• ನಬೀಲಾ ಜಮಿಲ್, ದೆಹಲಿ ಮೂಲದ ವಕೀಲೆ.

ನಾನು ಇತ್ತೀಚೆಗೆ ವೃತ್ತಿಯಲ್ಲಿ ಸೇರಿಕೊಂಡ ಯುವ ವಕೀಲೆ, ಕಾನೂನಿನ ಆಳ, ನ್ಯಾಯಾಲಯಗಳ ಶಿಷ್ಟಾಚಾರ ಮತ್ತು ದಾವೆಗಳ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿದ್ದೇನೆ. ಹಾಗಿದ್ದರೂ, ಒಂದು ವಿಷಯದ ಬಗ್ಗೆ ನನಗೆ ಸ್ಪಷ್ಟತೆ ಇದೆ – ಅಥವಾ ಈ ಕುರಿತಾಗಿ ನನ್ನಲ್ಲಿ ಸ್ಪಷ್ಟತೆ ಮೂಡಿಸಲಾಗಿದೆ ಎಂದು ಹೇಳಬಹುದು, ಅದು ನನ್ನ ಗುರುತು. ನಾನು ಮುಸ್ಲಿಂ – ಕಾಣುವ ಮುಸ್ಲಿಂ.

ನಾನು ಈ ವರ್ಷದ ಮಾರ್ಚ್‌ನಲ್ಲಿ ಮೊದಲ ಬಾರಿಗೆ ಕಾರ್ಕಾರ್ಡೂಮಾ ನ್ಯಾಯಾಲಯಕ್ಕೆ ಕಾಲಿಟ್ಟೆ. ಈಶಾನ್ಯ ದೆಹಲಿ ಹಿಂಸಾಚಾರದ ಒಂದು ವರ್ಷದ ನಂತರ. ಈಶಾನ್ಯ ದೆಹಲಿ, ರಾಜಧಾನಿಯ ಗಡಿಯಲ್ಲಿರುವ ಜಿಲ್ಲೆ, ತಮ್ಮ ದೊಡ್ಡಸ್ಥಿಕೆಯಿಂದಾಗಿ ಕುಖ್ಯಾತಿ ಹೊಂದಿರುವ ಮುಖ್ಯ ನಗರದ ಜನರು, ಅದು (ಈಶಾನ್ಯ ದೆಹಲಿ) ತನ್ನದೇ ಎಂದು ಗುರುತಿಸಲು ಸಹ ಬಯಸುವುದಿಲ್ಲ. ಒಂದು ಕಾಲದಲ್ಲಿ ಶಹಜಹಾನಾಬಾದ್ ಆಗಿದ್ದ ದೆಹಲಿಯಲ್ಲಿ, ಮುಸ್ಲಿಮರು ಅದರ ಗಡಿಯಲ್ಲಿ ಮತ್ತು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ದೆಹಲಿ ನಗರವು, ಇಡೀ ದೇಶದಂತೆಯೇ, ಮುಸ್ಲಿಮರನ್ನು ಇನ್ನು ಮುಂದೆ ನಗರದ ಮುಖ್ಯ ಭಾಗಗಳಲ್ಲಿ ಸ್ವೀಕರಿಸಿ ಕೊಳ್ಳಲು ಇಚ್ಛಿಸುವುದಿಲ್ಲ – ಆದ್ದರಿಂದ ದೆಹಲಿಯ ಓಕ್ಲಾ ಮತ್ತು ಸೀಲಾಮ್ ಪುರ ಪ್ರದೇಶಗಳು ಅನಿವಾರ್ಯವಾಗುತ್ತದೆ. ಸ್ವಾಭಾವಿಕವಾಗಿ, ಈಶಾನ್ಯ ದೆಹಲಿಯಲ್ಲೂ ಸಾಕಷ್ಟು ಮುಸ್ಲಿಂ ಜನಸಂಖ್ಯೆ ಇದೆ.

ಕಳೆದ ವರ್ಷ ಫೆಬ್ರವರಿಯಲ್ಲಿ, ದೆಹಲಿಯು ಈ ದಶಕದಲ್ಲಿ ಕಂಡು ಬಂದ ಅತ್ಯಂತ ಭೀಕರವಾದ ಕೋಮು ಹಿಂಸಾಚಾರಕ್ಕೆ ಸಾಕ್ಷಿಯಾಯಿತು – ಇದು 1984 ರ ಸಿಖ್ ವಿರೋಧಿ ಹಿಂಸಾಚಾರಕ್ಕೆ ಸಮಾನಾಂತರವಾಗಿದೆ. ಸ್ಪಷ್ಟತೆಗಾಗಿ, ಇಲ್ಲ, ನಾನು ಅದನ್ನು “ಗಲಭೆ” ಎಂದು ಕರೆಯುವುದಿಲ್ಲ. ನಮ್ಮ ದೇಶದ ಇತಿಹಾಸದಲ್ಲಿ, ವಿರಳವಾಗಿ “ಗಲಭೆಗಳು” ನಡೆದಿವೆ – ಇದು ಇತಿಹಾಸವನ್ನು ಬರೆಯುವ ಸಮುದಾಯವು ತನ್ನ ತಪ್ಪುಗಳನ್ನು ಮರೆಮಾಚಲು ಬಳಸುವ ಪರಿಭಾಷೆಯಾಗಿದೆ. ಹೆಚ್ಚಾಗಿ ನಡೆಯುವಂತೆ, ದೆಹಲಿಯಲ್ಲಿ ನಡೆದದ್ದು ಮುಸ್ಲಿಂ ವಿರೋಧಿ ಹಿಂಸಾಚಾರ, ಒಂದು ಹತ್ಯಾಕಾಂಡ. ನಾನು ಇದನ್ನು ಹೀಗೆಯೇ ಹೇಳ್ತಾ ಇಲ್ಲ, ಸಂಖ್ಯಾಶಾಸ್ತ್ರೀಯವಾಗಿ ಹೇಳುತ್ತಿದ್ದೇನೆ. ಅಧಿಕೃತ ಮಾಹಿತಿಯ ಪ್ರಕಾರ ಕೊಲ್ಲಲ್ಪಟ್ಟ 53 ಜನರ ಪೈಕಿ, ಮೂರನೇ ಎರಡರಷ್ಟು ಭಾಗ ಜನರು ಮುಸ್ಲಿಮರು. ಆದರೆ ಸಾವುಗಳು ಕೇವಲ ಡೇಟಾ ಅಥವಾ ಸಂಖ್ಯೆಗಳಲ್ಲ. ಯಾರ ಪ್ರಬಂಧ ಅಥವಾ ಉತ್ತಮ ಪರಿಭಾಷೆಯ ಲೇಖನವಲ್ಲ. ಸಾವುಗಳು ಆಘಾತ ಉಂಟು ಮಾಡುತ್ತೆ. ಗುರುತುಗಳಿಂದಾಗಿ ನಡೆಯುವ ಹಿಂಸೆ ಕೋಮು ಆಘಾತ ಉಂಟುಮಾಡುತ್ತೆ.

ಒಂದು ವರ್ಷದವರೆಗೆ ಈ ಆಘಾತವನ್ನು ಅನುಭವಿಸಿದ ನಂತರ, ದೆಹಲಿಯಲ್ಲಿ ಗುರುತು ಸಿಗುವ ಮುಸ್ಲಿಂ ಆಗಬೇಕೆ ಎಂದು ಪ್ರಶ್ನಿಸುತ್ತಾ, ನನ್ನ ಸಂರಕ್ಷಣೆಯ ಕಾಳಜಿಯಿಂದ ದೆಹಲಿಯ “ಗಲಭೆ” ವಿಷಯಗಳೊಂದಿಗೆ ಸಂಬಂಧ ಹೊಂದಲು ಬಯಸದೇ, ಪ್ರಜ್ಞಾಪೂರ್ವಕವಾಗಿ ದತ್ತಾಂಶವನ್ನು ಮತ್ತು ವರದಿಗಳನ್ನು ತಪ್ಪಿಸುತ್ತ ಮತ್ತು ಭರವಸೆಯು ಕುಂಠಿತಗೊಳ್ಳುತ್ತಿರುವುದರ ಮಧ್ಯೆಯೇ ನಾನು ಈ ವರ್ಷ ದೆಹಲಿ “ಗಲಭೆ” ವಿಷಯಗಳನ್ನು ನಿರ್ವಹಿಸುತ್ತಿರುವ ಕಾರ್ಕಾರ್ಡೂಮಾ ನ್ಯಾಯಾಲಯಕ್ಕೆ ಬಂದು ಮುಟ್ಟಿದೆ.

ನಾನು ಮೆಟ್ರೋದಿಂದ ಇಳಿದು ನ್ಯಾಯಾಲಯಕ್ಕೆ ಬಂದ ಕ್ಷಣದಲ್ಲಿ, ಮುಸ್ಲಿಂ ಜನಸಂಖ್ಯೆಯಿಂದ ಕೂಡಿರುವ ಸ್ಥಳಕ್ಕೆ ಕಾಲಿಡುವುದನ್ನು ನಾನು ಗ್ರಹಿಸಬಹುದು. ನಾನು ನ್ಯಾಯಾಲಯಕ್ಕೆ ಪ್ರವೇಶಿಸಿದ ನಿಮಿಷದಲ್ಲಿ, ನಾನು ನೋಡಿದ್ದು ತಪ್ಪಿಸಲಾಗದ ಮುಸ್ಲಿಂ ಉಪಸ್ಥಿತಿ. ಗಡ್ಡ, ಬುರ್ಕಾ, ಹಿಜಾಬ್, ನಿಕಾಬ್, ಟೋಪಿ, ಕುರ್ತಾ ಪೈಜಾಮ-ಮುಸ್ಲಿಮರು ತಮ್ಮ ಸಾಮಾನ್ಯ ಗುರುತುಗಳಲ್ಲಿ ಇಲ್ಲಿ ಮತ್ತು ಅಲ್ಲಿ ತಿರುಗಾಡುತ್ತಿದ್ದಾರೆ – ಅಸಹಾಯಕರಾಗಿ ಮತ್ತು ಕಡಿಮೆ – ಸವಲತ್ತು ಹೊಂದಿದ್ದಾರೆ. ಕೋರ್ಟ್ ರೂಂನ ಹೊರಗೆ, ನಾನು ನಮ್ಮ ಕ್ಲೈಂಟ್(ಕಕ್ಷಿದಾರ) ಅನ್ನು ನೋಡಿದೆ, ಮತ್ತು ಹಳೆಯ ಪಾಲಿಥೀನ್ ಚೀಲದೊಳಗೆ ಹಳೆಯ ಹರಿದ ದಾಖಲೆಗಳೊಂದಿಗೆ ತಾಳ್ಮೆಯಿಂದ ಕುಳಿತಿರುವ, ಒಡೆದ ಕನ್ನಡಕ ಮತ್ತು ಚಪ್ಪಲಿಗಳನ್ನು ಧರಿಸಿದ ನಮ್ಮ ಕ್ಲೈಂಟ್ ಹಾಗೆಯೇ ಇರುವ ಜನರನ್ನು ನೋಡಿದೆ. ಒಂದು ಸಾಮಾನ್ಯ ವಕೀಲನಿಗೆ ಆ ನೋಟ ಹೇಗೆ ಕಂಡಿರಬಹುದು ನನಗೆ ತಿಳಿದಿಲ್ಲ, ಈ ವೃತ್ತಿಯಲ್ಲಿ “ಹೆಚ್ಚು ಭಾವುಕರಾಗಬಾರದು” ಎಂದು ವಕೀಲರಿಗೆ ಹೇಳಲಾಗುತ್ತದೆ. ಹೇಗಾದರೂ, ಯುವ ಮುಸ್ಲಿಂ ವಕೀಲೆಯಾಗಿ ನನಗೆ ಇದು ವಿಭಿನ್ನವಾಗಿತ್ತು. ಅವರು ನನಗೆ ಕೇವಲ ” ವಸ್ತು ಸ್ಥಿತಿ ” ಆಗಿರಲಿಲ್ಲ. ಅವರು ನನ್ನ ಧಾರ್ಮಿಕ ಗುರುತನ್ನು ಹೊಂದಿರುವ ವ್ಯಕ್ತಿ, ನನ್ನ ಹಾಗೆಯೆ ಭಯ, ನಷ್ಟ ಮತ್ತು ಆಘಾತಗಳನ್ನು ಹೊಂದಿದ್ದರು. ಆದರೆ ಆ ದಿನ ಅಲ್ಲಿಯೇ ನಿಂತಿದ್ದರು. ನ್ಯಾಯಕ್ಕಾಗಿ ಅಲ್ಲ. ನನಗೆ ಅದು ಖಚಿತವಾಗಿದೆ. ಆದರೆ ನಾನು ಇಲ್ಲಿದ್ದೇನೆ ಎಂದು ಜಗತ್ತಿಗೆ ಹೇಳಲು. ಅವರ ಸಮುದಾಯ ಅಲ್ಲಿ ಇತ್ತು. ಮುಸ್ಲಿಮರು ಅಲ್ಲಿದ್ದರು ಮತ್ತು ಅವರು ಯೋಗ್ಯ ಹೋರಾಟ ನಡೆಸಿದರು. ಏಕೆಂದರೆ ಅಂಚಿನಲ್ಲಿರುವ ಸಮುದಾಯಗಳಿಗೆ, ಅಲಂಕಾರಿಕ ಉಪನ್ಯಾಸಗಳಲ್ಲಿ ಕಲಿಸುವ ನ್ಯಾಯದ ವಿಚಾರಗಳು ಎಣಿಸುವುದಿಲ್ಲ.

ನಾನು ಇದನ್ನು ನೆನಪಿಸಿಕೊಳ್ಳುವಾಗಲೆಲ್ಲಾ, ನನ್ನ ಆಲೋಚನೆಗಳು ಪ್ರಶ್ನೆಗಳಿಂದ ಕೂಡಿಹೋಗುತ್ತದೆ – ನಾನು ವರ್ಷಗಳಿಂದ ನನಲ್ಲಿಯೇ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಿದ್ದೇನೆ. ನ್ಯಾಯಶಾಸ್ತ್ರ ತರಗತಿಗಳಲ್ಲಿ ಉತ್ತರಿಸಲಾಗದ ಪ್ರಶ್ನೆಗಳಿವು. ವಿಲಿಯಂ ಗಡ್ಡಿಸ್ ಗಮನಾರ್ಹವಾಗಿ ಬರೆದಿರುವಂತೆ : ‘ನ್ಯಾಯ? ನೀವು ಮುಂದಿನ ಜಗತ್ತಿನಲ್ಲಿ ನ್ಯಾಯ ಪಡೆಯುತ್ತೀರಿ, ಈ ಜಗತ್ತಿನಲ್ಲಿ ನಿಮಗೆ ಕಾನೂನು ಇದೆ.’ ನ್ಯಾಯವು ನಮ್ಮಲ್ಲಿರುವ ಎಲ್ಲವು “ಕಾನೂನು” ಎಂಬ ಕಾಲ್ಪನಿಕ ಪರಿಕಲ್ಪನೆಯೇ? ವ್ಯವಸ್ಥಿತ ಶುದ್ಧೀಕರಣವು ಹೀಗೆ ಕಾಣುತ್ತದೆಯೇ ? ನ್ಯಾಯಾಲಯಗಳಿಗೆ, ಸ್ಟೇಷನ್ ಗಳಿಗೆ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಮಾತ್ರ ಮುಸ್ಲಿಮರು ಅರ್ಹರಾಗಿದ್ದಾರೆಯೇ?

ಆದರೆ ನಾನು ಮತ್ತೆ ನನ್ನಲ್ಲಿಯೇ ಕೇಳಿಕೊಳ್ಳುತ್ತೇನೆ, ನರಮೇಧದ ಅಂಚಿನಲ್ಲಿರುವ ಈ ಮುಸ್ಲಿಮರು ಇಷ್ಟು ಹೆಮ್ಮೆ ಅಭಿಮಾನದಿಂದಿರಲು ಹೇಗೆ ಸಾಧ್ಯ? ಕೇವಲ ಒಂದು ವರ್ಷದ ಹಿಂದೆಯೇ ರಾಷ್ಟ್ರೀಯ ರಾಜಧಾನಿಯಲ್ಲಿ ತಮ್ಮ ಗುರುತುಗಳಿಗಾಗಿ ಹತ್ಯೆಗೈದ ಅವರು, ಇನ್ನೂ ಸ್ಪಷ್ಟವಾದ ಗುರುತನ್ನು ಹೊಂದಲು ಹೇಗೆ ನಿರ್ಧರಿಸಬಹುದು? ಅವರಿಂದ ಭಯವನ್ನು ಹೊರಹಾಕಿದವರು ಯಾರು?

ಕಾರಣಗಳು ಏನೇ ಇರಲಿ, ನನಗೆ ಒಂದು ವಿಷಯ ಖಚಿತವಾಗಿದೆ. ಬೇಗನೆ ಸಮಸ್ಯೆಗಳಿಂದ ಹೊರಬಂದು ನಿಲ್ಲಲು ಸಾಮರ್ಥ್ಯ ಹೊಂದಿರುವ ಈ ಸಮುದಾಯ, ವ್ಯವಸ್ಥಿತವಾಗಿ ಅಂಚಿನಲ್ಲಿ ದೂಡಲ್ಪಟ್ಟ ಈ ಸಮುದಾಯ, ನಮ್ಮ ಅತ್ಯಾಧುನಿಕ ವ್ಯವಸ್ಥೆಗಳಿಂದ ಐತಿಹಾಸಿಕವಾಗಿ ಸೋಲಿಸಲ್ಪಟ್ಟ ಈ ಸಮುದಾಯ, ನ್ಯಾಯಕ್ಕಾಗಿ ನ್ಯಾಯಾಲಯಗಳಲ್ಲಿ ತಾಳ್ಮೆಯಿಂದ ನಿಂತು ಕಾಯುತ್ತಿರುವ ಈ ಸಮುದಾಯ – ಈ ಸಮುದಾಯವನ್ನು ಎಂದಿಗೂ ಅಳಿಸಿಹಾಕಲು ಸಾಧ್ಯವಿಲ್ಲ. ಈ ಮುಸ್ಲಿಮರನ್ನು ಎಂದಿಗೂ ಕೊಲ್ಲಲಾಗುವುದಿಲ್ಲ.

‘ಝುಲ್ಮ್ ಫಿರ್ ಝುಲ್ಮ್ ಹೈ
ಬಡ್ತಾ ಹೈ ಥೋ ಮಿಟ್ ಜಾತಾ ಹೈ,
ಖೂನ್ ಫಿರ್ ಖೂನ್ ಹೈ, ಟಪ್ಕೇಗಾ ತೊ ಜಮ್ ಜಾಯೇಗಾ’.

Courtesy :- Maktoob media article

LEAVE A REPLY

Please enter your comment!
Please enter your name here