ಲೇಖಕರು: ಮೌ.ವಹಿದುದ್ದೀನ್ ಖಾನ್
ಅನುವಾದ:ತಲ್ಹಾ ಕೆ.ಪಿ

ತಾತ್ಪರ್ಯಗಳ ಪ್ರಪಂಚವು ದೇವನ ಸಾಕ್ಷಾತ್ಕಾರಗಳಿದ್ದಾಗಿದೆ. ಆತನ ಸಾಕ್ಷತ್ಕಾರಗಳನ್ನು ಮಾನವ ಭಾಷೆಯಲ್ಲಿ ವಿವರಿಸಲು ಸಾಧ್ಯವಿಲ್ಲ. ವಾಸ್ತವವೇನೆಂದರೆ ಎಲ್ಲಿ ಅಕ್ಷರಗಳು ಅಂತ್ಯಗೊಳ್ಳುತ್ತದೆಯೋ ಅಲ್ಲಿ ಆತನ ತಾತ್ಪರ್ಯಗಳು ಪ್ರಾರಾಂಭವಾಗುತ್ತದೆ. ನಾವು ಯಾವುದೇ ತಾತ್ಪರ್ಯವನ್ನು ವಿವರಿಸುವಾಗ ನಾವು ಅದನ್ನು ಸಂಪೂರ್ಣವಾಗಿ ವಿವರಿಸುವುದಿಲ್ಲ ಬದಲಾಗಿ ನಾವು ಅದರಿಂದ ಕೆಲವನ್ನು ಕಡಿತಗೊಳಿಸುತ್ತೇವೆ ಅಥವಾ ಅದರ ಮೇಲೆ ಅಕ್ಷರಗಳ ಪೆರೇಡ್ ಹಾಕುತ್ತೇವೆ.

ಯಾವುದೇ ತಾತ್ಪರ್ಯವಿರುವ ವಾಸ್ತವನ್ನು ಮಾನವನು ಅಕ್ಷರಗಳಿಂದ ಅರ್ಥೈಸಲಾರನು. ಒಬ್ಬ ಕುರುಡ ವ್ಯಕ್ತಿಗೆ ಹೂವನ್ನು ಪರಿಚಯಿಸಲು ಮಾನವ ಭಾಷೆಯ ಎಲ್ಲ ರೀತಿಯ ಅಕ್ಷರಗಳನ್ನು ಉಪಯೋಗಿಸಿದರೂ, ಹೂವೂ ಎಂದರೇನು ಎಂದು ಆ ಕುರುಡ ಅರಿಯಲಾರ.

ಅದೇರೀತಿ ಒಬ್ಬ ವ್ಯಕ್ತಿಯು ತಾತ್ಪರ್ಯಗಳ ವಾಸ್ತವವನ್ನು ಕಾಣುವ ಪ್ರತಿಭೆ ಹೊಂದಿಲ್ಲದಿದ್ದಲ್ಲಿ ಆತನ ಮುಂದೆ ನಿಘಂಟಿನ ಎಲ್ಲಾ ಅಕ್ಷರಗಳನ್ನು ತಂದರೂ, ಅಥವಾ ಆತ ಭಾಗಗಳನ್ನು ಓದಿದರೂ ತಾತ್ಪರ್ಯಗಳ ವಾಸ್ತವವನ್ನು ಅರಿಯಲಾರ.

ಸನ್ಮಾರ್ಗವು ಪ್ರತಿಯೂರ್ವನ ಪ್ರಾಕೃತಿಕ ಧ್ವನಿಯಾಗಿದೆ ಅದರ ನೈಜ್ಯ ಶೋಧ ಇದ್ದವನಿಗೆ ಮಾತ್ರ ಅದು ದೂರೆಯುತ್ತದೆ. ಯಾರು ತನ್ನೊಳಗಿನ ಸತ್ಯವನ್ನು ಹುಡುಕುತ್ತಾನೋ, ಅಥವಾ ಸತ್ಯವನ್ನು ಅರಿಯುವ ತುಡಿತವು ಆತನ ನಿದ್ದೆಗೆಡಿಸುತ್ತದೆಯೋ ಆಗ ಮಾತ್ರ ಆತ ಸತ್ಯವನ್ನು ಗ್ರಹಿಸಬಲ್ಲ. ಇಂತಹ ವ್ಯಕ್ತಿಯು ಸನ್ಮಾರ್ಗವನ್ನು ಅರಿಯುವ ಪ್ರಾಕೃತಿಕ ಪ್ರತಿಭೆಯನ್ನು ಸೃಷ್ಟಿಸಿದ್ದಾನೆ. ಇಂತಹ ವ್ಯಕ್ತಿಯು ವಾಸ್ತವಿಕವಲ್ಲದ ಪ್ರಪಂಚದಿಂದ ದೂರ ಸರಿದು ವಾಸ್ತವಿಕ ಪ್ರಪಂಚದ ಹತ್ತಿರವಾಗುತ್ತಾನೆ.

ಪ್ರವಾದಿಗಳು ಮಾನವನಿಗೆ ಸ್ವರ್ಗದ ಹುಡುಕಾಟದಲ್ಲಿ ಸಹಕಾರಿಯಾಗುತ್ತಾರೆ, ಪ್ರವಾದಿಗಳಿಂದ ವಾಸ್ತವವನ್ನು ಅರಿಯುವಮುನ್ನ ಈ ಎಲ್ಲ ಅನುಭಾವಗಳು ವ್ಯಕ್ತಿಯ ಅಂತರಾಳದಲ್ಲಿ ಹುದುಗಿರುತ್ತದೆ, ಪ್ರವಾದಿಯ ಧ್ವನಿಯು ಆತನ ಅಂತರಾಳದಲ್ಲಿ ಇಳಿದೊಡನೆ ಅದು ಪ್ರಾಕೃತಿಕ ಪುಸ್ತಕದ ವಿವರಣೆಯಾಗಿಬಿಡುತ್ತದೆ. ಆತ ತನ್ನೊಳಗೆ ಅಡಗಿರುವ ಅಕ್ಷರಗಳಿಲ್ಲದ ಸಂಕೇತಗಳನ್ನು ಪದಗಳ ಭಾಷೆಯಲ್ಲಿ ಕಾಣ ತೊಡಗುವನು .

ಕುರಾನ್ ಮತ್ತು ಕುರಾನನ್ನು ಓಡುವವನನ್ನು ಪರಸ್ಪರ ಪಡಿಯಚ್ಚುಗಳಾಗುತ್ತಾರೆ . ಅದರಿಂದಾಗಿ ಆತನು ಕುರಾನಿನಂತೆ ಮತ್ತು ಕುರಾನ್ ಆತನಂತಾಗಿ ಮಾರ್ಪಡುತ್ತದೆ.

LEAVE A REPLY

Please enter your comment!
Please enter your name here