• ನಸೀಬ ಗಡಿಯಾರ್

ಹೌದು ನಾವೆಲ್ಲರೂ ಆಸೆಗಳ ಗೋಪುರದಲ್ಲಿ ಬದುಕುತ್ತಿರುವ ಮನುಷ್ಯರು, ಅದೆಷ್ಟೇ ಆಸ್ತಿ ಅಂತಸ್ತು ಗೌರವ ಎಲ್ಲವೂ ಇದ್ದರೂ ಕೂಡ ಇನ್ನೂ ಹೆಚ್ಚಿನದ್ದು ಬೇಕೆಂಬ ಆಸೆ, ದುರಾಸೆ ಎಲ್ಲವೂ ಮನುಷ್ಯನಿಗಿದೆ ಆತನು ನಾಳಿನ ಬಗ್ಗೆ ಸಹಸ್ರಾರು ಕನಸುಗಳನ್ನು ಕಾಣುತ್ತಾನೆ ಮಾನವನೆಂಬ ಜೀವಿಯ ಕನಸು ಆಸೆಗಳಿಗೆ ಕೊನೆಯೇ ಇಲ್ಲ.ಆತ ಎಲ್ಲಾ ಜೀವಿಗಿಂತಲೂ ಬುದ್ಧಿಜೀವಿ ಎಂದು ಹೇಳುತ್ತಾರೆ ಖಂಡಿತವಾಗಿಯೂ ಹೌದು, ಮಾನವನೆಂಬ ಜೀವಿ ಸಾಕಷ್ಟು ತಂತ್ರಜ್ಞಾನಗಳಿಂದ ತನಗೆ ಬೇಕಾದದ್ದನ್ನು ತಯಾರಿಸಿ ಕೊಂಡಿದ್ದಾನೆ, ಇನ್ನು ಹೊಸ ಹೊಸ ಸಂಶೋಧನೆಗಳನ್ನು ನಡೆಸುತ್ತಲೇ ಇದ್ದಾನೆ.
ಮಾನವನು ನಾಳಿನ ಬಗ್ಗೆ ,ಭವಿಷ್ಯದ ಬಗ್ಗೆ ಕನಸು ಕಾಣುತ್ತಾನೆ ಹೊರತು ಈಗಿರುವ ಕ್ಷಣವನ್ನು ಒಮ್ಮೆಯು ಯೋಚಿಸುವುದಿಲ್ಲ. ಆತನಿಗೆ ಮರಣ ಎಂಬ ಕಲ್ಪನೆಯೇ ಹೊರಟುಹೋಗಿದೆ.ಆ ಸೃಷ್ಟಿಕರ್ತ ಯಾವಾಗ ?ಎಲ್ಲಿ? ಹೇಗೆ ?ನಮಗೆ ಅಂತ್ಯ ದಿನವನ್ನು ಇಟ್ಟಿದ್ದಾನೆ ಎಂಬುದು ಯಾರಿಗೂ ತಿಳಿಯದು, ಆದರೆ ಮನುಷ್ಯನಿಗೆ ನಾನೊಂದು ದಿನ ಆಸ್ತಿ, ಅಂತಸ್ತು ,ಗೌರವ ಪಟ್ಟ, ಏನೇ ಇದ್ದರೂ ಎಲ್ಲವನ್ನು ಬಿಟ್ಟು ಏಕಾಂಗಿಯಾಗಿ ಮರಣದ ಪಯಣವನ್ನು ಮಾಡಲೇಬೇಕೆಂಬ ವಿಷಯ ಮರೆತಿದ್ದಾನೆ.

ಹೌದು ಆ ಸೃಷ್ಟಿಕರ್ತನ ಲೆಕ್ಕಾಚಾರವೇ ಹಾಗೆ ಒಮ್ಮೆ ಮರಣವನ್ನು ತೀರ್ಮಾನಿಸಿದರೆ ಯಾರಿಂದಲೂ ಅದನ್ನು ತಡೆಯಲಸಾಧ್ಯ. ನಮ್ಮ ಕಣ್ಣಮುಂದೆ ಅದೆಷ್ಟೋ ಜೀವಗಳು ನಡುಬೀದಿಯಲ್ಲಿ , ಉರಿಯುತ್ತಿರುವ ಬೆಂಕಿಯಲ್ಲಿ, ಸಮುದ್ರದಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡ ಘಟನೆಗಳು ದಿನಪತ್ರಿಕೆಯಲ್ಲಿ ವಾಹಿನಿಗಳಲ್ಲಿ ಕಾಣುತ್ತಲೇ ಇದ್ದೇವೆ.ಆಘಾತಗಳು ಆಕಸ್ಮಿಕ ಘಟನೆಗಳಂತೆ ಕಂಡರೂ ಕೂಡ ಅದು ವಿಧಿಯ ತೀರ್ಮಾನವೂ ಹೌದು.ಆ ಸೃಷ್ಟಿಕರ್ತನು ಮನುಷ್ಯನನನ್ನು ಸೃಷ್ಟಿಸಿದಾಗಲೇ ಆತನ ಮರಣದ ದಿನವನ್ನು ಕೂಡ ನಿರ್ಧರಿಸುತ್ತಾನೆ.
ಮಾನವ ಎಂದರೆ ಆಸೆಯ ಪ್ರತಿರೂಪ, ಆತನಲ್ಲಿ ಕೋಟ್ಯಾಂತರ ಹಣ, ಆಸ್ತಿ ಇದ್ದರೂ ಕೂಡ ಆತನಿಗೆ ತೃಪ್ತಿ ಎಂಬುದೇ ಇರುವುದಿಲ್ಲ. ಇನ್ನೂ ಬೇಕು ಎಂಬ ಅತಿಯಾಸೆಯಿಂದಲೇ ಕೊನೆಗೊಂದು ದಿನ ಶವ ಆಗುತ್ತಾನೆ…

ತನ್ನ ಮಗನಿಗೆ: ಜೋಪಾನ ಮಗ ಆಫೀಸಿಗೆ ತಲುಪಿದ ತಕ್ಷಣ ಕರೆ ಮಾಡು ಎಂದು ಹೇಳಿದ ತಾಯಿಗೆ ಕ್ಷಣಾರ್ಧದಲ್ಲಿ ಕರೆ ಬರುವುದು ನಿಮ್ಮ ಮಗನಿಗೆ ಆಕ್ಸಿಡೆಂಟ್ ಆಗಿ ತೀರಿ ಹೋಗಿದ್ದಾನೆ ಎಂದು.
ಹೆಂಡತಿ ತನ್ನ ಗಂಡನಿಗೆ: ರೀ, ಇವತ್ತು ಸಂಜೆ ಬೇಗ ಬನ್ನಿ ಎಂದವಳಿಗೆ ಸಂಜೆ ಹೊತ್ತಿಗೆ ಮನೆಗೆ ತಲುಪಿದ್ದು ಗಂಡನ ಶವ?
ಸ್ನೇಹಿತರೆ ಮರಣ ಎಂಬುದು ನಮ್ಮ ಸುತ್ತಮುತ್ತಲೇ ನಮ್ಮ ಜೊತೆಯಲ್ಲಿ ಇರುತ್ತದೆ, ಆದರೆ ಅದಕ್ಕೆ ತಕ್ಕ ಸಮಯ ಸಂದರ್ಭ ಬಂದಾಗ ನಮ್ಮ ಪ್ರಾಣಪಕ್ಷಿಯು ಹಾಗೆಯೇ ಹಾರಿಹೋಗುತ್ತದೆ. ನಾವ್ಯಾರು ಊಯಿಸದೇ ಇದ್ದಾಗ ಆಕಸ್ಮಿಕವಾಗಿ ಸಂಬಂಧಿಸುವುದೇ ಮರಣ, ನಿನ್ನೆ ನಮ್ಮ ಜೊತೆಗಿದ್ದವರು ನಾಳೆ ನಮ್ಮ ಜೊತೆಗೇ ಇರುತ್ತಾರೆ ಎಂಬುದು ಬರೀ ಊಹೆ ಅಷ್ಟೇ.
ವಿಧಿಯಾಟವೇ ಹಾಗೆ ,ಯಾವಾಗ ಏನನ್ನು ನಿರ್ಧರಿಸುತ್ತದೆ ಆ ಸಮಯಕ್ಕೆ ನಡೆದೇ ನಡೆಯುತ್ತದೆ.
ಹೌದು ಸ್ನೇಹಿತರೆ ,ಈಗ ಜಗತ್ತಿನಲ್ಲಿ ಹರಡಿರುವ ವೈರಸ್ ಗೆ ತುತ್ತಾಗಿ ಅದೆಷ್ಟು ಜೀವಗಳು ಶವವಾಗಿ ಒಂದಾದ ನಂತರ ಒಂದರಂತೆ ಜೀವವನ್ನು ಕಳೆದುಕೊಳ್ಳುತ್ತಲೇ ಇದೆ ಅದನ್ನೆಲ್ಲ ಕಂಡಾಗ ಮೈ ಜುಮ್ಮೆನಿಸುತ್ತದೆ, ಯಾರನ್ನು, ಯಾವಾಗ ಕೊರೋನ ಎಂಬ ಮಾರಿಯು ಆಕ್ರಮಿಸುತ್ತದೆಯೋ ಎಂಬ ಭಯದಲ್ಲಿ ಜೀವನ ಸಾಗುತ್ತಿದೆ.
ಸ್ನೇಹಿತರೆ ಅತಿ ಭಯ ಬೇಡ, ಧೈರ್ಯದಿಂದ ಎದುರಿಸೋಣ ಸಾವನ್ನು ಯಾರಿಂದಲೂ ತಡೆಯಲಾಗದು, ಆದರೆ ಬರೀ ಭಯದಿಂದ ನಮ್ಮ ಜೀವವನ್ನು ನಾವೇ ಕಳೆದುಕೊಳ್ಳುವುದು ಬೇಡ .ಇತರರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡೋಣ, ಆದಷ್ಟು ಬೇಗ ಆ ಕರುಣಾಮಯಿಯಾದ ಸೃಷ್ಟಿಕರ್ತನು ಈ ರೋಗದಿಂದ ಮುಕ್ತಿಗೊಳಿಸಬಹುದು..
ಇನ್ಶಾಅಲ್ಲಾಹ್……

LEAVE A REPLY

Please enter your comment!
Please enter your name here