ಬರೆದವರು: ನಾಗರಾಜ ಖಾರ್ವಿ
ಶಿಕ್ಷಕ
ಸ.ಹಿ.ಪ್ರಾ. ಶಾಲೆ ಕಲ್ಮಂಜ
ಬಂಟ್ವಾಳ ತಾಲೂಕು
ಮತ್ತೆ ಬಂದಿದೆ
ಗೋಕುಲಾಷ್ಟಮಿ…
ಇಷ್ಟ ಬಯಕೆಯ ಬೇಡಲು|
ಕೃಷ್ಣವೆಂಬ
ಇಷ್ಟ ದೇವರ
ಹಾಡಲು ಕೊಂಡಾಡಲು||
ಕಂಸ ದೈತ್ಯನ
ದ್ವಂಸ ಮಾಡಿದ
ಹಿಂಸೆ ಬಯಸದ ಮನವದು|
ಎಮ್ಮ ಮನಸಿನ
ಹಿಂಸೆ ಭಾವನೆ
ತೊಲಗಿಸೈ ಪರಮಾತ್ಮನೆ||
ಪ್ರೀತಿಯಿಂದಲಿ
ಬೇಡಿ ಬಂದಿಹ
ಜನರ ಸಲಹೋ ದೇವನೆ|
ಜಗವ ಪಾಲಿಸಿ
ಬೆಳಕ ತೋರಿಸಿ
ಮಾರ್ಗದೋರೋ ಪಾಲನೆ||
ಬುವಿಯ ತುಂಬಿಹ
ದ್ವೇಷ ಅಸೂಯೆ
ತಮವ ತೊಲಗಿಸಿ ಕಾಯೋ ನೀ|
ಜೊತೆಗೆ ಬಾಳವ
ವ್ರತವ ಕಲಿಸೋ
ಕರವ ಪಿಡಿಯುತ ದೇವನೆ||