ಎಂ. ಅಶೀರುದ್ದೀನ್ ಸಾರ್ತಬೈಲ್

ಎಂ. ಅಶೀರುದ್ದೀನ್ ಸಾರ್ತಬೈಲ್
4 POSTS 0 COMMENTS
ಮುಹಮ್ಮದ್ ಅತೀರುದ್ದೀನ್ ಸಾರ್ತಬೈಲ್ ವಿಭಿನ್ನ ಹಾಗೂ ಬಂಡಾಯ ಸ್ವರೂಪದ ಬರಹದಿಂದ ಗುರುತಿಸಿಕೊಂಡ ಲೇಖಕ. ಕಥೆ, ಲೇಖನ, ಕವನಗಳು ಹಲವು ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಬ್ಯಾರಿ, ಕನ್ನಡ, ಮಲಯಾಳಂ, ಅರೇಬಿಕ್, ತುಳು, ಇಂಗ್ಲಿಷ್, ಉರ್ದು ಮತ್ತು ಹಿಂದಿ ಭಾಷೆಗಳಲ್ಲಿ ಹಿಡಿತವಿರುವ ಇವರು ಅನುವಾದಕರೂ ಹೌದು. ‘ಅಶೀರನ ಕವನಗಳು’ ಇವರ ಮೊದಲ ಕೃತಿ; ‘ಹನುಮಾನ್ ಕಟ್ಟೆಯ ಆಲದ ಮರ’ ಕಥೆ 2024ರ ಬುಕ್ ಬ್ರಹ್ಮ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದಿದೆ. ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಸಾಹಿತ್ಯ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. 2019ರಲ್ಲಿ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ಪ್ರಬಂಧ ಮಂಡಿಸಿದ್ದು, ಪ್ರಸ್ತುತ ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕರಾಗಿದ್ದಾರೆ.

MOST COMMENTED

ಉರೂಸ್

0
ಅಲ್ಲಿ ಉರೂಸು ರಾತ್ರಿ ಬಣ್ಣದ ಬೆಳಕಿನಲಿ ಹೊಳೆವ ದರ್ಗಾದಂಗಳದ ಪಕ್ಕದಲಿ ಮಿಠಾಯಿ ಹಲ್ವಾ ಸಂತೆ ಪ್ರಭಾಷಣದ ವಿಷಯ 'ದಾರಿ ತಪ್ಪುತ್ತಿರುವ ಯುವಜನಾಂಗ' ಹಿಜಾಬಿನವಳ ಸುರ್ಮಾ ಹಚ್ಚಿದ ಕಣ್ಣ ನೋಟಕ್ಕೆ ಸಂತೆ ಗದ್ದಲದೊಳಗೇ ನಿಂತೆ ನನ್ನ ದೂಡಿ ಸಾಗುವ ಜನಗಳು ಓಡಿ ಆಡುವ ಮಕ್ಕಳು ಕಿವಿಗಪ್ಪಳಿಸುವ ಉಸ್ತಾದರ ಪ್ರಭಾಷಣದ...

HOT NEWS