ಕಾರಣವಿಲ್ಲದ ಒಣಚಿಂತೆಗಳಿಗೆ,ಅಂತರಂಗದಲಿ ಕಂಬನಿಯ ಸುರಿದು,ನಮ್ಮದಲ್ಲದ ಬೆಲ್ಲಕೆ ಮನವೆಂಬಇರುವೆ ಆಸೆಪಟ್ಟು ಓಡುತಿದೆ ನೋಡ…
ಕರದಲಿ ಮೈ ಮರೆಸುವ ಬಂಧು ಬಂದು,ನಿಜ ಸಂಬಂಧಗಳ ಬೆಸುಗೆಯು ಸಡಿಲಗೊಂಡು,ಬದುಕು ಆಗಿ ಬೆಂಡುಅದರಿಂದೆ ಅರಿವಿಲ್ಲದೆ ಓಡುತಿದೆ ನೋಡ…
ಹೆತ್ತು ಹೊತ್ತವರ ಮಾತು ಆಯಾಸವಾಗಿ,ಬೇರೆ ಯಾರದೋ ಅನವಶ್ಯಕ ಮಾತು ಪಾಯಸವಾಗಿ,ಬದುಕು ಇಲ್ಲಿ ಬಂದಿರುವ ಉದ್ದೇಶ ಮರೆತು,ನೆರಲ್ಲಿದ ಮರದ ಕಡೆ ಓಡುತಿದೆ ನೋಡ…
ಕಣ ಕಣದಲಿ ಕುರುಡು ಕಾಂಚಾಣದಮೋಹ ತುಂಬಿ, ಮರಣ ಬರುವತನಕ, ಅದರಿಂದೆ ಕುಂಟು ಕುದುರಿ ಏರಿ,ಒಂಟಿಯಾಗಿ ಓಡುತಿದೆ ನೋಡ….

















































