ಮನ್ಸೂರ್ ಅಹ್ಮದ್ ಸಾಮಣಿಗೆ

ಕಾಫಿ ಕಿಂಗ್ ಎಂದೇ ಜನಪ್ರಿಯತೆ ಪಡೆದಿದ್ದ ಉಧ್ಯಮಿ ಸಿದ್ದಾರ್ಥ್ ಹೆಗ್ಡೆ ವಿಷಾಧನೀಯ ಸಾವಿನ ಬಗ್ಗೆ ನೀವು ಕೇಳಿರಬಹುದು.ಅವರ ಸಜ್ಜನಿಕೆಯ ಬಗ್ಗೆ ಅವರ ಗುಣಗಳ ಬಗ್ಗೆ ಮಾದ್ಯಮಗಳಲ್ಲಿ ಕಳದೆರಡು ದಿನಗಳಿಂದ ನೀವು ಬಹಲಷ್ಟು ಕೇಳಿರುವಿರಿ.ಇವರ ಸಾವಿನ ಸುದ್ದಿ ಕೇಳಿ ಇಡೀ ದೇಶವೇ ಬೆಚ್ಚಿಬಿದ್ದಿವೆ.ಅಷ್ಟೊಂದು ದೊಡ್ಡ ಮಟ್ಟದ ವ್ಯಕ್ತಿ ಈ ರೀತಿ ನಿಧನ ಹೊಂದುವುದು ದುಃಖದ ಸಂಗತಿ. ಸಿದ್ದಾರ್ಥ್ ಇಂದು ನಮ್ಮೊಂದಿಗಿಲ್ಲ ನಿಜಕ್ಕೊ ಇದು ದುಃಖದ ಸಂಗತಿ.ನೀವೆಲ್ಲ ಇದರ ಬಗ್ಗೆ ಎಷ್ಟು ಯೋಚನೆ ಮಾಡುತ್ತಿದ್ದೀರಾ ನನಗೆ ಗೊತ್ತಿಲ್ಲ ಆದರೆ ನನ್ನ ಕಣ್ಣೆದುರಿಗೆ ಬರೋದು ಸಿದ್ದಾರ್ಥ್ ಮಾತ್ರವಲ್ಲ ಸಿದ್ದಾರ್ಥ್ ಹೆಗ್ದೆಯರು ಕಟ್ಟಿದ ಲೋಕ ಬರತ್ತೆ.ಆ ಲೋಕದಲ್ಲಿರುವ ನೂರಾರು,ಸಾವಿರಾರು ಲಕ್ಷಾಂತರ ಯುವಕ ಯುವತಿಯರು ಬರುತ್ತಾರೆ.ಜೀವನ ಕಟ್ಟಿರುವ ಅದೆಷ್ಟೂ ಜೀವಗಳಿಗೆ ಸಿದ್ದಾರ್ಥ್ ಹೆಗ್ಡೆಯವರು ಆಶ್ರಯ ನೀಡಿದ್ದಾರೆ.ಇವರ ಆಶ್ರಯದಲ್ಲಿ ಅದೆಷ್ಟೂ ಕಾಫಿ ಪ್ಲಾಂಟರ್ಗಳು ಇದ್ದಾರೆ, ವರ್ತಕರುಗಳು ಇದ್ದಾರೆ,ಉದ್ಯಮಿಗಳು ಇದ್ದಾರೆ,ಬೇರೆ ಬೇರೆ ರೀತಿಯ ಮೀಡಿಯೇಟರ್ಗಳು ಇದ್ದಾರೆ,ಬೇರೆ ಬೇರೆ ರೀತಿಯ ಉದ್ಯೋಗಗಳನ್ನು ಮಾಡುವವರು ಇದ್ದಾರೆ ಒಟ್ಟಾರೆಯಾಗಿ ಇದು ಸಿದ್ದಾರ್ಥ್ ಹೆಗ್ಡೆಯವರ ಲೋಕ ಪ್ರಪಚವೇ ಆಗಿದೆ.ಸಿದ್ದಾರ್ಥ್ ಹೆಗ್ಡೆಯವರು ಈ ಪ್ರಪಂಚವನ್ನು ಹೇಗೆ ಕಟ್ಟಿದರು ಅಂತ ಹೇಳಿದರೆ ತಾನು ಯುವಕನಾಗಿದ್ದಾಗ ತನ್ನ ತಂದೆಯವರಿಂದ ಬರೇ ೫ ಲಕ್ಷ ರೂಪಾಯಿ ಪಡೆದು ಮುಂಬೈ ತೆರಳಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಅಲ್ಲಿಂದ ಕಟ್ಟಿದ ಲೋಕ ಇದು.ರಾಜಕೀಯದಿಂದ ದೂರ ಉಳಿದಿದ್ದ ಇವರು ರಾಜಕೀಯಕ್ಕೋ ನನಗೋ ಯಾವುದೇ ಸಂಬಂಧವಿಲ್ಲವೆಂಬಂತೆ ಬದುಕಿದವರು ಸಿದ್ದಾರ್ಥ್.

ಸಿದ್ದಾರ್ಥ್ ಹೆಗ್ಡೆಯವರು ಇವತ್ತು ಇಲ್ಲ ಎಂಬುದು ಈ ರಾಷ್ಟ್ರಕ್ಕೆ ಈ ರಾಜ್ಯಕ್ಕೆ ತುಂಬಲಾರದ ನಷ್ಟ.ಇದು ಅರ್ಥಮಾಡಿಕೊಳ್ಳುವವರಿಗೆ ಅರ್ಥವಾಗುತ್ತದೆ.ಒಬ್ಬ ರಾಜಕೀಯ ವ್ಯಕ್ತಿ ಸತ್ತಾಗ ತುಂಬಲಾರದ ನಷ್ಟ ಅಂದುಕೊಳ್ಳುತೀವಿ ಆದ್ರೆ ನಿಜವಾಗಿಯೂ ರಾಜಕೀಯ ವ್ಯಕ್ತಿ ಸತ್ತಾಗ ಏನು ನಷ್ಟ ಆಗೋದಿಲ್ಲ.ರಾಜಕೀಯ ವ್ಯಕ್ತಿ ಅವರದೇ ಲೋಕವನ್ನ ಕಟ್ಟಿರುತ್ತಾರೆ.ಆದರೆ ಸಿದ್ದಾರ್ಥ್ ಹೆಗ್ಡೆ ಆಗಲ್ಲ ಅದೆಷ್ಟೋ ಜನರಿಗೆ ಆಶ್ರಯವನ್ನು ಕೊಟ್ಟಿದ್ದಾರೆ,ಉದ್ಯೋಗವನ್ನ ಕೊಟ್ಟಿದ್ದಾರೆ,ಜೀವನ ಕೊಟ್ಟಿದ್ದಾರೆ ಅದೆಷ್ಟೋ ಜನರಿಗೆ.ಆ ಜೀವನ ಬರುತ್ತಿದೆ ನನ್ನ ಕಣ್ಣೆದುರಿಗೆ.ಅಂತಹ ಸಿದ್ದಾರ್ಥ್ ಹೆಗ್ಡೆಯವರು ನಮ್ಮ ಕಣ್ಣದುರಿಗೆ ಇಲ್ಲ ಎಂಬುದು ಸಾಮಾನ್ಯವಾದ ವಿಚಾರವಲ್ಲ.ಇವತ್ತು ಅದೆಷ್ಟೋ ಜನರು ಕಣ್ಣೀರಲ್ಲಿ ಕೈ ತೊಳೆಯುತಿದ್ದಾರೆ ಎಂಬುದನ್ನು ಕಲ್ಪನೆ ಮಾಡಲು ಸಾಧ್ಯವಿಲ್ಲ.

ಸಿದ್ದಾರ್ಥ್ ಹೆಗ್ಡೆಯವರು ಕಾಫಿ ಡೇ ಎಂಬ ಲೋಕದಲ್ಲಿ ಅದೆಷ್ಟೋ ಬಡ ಯುವಕ ಯುವತಿಯರಿಗೆ ಉದ್ಯೋಗವನ್ನು ನೀಡಿದ್ದಾರೆ,ಕನ್ನಡಿಗರಿಗೆ ಟ್ರೈನಿಂಗ್ ನೀಡಿ ಉದ್ಯೋಗವನ್ನು ನೀಡಿದ್ದಾರೆ.ಅಂತಹ ಸಿದ್ದಾರ್ಥ್ ಇಂದು ನಮ್ಮೊಂದಿಗೆ ಇಲ್ಲ ಎಂಬುದು ದುಃಖಕರ ಸಂಗತಿ.ಅವರ ಸಾವಿಗೆ ಕಾರಣಗಳು ಹಲವಾರು ಚರ್ಚೆವಾಗುತ್ತಿವೆ.ಸಿದ್ದಾರ್ಥ್ ಹೆಗ್ಡೆಯವರ ದುರಂತ ಸಾವಿಗೆ ಕೇಂದ್ರ ಸರಕಾರದ ಅವೈಜಾನಿಕ ಆರ್ಥಿಕ ನೀತಿ ಕಾರಣವಾಗಿದೆ.ಇದು ಕೇವಲ ಸಿದ್ದಾರ್ಥ್ ಹೆಗ್ಡೆಯವರಿಗೆ ಮಾತ್ರವಲ್ಲ ದೇಶದ ಮಧ್ಯಮ ವರ್ಗದ ಜನರನ್ನು ಕೂಡಾ ಬಲಿಪಡೆಯಲಿದೆ ಎಂಬುದು ಆತಂಕದ ವಿಷಯವಾಗಿದೆ.ನೋಟ್ ಬ್ಯಾನ್ ನಂತರ ಲಕ್ಷಾಂತರ ಉಧ್ಯಮಿಗಳು ಆರ್ಥಿಕ ಸಂಕಷ್ಟಗಳನ್ನು ಎದುರಿಸುವಂತಾಗಿದೆ.ಯಾರಿಗೆ ಆಡಳಿತ ಸರಕಾರದ ಆಶ್ರಯ ಇರುತ್ತದಯೊ ಅವರಿಗೆ ಮಾತ್ರ ಇಂದು ಬಂಡವಾಲಶಾಹಿ ಮಾರುಕಟ್ಟೆಯಲ್ಲಿ ಬೇರೂರಳು ಸಾದ್ಯವಾಗುತ್ತಿದೆ.ಯಾರಿಗೆ ಆಳುವ ಸರ್ಕಾರದ ಆಶ್ರಯ ವಿರುದಿಲ್ಲವೊ ಅವರು ನೇರವಾಗಿ ಪ್ರಾಣ ಬಲಿ ಕೂಡಬೇಕಾಗುತ್ತದೆ.ಸಿದ್ದಾರ್ಥ್ ಹೆಗ್ಡೆಯವರ ಜೀವನದಲ್ಲಿಯೂ ಇದೇ ಆಗಿರೊದು.ಸರಳ ಸಜ್ಜನಿಕೆಯ ಸ್ವಭಾವದ ಸಿದ್ದಾರ್ಥ್ ಹೆಗ್ಡೆ ಅವರು ನಮ್ಮ ದೇಶದ ಅವೈಜ್ಞಾನಿಕ ನೀತಿಯಿಂದಾಗಿ ತನ್ನ ಪ್ರಾಣವನ್ನು ಬಲಿ ನೀಡಬೇಕಾಯಿತು ತೀವ್ರ ಆತಂಕದ ವಿಷಯ.
ಸಿದ್ದಾರ್ಥ್ ಅವರ ಆತ್ಮಹತ್ಯೆ ಈ ದೇಶದ ಸಣ್ಣಪುಟ್ಟ ಉದ್ಯಮಿಗಳಿಗೆ ಭವಿಷ್ಯವಿಲ್ಲ ಎಂಬುದನ್ನ ಹೇಳುತ್ತದೆ ಮಾತ್ರವಲ್ಲ ಇದು ಇಂತಹ ಅವೈಜ್ಞಾನಿಕವಾದ ಆಡಲಿತ, ಆರ್ಥಿಕ ನೀತಿ ಇಡೀ ದೇಶವನ್ನೇ ನಾಶ ಮಾಡತ್ತಾ ಎಂಬ ಆತಂಕ ಕಾಡುದಂತು ನಿಜ.

LEAVE A REPLY

Please enter your comment!
Please enter your name here