ಲೇಖಕರು: ಮೌ.ವಹೀದುದ್ದಿನ್ ಖಾನ್
ಅನುವಾದ: ತಲ್ಹಾ.ಕೆ.ಪಿ
ಬಕೆಟಿನ ಕೆಳಭಾಗದಲ್ಲಿ ರಂಧ್ರವಾಗಿದ್ದು, ನೀವು ಮೇಲಿನಿಂದ ನೀರು ಹಾಕಿದರೆ ನೀರೆಲ್ಲ ಹರಿದು ಹೋಗಿ ಬಕೇಟಿನಲ್ಲಿ ಏನೂ ಉಳಿಯುವುದಿಲ್ಲ. ಮಾನವನ ಅವಸ್ಥೆಯು ಇದೇ ಆಗಿದೆ.ನಿಜವಾಗಿಯೂ ಮಾನವನಿಗೆ ಏನಾದರೂ ಲಾಭ ಮಾಡ ಬಹುದಾದ ಕೆಲಸವೂ ನಿಜವಾದ ಕೆಲಸವಾಗಿದೆ. ಒಂದು ವೇಳೆ ವ್ಯಕ್ತಿಯು ಬಾಹ್ಯವಾಗಿ ಚಟುವಟಿಕೆಗಳನ್ನು ತೋರಿಸುತ್ತಿದ್ದಾನೆ ಮತ್ತು ಆತನಿಗೆ ಸ್ವತಃ ತಾನೇ ಏನನ್ನು ಗಳಿಸಲು ಸಾಧ್ಯವಾಗದಿದ್ದಾರೆ ಆ ಚಟುವಟಿಕೆಗಳಿಗೆ ಯಾವುದೇ ವಾಸ್ತವವಿಲ್ಲ. ಕೆಲಸವೆಂದರೆ ಯಾವುದರಿಂದ ವ್ಯಕ್ತಿಯಲ್ಲಿ ವಿವೇಚನೆಯ ಬೆಳಕು ಚೆಲ್ಲುತ್ತದೆ ಮತ್ತು ಆತನ ಮನಸ್ಸಿನಲ್ಲಿ ನೋವಿನಿಂದ ಚಡಪಡಿಸುವ ಜ್ವಾಲಾಮುಖಿಯು ಏಳ ಬೇಕು. ಆತನ ಆತ್ಮದಲ್ಲಿ ಯಾವುದೇ ಚಲನವಲನ ಸೃಷ್ಟಿಸುವುದಿಲ್ಲ. ಅಂತರಂಗದಲ್ಲಿ ಯಾವುದೇ ಘಟನೆ ಸಂಭವಿಸಿ ಅದು ಶ್ರೇಷ್ಟ್ರವಾದ ಮಾರ್ಗವನ್ನು ಆತನಿಗೆ ತೆರೆಯುತ್ತದೆ. ಇದೇ ಪ್ರಯೋಜನವೂ ಯಾವುದೇ ಕಾರ್ಯದಲ್ಲಿನ ಯಶಸ್ಸಿನ ನಿಜವಾದ ಗುಣಮಟ್ಟವಾಗಿದೆ. ಮತ್ತು ಮಾನವನಿಗೆ ಈ ರೀತಿಯ ಕೊಡುಗೆ ನೀಡುವ ಕಾರ್ಯವೇ ನಿಜವಾದ ಕಾರ್ಯವಾಗಿದೆ. ಮನುಷ್ಯ ಮಾಡುವ ಕೆಲಸದಲ್ಲಿ ಯಾವುದೇ ರೀತಿಯ ಪ್ರಯೋಜನ ಅಥವಾ ಲಾಭ ಇಲ್ಲದಿದ್ದರೆ ಆತನ ಕೆಲಸವು ರಂದ್ರವಿರುವ ಬಕೆಟಿನಲ್ಲಿ ನೀರು ಸುರಿದಂತಾಗುತ್ತದೆ.
ನೀವು ಏನು ಮಾಡುತ್ತಿದ್ದೀರಿ ಎನ್ನುವುದು ನೋಡುವಂತಹದ್ದಲ್ಲ ಬದಲಾಗಿ ನಿಮಗೆ ಏನು ಸಂಭವಿಸುತ್ತಿದೆ ಎನ್ನುವುದು ನೋಡುವಂತಹದ್ದಾಗಿದೆ. ಒಂದು ವೇಳೆ ನಿಮ್ಮ ಕಾರ್ಯ ನಿರತತೆಯು ಅತಿಯಾಗಿದ್ದರೆ, ನಿಮ್ಮಲ್ಲಿ ತೋರಿಕೆಗಾಗಿ ಬಹಳಷ್ಟು ಸಾಧನೆಗಳಿದ್ದರೂ, ನಿಮ್ಮ ಅಂತರಂಗವು ಖಾಲಿಯಾಗಿದ್ದರೆ, ಸ್ವಯಂ ಏನೂ ಆಗದಿದ್ದರೆ ನಿಮ್ಮ ಕಾರ್ಯ ನಿರತತೆಯು ನಿರುಪಯುಕ್ತವಾದ ಪ್ರಯತ್ನ (idle business )ಗಳಾಗಿವೆಯೇ ಹೊರತು ಬೇರೇನಲ್ಲ.
ವಾಯು ಇದ್ದು ಅದರಿಂದ ಆಕ್ಸಿಜೆನ್ ಸಿಗದೇ ಇದ್ದರೆ?, ನೀರಿದ್ದು ಅದರಿಂದ ಫಲವತ್ತತೆ ಇಲ್ಲದಿದ್ದರೆ?, ಆಹಾರವಿದ್ದು ಮನಷ್ಯನಿಗೆ ಅದರಿಂದ ಶಕ್ತಿ ಸಿಗದಿದ್ದರೆ, ಸೂರ್ಯನಿದ್ದು ಬೆಳಕು ಕೊಡದಿದ್ದಾರೆ ಹೇಗಾಗುವುದು. ಆಗದೇ ಇರುವಂತೆಯೂ ಅಥವಾ ಆಗದೇ ಇರುವುದರ ಕೆಟ್ಟ ರೂಪವಾಗಿದೆ. ಇದೇ ರೀತಿ ಕೆಲಸವು ಮಾನವನ ತನ್ನ ಆಹಾರವಾಗಿರದಿದ್ದರೆ ಅದು ಕೆಲಸವಲ್ಲ, ಕೇವಲ ಸಮಯ ವ್ಯರ್ಥತೆಯಾಗಿದೆ ಅಥವಾ ಅದಕ್ಕಿಂತಲೂ ತಲೆಬುಡವಿಲ್ಲದ ಕೆಲಸವಾಗಿದೆ.
ಕಲ್ಲಿನ ಮೇಲೆ ನೀರು ಹಾಕಿದರೆ ಅದು ನೀರಿಂದ ಒದ್ದೆಯಾಗುತ್ತದೆ, ಅದರ ನಾಲ್ಕು ಕಡೆಗಳಲ್ಲೂ ನೀರು ಕಾಣಬಹುದು ಆದರೆ ಅದಕ್ಕೆ ನೀರನ್ನು ರುಚಿಸಲಾಗದು. ಅದು ನೀರಿನ ಎರಡನೆಯ ರೂಪವನ್ನು ಅನುಭವಿಸಲಿಲ್ಲ. ಇದಕ್ಕೆ ವ್ಯತರಿಕ್ತವಾಗಿ ಒಬ್ಬ ಜೀವಂತ ವ್ಯಕ್ತಿಯು ದಣಿವಾರಿದಾಗ ನೀರು ಕುಡಿದರೆ ಆತನ ನರಗಳು ಒದ್ದೆಯಾಗುತ್ತದೆ. ಅದು ನೀರಿನ ವಾಸ್ತವದ ”ಅಂತರಂಗದ ಅನುಭವವನ್ನು” ಮಾಡುತ್ತದೆ.
ಈ ಉದಾಹರಣೆ ಇಂದ ಮಾಡುವುದಾದರೂ ಏನು? ಅರ್ಥವಾಗುವುದಾದರೂ ಏನು? ಎಂಬುವುದನ್ನು ತಿಳಿಯಬಹುದು. ಮಾಡುವುದೇನೆಂದರೆ ಮಾನವನು ಕೆಲವು ನಿಶ್ಚಿತ ಕಾರ್ಯ ಕ್ರಮಗಳನ್ನು ರೂಢಿಯಂತೆ ನಿರ್ವಹಿಸುತ್ತಾನೆ. ವ್ಯಕ್ತಿಯು ತನ್ನ ನಾಲಿಗೆಯಿಂದ ಉಚ್ಚರಿಸಿದ ವಾಕ್ಯವು ಅವನ ಹೃದಯ ಬಡಿತವಾಗದಿದ್ದರೆ, ವ್ಯಕ್ತಿಯು ತನ್ನ ಕೈ ಕಾಲುಗಳಿಂದ ಯಾವುದಾದರೊಂದು ಕಾರ್ಯ ನಿರ್ವಹಿಸಿದರೆ ಮತ್ತು ಆ ಕಾರ್ಯವು ಅವನ ಆತ್ಮಕ್ಕೆ ತಲುಪದಿದ್ದರೆ, ಆತನ ಕಾರ್ಯ ಚಟುವಟಿಕೆಗಳು ಮನಸ್ಸು ಮತ್ತು ಬುದ್ಧಿಯಲ್ಲಿ ಕಂಪನ ಮೂಡಿಸದಿದ್ದರೆ, ಇದರ ಬದಲಾಗಿ ವ್ಯಕ್ತಿಯ ಕಾರ್ಯವು ಕಾರ್ಯವಾಗಿ ಆತನಿಗೆ ಆತ್ಮೀಯ ಅನುಭವ ನೀಡುತ್ತಿರುವುದು, ಅವನದ್ದೇ ಅಂತರಿಕ ಅಸ್ತಿತ್ವಕ್ಕೆ ಆಗಾಗ ಪ್ರೇರಣೆಯ ಆಹಾರವು ದೊರೆಯುತ್ತಿದೆಯೋ, ಆತನ ಶಾರೀರಿಕ ಕಾರ್ಯವು ಆತನ ಶಾರೀರಿಕವಲ್ಲದ ಅಸ್ತಿತ್ವದಲ್ಲಿ ಕೋಲಾಹಲ ಸೃಷ್ಟಿಸುತ್ತದೆಯೋ, ಯಾವುದರಿಂದ ವ್ಯಕ್ತಿಯು ಸ್ವಯಂ ಏನಾದರೂ ಆಗುವುದಾದರೆ, ಅದೇ ಕೆಲಸ ಮಾಡುವುದು ಕೆಲಸ ಮಾಡುವುದಾಗಿದೆ. ಯಾವುದನ್ನೂ ಮಾಡುವುದರಿಂದ ಕೆಲಸವಾಗುವುದಿಲ್ಲವೋ ವಾಸ್ತವದಲ್ಲಿ ಅದಕ್ಕೆ ಯಾವುದೇ ಬೆಲೆ ಇಲ್ಲ ಅದು ನೀರಿನಿಂದ ಒದ್ದೆಯಾಗಿದ್ದರೂ ರುಚಿಸಲಾಗದಂತಹ ಕಲ್ಲಿನಂತಾಗಿದೆ.