ಮೆಂಟೊ ಇಂದಿನ ದಮನಿತರ ಪ್ರತೀಕವೇ….?
ಲೇಖಕರು: ತಲ್ಹಾ ಇಸ್ಮಾಯಿಲ್
ಸಾದತ್ ಹುಸೇನ್ ಮೆಂಟೊ ಜಿವನಾಧರಿತ ಚಲನಚಿತ್ರ ,ಮೆಂಟೊ ಬಹಳ ಸೋಗಸಾಗಿ ಮೂಡಿಬಂದಿದೆ.ಸಾದತ್ ಹುಸೇನ್ ಮೆಂಟೊ ಸ್ವಾತಂತ್ರ ಪೂರ್ವದ ಓರ್ವ ಪ್ರಸಿದ್ದ ಬರಹಗಾರು ಅವರು ಸಮಾಜದಲ್ಲಿರುವ ವಾಸ್ತವವನ್ನು ಕಥೆಗಳ ಮುಖಾಂತರ ವಿವರಿಸಿದರು. ಆ ಕಾಲದಲ್ಲಿ ಯಾರು ಮಾತನಾಡಲು ಅಥವಾ ಚರ್ಚಿಸಲು ಬಯಸದ ಹಾಗೂ ಸಮಾಜದಲ್ಲಿ ನಿರಂತರ ನಡೆಯುವ ವಾಸ್ತವ ಸಂಗತಿಗಳನ್ನು ಬಹಳ ಸುಂದರವಾಗಿ...
ನನ್ನೊಳಗೇನಿರಬಹುದು…
ನಿನ್ನೆ ಹತ್ತಿ ಕೂತ ಬಸ್ಸಿನ
ಟ್ಯಾಂಕಿಗೆ ಡೀಸೆಲ್ಲು
ಸುರಿದ ಹುಡುಗನಿಗೆ
ಸಂಬಳ ಸಿಕ್ಕಿರಬಹುದೆ
ನಿಸ್ತೇಜ ಕಂಗಳಲಿ
ರಸ್ತೆಯನೆ ದಿಟ್ಟಿಸುತ
ಸ್ಟೇರಿಂಗು ತಿರುಗಿಸುವ
ಚಾಲಕನ ತಲೆಯೊಳಗೆ
ಮಗಳು ಕೊಡಿಸಲು
ಹಠ ಮಾಡಿದ
ಹೊಸ ಮೊಬೈಲಿನ ಚಿತ್ರವಿರಬಹುದೆ
ಈ ಮಧ್ಯ ರಾತ್ರಿಯಲಿ
ತಿರುವಿನಲಿ ಬಸ್ಸೇರಿದ
ಒಬ್ಬಂಟಿ ಹುಡುಗಿಯ
ಸುಂದರ ಕಣ್ಣುಗಳಿಗೆ
ನಾವೆಲ್ಲ ರಕ್ಕಸರಂತೆ
ಕಂಡಿರಬಹುದೆ
ಸೀಟೊಳಗೆ ದೇಹ ತುರುಕಿಸಿ
ತೂಕಡಿಸುತ ಕೂತಿರುವ
ತೋರದ ವ್ಯಕ್ತಿಗೆ
ತೂಕ ಇಳಿಸುವ ಬಗ್ಗೆ
ತಲೆನೋವಿರಬಹುದೆ
ಎರಡೆರಡು ಬಾರಿ
ನನ್ನತ್ತ ತಿರುಗಿದವಗೆ
ಏನೆನಿಸಿರಬಹುದು
ನನ್ನ ಕುರಿತು
ಕಂಡಕ್ಟರಿಗೇ ಬೈದ
ಹಲ್ಲಿಲ್ಲದ ಮುದುಕಿಯನು
ಒಳಗೊಳಗೆ ಆತ
ಕ್ಷಮಿಸಿರಬಹುದೆ
ಬಸ್ಸು ತುಂಬಿದ
ಇಷ್ಟೊಂದು ಜನರೆಲ್ಲ
ಎಲ್ಲೆಲ್ಲಿಗೆ ಹೊರಟವರು
ಖುಷಿಗೆ ಜೊತೆಯಾಗಲು
ದುಃಖಕೆ ಹೆಗಲ ನೀಡಲು
ಹೀಗೇ...
ಟಿಪ್ಪು… ಕವಿತಾ… ಕಾರ್ನಾಡ್…!
(ಒಂದು ಸಂಕ್ಷೀಪ್ತ ಓದು)
ಶಿಕ್ರಾನ್ ಶರ್ಫುದ್ದೀನ್ ಎಂ. +91 8197789965 ಪಾಂಡೇಶ್ವರ, ಮಂಗಳೂರು
"ಈ ದೇಶದ ಯೋಗಕ್ಷೇಮ, ಈ ದೇಶದ ಮರ್ಯಾದೆಯಲ್ಲಿ ಅಭಿಮಾನ ಬದ್ಧನಾದ ಯಾವನೊಬ್ಬನೂ ಫ್ರೆಂಚ್ ಸರಕಾರ, ಗತಿಸಿದ ಟೀಪು ಸುಲ್ತಾನ, ಇಬ್ಬರೂ ಕಲೆತು ಕೈಕೊಂಡ ಸಾಹಸಪೂರಿತವೂ, ಪ್ರಚಂಡವೂ...
ಪ್ರೇಮ ಸೂಫಿ ಬಂದೇ ನವಾಝ್ : ಓದು ಮತ್ತು ಜಿಜ್ಞಾಸೆ
ಪುಸ್ತಕ ವಿಮರ್ಶೆ
ಇಸ್ಮತ್ ಪಜೀರ್
ಇತ್ತೀಚೆಗೆ ನನಗೆ ಮೂರು ಮಂದಿ ಲೇಖಕರು ಸೂಫಿಸಂಗೆ ಸಂಬಂಧಿಸಿದ ಕೃತಿಗಳನ್ನು ಕಳುಹಿಸಿದ್ದರು. ನನ್ನ ಗುರುಸಮಾನರಾದ ಫಕೀರ್ ಮುಹಮ್ಮದ್ ಕಟ್ಪಾಡಿಯವರು ತಮ್ಮ " ಸೂಫಿ ಆಧ್ಯಾತ್ಮ ಚಿಂತನೆಗಳು" , ಸ್ವಾಲಿಹ್ ತೋಡಾರ್ ಅವರು ಅನುವಾದಿಸಿದ...
ದೃಶ್ಯಂ-2 ಮತ್ತು ಮೋಹನ್‌ಲಾಲ್!!
ಪ್ರಶಾಂತ್ ಭಟ್
ವಿಮರ್ಶೆ
ಮಲಯಾಳಂ ಕಾದಂಬರಿಗಳಾಗಲೀ, ಸಿನಿಮಾಗಳಾಗಲೀ ಎಂಬತ್ತು ತೊಂಬತ್ತರ ದಶಕಗಳಲ್ಲಿ ಭಿನ್ನವಾಗಿ ನಿಲ್ಲಲು ಕಾರಣ ಅದರ ಕಥೆ. ಅದಕ್ಕಿಂತ ಮುಖ್ಯವಾಗಿ ಕಥಾನಾಯಕ ನಮ್ಮ ನಿಮ್ಮೆಲ್ಲರ ಹಾಗೆ ಸಾಮಾನ್ಯ ಮನುಷ್ಯ ಎಂಬುದು; ಎಲ್ಲರಂತೆ ಅವನಿಗೂ ರಾಗ- ದ್ವೇಷಗಳೂ, ಸೋಲು ಗೆಲುವುಗಳೂ ಇದೆ...
ಕ್ರಾಂತಿಕಾರಿ ಸಾಮಾಜಿಕ ನಾಟಕ : “ಬಂಡಾಯದ ತೀರ್ಪು”
ಪುಸ್ತಕ ವಿಮರ್ಶೆ
ಲೇಖಕರು:- ರವಿ ನವಲಹಳ್ಳಿ (ವಿದ್ಯಾರ್ಥಿ)
"ಬಂಡಾಯದ ತೀರ್ಪು ಅರ್ಥಾತ್ ಧನಿಕನ ಸೊಕ್ಕಿಗೆ ತಕ್ಕ ಶಿಕ್ಷೆ " ಎಂಬ ಕ್ರಾಂತಿಕಾರಿ ಸಾಮಾಜಿಕ ನಾಟಕವನ್ನು ನನ್ನ ಆತ್ಮೀಯ...
ಕನ್ನಡ ನಾಡಿಗೆ ಸಲಾಂ
ಬರೆದವರು: ಎಂ.ಅಶೀರುದ್ದೀನ್ ಅಲಿಯಾ, ಮಂಜನಾಡಿ.
ಕರುನಾಡು ಕಾರುಣ್ಯದ ಗೂಡು
ಪ್ರೀತಿಯ ಹರಸಿ,
ಸ್ನೇಹವ ಬೆರಸಿ
ನೆರಳನ್ನು ಚಾಚಿದ
ಹೆಮ್ಮೆಯ ನಾಡಿಗೆ ಸಲಾಂ ಸಲಾಂ
ಜೋಗದ ಜುಳು ಜುಳು ನಾದದ
ಸಾಗರದಲೆಗಳ, ಸಾಲು ಮರಗಳ
ಕಾವೇರಿಯ ಒಡಲಿನ
ಸಹ್ಯಾದ್ರಿಯ ಮಡಿಲಿನ
ಹಸಿರು ಸಿಂಗಾರದ ನಾಡಿಗೆ ಸಲಾಂ ಸಲಾಂ
ಸಾಹಿತ್ಯ ಸಂಗೀತ ಸಂಸ್ಕೃತಿಯ
ಹಿರಿಮೆಯ ಗಳಿಸಿದ
ಕೋಟೆ ಕೊತ್ತಲ ಶಿಲ್ಪ ವರ್ಣದ ಕಲೆಗಳುದಾಯಿಸಿದ
ಗತ ಕಾಲದ ವೈಭವ ಸಾರುವ
ಇತಿಹಾಸದ ಬೀಡಿಗೆ ಸಲಾಂ ಸಲಾಂ
ರನ್ನ, ಪಂಪ, ಹರಿಹರ
ಕನಕ, ಕಬೀರ,...
ನೆಲದ ನೆನಪು
ಕಥೆ
ಹಂಝ ಮಲಾರ್
ಅದೆಷ್ಟೋ ವರ್ಷದ ನಂತರ ನಾನು ನನ್ನೂರಿಗೆ ಕಾಲಿಟ್ಟಾಗ ಅಲ್ಲಿನ ಬದಲಾವಣೆಗಳನ್ನು ಕಂಡು ನನ್ನ ಕಣ್ಣುಗಳು ನಂಬದಾದವು. ನಾನು ನನ್ನೂರಿಗೆ ಬಂದಿದ್ದೇನೋ ಅಥವಾ ದಾರಿ ತಪ್ಪಿ ಬೇರೆ ಊರಿಗೆ ಕಾಲಿಟ್ಟಿದ್ದೇನೋ ಎಂಬ ಸಂಶಯ ಬರುವಷ್ಟರ...
ಚಿದಂಬರ ರಹಸ್ಯ : ಪೂರ್ಣ ಚಂದ್ರ ತೇಜಸ್ವಿ
ವಿಮರ್ಶೆ : ಕಾದಂಬರಿ
ಜೈಬ ಅಂಬೇಡ್ಕರ್ ಚಿತ್ರದುರ್ಗ
ನಾನು ತೇಜಸ್ವಿ ರವರ ಬರಹ ಓದಿದುದರಲ್ಲಿ ಇದು 2ನೇ ಕಾದಂಬರಿ ನಿಜಕ್ಕೂ ಇದು ಅದ್ಬುತವಾಗಿ...