ಮಹಮ್ಮದ್ ಶಾರೂಕ್ ತೀರ್ಥಹಳ್ಳಿ.

ಸ್ಮಾರ್ಟ್ ಪೋನ್, ಲ್ಯಾಪ್ಟಾಗಪ್, ಕಂಪೂಟರ್ ಗಳಲ್ಲಿ ಗೂಗಲ್ ಎಂದು ಮುಳಿಗಿರುವ ಇಂದಿನ ಕಾಲದ ಪೋಷಕರು ತಮ್ಮ ಇಂಟರ್ನೆಟ್ ಗೀಳನ್ನು ಮಕ್ಕಳಿಗೂ ಹಬ್ಬಿಸುತ್ತಿದ್ದಾರೆ. ತಂತ್ರಜ್ನಾನದ ಮೇಲೆ ಹೆಚ್ಚು ಸಮಯ ಕಳೆಯುವುದರಿಂದ ಮನೆಗೆಲಸಗಳ, ವೈಯಕ್ತಿಕ ಕೆಲಸಗಳ ಮೇಲೆ ಆಸಕ್ತಿ ಕಡಿಮೆಯಾಗಿ ಗಂಡ, ಹೆಂಡತಿ, ಮಕ್ಕಳ ಮಧ್ಯೆ ಸಂವಹನ ಕೊರತೆ ಕಂಡುಬರುತ್ತದೆ ಎಂದು ಮನಶಾಸ್ತ್ರಜ್ಞರು ಹೇಳುತ್ತಾರೆ.
ಹೀಗಾಗಿ ಇಂದು ಯಾವುದೇ ಮನೆಗೆ ಹೋಗಿ ನೋಡಿ, ವಿರಾಮದ ಸಮಯದಲ್ಲಿ ತಂದೆ- ತಾಯಿ ಆನ್ ಲೈನ್ ನಲ್ಲಿ ಬಹಳ ಹೊತ್ತು ಕಳೆಯುತ್ತಿದ್ದರೆ ಇತ್ತ ಮಕ್ಕಳು ಟಿವಿ ನೋಡುತ್ತಾ, ಇಲ್ಲವೇ ಟ್ಯಾಬ್ ನಲ್ಲಿ ವಿಡಿಯೋ ಗೇಮ್ಗ್ಳಲ್ಲಿ ಆಡುತ್ತಾ ಕಾಲ ಕಳೆಯುತ್ತಿದ್ದರೆ. ಈ ವಾತಾವರಣ ನಗರ ಪ್ರದೇಶಗಳಲ್ಲಿ ಇನ್ನೂ ಹೆಚ್ಚಾಗಿ ಕಂಡುಬರುತ್ತದೆ.

ಪೋಷಕರು ತಮ್ಮ ಸ್ನೇಹಿತರ ಜೊತೆ ಸಂಪರ್ಕದಲ್ಲಿರಲು ಅಥವಾ ಕೆಲಸದ ವಿಷಯವಾಗಿ ಆನ್ ಲೈನ್ ನಲ್ಲಿ ಕೆಲಸ ಮಾಡುತ್ತಿರಬಹುದು. ಈಗ ಏನೇ ಸಮಸ್ಯೆ ಬಂದರೂ ಗೂಗಲ್ ಮೊರೆ ಹೋಗುವುದು ಸಾಮಾನ್ಯವಾಗಿದೆ. ಮಕ್ಕಳು ಅನುಸರಣೆ ಮಾಡುವುದು ಬೇಗ ಮಕ್ಕಳು ದೊಡ್ಡವರು ಏನು ಮಾಡುತ್ತಾರೆಯೋ ಅದನ್ನು ನೋಡಿ ಕಲಿಯುತ್ತಾರೆ. ಹಾಗಾಗಿ ಪೋಷಕರಲ್ಲಿರುವ ಗೀಳು ಮಕ್ಕಳಿಗೂ ಬರುತ್ತವೆ ಎನ್ನುತ್ತಾರೆ ಬೆಂಗಳೂರಿನ ನಿಮ್ಹಾನ್ಸ್ಕೇಂ ದ್ರದ ವೈದ್ಯಕೀಯ ಮನೋರೋಗ ತಜ್ಞ ಡಾ.ಮನೋಜ್ಕುೂಮಾರ್ ಶರ್ಮ.

ತಾವು ಪ್ರತಿ ತಿಂಗಳು ಹೀಗೆ ನೋಡುತ್ತಿರುವ ಪ್ರಕರಣವನ್ನು ಅವರು ಇಂಡಿಯನ್ಎಂಕ್ಸ್ಪ್ರೆ ಸ್ ಪತ್ರಿಕೆಗೆ ವಿವರಿಸಿದ್ದಾರೆ. ರಮೇಶ್ ರ 4 ವರ್ಷದ ಮಗು ಹೆಚ್ಚಿನ ಸಮಯವನ್ನು ಲ್ಯಾಪ್ ಟಾಪ್ ಮೇಲೆ ಕಳೆಯುತ್ತಿತ್ತು. ಅದಕ್ಕೆ ಕಾರಣರಮೇಶ್ ಹೆಚ್ಚಿನ ಸಮಯವನ್ನು ಆನ್ ಲೈನ್ ನಲ್ಲಿ ಕಳೆಯುವುದು. ಬಹಳ ಸಮಯದವರೆಗೆ ರಮೇಶ್ ಪತ್ನಿ ಕುಟುಂಬದ ಆದಾಯ ಮೂಲವಾಗಿದ್ದರು. ಹಾಗಾಗಿ ಮಗುವಿಗೆ ತಾಯಿಗಿಂತ ತಂದೆ ಮೇಲೆ ಹೆಚ್ಚು ಹೊಂದಿಕೊಳ್ಳುತ್ತಿತ್ತು. ಕೊನೆಗೆ ರಮೇಶ್ ಪತ್ನಿ ತಂದೆ ಮಗುವನ್ನು ಚಟ ಬಿಡಿಸುವ ಕೇಂದ್ರಕ್ಕೆ ಕರೆದೊಯ್ದರು.

ಇನ್ನೊಂದು ಕೇಸಲ್ಲಿ ಸರಿತಾ ಎಂಬುವವರು ಇಂಟರ್ ನೆಟ್ ಗೀಳನ್ನು ಮಗುವಿನಿಂದ ಬಿಡಿಸಲು ಮಗುವಿಗೆ ಹೆಚ್ಚು ಸಮಯ ಕೊಡಲು ತಮ್ಮಉದ್ಯೋಗವನ್ನು ಬಿಟ್ಟು ಬಿಟ್ಟರು. ಮಗು ಮತ್ತು ಗಂಡ ಶಾಲೆ, ಆಫೀಸಿಗೆ ಹೋದ ನಂತರ ಒಂಟಿತನ ಕಾಡುತ್ತಿದ್ದ ಸರಿತಾ ಸ್ಮಾರ್ಟ್ ಪೋನ್ ನಲ್ಲಿ ಹೆಚ್ಚು ಸಮಯ ಕಳೆಯಲಾರಂಭಿಸಿದರು. ನಂತರ ಅವರಲ್ಲಿಯೂ ಗೀಳು ಹತ್ತಿಕೊಂಡು ಅವರಿಗೆ ಚಿಕಿತ್ಸೆ ನೀಡಲಾಯಿತು.

ಇಂಟರ್ನೆಟ್, ಸ್ಮಾರ್ಟ್ ಪೋನ್ ಗೀಳಿನ ಲಕ್ಷಣಗಳೆಂದರೆ ವಿಷರೀತ ಆಹಾರ ಸೇವನೆ, ನಿಯಂತ್ರಣ ಕಳೆದುಕೊಳ್ಳುವುದು, ವಿಡಿಯೋ ಗೇಮ್ ಆಡುವ ಹುಚ್ಚು, ಆನ್ ಲೈನ್ ಶಾಪಿಂಗ್, ಸಾಮಾಜಿಕತಾಣದಲ್ಲಿ ಬಹಳ ಸಮಯ ಕಳೆಯುವುದು, ಯೂಟ್ಯೂಬ್ ವಿಡಿಯೋಗಳನ್ನು ಬಹಳ ಸಮಯದವರೆ ನೋಡುತ್ತಾ ಕುಳಿತುಕೊಳ್ಳುವುದು ಇತ್ಯಾದಿ ಲಕ್ಷಣಗಳು ಇಂಟರ್ನೆಟ್ ಗೀಳಿನ ಸೂಚಕಗಳು.

ಇ-ಕಾಮರ್ಸ್ ಪೋರ್ಟಲ್ ನಲ್ಲಿ ಬಹಳ ಸಮಯದವರೆಗೆ ಕಳೆಯುವುದರಿಂದ ಹಣಕಾಸು ಸಮಸ್ಯೆಗಳು ಕೂಡ ತಲೆದೊರಬಹುದು ಎನ್ನುತ್ತಾರೆ ಮನಃಶಾಸ್ತ್ರಜ್ಞರು.
ಕೆಲವು ಪೋಷಕರಿಗೆ ತಾವು ಮತ್ತು ಮಕ್ಕಳು ಇಂಟರ್ನೆಟ್ ಗೀಳಿಗೆ ಸಿಲುಕಿ ಹಾಕಿಕೊಂಡಿದ್ದೇವೆ ಎಂದು ಗೊತ್ತಿದ್ದರೂ ಅದರಿಂದ ಹೊರಬರುವುದು ಹೇಗೆ ಎಂದುಗೊತ್ತಾಗುವುದಿಲ್ಲ.

ಆನ್ ಲೈನ್, ಇಂಟರ್ನೆಟ್ ಗೀಳಿನಿಂದ ಹೊರಬರಲು ಕೆಲವು ಟಿಪ್ಸ್:
1. ಇಂಟರ್ನೆಟ್ ಗೀಳಿನಿಂದ ಹೊರಬರಲು ಮೂರು ಮುಖ್ಯ ಅಂಶಗಳನ್ನು ಪಾಲಿಸಬೇಕು ಅವು ಪ್ರಸ್ತುತತೆ, ನಿರ್ಬಂಧ ಮತ್ತು ಉಡುಗೊರೆ.

2. ಮೊದಲಿಗೆ ನೀವು ಇಂಟರ್ನೆಟ್ ಗೀಳಿಗೆ ಯಾಕೆ ಬಲಿಯಾಗಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಾಲ್ಕು ಗೋಡೆ ಮಧ್ಯೆ ಬಹಳ ಸಮಯದವರೆಗೆ ಇರುವ ಗೃಹಿಣಿಯರಿಗೆ ಏಕತಾನತೆ, ಉದಾಸೀನ ಸಾಮಾನ್ಯ ಕಾರಣಗಳಾಗಿವೆ.

3. ಇದರಿಂದ ಹೊರಬರಲು ಮೊದಲು ನೀವು ದೃಢ ನಿರ್ಧಾರ ಮಾಡಿಕೊಳ್ಳಬೇಕು. ಮೊದಲಿಗೆ ಗುರಿಯೊಂದನ್ನು ನಿಗದಿಪಡಿಸಿ, ನಿಮ್ಮ ದಿನವನ್ನು ಬ್ಯುಸಿಯಾಗಿರುವಂತೆ ನೋಡಿಕೊಳ್ಳಿ. ಮನೆಯಲ್ಲಿ ಬೇರೆ ಕೆಲಸಗಳತ್ತ ಗಮನ ಹರಿಸಿ.

4. ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳಿ, ಮನೆಯಲ್ಲಿ ಬೇರೆ ಕೆಲಸಗಳತ್ತ ಗಮನ ಹರಿಸಿ.

5. ಇಂಟರ್ನೆಟ್ ಗೀಳು ಸೋಮಾರಿತನವನ್ನು ಹುಟ್ಟು ಹಾಕುತ್ತದೆ. ಬೇರೆ ಇತರೆ ಚಟುವಟಿಕೆಗಳಲ್ಲಿ ಸೇರಿಕೊಳ್ಳುದರಿಂದ ಈ ಸೋಮಾರಿತನವನ್ನು ದೂರಮಾಡಬಹುದು.

6. ಇಂಟರ್ನೆಟ್ ನೋಡಬೇಕೆಂದರೆ ನಿರ್ದಿಷ್ಟ ನಮಯಗಳಲ್ಲಿ ಮಾತ್ರ ನೋಡಿ. ನಿಮ್ಮ ಮಕ್ಕಳಿಗೂ ಅದನ್ನೇ ಅಭ್ಯಾಸ ಮಾಡಿ.

7. ಎಲ್ಲಿಯವರೆಗೆ ನೀವು ಗುರಿ ನಿಗದಿಪಡಿಸಿದ್ದೀರೋ, ಅಲ್ಲಿಯವರೆಗೆ ನಿಮ್ಮ ಗುರಿ ತಲುಪಿದೆಯೇ ಎಂದು ನೋಡಿಕೊಳ್ಳಿ. ನಿಮ್ಮ ಗುರಿ ತಲುಪಿದ್ದರೆ ಬಹುಮಾನ ಕೊಟ್ಟುಕೊಳ್ಳಿ.

LEAVE A REPLY

Please enter your comment!
Please enter your name here