ಲೇಖಕರು: ತಲ್ಹಾ ಕೆ.ಪಿ ಮಂಗಳೂರು (ಕಾನೂನು ವಿದ್ಯಾರ್ಥಿ)

ವಿದ್ಯಾಭ್ಯಾಸ ಎನ್ನುವುದು ಒಬ್ಬ ವ್ಯಕ್ತಿಯ ಮೂಲಭೂತ ಅವಶ್ಯಕತೆ ಎಂದು ನಮ್ಮ ಸಂವಿಧಾನ ಸಾರಿ ಹೇಳುವಾಗ, ಉತ್ತಮ ವಿದ್ಯಾ ಸಂಸ್ಥೆಗಳ ನಿರ್ಮಾಣ ಅಥವಾ ಇಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವುದು ಜನರನ್ನು ಆಳ್ವಿಕೆ ನಡೆಸುತ್ತಿರುವ ಸರಕಾರಗಳ ಅತೀ ಪ್ರಮುಖ ಜವಾಬ್ದಾರಿ. ಆದರೆ ಶಿಕ್ಷಣ ರಂಗಕ್ಕೆ ಸರಿಯಾದ ಪ್ರಾಮುಖ್ಯತೆಯನ್ನು ಸರಕಾರ ನೀಡುತ್ತಿಲ್ಲವೆಂಬುವುದು, ಸರಕಾರ ಯೋಜನೆ ಮತ್ತು ಅದು ನಡೆಸುತ್ತಿರುವ ಕಾರ್ಯಕ್ರಮಗಳನ್ನು ಅವಲೋಕಿಸಿದಾಗ ತಿಳಿದುಬರುತ್ತದೆ. ನೆರೆಯ ನಮಗಿಂತ ಬಡ ದೇಶವಾಗಿರುವ ನೇಪಾಳವು ಜಿ ಡಿ ಪಿ’ಯ 5 .1%ರಷ್ಟು ಖರ್ಚು ಮಾಡುವಾಗ ನಮ್ಮ ಸರಕಾರವು ಕೇವಲ ಜಿ ಡಿ ಪಿ’ಯ 3 .6%ರಷ್ಟು ಮಾತ್ರ ಶಿಕ್ಷಣ ರಂಗಕೆ ಖರ್ಚುಮಾಡುತ್ತಿದೆ ಎಂದರೆ ಸುಮಾರು 1.5% ರಷ್ಟು ಕಡಿಮೆ ಖರ್ಚು ಮಾಡುತ್ತಿದೆ ಎನ್ನುವಾಗ ಕೇಂದ್ರ ಸರಕಾರಕ್ಕೆ ಶಿಕ್ಷಣದ ಬಗ್ಗೆ ಎಷ್ಟು ಕಾಳಜಿ ಇದೆ ಎಂದು ತಿಳಿದು ಬರುತ್ತದೆ. ಅದೇನೇ ಇರಲಿ, ಈ ಸಲದ ಪಾರ್ಲಿಮೆಂಟ್’ನಲ್ಲಿ ಹಲವಾರು ಮಸೂದೆಗಳು ಎಷ್ಟೇ ವಿರೋಧಗಳಿದ್ದರೂ ತನ್ನ ಸಂಖ್ಯಾಬಲದಿಂದ ಅತೀ ವೇಗದಲ್ಲಿ ಸರಕಾರ ಅಂಗೀಕಾರ ಪಡೆದಿದೆ.ಎನ್ನುವುದು ಎಲ್ಲರೂ ತಿಳಿದಿರುವ ವಿಚಾರ.ಬಹಳಷ್ಟು ಮಸೂದೆಗಳು ಕೇವಲ ಕೆಲವು ಘಂಟೆಗಳಲ್ಲಿ ಅನುಮೋದನೆಗೊಂಡಿದೆ ಎಂವುದರಲ್ಲಿ ಎರಡು ಮಾತಿಲ್ಲ, ಇದೇ ರೀತಿ ಕೇವಲ ಒಂದು ಎರಡು ಘಂಟೆ ಚರ್ಚಿಸಿ ಅಂಗೀಕಾರಗೊಂಡ ಒಂದು ಪ್ರಮುಖ ಮಸೂದೆಯಾಗಿದೆ ”ಸೆಂಟ್ರಲ್ ಯೂನಿವರ್ಸಿಟಿ ಬಿಲ್ ೨೦೧೯”.(ಎಂದರೆ ಆಂಧ್ರ ಪ್ರದೇಶದಲ್ಲಿ ಎರಡು ಹೊಸ ಕೇಂದ್ರೀಯ ವಿಶ್ವವಿದ್ಯಾಲಯಗಳ ಸ್ಥಾಪನೆಯ ಕುರಿತಿರುವ)ಯು ಜಿ ಸಿ’ಯ ಪ್ರಕಾರ ದೇಶದಲ್ಲಿ ಸುಮಾರು 874 ವಿಶ್ವವಿದ್ಯಾಲಯಗಳಿವೆ, ಅದರ ಪೈಕಿ 47 ಕೇಂದ್ರೀಯ ವಿಶ್ವವಿದ್ಯಾಲಯಗಳು, 391 ರಾಜ್ಯ ವಿಶ್ವವಿದ್ಯಾಲಯಗಳು,125 ಡೀಮ್ಡ್ ವಿಶ್ವವಿದ್ಯಾಲಯಗಳು ಮತ್ತು 311 ಖಾಸಗಿ ವಿಶ್ವವಿದ್ಯಾಲಯಗಳಿವೆ. ಎಂದರೆ ಸುಮಾರು 545 ಸಂಸದರು ಈ ಎಲ್ಲಾ ವಿಶವವಿದ್ಯಾಲಯಗಳ ಅವಲೋಕನ ಮತ್ತುಎರಡು ಹೊಸ ವಿಶ್ವವಿದ್ಯಾಲಯದ ಕುರಿತು ವಿಚಾರ ವಿಮರ್ಶೆಯನ್ನು ಕೇವಲ ಕೆಲವು ಗಂಟೆಗಳಲ್ಲಿ ನೆರೆವೇರಿಸಿ ಅದಕ್ಕೆ ಅಂಕಿತವನ್ನು ಪಡೆದಿದ್ದರೇನುವಾಗ ಅಲ್ಲಿ ಯಾವರೀತಿ ಚರ್ಚೆ ನಡೆದಿರಬಹುದೆಂದು ನೀವೇ ಊಹಿಸಿ ನೋಡಿ ?

ಇಷ್ಟು ಯೂನಿವೆರ್ಸಿಟಿಗಳಲ್ಲಿ ಏನು ಸಮಸ್ಯೆಗಳಿಲ್ವೆ? ಅಥವಾ ನಮ್ಮ ಸಂಸದರು ವಿಶ್ವವಿದ್ಯಾಲಯಗಳ ಕುರಿತು ಏನು ತಿಳಿಯದವರೇ ? ಅಥವಾ ನಾವು ಕಳುಹಿಸಿರುವ ಸಂಸದರು ಅಲ್ಲಿ ನಮ್ಮ ಸಮಸ್ಯೆಗಳನ್ನು ಸಮರ್ಪಕವಾಗಿ ಪ್ರತಿನಿಧಿಸದಷ್ಟು ಅಸಮರ್ಥರೇ? ಹೀಗೆಯೇ ನಾನಾ ರೀತಿಯ ಪ್ರಶ್ನೆಗಳು ನಮ್ಮನ್ನು ಕಾಡಬಹುದು. ಈ ಒಂದೆರೆಡು ಘಂಟೆಗಳಲ್ಲಿ ಭೋದಕ ಮತ್ತು ಬೋಧಕೇತರ ಸಿಬ್ಬಂದಿಗಳ ಕೊರತೆ, ಕೇಂದ್ರೀಯ ವಿಶವವಿದ್ಯಾಲಯಗಲದ ಧರಂಶಾಲಾ ಮತ್ತು ಗುಜರಾತ್ ವಿಶ್ವವಿದ್ಯಾಲಯಗಳ ಸರಿಯಾದ ಸ್ಥಳ ಸಿಗದೇ ಅದರ ನಿರ್ಮಾಣವು ಕಳೆದ ಹತ್ತು ವರ್ಷಗಳಿದ ಸರಿಯಾಗಿ ನಡೆಯುತ್ತಿಲ್ಲ, ಇನ್ನೂ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಾದ ಕೋರ್ಸುಗಳ ಅಲಭ್ಯತೆ, ಸಮರ್ಪಕವಾದ ಲೈಬ್ರರಿ ಮತ್ತು ಪ್ರಯೋಗಾಲಯಗಳ ಸಮಸ್ಯೆ , ಪರೀಕ್ಷಾ ಪದ್ಧತಿ, ಸಮಯಾಕ್ಕೆ ಸರಿಯಾಗಿ ರಿಸಲ್ಟ್ ಪ್ರಕಟವಾಗದಿರುವುದು ಮತ್ತು ವಿದ್ಯಾರ್ಥಿ ನಿಲಯ ಹೀಗೆಯೇ ನೂರಾರು ವಿಚಾರಗಳು ಸರಿಯಾಗಿ ಚರ್ಚೆಯೇ ನಡೆದಿಲ್ಲ ಎನ್ನುವಾಗ ವಿದ್ಯಾರ್ಥಿ ಸಮುದಾಯವು ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿಲ್ಲ ಎಂದು ಭಾಸವಾಗಬಹುದು. ಆದರೆ ನಿಜಾವದ ಕಾರಣವೆಂದು ನೋಡಿದರೆ ಆಡಳಿತ ಪಕ್ಷದ ಸಂಸದರು ತನ್ನ ಪಕ್ಷದ ಮಂತ್ರಿಗಳು ಏನೇ ಮಸೂದೆಗಳನ್ನು ಮಂಡಿಸಿದರೆ ಅದರ ಪರವಾಗಿಯೇ ಮಾತನಾಡಬೇಕು ಎನ್ನುವಂತೆ ಇರುತ್ತಾರೆ ಎಷ್ಟರ ಮಟ್ಟಿಗೆಂದರೆ ತನ್ನದೇ ಕ್ಷೇತ್ರದಲ್ಲಿರುವ ವಿದ್ಯಾಸಂಸ್ಥೆಗಳಲ್ಲಿ ಸಮಸ್ಯೆಗಳಿದ್ದರೆ ಅದನ್ನು ಸದನದ ಮುಂದಿಡುವುದಿಲ್ಲ, ಅವರು ಕೇವಲ ವಿರೋಧ ಪಕ್ಷದ ಸದಸ್ಯರ ಮಾತನ್ನು ವಿರೋಧಿಸುವ ಕೆಲಸವಷ್ಟೇ ಮಾಡುತಿದ್ದರು ಎನ್ನುವುದನ್ನು ನೀವು ಗಮನಿಸಬಹುದು. ಇನ್ನೂ ವಿರೋಧ ಪಕ್ಷದವರು ಮಾತನಾಡಲು ಸರಿಯಾಗಿ ಸಮಯಾವಕಾಶವಿರುವುದಿಲ್ಲ ಅವರು ಏನೇ ಹೇಳಿದರು ನಿಮಗೆ ಒಂದು ನಿಮಿಷವಿದೆ, ಎರಡು ನಿಮಿಷವಿದೆ ಹೀಗೆಯೇ ಹೇಳಿ ಅತೀ ಕಡಿಮೆ ಸಮಯದಲ್ಲಿ ಈ ಮಸೂದೆಯು ಅಂಗೀಕಾರಗೊಂಡಿತು.

ಇನ್ನೂ ವಿದ್ಯಾರ್ಥಿ ಸಂಘಟನೆಗಳು, ವಿಶ್ವವಿದ್ಯಾಲಯಗಳಲ್ಲಿ ಸೆಂಟ್ರಲ್ ಯೂನಿವರ್ಸಿಟಿ ಆಕ್ಟ್ ೨೦೦೯ ಪ್ರಕಾರ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಬೇಕು ಆದರೆ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಯದೆ ಇರುವುದರಿಂದ, ವಿದ್ಯಾರ್ಥಿ ಶಕ್ತಿ ಅತೀಯಾಗಿ ಕುಂದಿದೆ ಎನ್ನುವುದರಲ್ಲಿ ಎರಡು ಮತ್ತಿಲ್ಲ, ಇನ್ನೂ ಇರುವ ಕೆಲವು ವಿದ್ಯಾರ್ಥಿ ಸಂಘಟನೆಗಳು ಆಡಳಿತ ಪಕ್ಷದ ವಿದ್ಯಾರ್ಥಿ ಸಂಘಟನೆಯಾಗಿರುವುದರಿಂದ ಅದು ನೈಜ್ಯ ವಿದ್ಯಾರ್ಥಿ ಧ್ವನಿಯಾಗುತ್ತಿಲ್ಲ ಎಂಬುವುದು ವಿಪರ್ಯಾಸ ಇದರಿಂದಾಗಿ ದೇಶದ ವಿದ್ಯಾರ್ಥಿ ಸಮೂಹವು ತನ್ನ ನೈಜ್ಯ ಧ್ವನಿಯನ್ನು ಕಳೆದು ಕೊಂಡಿದೆ ಎನ್ನಬಹುದು.

LEAVE A REPLY

Please enter your comment!
Please enter your name here