-ಇಖ್ಲಾಕ್ ಅಹ್ಮದ್

ಸಂಶೋಧನಾ ವಿದ್ಯಾರ್ಥಿ, ಸೆಂಟರ್ ಫಾರ್ ವೆಸ್ಟ್ ಏಷಿಯನ್ ಸ್ಟಡೀಸ್, ಸ್ಕೂಲ್ ಆಫ್ ಇಂಟರ್ ನ್ಯಾಶನಲ್ ಸ್ಟಡೀಸ್, ಜವಾಹರ್ ಲಾಲ್ ನೆಹರೂ ವಿವಿ (ಜೆ.ಎನ್.ಯು) ನವ ದೆಹಲಿ

 

ಡಿಸೆಂಬರ್ 2010 ಟುನೀಷಿಯಾದಲ್ಲಿ ಮತ್ತು ಮುಂದುವರಿದು ಈಜಿಪ್ಟಿನಲ್ಲಿ ಯಾವಾಗ ಅರಬ್ ಬಂಡಾಯ ಸ್ಪೋಟಿಸಿತೋ, ಪೂರ್ವ ಏಷ್ಯಾದ ಇತರ ದೇಶಗಳು ಮತ್ತು ಉತ್ತರ ಆಫ್ರೀಕಾದ ಪ್ರದೇಶಗಳು ಗಂಭೀರ ಸಮಸ್ಯೆಗಳಲ್ಲಿ ಸಿಲುಕಿಕೊಂಡಿತು. ಇಡೀ ಅರಬ್ ಜಗತ್ತಿನಲ್ಲಿ ರಾಜಕೀಯ ಸ್ವಾತಂತ್ರ್ಯವು ಅದರ ಗರಿಷ್ಟ ಮಟ್ಟವನ್ನು ತಲುಪಿತ್ತು ಮತ್ತು ಯುವ ಸಮೂಹವು ಪ್ರಕ್ಷುಬ್ಧರಾಗಿದ್ದರು. ಅರಬ್ ಬಂಡಾಯದ ಅಂಗವಾಗಿ 2011 ಜನವರಿಯಲ್ಲಿ ಸಾಮಾನ್ಯ ಪ್ರತಿಭಟನೆಯಿಂದ ಆರಂಭವಾಗಿ, ಮುಂದುವರಿದು ಉಲ್ಬಣಗೊಂಡು 2011 ಮಾರ್ಚ್‍ನಲ್ಲಿ ಕ್ರೋಢೀಕರಣವಾದ ಬಂಡಾಯವಾಗಿ ಬದಲಾದ ಸಿರಿಯಾದ ನಾಗರಿಕ ಯುದ್ಧವು ಮುಂದಿನ ತಿಂಗಳು ಅದರ 8ನೇ ವರ್ಷಕ್ಕೆ ಪ್ರವೇಶಿಸಲಿದೆ. ಪ್ರಾಥಮಿಕ ಹಂತದಲ್ಲಿ ಶಾಂತಿಯುತವಾದ ಪ್ರತಿಭಟನೆಯು ದರ್ರಾ ಪಟ್ಟದಲ್ಲಿ ಆರಂಭವಾಗಿ ಪ್ರಜಾಸತ್ತೀಯ ಸುಧಾರಣೆಯನ್ನು ಆಗ್ರಹಿಸಿತ್ತು. ಆದರೆ ಯಾವಾಗ ಸಿರಿಯಾ ಸರಕಾರವು ಪ್ರತಿಭಟನಾಕಾರರ ಮೇಲೆ ಮುಗಿಬಿತ್ತೋ, ನಂತರದಲ್ಲಿ ಸಂಘರ್ಷವು ಇಡೀ ದೇಶಕ್ಕೆ ಹಬ್ಬಿತು. ಸಂಘರ್ಷದ ಆರಂಭದಲ್ಲಿ ಅಧ್ಯಕ್ಷ ಅಸಾದ್ ಬಂಡಾಯವನ್ನು ತಪ್ಪಾಗಿ ಅರ್ಥೈಸಿ, ಅದನ್ನು ವಿದೇಶಿ ಪಿತೂರಿ ಎಂದು ಚಿತ್ರಿಸಿದನು. ಮುಷ್ಟಿಯಷ್ಟು ಆಯುಧದಾರಿಗಳು ಬಾಹ್ಯ ಬೆಂಬಲದೊಂದಿಗೆ ಸಿರಿಯಾವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಸಿರಿಯಾದ ಬಹುಸಂಖ್ಯಾತರು ಆತನನ್ನು ಅವರ ಅಧ್ಯಕ್ಷನೆಂದು ಭಾವಿಸಿದ್ದಾರೆಂದು ಆತನು ನಂಬಿದ್ದನು. ಯಾವಾಗ ನೂರಾರು ಸರಕಾರೇತರರು ತಮ್ಮನ್ನು ವಿರೋಧಿ ಶಕ್ತಿಯಾಗಿ ಸ್ಥಾಪಿಸಿದರೋ, ಅದು ಸಂಘರ್ಷದ ತೀವ್ರತೆಯನ್ನು ಹೆಚ್ಚಿಸಿತು ಮತ್ತು ಸಿರಿಯಾದ ಆಡಳಿತ ವಿರುದ್ಧ ಸಶಸ್ತ್ರ ಹೋರಾಟಕ್ಕೆ ತಿರುಗಿತು. ನಂತರದಲ್ಲಿ ಸರಕಾರದ ಶಕ್ತಿಯನ್ನು ಕಿತ್ತು ಬಿಸಾಕಿ, ಸಿರಿಯಾದ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡರು. ಅಲ್ಲಿಂದ, ಎರಡೂ ಬಣಗಳಲ್ಲಿ ಹಿಂಸೆಯು ಉಲ್ಬಣಗೊಂಡಿತು. ವಿಶ್ವಸಂಸ್ಥೆಯ ಅಂದಾಜಿನಂತೆ ಸಿರಿಯಾದಲ್ಲಿ 2011ರ ಅಂತ್ಯದಲ್ಲಿ 5000 ಸಾವು-ನೋವು ಮತ್ತು 8000 ಸಿರಿಯಾ ಪ್ರಜೆಗಳು ಸಿರಿಯಾದಿಂದ ವಲಸೆ ಹೋಗಿ ನೆರೆರಾಜ್ಯಗಳಲ್ಲಿ ನಿರಾಶ್ರಿತರಾದರು.

ಬಾಹ್ಯ ಹಸ್ತಕ್ಷೇಪ

ಸಿರಿಯಾದ ಆಂತರಿಕ ಸಂಘರ್ಷವು ಹಲವು ಪ್ರಾದೇಶಿಕ ಮತ್ತು ಜಾಗತಿಕ ಶಕ್ತಿಗಳಿಗೆ ಅಂತಾರಾಷ್ಟ್ರೀಕೃತ ತೆರೆಮರೆಯ ಸಮರವಾಗಿ ಪರಿಣಮಿಸಿತು. ಅಂತಾರಾಷ್ಟ್ರೀಯವಾಗಿ, ರಷ್ಯಾದ ಮುಂದಾಳುತ್ವದಲ್ಲಿ ಒಂದು ಗುಂಪು ಸರಕಾರವನ್ನು ಬೆಂಬಲಿಸುತ್ತಿದೆ ಮತ್ತು ಅಮೇರಿಕಾದ ಮೇಲ್ವಿಚಾರಣೆಯಲ್ಲಿ ಉಳಿದವರ ಗುಂಪು ಶಸ್ತ್ರಾಸ್ರ ಮತ್ತು ಸಹಕಾರವನ್ನು ವಿರೋಧಿ ಬಣಕ್ಕೆ ನೀಡುತ್ತಿದ್ದಾರೆ. ಪ್ರಾದೇಶಿಕವಾಗಿ ಇರಾನ್ ಮತ್ತು ಸೌದಿ ಅರೇಬಿಯಾವು ಭಿನ್ನ ಬಣಗಳನ್ನು ಪರಸ್ಪರ ವಿರೋಧವಾಗಿ ಆಯ್ಕೆ ಮಾಡಿಕೊಂಡಿದೆ. ಅಸಾದ್ ಆಡಳಿತವನ್ನು ಉಳಿಸುವುದು ಪ್ರಾಥಮಿಕ ನಿಲುವಾದ್ದರಿಂದ ಅದನ್ನು ಉಳಿಸಲು ಸರ್ವ ಪರಿಶ್ರಮಗಳನ್ನು ಮಾಡಲಾಯಿತು. ನಂತರದಲ್ಲಿ, ನಿಲುವು ಬದಲಿಸಿ ವಿರೋಧಿ ಬಣಕ್ಕೆ ಶಸ್ತ್ರಾಸ್ರ ಮತ್ತು ಆರ್ಥಿಕ ನೆರವನ್ನು ಒದಗಿಸಲಾಯಿತು. ಟರ್ಕಿ, ಕತಾರ್ ಮತ್ತು ಕುವೈಟ್ ದೇಶಗಳು ಸೌದಿ ಅರೇಬಿಯಾವನ್ನು ಅನುಸರಿಸಿ ವಿರೋಧಿ ಬಣಕ್ಕೆ ಆರ್ಥಿಕ ನೆರವು ಮತ್ತು ಸಹಕಾರವನ್ನು ನೀಡುತ್ತಿದೆ. ಅಲ್ಲದೆ, ಇದಕ್ಕೆ ಸೇರ್ಪಡೆ ಎಂಬಂತೆ ಈ ಸಂಘರ್ಷದಲ್ಲಿ ಅನೇಕ ಸರಕಾರೇತರ ವಿದೇಶಿ ವರ್ಗವು ತಮ್ಮನ್ನು ತೊಡಗಿಸಿಕೊಂಡಿದೆ. ಕೆಲವರು ಸರಕಾರದ ಪರವಾಗಿ ಹೋರಾಡಿದರೆ, ಇನ್ನು ಕೆಲವರು ವಿರೋಧಿ ಬಣದ ಪರವಾಗಿ ಹೋರಾಡುತ್ತಿದ್ದಾರೆ. ಸಿರಿಯಾದಲ್ಲಿ ಬಂಡಾಯ ಆರಂಭವಾಗುವುದಕ್ಕಿಂತ ಮೊದಲೇ ಅಮೇರಿಕಾದ ಅಧಿಕಾರಿಗಳು ಡಮಾಸ್ಕಸ್‍ನಲ್ಲಿ ಕೆಲವು ತೀವ್ರವಾದಿ ಗುಂಪುಗಳನ್ನು ಭೇಟಿಯಾಗಿ ಅಲವಿಯರ ಆಡಳಿತದ ವಿರುದ್ಧ ಪ್ರತಿಭಟನೆಗೆ ಸಹಕಾರವನ್ನು ನೀಡುವುದಾಗಿ ಭರವಸೆಯನ್ನು ನೀಡಿದ್ದರೆಂದು ಹಲವಾರು ಅಧ್ಯಯನ ವರದಿಗಳು ಬಹಿರಂಗ ಪಡಿಸಿದೆ.

ಪೂರ್ವ ಗೌಟಾದ ಪ್ರಸ್ತುತ ಸ್ಥಿತಿ

ಪೂರ್ವ ಗೌಟಾವು, ಸೆಂಟ್ರಲ್ ಡಮಾಸ್ಕಸ್‍ನ ಪೂರ್ವಕ್ಕೆ 10 ಕಿ.ಮೀ ದೂರದಲ್ಲಿರುವ ದಟ್ಟವಾದ ಜನಸಾಂದ್ರತೆ ಹೊಂದಿರುವ ಕೃಷಿ ಪ್ರಧಾನವಾದ ಜಿಲ್ಲೆಯಾಗಿದೆ. 2010ರಲ್ಲಿ ಗೌಟಾದ ಜನಸಂಖ್ಯೆಯು 2 ಮಿಲಿಯನ್ ಇತ್ತು. ಆದರೆ ಸಂಘರ್ಷ ಆರಂಭವಾದ ನಂತರದಲ್ಲಿ ಅದು 400,000ಕ್ಕೆ ನಿಂತಿದೆ. 2011ರ ಮಾರ್ಚ್ ಅಂತ್ಯದಲ್ಲಿ ಗೌಟಾವು ಸಿರಿಯಾ ಸರಕಾರದ ವಿರುದ್ಧದ ಪ್ರತಿಭಟನೆಯ ಭಾಗವಾಯಿತು. ಸಂಘರ್ಷದ ಸೈನ್ಯೀಕರಣದ ನಂತರದಲ್ಲಿ ಮತ್ತು ಡಮಾಸ್ಕಸ್‍ನ ಸುತ್ತಮುತ್ತ ಬಂಡಾಯ ಹೆಚ್ಚಳವಾದ ಬಳಿಕ ಸೈನ್ಯ ಮತ್ತು ವಿರೋಧಿ ಬಣದ ನಡುವೆ ನಿರಂತರ ಮುಖಾಮುಖಿ ಆರಂಭವಾಯಿತು. 2012ರ ಕೊನೆಗೆ ಸಿರಿಯಾ ಸರಕಾರವು ಈ ಪ್ರದೇಶದಲ್ಲಿ ತಮ್ಮ ನಿಯಂತ್ರಣವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಯಿತು ಮತ್ತು ಕಡೆಗೆ ಸ್ವತಂತ್ರ ಸಿರಿಯಾ ಸೇನೆ(ಈಡಿee Sಥಿಡಿiಚಿಟಿ ಂಡಿmಥಿ-ಈSಂ) ಯು ಪೂರ್ವ ಗೌಟಾದಲ್ಲಿ ತಮ್ಮ ಪ್ರಬಲ ನೆಲೆಯನ್ನು ಸ್ಥಾಪಿಸಿತು. 2012ರ ಆರಂಭದಿಂದಲೇ ಪೂರ್ವ ಗೌಟಾದ ಸಶ್ತ್ರಸಜ್ಜಿತ ವಿರೋಧಿ ಬಣವು  ಅನೇಕ ಬಾರಿ ಆಡಳಿತ ಸೇನೆಯ ವಿರುದ್ಧ ಆಕ್ರಮಣಕಾರಿ ದಾಳಿಯನ್ನು ನಡೆಸಿದೆ. ಸಿರಿಯಾ ಸೇನೆಯ ಬೆಂಗಾವಲನ್ನು ದಾಳಿಮಾಡಿ ಹೊಡೆದರು ಮತ್ತು ಸೇನೆಗೆ ಪ್ರಮುಖವಾಗಿ ಸರಬರಾಜು ಮಾರ್ಗವಾಗಿದ್ದ ದಾರಿಯನ್ನು ವಶಪಡಿಸಿಕೊಂಡರು. ಸೈನ್ಯ ಮತ್ತು ವಿರೋಧಿ ಬಣಗಳ ನಡುವೆ 2012ರ ನಂತರದಲ್ಲಿನ ನಿರಂತರ ಮುಖಾಮುಖಿಯಿಂದಾಗಿ, ಗೌಟಾದ ಜನರನ್ನು ಸರಕಾರ ಮುತ್ತಿಗೆ ಹಾಕಿತು. ಈ ಪರಿಣಾಮವಾಗಿ ಅಲ್ಲಿನ ಜನರಲ್ಲಿ ಬೃಹತ್ ಪ್ರಮಾಣದ ಹಸಿವು ಮತ್ತು ಅಪೌಷ್ಠಿಕತೆಯ ಸಮಸ್ಯೆ ತಲೆದೊರಿತು.

ಆಗಸ್ಟ್ 2013ರಂದು ಸಿರಿಯಾ ಸೇನೆಯು ರಾಸಾಯನಿಕ ಆಯುಧವನ್ನು ಬಂಡಾಯಗಾರರ ವಿರುದ್ಧ ಬಳಸಿ 1400ಕ್ಕಿಂತಲೂ ಅಧಿಕ ನಾಗರಿಕರ ಸಾವಿಗೆ ಕಾರಣವಾಯಿತು. ಆದರೆ, ರಾಸಾಯನಿಕ ಆಯುಧ ಬಳಕೆಯನ್ನು ನಿರಾಕರಿಸಿದನು ಮತ್ತು ರಷ್ಯಾವು ದಾಳಿಗಾಗಿ ವಿರೋಧಿಗಳನ್ನು ದೂರಿತು. ಮಾನವ ಹಕ್ಕಿನ ಉಲ್ಲಂಘನೆಗಾಗಿ ಅಸಾದ್ ಆಡಳಿತ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಹಲವು ನಿರ್ಣಯಗಳನ್ನು ಘೋಷಿಸಿತು ಮತ್ತು ಹೆಚ್ಚಿನವುಗಳಿಗೆ ಚೈನಾ ಮತ್ತು ರಷ್ಯಾ ಮತ ನೀಡಿದವು. ನಂತರದಲ್ಲಿ, ವಿರೋಧಿ ಬಣದಲ್ಲಿನ ಆಂತರಿಕ ಜಗಳವು ಜನರ ಬಳಲುವಿಕೆಯನ್ನು ವೃದ್ಧಿಸಿತು. ಅದು ಆಂತರಿಕ ಆಂದೋಲನದಲ್ಲಿ ಜನರ ನಡುವೆ ಹೊಸ ನಿರ್ಬಂಧಗಳನ್ನು ಹುಟ್ಟು ಹಾಕಿತು ಮತ್ತು ಸಾವಿರಾರು ನಾಗರಿಕರ ಸಾವು-ನೋವಿಗೆ ಕಾರಣವಾಯಿತು. ಪೂರ್ವ ಗೌಟಾದಲ್ಲಿ ಕಳೆದ ಏಳು ವರ್ಷಗಳಿಂದ ಸೈನ್ಯ ಮತ್ತು ಬಂಡಾಯಗಾರರ ನಡುವೆ ಬೃಹತ್ ಪ್ರಮಾಣದಲ್ಲಿ ಹಿಂಸೆ ನಡೆದಿದೆ.

ಸಿರಿಯಾ ಆಡಳಿತಕ್ಕೆ ಹೇಗಾದರೂ ಗೌಟಾವನ್ನು ವಿರೋಧಿ ಬಣಗಳಿಂದ ಸ್ವತಂತ್ರಗೊಳಿಸುವುದು ಅಗತ್ಯವಾಗಿತ್ತು ಮತ್ತು ಕಳೆದ ವಾರದಿಂದ ಬಾಂಬ್‍ನ ಸುರಿಮಳೆ ಶುರುಮಾಡಿತು. ಸಿರಿಯಾದ ರಾಜಧಾನಿಗೆ ಗೌಟವು ಸಮೀಪದಲ್ಲಿರುವುದರಿಂದ ಆ ಪ್ರದೇಶವನ್ನು ಬಂಡಾಯಗಾರರಿಂದ ಮರಳಿ ಪಡೆಯುವುದು ಸರಕಾರದ ಅಗತ್ಯವಾಗಿದೆ ಮತ್ತು ಅದು ದುಬಾರಿಯಾಗಲಿದೆ. ಜೋರ್ಡಾನ್ ಟೈಮ್ಸ್ ಸುದ್ಧಿ ಪತ್ರಿಕೆಗೆ ನೀಡಿರುವ ಹೇಳಿಕೆಯಲ್ಲಿ ಅಬ್ದುಲ್ಲಾ ಕಹಲಾ ಎಂಬೋರ್ವ ಕಟ್ಟಡ ಕಾರ್ಮಿಕ ತಿಳಿಸುತ್ತಾರೆ, ಆತ ಪತ್ನಿ ಮತ್ತು ಮಕ್ಕಳೊಂದಿಗೆ ಬೆಳಗಿನ ಉಪಹಾರವನ್ನು ಸೇವಿಸುತ್ತಿದ್ದನು. ಬೃಹತಾದ ಸ್ಟೋಟನದಿಂದ ಗೋಡೆ ಭಗ್ನವಾಯಿತು. ಆತ ನೀಡಿದ ವರದಿಯಲ್ಲಿ ಹೇಳುತ್ತಾನೆ, “ಹಲಾ ಮತ್ತು ಸಾರ ತಮ್ಮ ತಾಯಿಯೊಂದಿಗೆ ರಕ್ತದಲ್ಲಿ ಬಿದ್ದಿರುವುದನ್ನು ನಾನು ಭಾವೋದ್ರೇಕದಿಂದ ನೋಡಿದೆ….ನಮ್ಮ ಮನೆಯ ಎಲ್ಲಾ ಭಾಗಗಳಲ್ಲಿಯೂ ಬಾಂಬ್‍ಗಳು ಬೀಳುತ್ತಿದ್ದವು. ನಾವು ಕಳೆದ ವಾರ ಸುತ್ತಮುತ್ತಲಿನ ಪ್ರದೇಶವನ್ನು ನಮ್ಮ ಬರಿಗೈಯಿಂದ ಅವಶೇಷವನ್ನು ಅಗೆಯುವುದರಲ್ಲಿ ಕಳೆದೆವು” (ಜೋರ್ಡಾನ್ ಟೈಮ್ಸ್ ನ್ಯೂಸ್ 2018 ಫೆಬ್ರವರಿ 22). 13 ಆಸ್ಪತ್ರೆಗಳು ಮತ್ತು ಅನೇಕ ನಾಗರಿಕ ಸೊತ್ತುಗಳು ನಾಶಕ್ಕೆ ಕಾರಣವಾದ, ಸಿರಿಯಾ ಸರಕಾರವು ನಡೆಸಿದ ಬಾಂಬ್‍ಗಳ ಸುರಿಮಳೆಯನ್ನು ವಿಶ್ವಸಂಸ್ಥೆಯು ಖಂಡಿಸಿದೆ ಮತ್ತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರು ಇದನ್ನು “ಭೂಮಿಯ ಮೇಲಿನ ನರಕ” ಎಂದು ಕರೆದಿದ್ದಾರೆ. ವಿಶ್ವಸಂಸ್ಥೆಯ ಖಂಡನೆಯನ್ನು ಕಡೆಗಣಿಸಿ ಅಸಾದ್ ನಾಗರಿಕರ ವಿರುದ್ಧ ಬ್ಯಾರೆಲ್ ಬಾಂಬ್‍ಗಳನ್ನು ಉಪಯೋಗಿಸಿದನು. ಗೌಟಾದಲ್ಲಿ ಬಾಂಬ್ ಹಾಕುವ ರಷ್ಯಾದ ಯೋಜನೆಯು ವರದಿಯಾಗುವಂತೆ ಹಲವು ಸಿರಿಯಾ ನಾಗರಿಕರು ಸಾಕ್ಷಿಯಾಗಿದ್ದಾರೆ. ಅಸಾದ್‍ನ ಸರಕಾರದ ಪರವಾಗಿ ಸಮ್ಮಿಶ್ರ ಯುದ್ಧದ ಸೇನಾಧಿಪತಿಯೋರ್ವ, ಬಂಡಾಯಗಾರರು ಫಿರಂಗಿಗಳೊಂದಿಗೆ ಡಮಾಸ್ಕಸ್‍ನ ಪೂರ್ವ ನೆರೆಯ ಪ್ರದೇಶಗಳೆಡೆಗೆ ಗುರಿಮಾಡಿ ಸಾಗುವುದನ್ನು ತಡೆಯುವುದು, ಈ ಬಾಂಬುಗಳನ್ನು ಸುರಿಸುವುದರ ಉದ್ದೇಶವಾಗಿದೆ ಎಂದು ರಾಯ್ಟರ್ಸ್‍ಗೆ ತಿಳಿಸಿದ್ದಾರೆ. ಬಂಡಾಯಗಾರರು ಪೂರ್ವ ಗೌಟಾದ ಪಕ್ಕದ ಡಮಾಸ್ಕಸ್‍ನಲ್ಲಿ ಫಿರಂಗಿಗಳನ್ನು ಸೇನೆಯ ವಿರುದ್ಧ ಸಿಡಿಸಿದ್ದರು, ಅದು ಏಳು ಜನರ ಸಾವು ಮತ್ತು ಅನೇಕರನ್ನು ಗಾಯಾಳನ್ನಾಗಿ ಮಾಡಿತು ಎಂದು ಮಂಗಳವಾರದಂದು ಜೋರ್ಡಾನ್ ಟೈಮ್ಸ್ ವರದಿ ಮಾಡಿತ್ತು.

ವಿಶ್ವಸಂಸ್ಥೆಯ ಕಾರ್ಯದರ್ಶಿಗಳ ಸಭೆಯು 30 ದಿನಗಳ ಕದನ ವಿರಾಮದ ನಿರ್ಣಯವನ್ನು ಘೋಷಿಸಿದ್ದರೂ, ಸೇನೆಯು ವೈಮಾನಿಕ ಮತ್ತು ತೀವ್ರವಾದ ಬಾಂಬ್ ದಾಳಿಯನ್ನು ನಡೆಸುತ್ತಿದೆ. ಕಳೆದ ರವಿವಾರದಿಂದ ರಷ್ಯಾ ಬೆಂಬಲಿತ ಸಿರಿಯಾ ಸೇನೆಯು ಗೌಟಾದ ಮೇಲೆ ನಿರಂತರವಾಗಿ ರಾಕೆಟ್ ದಾಳಿ, ಶೆಲ್ ದಾಳಿ ಮತ್ತು ವಾಯು ದಾಳಿಯನ್ನು ಮಾಡಿದೆ ಹಾಗು ಹೆಲಿಕಾಪ್ಟರ್‍ಗಳು ಬ್ಯಾರೆಲ್ ಬಾಂಬ್‍ಗಳನ್ನು ಸುರಿಸಿದೆ. ಸಿರಿಯಾದ ಮಾನವ ಹಕ್ಕು ವೀಕ್ಷಣಾಲಯದ ಇತ್ತೀಚಿಗಿನ ವರದಿ(ಸೋಮವಾರ, 27 ಫೆಬ್ರವರಿ 2018)ಯಂತೆ ಪೂರ್ವ ಗೌಟಾದಲ್ಲಿ 561 ನಾಗರಿಕರು ಕೊಲ್ಲಲ್ಪಟ್ಟರು. ಅದರಲ್ಲಿ 185 ಮಕ್ಕಳು ಮತ್ತು 109 ಮಹಿಳೆಯರೂ ಇದ್ದಾರೆ. ಬಂಡಾಯಗಾರರು ಮನುಷ್ಯರನ್ನು ಗುರಾಣಿಯಂತೆ ಬಳಸುತ್ತಿದ್ದಾರೆ ಮತ್ತು ಅದು ಮಾನವೀಯತೆಯ ಹೊಸ್ತಿಲಿನ ಬೇರನ್ನು ದಾಳಿಗೆಡವಿದೆ ಎಂದು ಸಿರಿಯಾ ಸರಕಾರದ ಅಧಿಕಾರಿಗಳು ಇನ್ನೊಂದೆಡೆ ಹೇಳಿದ್ದಾರೆ. ಆದ್ದರಿಂದ ಸಂಘರ್ಷವು ಮಾನವ ಹಕ್ಕಿನ ಉಲ್ಲಂಘನೆ ಮತ್ತು ನಿಂದನೆಗೆ ಕಾರಣವಾಯಿತು. ಫೆಬ್ರವರಿ 25ರಂದು ಸಿರಿಯಾದ ಮಾನವ ಹಕ್ಕು ವೀಕ್ಷಣಾಲಯವು ಮಾಡಿದ ವರದಿಯಂತೆ ಪೂರ್ವ ಗೌಟಾದಲ್ಲಿ ಸಿರಿಯಾ ಸರಕಾರವು 3940 ಫಿರಂಗಿ ದಾಳಿ, 1014 ಫಿರಂಗಿ ಶೆಲ್ ದಾಳಿ, ಸುಮಾರು 2065 ಕ್ಷಿಪಣಿಗಳು, 629 ವಾಯುದಾಳಿಗಳನ್ನು ಯುದ್ಧ ವಿಮಾನಗಳು ನಡೆಸಿದವು ಮತ್ತು 232 ಬ್ಯಾರಲ್ ಸ್ಪೋಟಕಗಳನ್ನು ಹೆಲಿಕಾಪ್ಟರ್‍ಗಳು ಸುರಿಸಿದವು.

ಯುದ್ಧ ಪೀಡಿತ ಪ್ರದೇಶಗಳಿಂದ ತೆರವುಗೊಳ್ಳಲು ನಾಗರಿಕರಿಗೆ 5ಗಂಟೆಗಳ ಸಮಯಾವಕಾಶ ನೀಡಿದ್ದ ರಷ್ಯಾ ಬೆಂಬಲಿತ ಒಪ್ಪಂದವನ್ನು ಉಲ್ಲಂಘಿಸಿ, ಸಿರಿಯಾ ಸರಕಾರವು ಬಂಡಾಯ ನಡೆದ ಪ್ರದೇಶದ ಮೇಲೆ ನಿರಂತರ ದಾಳಿಯನ್ನು ನಡೆಸುತ್ತಿದೆ. ಶೆಲ್ ದಾಳಿಯ ಕಾರಣದಿಂದಲೋ ಅಥವಾ ಗಾಯಾಳುಗಳ ಸಂಖ್ಯೆ ಅತಿಯಾಗಿರುವುದರಿಂದಲೋ, ಜನರಿಗೆ ಸರಿಯಾಗಿ ಔಷಧ ವ್ಯವಸ್ಥೆಯು ದೊರಕುತ್ತಿಲ್ಲ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯು ಎಚ್ ಓ)ಯು ಫೆಬ್ರವರಿ 27ರಂದು ನೀಡಿರುವ ಹೇಳಿಕೆಯಂತೆ 1000 ನಾಗರಿಕರಿಗೆ ತೀವ್ರವಾಗಿ ಅನಾರೋಗ್ಯ ಮತ್ತು ಗಾಯದಿಂದ ಬಳಲುತ್ತಿದ್ದು ಕ್ಷಿಪ್ರವಾಗಿ ತೆರವುಗೊಳಿಸುವ ಅಗತ್ಯವಿದೆ. ಸಂಘರ್ಷದ ಮೂಲ ಬಲಿಪಶುಗಳು ನಾಗರಿಕರಾಗಿದ್ದಾರೆ; ವಿರೋಧಿ ಬಣದ ಸಶಸ್ತ್ರ ಪಡೆಯು ಅವರನ್ನು ಮಾನವ ಗುರಾಣಿಯಾಗಿ ಬಳಸುತ್ತಿದ್ದಾರೆ ಮತ್ತು ಬಂಡಾಯಗಾರರ ಮೇಲಿನ ದಾಳಿಯಲ್ಲಿ ಸೇನೆಯು ನಾಗರಿಕರನ್ನು ಕೊಲ್ಲುತ್ತಿದೆ. ಅನೇಕ ಪ್ರಶ್ನೆಗಳು ಇಲ್ಲಿ ಮೇಲೆಳುತ್ತದೆ: ಸಿರಿಯಾದ ನಾಗರಿಕ ಯುದ್ಧವು ವಿಳಂಬವಾಗಲು ಕಾರಣವೇನು? ಸಿರಿಯಾದಲ್ಲಿ ಶಾಂತಿ ಸ್ಥಾಪಿಸುವಲ್ಲಿ ವಿಶ್ವಸಂಸ್ಥೆ ಯಾಕೆ ವಿಫಲವಾಯಿತು? ಸಿರಿಯಾದ ಸೇನೆ ಇನ್ನೂ ಉಳಿಯಲು ಕಾರಣವೇನು? ಯಾಕೆ ಅಮೇರಿಕಾವು ವಿರುದ್ಧ ಬಣವನ್ನು ಬೆಂಬಲಿಸುತ್ತಿದೆ ಮತ್ತು ಸಿರಿಯಾದಲ್ಲಿ ಶಾಂತಿಯನ್ನು ಮರು ಸ್ಥಾಪಿಸಲು ಬಯಸುತ್ತಿಲ್ಲ? ಈ ನಿಟ್ಟಿನಲ್ಲಿ ಒಟ್ಟಾಗಿ ಸಿರಿಯಾ ಬಿಕ್ಕಟ್ಟನ್ನು ಕಾಣುವಾಗಲು ಮತ್ತು ನಿರ್ದಿಷ್ಟವಾಗಿ ಗೌಟಾ ಬಿಕ್ಕಟ್ಟನ್ನು ನೋಡುವಾಗಲೂ, ಈ ಮೇಲಿನ ಪ್ರಶ್ನೆಗಳು ಪರಿಗಣನೆಗೆ ತೆಗೆದುಕೊಳ್ಳುವುದು ಅಗತ್ಯವಾಗಿದೆ.

ನಾಗರಿಕ ಯುದ್ಧದ ಪರಿಣಾಮಗಳು

ಸಿರಿಯಾದ ನಾಗರಿಕ ಯುದ್ಧವು ಏಳನೇ ವರ್ಷವನ್ನು ಪೂರ್ತಿಗೊಳಿಸುವಲ್ಲಿದೆ. ಸೇನೆ ಮತ್ತು ವಿರೋಧಿ ಬಣ ಎರಡೂ ಕೂಡ ತಮ್ಮ-ತಮ್ಮ ಭೌತಿಕ ಉಳಿವು ಮತ್ತು ಸೇನಾ ವಿಜಯಕ್ಕಾಗಿ ಕಾದಾಡುತ್ತಿರುವುದರಿಂದ ರಾಜಿ ಒಪ್ಪಂದ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಆದ್ದರಿಂದ ಸಂಘರ್ಷವು  ಮಾನವ ಹಕ್ಕು ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ನಿಂದಿಸುವ ಗುಣಲಕ್ಷಣವನ್ನು ಹೊಂದಿದೆ. ಮಾರ್ಚ್ 2011ರಿಂದ ಸುಮಾರು 6.6 ಮಿಲಿಯನ್ ಜನರು ಸಿರಿಯಾವನ್ನು ತೊರೆದಿದ್ದಾರೆ ಎಂದು ಅಂದಾಜಿಸಲಾಗಿದೆ ಮತ್ತು 5.6 ಮಿಲಿಯನ್ ಸಿರಿಯಾದ ನಾಗರಿಕರು, 1.2 ಮಿಲಿಯನ್ ಮಕ್ಕಳನ್ನು ಒಳಗೊಂಡಂತೆ ಪಕ್ಕದ ನೆರೆಯ ದೇಶಗಳಿಗೆ ವಲಸೆ ಹೋಗಿದೆ. ಅದಲ್ಲದೆ, 7.6 ಮಿಲಿಯನ್ ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ ಮತ್ತು 2017 ಜೂನ್ ತಿಂಗಳ ವಿಶ್ವಸಂಸ್ಥೆಯ ವರದಿಯ ಅಂದಾಜಿನಂತೆ 600,000 ಸಿರಿಯನ್ನರು ಮುತ್ತಿಗೆಯಲ್ಲಿ ಸಿಲುಕಿಕೊಂಡಿದ್ದಾರೆ. ಡಿಸೆಂಬರ್ 2017ಕ್ಕೆ ಸಂಘರ್ಷದ ಮರಣ ಸಂಖ್ಯೆಯು 5 ಲಕ್ಷ ತಲುಪಿದೆ. ಸಶಸ್ತ್ರ ಸಂಘರ್ಷವು 2016ರ ನಂತರದಲ್ಲಿ ಸಿರಿಯಾಕ್ಕೆ ಒಟ್ಟು $226 ಬಿಲಿಯನ್ ಆರ್ಥಿಕ ನಷ್ಟವನ್ನು ಉಂಟು ಮಾಡಿದೆ ಮತ್ತು ಎಲ್ಲಾ ರೀತಿಯ ಆರ್ಥಿಕ ಉತ್ಪಾದನೆಯು ಕುಸಿದಿರುವುದರಿಂದ ದೇಶದ ಜಿಡಿಪಿ ಯಲ್ಲಿ 63 ಶೇಕಡ ಕಡಿಮೆಯಾಗಿದೆ. ಶೇಕಡಾ 40ಕ್ಕಿಂತಲೂ ಹೆಚ್ಚು ಜನರು ಮೂಲಭೂತವಾದ ವೈದ್ಯಕೀಯ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ, ಶೇಕಡಾ 50 ಆಸ್ಪತ್ರೆಗಳು ಭಾಗಶಃ ಕಾರ್ಯಚರಿಸುತ್ತಿದೆ ಅಥವಾ ಸಂಪೂರ್ಣವಾಗಿ ನಾಶವಾಗಿದೆ. ಜನರ ವ್ಯಾಪಕ ಸ್ಥಳಾಂತರವು ಬಳಲುವಿಕೆಯನ್ನು ವೃದ್ಧಿಸಿದೆ ಮತ್ತು ಈಗಾಗಲೇ ಅವರು ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಲು ಅಗಾಧವಾದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಜನರು ಅಗತ್ಯ ಆಹಾರ ಮತ್ತು ಆಹಾರೇತರ ವಸ್ತುಗಳನ್ನು ಸುರಕ್ಷಿಸಲು ಸಾಧ್ಯವಾಗುತ್ತಿಲ್ಲ. ಜನರು ವಸತಿ ರಹಿತತೆಯ ಸಮಸ್ಯೆ, ಆಹಾರ ಮತ್ತು ಔಷಧಿಯ ಕೊರತೆ ಮತ್ತು ಸಾರ್ವಜನಿಕ ಸೇವೆ ಮತ್ತು ಸೌಕರ್ಯಗಳ ನಾಶದಿಂದ ತೀವ್ರವಾಗಿ ಭಾದಿತರಾಗಿದ್ದಾರೆ. ವಿಶ್ವಸಂಸ್ಥೆಯ ವರದಿ(ಫೆಬ್ರವರಿ 2018)ಯಂತೆ ಐದು ಸಿರಿಯನ್ ಜನರಲ್ಲಿ ನಾಲ್ವರು ಬಡತನದಲ್ಲಿ ಬದುಕುತ್ತಿದ್ದಾರೆ. 64.7 ಶೇಕಾಡ ಜನರು ತೀವ್ರವಾದ ಬಡತನದಲ್ಲಿದ್ದಾರೆ ಮತ್ತು 13.1 ಮಿಲಿಯನ್ ಸಿರಿಯನ್ನರು ಮಾನವೀಯತೆಯ ನೆರವಿನ ಅಗತ್ಯದಲ್ಲಿದ್ದಾರೆ. ಆದ್ದರಿಂದ, ನಡೆಯುತ್ತಿರುವ ಸಂಘರ್ಷದಲ್ಲಿ ಸಂಧಾನಕ್ಕೆ ಅವಕಾಶವಿಲ್ಲದೆ, ಸೇನೆ ಮತ್ತು ವಿರೋಧಿ ಬಣ ಎರಡೂ ಕೂಡ ರಾಜಕೀಯ ಉಳಿವಿಗಾಗಿ ಹೋರಾಡುತ್ತಿದೆ. ಆದ್ದರಿಂದ, ಎರಡನೇ ವಿಶ್ವ ಮಹಾ ಯುದ್ಧವು ಮಾನವತೆಯನ್ನು ಗೊಂದಲಕ್ಕೀಡು ಮಾಡಿದ ನಂತರದಲ್ಲಿ ಸಿರಿಯಾವು ಜಗತ್ತಿನ ಅತಿ ದೊಡ್ಡ ಮಾನವೀಯತೆಯ ಬಿಕ್ಕಟ್ಟಿಗೆ ಪ್ರಚೋದಿಸಿತು.

ಕೃಪೆ : ಕಂಪ್ಯಾನಿಯನ್

 

 

LEAVE A REPLY

Please enter your comment!
Please enter your name here