ಲೇಖಕರು: ಮೌ.ವಹೀದುದ್ದೀನ್ ಖಾನ್

ಅನುವಾದ: ತಲ್ಹಾ ಕೆ.ಪಿ

ಮಾನವನ ಅತ್ಯಂತ ದೊಡ್ಡ ಅವಶ್ಯಕತೆ ಏನು ? ಆತನಿಗೆ ನಿಜವಾಗಿಯೂ ಅತ್ಯಂತ ಸಂತೋಷಭರಿತ ಜೀವನದ ದೊರೆಯಬೇಕೆನ್ನುವುದಲ್ಲವೇ ? ಎಲ್ಲಾ ಕಾಲದಲ್ಲಿಯೂ ಮಾನವನ ಸ್ವಪ್ನವು ಇದೇ ಆಗಿತ್ತು. ಪ್ರತಿಯೋರ್ವನೂ ಇದೇ ಅಭಿಲಾಷೆಯೊಂದಿಗೆ ಜೀವಿಸುತ್ತಾನೆ. ಆದರೆ ಪ್ರತಿಯುಯೋರ್ವನು ಆಸೆ ಈಡೇರುವ ಮೊದಲೇ ಮರಣಹೊಂದುತ್ತಾನೆ.

ಎಲ್ಲ ತತ್ವಶಾಸ್ತ್ರಗಳು ಮತ್ತು ಸಿದ್ಧಾಂತಗಳು ಹಾಗೂ ಸರ್ವಮಾನವ ಪ್ರಯತ್ನಗಳು ಇದೇ ಬಿಂದುವಿನ ಸುತ್ತ ತಿರುಗುವುದನ್ನು ಕಾಣುತ್ತೇವೆ. ಆದರೆ ಆತ ವೈಚಾರಿಕವಾಗಿಯೂ ಅದನ್ನು ಪಡೆದುಕೊಂಡಿಲ್ಲ ಮತ್ತು ಪ್ರಾಯೋಗಿಕವಾಗಿಯೂ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಿಲ್ಲ.

ಈ ಪರಾಜಯದ ಕರಣ ಒಂದೇಯಾಗಿದೆ, ಅದೇನೆಂದರೆ ಮಾನವ ತನ್ನ ಗೆಲುವನ್ನು ಇಹಲೋಕದಲ್ಲೇ ಬಯಸುತ್ತಾನೆ. ಸಹಸ್ರಾರು ವರ್ಷಗಳ ಅನುಭಾವವು ಐಹಿಕ ಜೀವನದ ಅಭಿಲಾಷೆಯ ಈಡೇರಿಕೆಗೆ ಸಾಲದೆಂಬುದನ್ನು ಸಾಬೀತುಪಡಿಸಿದೆ. ಈ ಲೋಕದ ಪರಿಮಿತಿ ಮತ್ತು ಮಾನವ ಸ್ವಾತಂತ್ರ್ಯದ ದುರ್ಬಳಕೆಯು ಅತ್ಯಂತ ನಿರ್ಣಾಯಕ ರೂಪದಲ್ಲಿ ಲೋಕವು ಮಾನವನ ಸ್ವಪ್ನಫಲ ಇಡೆರುದನ್ನು ತಡೆಯುತ್ತದೆ.

ನಾವು ಜವನವನ್ನು ಜಯಿಸುವ ಯಾತ್ರೆಯಲ್ಲಿರುವಾಗಲೇ ಮರಣವು ನಮ್ಮನ್ನು ಆವರಿಸುತ್ತದೆ ನಾವು ಯಾಂತ್ರಿಕ ವಿಕಾಸವನ್ನು ಸೃಷ್ಟಿಸುತ್ತೇವೆ ಆದರೆ ಅದರಿಂದ ಉಂಟಾಗುವ ಕೈಗಾರಿಕಾ ಸಮಸ್ಯೆಗಳ ಎಲ್ಲ ವಿಕಾಸವನ್ನು ಅರ್ಥಹೀನಗುಳಿಸುತ್ತದೆ.

ನಾವು ಬಹಳಷ್ಟು ಬಲಿದಾನಗಳಿಂದ ಒಂದು ರಾಜಕೀಯ ವ್ಯವಸ್ಥೆಯನ್ನು ಸೃಷ್ಟಿಸುತ್ತೇವೆ, ಆದರೆ ಅಧಿಕಾರದಲ್ಲಿ ಕುಳಿತವರ ಮನಸ್ತಾಪವು ಅದನ್ನು ಕಾರ್ಯರೂಪದಲ್ಲಿ ಫಲಶೋನ್ಯಗೊಳಿಸುತ್ತದೆ. ನಾವು ನಮ್ಮ ಇಚ್ಚೆಗೆ ಅನುಗುಣವಾಗಿ ಜೀವಿಸಲು ಪ್ರಯತ್ನಿಸುತ್ತೇವೆ ಆದರೆ ಮಾನವರ ದ್ವೇಷ, ಅಸೂಯೆ,ಅಹಂಕಾರ, ಅಕ್ರಮವು ಮತ್ತು ಪ್ರತಿಕಾರವು ಹೊರಬಂದು ನಮ್ಮನ್ನು ಗೊಂದಲದಲ್ಲಿ ಸಿಲುಕಿಸುತ್ತದೆ, ಮತ್ತು ನಮ್ಮ ಮನೆಯು ಕಣ್ಣ ಮುಂದೆಯೇ ಛಿಧ್ರಗೊಳ್ಳುವುದನ್ನು ಕಣ್ಣಾರೆ ನೋಡುತ್ತಾ ಈ ಲೋಕವನ್ನು ತೇಜಿಸುತ್ತೇವೆ.

ಈ ನಿರಂತರ ಅನುಭವಗಳು ನಮ್ಮ ಸ್ವಪ್ನ ಲೋಕವು ಈಗಿನ ಭೂಸಂಬಂಧಿ ಸ್ಥಿತಿಗಳಿಂದ ನಿರ್ನಾಮವಾಗಲಾರದು, ಅದರಿಂದಲೇ ಬೇರೆ ಲೋಕ ಮತ್ತು ಬೇರೆ ಪರಿಸ್ಥಿತಿಗಳ ಅವಶ್ಯಕತೆ ಇದೆ. ಮಾನವನ ಅಭಿಲಾಷೆಯು ಸ್ವತಃ ಒಂದು ವಾಸ್ತವಿಕ ಮಾನವ ಅವಶ್ಯಕತೆಯಾಗಿದೆ ಆದರೆ ಈ ಅವಶ್ಯಕತೆಯ ಪೂರೈಕೆಯು ಮರಣಾನಂತರದ ಜೀವನದಲ್ಲಿಯೇ ಸಾಧ್ಯ.

ಇದೇ ಚಿಂತನೆಯು ನಮ್ಮ ಇಹ ಲೋಕದ ಜೀವನವನ್ನು ಅರ್ಥಪೂರ್ಣ ಗೊಳಿಸುತ್ತದೆ, ಇದರ ನಂತರ ಇಹಲೋಕ ಜೀವನವು ಪರಿಶ್ರಮದ ಲೋಕವಾಗುತ್ತದೆ ಮತ್ತು ಪರಲೋಕವು ಪರಿಶ್ರಮದ ಫಲ ಪಡೆಯುವ ಲೋಕವಾಗುತ್ತದೆ. ಇದಾದ ನಂತರ ಮಾನವ ಸಂತ್ರಿಪ್ತಿಯಿಂದ ಮುನ್ನಡೆಯಬಹುದಾದ ಗುರಿಯನ್ನು ತಲುಪುತ್ತೇವೆ. ಇಹಲೋಕವನ್ನೇ ಗುರಿ ಎಂದು ಭಾವಿಸುವವನು ನಿರಾಸೆ ಮತ್ತು ವೈಮನಸ್ಸಿನ ಹೊರತು ಬೇರೆಲ್ಲೂ ತಲುಪಲಾರ.ಆದರೆ ಪರಲೋಕವನ್ನು ಅಂತಿಮ ಗುರಿಯೆಂದು ಭಾವಿಸುವವನ ವಿಶ್ವಾಸವು ಮೊಂದೆ ಚಿರಶಾಂತಿಯ ಬಾಗಿಲನ್ನು ತೆರೆದಿಡುತ್ತದೆ. ಎಲ್ಲವನ್ನು ಕಳೆದು ಕೊಳ್ಳುವ ಲೋಕಕ್ಕಿಂತ ಕಳೆದುಕೊಳ್ಳುವುದರಿಂದಲೇ ಪಡೆದುಕೊಳ್ಳುವ ಗುಟ್ಟು ಸಮಂಜಸವಾಗಿ ಕಾಣುತ್ತದೆ.

LEAVE A REPLY

Please enter your comment!
Please enter your name here