ಲೇಖಕಿ: ನೂರಾ ಸಲಾಂ
ಅನುವಾದ: ತಶ್ರೀಫ ಉಪ್ಪಿನಂಗಡಿ

ಸರ್ವರಿಗೂ ಉತ್ತಮ ಶಿಕ್ಷಣ ದೊರಯಬೇಕೆಂಬ ಕನಸು ನಮ್ಮ ದೇಶದಲ್ಲಿ ಇನ್ನೂ ಕನಸಾಗಿಯೇ ಉಳಿದಿದೆ. ಸಮಾಜದಲ್ಲಿ ಬೇರೂರಿರುವ ಜಾತೀಯತೆಯ ಕರಗಳಿಗೆ ಇನ್ನೊಂದು ಜೀವವು ಬಲಿಯಾಗಿದೆ.ಉನ್ನತ ಶಿಕ್ಷಣ ಪಡೆದು ಖ್ಯಾತ ವೈದ್ಯರಾಗಬೇಕೆಂಬ ಗುರಿಹೊಂದಿದ್ದ ಡಾ/ಪಾಯಲ್ ಎಂಬ ಯುವ ವೈದ್ಯೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಡಾ.ಪಾಯಲ್ ತದ್ವಿ(26ವರ್ಷ) ಸಲೀಂ ತದ್ವಿ ಹಾಗೂ ಅಬೇದಾ ತದ್ವಿ ಪುತ್ರಿ. ಬಿವೈಎಮ್ ನಯ್ಯರ್ ಆಸ್ಪತ್ರೆಯ ಸಹಸಂಸ್ಥೆಯಾಗಿರುವ ಟೋಪಿವಾಲಾ ರಾಷ್ಟ್ರೀಯ ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದ ಎಂ.ಡಿ (ಡಾಕ್ಟರ್ ಆಫ್ ಮೆಡಿಸಿನ್ ಇನ್ ಗೈನಕೋಲಜಿ) ಕಲಿಯುತ್ತಿದ್ದ ಈಕೆ ದುರದೃಷ್ಟವಶಾತ್ ಮೂರು ಹಿರಿಯ ವೈದ್ಯರಿಂದ ನಿರಂತರವಾಗಿ ಜಾತಿಯ, ಧರ್ಮದ ಆದಾರದಲ್ಲಿ ಮಾನಸಿಕ ಹಿಂಸೆ ಯನ್ನು ಅನುಭವಿಸಿ, ಮೇ 22 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಾಯಲ್ ‘ಬಿಲ್’ ಮುಸ್ಲಿಂ ಆದಿವಾಸಿ ಸಮುದಾಯಕ್ಕೆಸೇರಿದವರಾಗಿದ್ದರು. ಈ ಕಾರಣಕ್ಕಾಗಿ ಹಿರಿಯ ವೈದ್ಯರಿಂದ ನಿರಂತರ ಕಿರುಕುಳಕ್ಕೊಳಬೇಕಾಯಿತು. ಈ ಕುರಿತು ಶಿಕ್ಷಕರಿಗೂ ಸಂಸ್ಥೆಯ ಸಂಬಂಧಪಟ್ಟ ಅಧಿಕಾರಿಗಳಿಗೂ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಮೇ 2018 ಕಾಲೇಜಿಗೆ ಸೇರ್ಪಡೆಗೊಂಡು ಅದೇ ವರ್ಷ ಡಿಸೆಂಬರ್ ನಲ್ಲಿ ತನಗಾಗುತ್ತಿರುವ ಅನ್ಯಾಯದ ಕುರಿತು ಹೆತ್ತವರಿಗೂ ಸಂಸ್ಥೆಗೂ ದೂರು ನೀಡಲಾರಂಬಿಸಿದಳು.

ಮೀಸಲಾತಿ ಯ ಆಧಾರದ ಲ್ಲಿ ಸೀಟ್ ಗಳಿಸಿದ್ದಕ್ಕಾಗಿ ಹಾಗೂ ಮುಸ್ಲಿಂ ಎಂಬ ಕಾರಣ ಕ್ಕಾಗಿ ಅಪಮಾನವನ್ನು ಸಹಿಸಬೇಕಾಯಿತು. ಆಕೆಯ ಧರ್ಮವನ್ನು ಪ್ರಶ್ನಿಸಲಾಯಿತು.ಮೂಲಗಳಿಂದ ತಿಳಿಯುವಂತೆ ಉಪವಾಸವನ್ನು ತೊರೆಯಲು ಸಹ ಅನುಮತಿಸುತ್ತಿರಲಿಲ್ಲ. ಆಕೆಯ ಪೋಷಕರು ದೂರದ ಜಲ್ಗಾಂವ್ ಜಿಲ್ಲೆಯಿಂದ ಬಂದು ವಿಚಾರಿಸಿದರೂ ಸಂಸ್ಥೆ ಪ್ರತಿಕ್ರಿಯಿಸಲಿಲ್ಲ.ಜಾತಿ ತಾರತಮ್ಯ ಮಾತ್ರವಲ್ಲದೆ ವೈದ್ಯಕೀಯ ರಂಗದಲ್ಲೂ ಆಕೆಯ ಸಾಮರ್ಥ್ಯವನ್ನು ಕಡೆಗಣಿಸಿ ಶಸ್ತ್ರಚಿಕಿತ್ಸೆ ಮಾಡಲು ಅನುಮತಿಸುತ್ತಿರಲಿಲ್ಲ,ಹೀಗೆ ನಿರಂತರವಾಗಿ. ಅಪಮಾನಿಸಲಾಗುತ್ತಿತ್ತು ವೈದ್ಯಕೀಯ ರಂಗದಲ್ಲಿ ಪಾಯಲ್ ನಂತಹ ಹುಡುಗಿ ಯ ಅಸ್ತಿತ್ವವನ್ನೇ ಪ್ರಶ್ನಿಸಲಾಗುತ್ತಿತ್ತು, ಆಕೆಯ ಶೈಕ್ಷಣಿಕ ಸಾಧನೆಯು ಹಿರಿಯ ವಿದ್ಯಾರ್ಥಿಗಳಿಗೆ ಸವಾಲಾಗಿತ್ತು.
ಮೂರು ಹಿರಿಯ ವೈದ್ಯರು ಗಳಾದ ಡಾ.ಹೇಮಾ ಆಹುಜ,ಡಾ.ಭಕ್ತಿ ಮೆಹೆರ್ ಹಾಗೂ ಡಾ. ಅಂಕಿತ ಕಂಡೇಲ್ವಾಲ್ರ ವಿರುದ್ಧ ಎಸ್ ಸಿ/ಎಸ್ ಟಿ ಕಾಯ್ದೆ ಹಾಗೂ ರಾಗಿಂಗ್ ವಿರೋಧಿ ಕಾಯ್ದೆಯಡಿ ಎಫ್ ಐ ಆರ್ ದಾಖಲಿಸಲಾಗಿದೆ. ಇದನ್ನು ಕೇವಲ ಒಂದು ರಾಗಿಂಗ್ ಪ್ರಕರಣ ವಾಗಿ ಕಾಣದೆ ಸಾಂಸ್ಥಿಕ ಜಾತಿ ಪೀಡನೆಯಾಗಿ ಪರಿಗಣಿಸಬೇಕಾಗಿದೆ. ಪೋಷಕರು ಹಾಗೂ ವಿದ್ಯಾರ್ಥಿಯು ಅನೇಕ ಬಾರಿ ದೂರು ಸಲ್ಲಿಸಿದರೂ ಸಂಸ್ಥೆ ತೋರಿದ ನಿರ್ಲಕ್ಷ್ಯತನವು ಖಂಡನಾರ್ಹ.

ದಲಿತ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಉನ್ನತ ವಿದ್ಯಭ್ಯಾಸಕ್ಕೆ ಕಾಲಿರಿಸುವಾಗ ಎದುರಾಗುವ ಸಮಸ್ಯೆ ಶೋಷಣೆ ಗಳಿಗೆ ಮುಖ್ಯ ಕಾರಣ ಶಿಕ್ಷಣ ಸಂಸ್ಥೆಗಳ ಲ್ಲಿ ಬೇರೂರಿರುವ ಬ್ರಾಹ್ಮಣ ಶಾಹಿತ್ವವಾಗಿದೆ.ಇದು ಒಂದೇ ಘಟನೆ ಯಲ್ಲ ಇಂತಹ ಅನೇಕ ಘಟನೆಗಳು ಈ ಹಿಂದೆ ನಡೆದಿದೆ ಇದರಲ್ಲಿ 2016 ರ ರೋಹಿತ್ ವೆಮುಲಾ ಪ್ರಕರಣ ಅದೇ ರೀತಿ 2017 ಲ್ಲಿ ಸ್ಪರ್ದಾತ್ಮಕ ಪರೀಕ್ಷೆ ಯಲ್ಲಿ ಜಾತಿ ತಾರತಮ್ಯ ದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಅಂಕಿತ ಪ್ರಕರಣ ಎಲ್ಲಾ ಒಂದೇ ಸಾಲಿನಲ್ಲಿ ನಿಲ್ಲುತ್ತದೆ.ಇದೇ ವೇಳೆ ಶೈಕ್ಷಣಿಕ ಅಂಕಿಅಂಶಗಳನ್ನು ಗಮನಿಸುವಾಗ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅರ್ಧದಲ್ಲಿ ಶಿಕ್ಷಣ ಮೊಟಕುಗೊಳಿಸುತ್ತಿರುದನ್ನು ಕಾಣಬಹುದಾಗಿದೆ.

ಸರ್ವರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ವನ್ನು ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ.ನ್ಯಾಯ ಪ್ರಜಾಪ್ರಭುತ್ವದ ಬೇಡಿಕೆಯಾಗಿದೆ. ಆದ್ಧರಿಂದ ಡಾ. ಪಾಯಲ್ ಹಾಗೂ ಇದೇ ರೀತಿ ನೊಂದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಲೇಬೇಕಾಗಿದೆ.

ಕೃಪೆ : ದಿ ಕಂಪಾನಿಯನ್ ಇ ಮ್ಯಾಗಜಿನ್

1 COMMENT

LEAVE A REPLY

Please enter your comment!
Please enter your name here