ “ಥಿಯರಿ ಆಫ್ ಟೂ ನೇಷನ್ಸ್” “Theory of Two Nations” ಅನ್ನು ಪರಿಚಯಿಸಲಾಯಿತು. ಗಾಂಧೀಜಿ ಮತ್ತು ಅವರ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಅಪಹಾಸ್ಯ ಮತ್ತು ಟೀಕಿಸುತ್ತಿದ್ದ ಸಾವರ್ಕರ್, ಧಾರ್ಮಿಕ ಆಧಾರದ ಮೇಲೆ ದೇಶವನ್ನು ವಿಭಜಿಸುವಂತೆ ಒತ್ತಾಯಿಸಿದ್ದರು. ಅಕ್ಟೋಬರ್ 9, 1939 ರಂದು, ಸಾವರ್ಕರ್ ಅವರು ಅಂದಿನ ವೈಸ್‌ರಾಯ್ ಲಿನ್ಲಿತ್‌ಗೌ ‌ರನ್ನು ಭೇಟಿಯಾದರು ಮತ್ತು ಭಾರತೀಯರು ತಮ್ಮ ಶತ್ರುವಾದ ಬ್ರಿಟಿಷರೊಂದಿಗಿನ ಹಗೆತನ ಅನಗತ್ಯ ಎಂದು ಘೋಷಿಸಿದರು. (A.G. Nooraniಯಲ್ಲಿ Savarkar and Hindutva – The Godse Connection “ ಎಂಬ ಪುಸ್ತಕದಲ್ಲಿ ಇದರ ಬಗ್ಗೆ ವಿವರಿಸಲಾಗಿದೆ.)

ಸಾವರ್ಕರ್ ಸ್ವಾಭಿಮಾನಿ ಮತ್ತು ಸ್ವತಃ ತನ್ನ ಮಾತಿಗೆ ಬೆಲೆ ಕೊಡುವವನು ಎಂಬ ವಿಷಯದಲ್ಲಿ ತರ್ಕವಿಲ್ಲ. ಬ್ರಿಟೀಷ್ ಸರಕಾರಕ್ಕೆ ಬರೆದ ಕ್ಷಮಾಪಣೆಗಳಲ್ಲಿ ಸಂಪೂರ್ಣವಾಗಿ ನೀತಿ ಪಾಲಿಸಿದ ಅವರ ಧರ್ಮನಿಷ್ಠೆ ಶ್ಲಾಘನೀಯ. ಬ್ರಿಟಿಷರಲ್ಲಿ ಹಗೆತನವಲ್ಲ ಪ್ರಾಯೋಗಿಕ ಸಹಾಯ ಬೇಕು ಎಂದು ಘೋಷಿಸಿದ ಸಾವರ್ಕರ್, ಅಹಿಂಸಾತ್ಮಕ ಭಾರತೀಯರ ಚಳುವಳಿಗಳ ವಿರುದ್ಧ ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ:

ಪ್ರಾಯೋಗಿಕವಾದ ಸರಕಾರ ಮಾತ್ರವಾಗಿದೆ ಎಂದು ಘೋಷಿಸಿದ ಸಾವರ್ಕರಿಗೆ ಶತ್ರುಗಳ ಹಿಂದುಗಳಲ್ಲದ ಭಾರತೀಯರೊಂದಿಗಾಗಿತ್ತು ಅವರು ತನ್ನ ಪುಸ್ತಕದಲ್ಲಿ ಈ ರೀತಿ ಬರೆದರು.
“ಹಿಂದೂ ಅನುಯಾಯಿಗಳೇ, ಈ ಹುಸಿ ರಾಷ್ಟ್ರೀಯವಾದಿಗಳನ್ನು ನೀವು ನಮ್ಮ ದೇಶದಿಂದ ಹೊರಹಾಕದಿದ್ದರೆ, ಗಾಂಧಿ ಭಾರತೀಯತೆ ಈ ದೇಶದ ಮುಸ್ಲಿಮರಿಗೆ ಸೈನ್ಯ ಮತ್ತು ಪೊಲೀಸರಲ್ಲಿ ಪ್ರಮುಖ ಸ್ಥಾನಗಳನ್ನು ಪಡೆಯಲು ಅನುಮತಿ ನೀಡುವನು ಎಂದು ನಾನು ನಿಮಗೆ ಪದೇ ಪದೇ ಎಚ್ಚರಿಸಿದ್ದೇನೆ.” (ವಿ. ಡಿ ಸಾವರ್ಕರ್ Nehru’s Nightmare – Hindu Raj? Carpet Knights)

ಗಾಂಧಿ ಭಾರತೀಯತೆಯ ಮೂಲಕ ಹಿಂದೂಯೇತರರು ಅಧಿಕಾರಕ್ಕೆ ಬರುತ್ತಾರೆ ಎಂದು ಬರೆದು ನಂಬಿದ್ದ ಸಾವರ್ಕರ್, ದೇಶಾದ್ಯಂತ ಸೇನಾ ನೇಮಕಾತಿ ಶಿಬಿರಗಳನ್ನು ಆಯೋಜಿಸುವ ಮೂಲಕ ಮತ್ತು ಬ್ರಿಟಿಷ್ ಮಿಲಿಟರಿಯಲ್ಲಿ ಹಿಂದೂಗಳನ್ನು ನೇಮಕ ಮಾಡುವ ಮೂಲಕ ಹಿಂದೂ ಮಹಾಸಭೆಯನ್ನು ಮುನ್ನಡೆಸಿದರು. ಭಾಗಲ್ಪುರದಲ್ಲಿ 1941 ರ ಹಿಂದೂ ಮಹಾಸಭಾ ಅಧಿವೇಶನದಲ್ಲಿ ಅವರು ಮಾತನಾಡಿ ಹೀಗೆಂದರು, “So far as India’s defense is concerned, Hindudom must ally unhesitatingly, in a spirit of responsive co-operation with the war effort of the Indian government in so far as it is consistent with the Hindu interests, by joining the Army, Navy and the Aerial forces in as large a number as possible and by securing an entry into all ordnance, ammunition and war craft factories[…] Again it must be noted that Japan’s entry into the war has exposed us directly and immediately to the attack by Britain’s enemies. Consequently, whether we like it or not, we shall have to defend our own hearth and home against the ravages of the war and this can only be done by intensifying the government’s war effort to defend India. Hindu Mahasabha its must, therefore, rouse Hindus especially in the provinces of Bengal and Assam as effectively as possible to enter the military forces of all arms without losing a single minute.”

ಮುಂದುವರಿಯುವುದು

ಮೂಲ ಮಲಯಾಳಂ ಅನುವಾದ : ಎಂ ಅಶೀರುದ್ದೀನ್ ಅಲಿಯಾ ಮಂಜನಾಡಿ
ಕೃಪೆ :
 http://bodhicommons.org/

LEAVE A REPLY

Please enter your comment!
Please enter your name here