ನಾನೊಂದು ನದಿ
ಹಳ್ಳ ಹೊಲ ಜಲಪಾತದಲಿ
ಸೇರಿ ಹರಿದ
ಮಳೆ ಹನಿಗಳೇ
ನನ್ನ ಜೀವಾಳ
ಬೆಟ್ಟ ಜಿಗಿದು
ಕಾಡು ಮೇಡು ಅಲೆದು
ಹಾಯಾಗಿ ಹರಿಯುವೆ
ಹರಿಯುವುದೇ ನನ್ನ ಜೀವನ
ಕುಡಿಯಲು ಕುಡಿಸಲು
ಹಸಿರ ಬೆಳೆಸಲು
ನನ್ನೊಡಲ ಉಸಿರ ಕೊಡುವೆ
ರೈತರಿಗೆ ಅನ್ನದಾತರಿಗೆ
ನಂಬಿಕೊಂಡು ಬದುಕು
ಕಟ್ಟಿದವರಿಗೆ
ನನ್ನೊಡಲ ಹರಿದು ಜೀವ ಹೀರಿ
ಮುಳ್ಳು ನಾಟಿ ಎಂಜಲು ಉಗಿದು
ಅಡ್ಡಗೋಡೆಯ ಕಟ್ಟಿ
ಹರಿಯಲು ಬಿಡದವರ
ಬಿಟ್ಟೆನೆಂದುಕೊಂಡೆಯಾ…
ಬಂಡಾಯವೆದ್ದು
ತಿರುಗಿ ಹರಿಯುವೆ
ಮನ ಬಂದಂತೆ
ನೆರೆಯಾಗಿ
ನೊರೆ ನೂರೆಯಾಗಿ
ತೊರೆಯಾಗಿ
ಪ್ರವಾಹದಲುಕ್ಕಿ
ಪ್ರಬಲವಾಗಿ ಹರಿಯುವೆ
ನನ್ನೊಳಗಿನ ರೋಷಾಗ್ನಿ ತಣಿಸಿ
ಮಳೆ ಹನಿಗಳ ಜೊತೆ ಸೇರಿ
ಮತ್ತೆ ಹರಿಯುವೆ
ಸಾಗರ ಸೇರುವವರೆಗೂ…..

ಲೇಖಕ: ಎಂ.ಅಶೀರುದ್ದಿನ್ ಆಲಿಯಾ ಮಂಜನಾಡಿ

LEAVE A REPLY

Please enter your comment!
Please enter your name here