-ಅಶೀರುದ್ದೀನ್ ಆಲಿಯಾ, ಮಂಜನಾಡಿ

ಕೇರಳದ ಪಟ್ಟಣಂ ತಿಟ್ಟ ಜಿಲ್ಲೆಯ ಕೂಜನಂಜೇರಿಗೆ ಹತ್ತಿರವಿರುವ ಎಡಪ್ಪರ ಮಲದೇವರ್ ದೇವಸ್ಥಾನದ ಒಂದು ಪ್ರತಿಷ್ಠಾನ ಮುಸ್ಲಿಂ ಧರ್ಮಿಯನಾದ ಕಾಯಂಗುಲಮ್ ಕೊಚ್ಚುನ್ನಿಯದ್ದು. ಇಲ್ಲಿ ಇವನು ಒಬ್ಬ ಆರಾಧ್ಯ ದೇವಾ,ದೇವತಾ ಮನುಷ್ಯ . ವಿಶ್ವಾಸಿಗಳು ತಮ್ಮ ಕಾರ್ಯವನ್ನು ಪೂರ್ತಿಗೊಳಿಸಲು ಪ್ರಾರ್ಥನೆ ಸಲ್ಲಿಸುತ್ತಾರೆ ಬೆಳಕು ಹೊತ್ತಿಸುತ್ತಾರೆ, ಕಾಣಿಕೆಗಳನ್ನು ಸಲ್ಲಿಸುತ್ತಾರೆ . ಇತಿಹಾಸದಲ್ಲಿ ಕಾಯಂಗುಲಮ್ ಕೊಚ್ಚುನ್ನಿ ಒಬ್ಬ ಪ್ರಖ್ಯಾತ ಕಳ್ಳ ದರೋಡೆ ಕೋರ. ಕಳ್ಳನೊಬ್ಬ ಸರ್ವ ಧರ್ಮಿಯರ ದೇವತಾ ಮನುಷ್ಯನಾಗಿ ಬದಲಾಗುವುದರ ಹಿಂದೆ ಒಂದು ಐಹಿತ್ಯವಿದೆ ಮಹಾ ಚರಿತ್ರೆಯಿದೆ. ಕಾಯಂಗುಲಮ್ ಕೊಚ್ಚುನ್ನಿ ಎಂಬ ಇತಿಹಾಸ ಪುರುಷನ ಚರಿತ್ರೆ ಜನರು ಜನರಿಂದ ಆಡಿಕೊಳ್ಳುತ್ತಲೂ , ಹಾಡಿಕೊಳ್ಳುತ್ತಲೂ ಆತನ ಧೀರತೆಯ ಕತೆಗಳನ್ನು ಬಾಯಿಂದ ಬಾಯಿಗೆ ಕೊಂಡಾಡುತ್ತಲೂ ಇದ್ದರು ಸ್ವತಂತ್ರ ಕೇರಳದ ಇತಿಹಾಸದಲ್ಲಿ ಕಾಯಂಗುಳಂ ಕೊಚ್ಚುನ್ನಿಯ ಚರಿತ್ರೆಯನ್ನು ಅರಿಯದ ಮಲೆಯಾಳಿ ಇಲ್ಲ.

1909 ರಿಂದ 1934 ಕರ ವರೆಗೆ ಕೊಟ್ಟರಟಿಲ್ ಶಂಕರುಣ್ಣಿ ರಚಿಸಿದ ಐತಿಹ್ಯ ಮಾಲೆಯಿಂದ ಕೊಚ್ಚುನ್ನಿಯ ಜೀವನ ಚರಿತ್ರೆ ಮತ್ತು ಧೀರ ಕತೆಗಳು ವಿಶ್ವ ಮಾನ್ಯತೆ ಪಡೆದವು ಸಿನಿಮಾ ನಾಟಕ ರಂಗದಲ್ಲಿ ಸ್ಥಾನ ಪಡೆದವು ಇವನೊಬ್ಬ ಕಟ್ಟುಕತೆಯ ಮಹಾ ಪುರುಷನಲ್ಲ ಬದಲಾಗಿ ಬ್ರಿಟಿಷ್ ಭಾರತದಲ್ಲಿ ಅಧಿಕಾರಿ ವರ್ಗಗಳಿಗೆ, ಬ್ರಿಟಿಷರಿಗೆ,ಶ್ರೀಮಂತರಿಗೆ , ಬ್ರಾಹ್ಮಣ ಮೇಧಾವಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಬಡವರ ಬಂದು ಕಾಯಂಗುಳಂ ಕೋಚುನ್ನಿ ಬ್ರಿಟೀಷ್ ಇಂಡಿಯಾದ ತಿರುವಾಂಕೂರ್ ಏರಿಯಾ ದ ಕಾಯಂಗುಲಮ್ನ ಕೊಟ್ಟುಕುಳಂಗರೆ ಯಲ್ಲಿ 1818 ರಲ್ಲಿ ಹುಟ್ಟಿದ ಕೋಚುನ್ನಿ ದಾರಿದ್ರ್ಯದ ಕಾಠಿಣ್ಯದಲ್ಲಿ ಬೆಳೆದು ಬಂದವರು ತಂದೆ ಒಬ್ಬ ಕಳ್ಳ ಹಸಿವು ಸಹಿಸಲಸಾಧ್ಯವಾಗದೆ ದಿನಾಲು ಅಕ್ಕಿ ಕಾಲು ಕದ್ದು ತಂದು ಮನೆಯವರನ್ನು ಬದುಕಿಸುತ್ತಿದ್ದನು.

ಒಂದುದಿನ ಕದಿಯದಿದ್ದರೆ ಮನೆಯವರು ಉಪವಾಸವಿದ್ದು ಸಾಯುವ ಪರಿಸ್ಥಿತಿ ಬರುತಿತ್ತು ಅಂದಿನ ಬಡವರ, ಕೆಳವರ್ಗದ, ಕೀಳುಜನರ, ಬದುಕು ದುರಾವಸ್ಥೆಯಲ್ಲಿ ನೂಕಿ ಸಾಗುತಿತ್ತು. ಸಂಪಾದನೆಗಾಗಿ ಕದಿಯುವುದಲ್ಲ ಬದಲಾಗಿ ಹಸಿವುತಡೆಯಲಾರದೆ ಕದಿಯುವುದು. ಒಂದು ದಿನ ತಂದೆ ಬ್ರಾಹ್ಮಣ ನ ಮನಯಲ್ಲಿ ಅಕ್ಕಿ ಕದ್ದು ಸಿಕ್ಕಿಬಿದ್ದಾಗ ಅವರು ತಂದೆಯನ್ನು ಹೊಡೆದು ಕೊಂದರು. ತಂದೆಯ ಮರಣ ನಂತರ ಕುಟುಂಬ ದಾರಿದ್ರದಲ್ಲಾಯಿತು ತಂದೆಗಿರುವ ಕೆಟ್ಟ ಹೆಸರು ಮಗನಿಗೂ ಬೀಳಬಹುದೆಂದು ಹೆದರಿ ತಾಯಿ ಮಗ ಕೊಚುನ್ನಿ ಯನ್ನು ಎಲ್ಲಿಯಾದರೂ ಹೋಗಿ ಬದುಕು ಎಂದು ಮನೆಯಿಂದ ಹೊರ ಕಳುಹಿಸಿದಳು ಮನೆಯಿಂದ ಹೊರಟ ಕೋಚುನ್ನಿ ಒಬ್ಬ ಪರದೇಶಿ ಬ್ರಾಹ್ಮಣ ನ ಮನೆಯಲ್ಲಿ ಕೆಲಸಗಾರನಾಗಿದ್ದುಕೊಂಡು ಬೆಳೆದನು ಶ್ರೀಮಂತ ವರ್ಗದವರಿಗೆ ಮಾತ್ರ ಸೀಮಿತವಾಗಿದ್ದ ಕಳರಿ ಯುದ್ಧ ಕಲೆಯನ್ನು ಕದ್ದು ಮುಚ್ಚಿ ಕರಗತ ಮಾಡಿಕೊಂಡನು ತಿರುವಾಂಕೂರ್ , ನಾಯರ್ಗಳ ಅಧಿಕಾರದಲ್ಲಿದ್ದ ಕಾಲ ದಲಿತರು ಮುಸ್ಲಿಮರು ( ಮಾಪಿಳ್ಳೆ ) ಕೆಳವರ್ಗದ ಜನರು ಶೋಷಣೆಗೊಳಗಾಗಿದ್ದ ಕಾಲ, ಬ್ರಿಟೀಷರು, ಶ್ರೀಮಂತರು ಬ್ರಾಹ್ಮಣರು, ನಾಯರ್ಗಳು ದುರಾಧಿಕಾರದಲ್ಲಿ ಕೇರಳೀಯ ಸಮೂಹ ನರಳಿ ಹೋಗಿದ್ದರು ಹಿದೂ ಸಮೂಹದಲ್ಲೇ ಇರುವ ದಲಿತರು ಮತ್ತು ಕೆಳವರ್ಗದ ಜನರ ಮೇಲೆ ಹಲವಾರು ಅಮಾನುಷಿಕ ನಿರ್ಬಂಧಗಳನ್ನು ಹೇರಿದ್ದರು ಮಂದಿರ ಪ್ರವೇಶಿಸುವಂತಿಲ್ಲ ಬಂಗಾರದ ಒಡವೆಗಳನ್ನು ಧರಿಸುವಂತಿಲ್ಲ ,ತಾವು ಬೆಳೆದು ಸಂಪಾದಿಸಿದ ಆಹಾರ ಪದಾರ್ಥಗಳನ್ನು ನಾಯರುಗಳಿಗೆ ಕಾಣಿಕೆಯಾಗಿ ಕೊಡಬೇಕು, ತಮ್ಮ ಕನ್ಯಾ ಮಕ್ಕಳನ್ನು ಬ್ರಾಹ್ಮಣ ರೊಂದಿಗೆ ಮಲಗಲು ಬಿಡುವುದರಿಂದ ಮುಕ್ತಿ ಪ್ರಾಪ್ತವಾಗುವುದು, ಬ್ರಾಹ್ಮಣರು ಸಂಚರಿಸುವ ದಾರಿಯಲ್ಲಿ ದಲಿತವರ್ಗ ಸಂಚರಿಸುವಂತಿಲ್ಲ, ಬ್ರಾಹ್ಮಣರ ಬಾವಿಯಿಂದ ನೀರು ಕುಡಿಯುವಂತಿಲ್ಲ, ಹಾಗೆ ಆದರೆ ಅಂತಹ ಬಾವಿಗಳನ್ನು ಸಂಪೂರ್ಣ ಮುಚ್ಚಲಾಗುವುದು ಕೆಳವರ್ಗದ ಜನರಿಗೆ “ಅಶ್ಲೀಲಂ” “ಮ್ಲೇಚಂ” ಎಂಬ ಪದಪ್ರಯೋಗವನ್ನು ಬಳಸುತಿದ್ದರು ಕೆಳವರ್ಗದ ಜನರು ನಾಯರುಗಳ ಸೇವಕರಂತೆ ಪ್ರಾಣಿಗಳಿಗಿಂತ ಕಡೆಯವರಾಗಿ ಬದುಕುತಿದ್ದರು ಸಾಮಾನ್ಯ ಜನರು ನಂಬಿಕೆಯಿಂದ ಕಾಣಿಕೆ ಕೊಟ್ಟಂತಹ ಸಂಪತ್ತುಗಳನ್ನು ಬ್ರಾಹ್ಮಣ ಮೇಧಾವಿಗಳು ದೇವರ ಹೆಸರಿನಲ್ಲಿ ದೇವಸ್ಥಾನದ ಬಂಡಾರದಲ್ಲಿಟ್ಟು ತಮ್ಮ ಹಿತಾಸಕ್ತಿಗಳಿಗಾಗಿ ಬಳಸುತಿದ್ದರು ಮತ್ತು ಬಡವರು ಹೊಟ್ಟೆಪಾಡಿಗಾಗಿ ಮಾಡುವ ಸಣ್ಣ ತಪ್ಪುಗಳಿಗೆ ಘೋರ ಶಿಕ್ಷೆಯನ್ನು ನೀಡಿ ಧಾರ್ಮ ಭಕ್ತಿಯನ್ನು ತೋರಿಸುತಿದ್ದ ಶ್ರೀಮಂತ ಬ್ರಾಹ್ಮಣರ ವಿರುದ್ಧ ಕೋಚುನ್ನಿಯಂತೆ ಹಲವು ಯುವಕರು ಎದುರಿಸಿದರು.

ಕೋಚುನ್ನಿ ಶಕ್ತಿವಂತನು ಮತ್ತು ಕಳರಿ ಬಲ್ಲವನು ಆದ್ದರಿಂದ ಅವನನ್ನು ಎದುರಿಸುವಲ್ಲಿ ಅವರು ವಿಫಲರಾಗಿ ಕೋಚುನ್ನಿಯ ಮೇಲೆ ದೇವಸ್ಥಾನದಿಂದ ಚಿನ್ನ ಕದ್ದನೆಂಬ ಸುಳ್ಳಾರೋಪವನ್ನು ಹೊರಿಸಿ ಕಠಿಣವಾಗಿ ಶಿಕ್ಷಿಸಿದರು. ಸಾವಿನ ದವಡೆಯಲ್ಲಿದ್ದ ಅವನನ್ನು ಇಟ್ಟಿಕ್ಕರೆ ಪಕ್ಕಿ ಎಂಬ ಆಗಿನ ಕಾಲದ ಪ್ರಮುಖ ಹೋರಾಟಗಾರ ಅವನನ್ನು ಪಾರುಗೊಳಿಸಿ ತರಬೇತುಗೊಳಿಸಿದನು ನಂತರದ ದಿನಗಳಲ್ಲಿ ಯುವಕರ ಸಣ್ಣ ಗುಂಪೊಂಸು ಕಟ್ಟಿಕೊಂಡು ಕಾಯಂಗುಲಮ್ ನ ಸುತ್ತು ಮುತ್ತಲ ಪ್ರದೇಶದಲ್ಲಿ ದಲಿತರ ಬಡವರ ದಮನಿತರ ಕೆಳವರ್ಗದವರ ಬೆಂಗಾವಲಿಗನಾಗಿ ನಿಂತನು ಶ್ರೀಮಂತ ಬ್ರಾಹ್ಮಣರ ವಿರುದ್ಧ ಒಂದು ಬಂಡಾಯವಾದನು ಬ್ರಿಟೀಷರ ಕೋಟೆಗಳಿಂದ, ಶ್ರೀಮಂತ ನಾಯರುಗಳ ಮನೆಗಳಿಂದ, ದೇವಸ್ಥಾನಗಳಿಂದ ಚಿನ್ನಾಭರಣಗಳನ್ನು ಕದ್ದು ಬಡವರಿಗೆ ಹಂಚಿ ಅವರ ಜೀವನೋದ್ದಾರ ಕೆಲಸದಲ್ಲಿ ತೊಡಗಿದ ಸರಕಾರಿ ಗೋದಾಮುಗಳಿಂದ ಆಹಾರ ಪದಾರ್ಥಗಳನ್ನು ಕದ್ದು ಜನರಲ್ಲಿ ಹಂಚಿದ . ಶ್ರೀಮಂತ ಬ್ರಾಹ್ಮಣರ ಮತ್ತು ಬ್ರಿಟೀಷರ ಪಾಲಿಗೆ ದರೋಡೆಕೋರನಾಗಿಯೂ ಬಡವರ ಪಾಲಿಗೆ ದೇವರಾಗಿಯೂ ಬದಲಾದ ಬಡವರು ಅರ್ಧ ರಾತ್ರಿಯವರೆಗೆ ಒಲೆಯೂರಿಸಿ ನೀರು ತುಂಬಿಸಿ ಖಾಲಿ ಮಡಿಕೆಯಿಟ್ಟು ಕಾಯುತ್ತಿದ್ದರು ಕೋಚುನ್ನಿ ಏನಾದರೂ ತಂದು ನಮ್ಮ ಹಸಿವು ನೀಗಿಸಬಹುದೆಂದು ಅಷ್ಟರ ವರೆಗೆ ಜನರಲ್ಲಿ ಅವನ ಮೇಲೆ ಭಕ್ತಿ ಪ್ರೀತಿ ಭರವಸೆ ಬೆಳೆಯಿತು ಸರ್ವ ಜನರ ಆಶಾಕಿರಣವಾದರೂ ನಾಡಿನ ದಲಿತ ಮುಸ್ಲಿಂ (ಮಾಪಿಳ್ಳೆ ) ಕೆಳವರ್ಗ ಜನ ಬಡವರನ್ನು ಒಂದುಗೂಡಿಸಿ ಬಲಾಢ್ಯ ಅಧಿಕಾರಿ ವರ್ಗಗಳು ನಡೆಸುವ ಶೋಷಣೆಯ ವಿರುದ್ಧ ದ್ವನಿ ಮೊಳಗಿಸಲು ಪ್ರೇರಕವಾದರು. ಹಲವಾರು ಕುತಂತ್ರಗಳನ್ನು ಹಣಿದು ಕೋಚುನ್ನಿಯನ್ನು ಹೊಂಚು ಹಾಕಿ ಜೈಲಲ್ಲಿ ಇಟ್ಟರು ಕೆಲವು ಕಾಲ ಜೈಲಲ್ಲಿ ಕಳೆದ ಕೋಚುನ್ನಿ ೧೮೫೭ ರಂದು ಇಹಲೋಕ ತ್ಯಜಿಸದರು ಆಗ ಅವರಿಗೆ 41 ವಯಸ್ಸು ಅಲ್ಲಿನ ಪೇಟ ಜುಮಾ ಮಸೀದಿಯಲ್ಲಿ ದಫನ ಮಾಡಲಾಯಿತು. ಕಾಯಂಗುಲಮ್ ಕೋಚುನ್ನಿ ಇಂದಿಗೂ ಅವರೊಬ್ಬ ದೇವತಾ ಮನಷ್ಯನಾಗಿ ಬಡವನ ಮನದೊಳಗಿದ್ದಾರೆ ಕೇರಳದ ಇತಿಹಾಸದಲ್ಲಿ ಕೋಚುನ್ನಿ ಅತ್ಯಂತ ಪ್ರಭಾವಿತ ಮನುಷ್ಯ ಹಲವಾರು ಚಿಂತನೆಗಳೂ ಸಿನಿಮಾಗಳು,ನಾಟಕಗಳು ಧಾರಾವಾಹಿಗಳು ಬಂದಿದೆ ಇತ್ತೀಚಿಗೆ ಕೇರಳ ಸಿನಿಮಾ ಇತಿಹಾಸದಲ್ಲೇ ಅತ್ಯಂತ ದೊಡ್ಡ ಬಜೆಟಿನಿಂದ ಹೊರ ಬಂದ ಮೋಹನಲಾಲ್ ನಿವಿನ್ ಪೌಲಿ ಅಭಿನಯದ ಸಿನಿಮಾ ಕಾಯಂಗುಲಮ್ ಕೋಚುನ್ನಿ ಯ ಬಗ್ಗೆ ಪ್ರಸಕ್ತ ಕೇರಳೀಯರಲ್ಲಿ ಇತಿಹಾಸವನ್ನು ಮತ್ತೊಮ್ಮೆ ನೆನಪಿಸುವಂತಾಗಿದೆ

LEAVE A REPLY

Please enter your comment!
Please enter your name here