ಕೆ. ಮೊಹಮ್ಮೆದ್ ಝಮೀರ್, ಪಕ್ಕಲಡ್ಕ
(ಕಾನೂನು ವಿದ್ಯಾರ್ಥಿ ಎಸ್. ಡಿ. ಎಂ ಲಾ ಕಾಲೇಜು. ಮಂಗಳೂರು)

ಕೊರೋನ ಮಹಾ ಮಾರಿಯಿಂದ ತತ್ತರಿಸಿ ಇಡೀ ಜಗತ್ತು ಅತ್ಯಂತ ಕಷ್ಟ ಹಾಗೂ ಕಠಿಣ ಪರಿಸ್ಥಿತಿಯಲ್ಲಿ ಹೋಗುತ್ತಿದೆ. ಇಂತಹಾ ಸಂದರ್ಭದಲ್ಲಿ ಜನರು ಜಾತಿ, ಧರ್ಮ ಭೇದ ಬಾವ ಬಿಟ್ಟು ಮಾನವೀಯತೆಯ ಮೌಲ್ಯದಲ್ಲಿ ಎಲ್ಲರಿಗೂ ಸೇವೆ ಮಾಡುವ ಜನ ಒಂದು ಭಾಗದಲ್ಲಿ ಇದ್ದರೆ ಇದನ್ನು ಭಾಗದಲ್ಲಿ, ಕೆಲವು ಘಟನೆಗಳನ್ನು ಆಧರಿಸಿ (ಅದರಲ್ಲಿ ಹೆಚ್ಚು ಸುಳ್ಳು ಆಗಿದ್ದು) ಒಂದು ಸಮುದಾಯದ ವಿರುದ್ಧ ದ್ವೇಷ ಕಾರುತ್ತಿದ್ದಾರೆ. ಭಾರತದಾದ್ಯಂತ ತಬ್ಲೀಗ್ ಜಮಾಅತ್‍ನ ಘಟನೆಯನ್ನು ಪೂರ್ವ ಸಿದ್ಧತಾ ಘಟನೆಯೆಂದು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳು ಬಿಂಬಿಸುತ್ತಿದೆ. ಇದಕ್ಕೆ ವಿವಿಧ ಹೆಸರನ್ನೆಲ್ಲಾ ನೀಡಿ ಸಮಾಜದಲ್ಲಿ ಉಳಿದಿರುವ ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ. ಉದಾ: ಕೊರೋಣ ಜಿಹಾದ್ ಇತ್ಯಾದಿ…

ಆದರೆ, ವಾಸ್ತವವೇ ಬೇರೆಯಾಗಿದೆ. ತಬ್ಲೀಗ್ ಜಮಾಅತ್ ಎಂಬ ಸಂಘಟನೆ ಆಧ್ಯಾತ್ಮಿಕವಾಗಿ ಮುಸ್ಲಿಮರನ್ನು ಬೆಳೆಸಲು ಪ್ರಯತ್ನಿಸುತ್ತದೆ. (ಉದಾ: ನಮಾಝ್, ಉಪವಾಸ ಇತ್ಯಾದಿ) ಅದಕ್ಕೆ ಯಾವುದೇ ಸಾಮಾಜಿಕ ಅಥವಾ ರಾಜಕೀಯ ಉದ್ದೇಶಗಳಿಲ್ಲ. ಇದರ ನಾಯಕರಾದ ಮೌ|| ಸಾದ್‍ರವರ ಕೆಲವು ಹೇಳಿಕೆ ಹಾಗೂ ಇವರ ಆಧ್ಯಾತ್ಮಿಕ ಸಿದ್ಧಾಂತದ ನಿಲುವಿನ ಬಗ್ಗೆ ಮುಸ್ಲಿಮ್ ಸಮುದಾಯದ ಇತರ ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯವಿದೆ. ಉದಾ: ಮಕ್ಕಾ ಮದೀನಾ ನಂತರ ಮರ್ಕಝ್ ನಿಝಾಮುದ್ದೀನ್ ಅತ್ಯಂತ ಶ್ರೇಷ್ಠ ಸ್ಥಾನವಾಗಿದೆ. (ಇದಕ್ಕೆ ನಂತರ ಮೌ| ಸಾದ್‍ರವರು ಕ್ಷಮೆ ಕೋರಿದರು) ಹಾಗೂ ಮೊಬೈಲ್‍ನಲ್ಲಿ ಕುರ್‍ಆನ್ ಪಠಿಸುವುದು ತಪ್ಪು ಇತ್ಯಾದಿ ನಿಲುವುಗಳನ್ನು ಎಲ್ಲ ಮುಸ್ಲಿಮರು ಒಪ್ಪುವುದಿಲ್ಲ ಮಾತ್ರವಲ್ಲ ಕೆಲವೊಂದನ್ನು ವಿರೋಧಿಸುತ್ತಾರೆ. ಇವರು ಆಧ್ಯಾತ್ಮಿಕದಲ್ಲಿ ಅತ್ಯಂತ ಆಳವಾಗಿದ್ದಾರೆ. ಇವರ ಬಗ್ಗೆ ಇಂದಿರಾ ಗಾಂಧಿಯ ಸಮಯದಲ್ಲಿ ಐ.ಬಿ. ಇಂಟಲಿಜೆನ್ಸ್ ಬ್ಯೂರೋ ಹೇಳುತ್ತಾರೆ, “ಇವರಿಂದ ದೇಶಕ್ಕೆ ಅಪಾಯವಿಲ್ಲ. ಇವರು ಭೂಮಿಯ ಒಳಗೆ ಹಾಗೂ ಆಕಾಶದ ಮೇಲಿನ ಬಗ್ಗೆ ಮಾತ್ರ ಮಾತಾಡುತ್ತಾರೆ.”
ಕೊರೋನ ಪಾರಿಸ್ಥಿತಿಯಲ್ಲಿ ತಬ್ಲೀಗ್ ಜಮಾಅತ್‍ನವರ ಕಾರ್ಯಕ್ರಮದ ಬಗ್ಗೆ ಹೇಳುವುದಾದರೆ ಕಾರ್ಯಕ್ರಮ ನಡೆದ ದಿನ ಮಾರ್ಚ್ 13-15.

  • ಮಾರ್ಚ್ 13 ಕ್ಕೆ ಸರಕಾರ ಹೇಳುತ್ತದೆ, ಯಾವುದೇ ಆರೋಗ್ಯ ಪರಿಸ್ಥಿತಿ ಇಲ್ಲ ಯಾವುದೇ ಭಯ ಪಡುವ ಅಗತ್ಯವ ಇಲ್ಲ.
  • ಮಾರ್ಚ್ 13 ದೆಹಲಿ ಸರಕಾರದಿಂದ ಬಂದ ಆಜ್ಞೆ ಕ್ವಾರೆಂಟೈನ್ ಮಾಡುತ್ತಿದೆ. ಯಾವುದೇ ವಿಚಾರಗೋಷ್ಠಿ ಇತ್ಯಾದಿಗಳನ್ನು ನಿಷೇಧಿಸುತ್ತಾರೆ. ಆದರೆ ಧಾರ್ಮಿಕ ಕಾರ್ಯಕ್ರಮದ ಮೇಲೆ ನಿರ್ಬಂಧ ಇಲ್ಲ.
  • ಈ ಸಮಯದಲ್ಲಿ ಹಲವು ಧಾರ್ಮಿಕ ಕೇಂದ್ರಗಳು ತೆರೆದಿದ್ದವು. ಯೋಗಿ ಆದಿತ್ಯನಾಥ್ (ಸಿ.ಎಮ್. ಉ.ಪ್ರ) ಪ್ರಧಾನಿಯ 21 ದಿವಸದ ಬಂದ್ ಕರೆ ನಂತರವೂ ಅಯೋದ್ಯ್ಯೆಯಲ್ಲಿ ಪೂಜೆ ಮಾಡುತ್ತಾರೆ.
  • 24/3 ಶಿವರಾಜ್ ಚೌಹಾನ್ ತನ್ನ ದೊಡ್ಡ ಸಂಖ್ಯೆಯ ಕಾರ್ಯಕರ್ತರೊಂದಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ.
  • ಈ ಸಮಯದಲ್ಲಿ ಸದನ ನಡೆಯುತ್ತಿತ್ತು.
  • ನಂತರ ಕನಿಕಾ ಕಪೂರ್ ಇವರಿಗೆ ಸೋಂಕು ತಗಲೂದಕ್ಕೂ ಮೊದಲು ಇವರೊಂದಿಗೆ ಕೆಲವು ಸಂಸದರ ಒಡನಾಟವಿಇತ್ತು. ಆ ಸಂಸದರು ರಾಷ್ಟ್ರಪತಿಯ ಔತಣಾಕೂಟದಲ್ಲಿ ಭಾಗವಹಿಸಿದ್ದರು.

25/3 ತಬ್ಲೀಗ್ ಜಮಾಅತ್‍ನ ನಾಯಕರು ಪೋಲಿಸರಿಗೆ ತಿಳಿಸಿದ್ದರು. ನಮ್ಮಲ್ಲಿ ಇರುವ ಜನರಿಗೆ ತಮ್ಮ ಊರಿಗೆ (ವಿದೇಶಿಯರನ್ನು ಸೇರಿಸಿ) ತೆರಳಲು ವ್ಯವಸ್ಥೆ ಮಾಡಿ ಎಂದು. ನಂತರ ಅವರೇ ವ್ಯವಸ್ಥೆ ಮಾಡಿ ಅನುಮತಿ ಕೇಳಿದಾಗ ಅನುಮತಿ ನಿರಾಕರಿಸಲಾಯಿತು.

ಇನ್ನೊಂದು ಮುಖ್ಯ ವಿಷಯ, ಈ ಜನರು ಲಾಕ್‍ಡೌನ್ ನಂತರ ಕೂಡಿದ್ದು ಅಲ್ಲ. ಅವರು ಮೊದಲಿನಿಂದಲೇ ಆ ಜಾಗದಲ್ಲಿ ಇದ್ದರು. ತಕ್ಷಣ ಲಾಕ್‍ಡೌನ್ ಸಂದರ್ಭದಲ್ಲಿ ಅಲ್ಲಿ ಸಿಲುಕಿಕೊಂಡರು.
I.P.C chapter 14 (offence affecting the public Health safety, convince Decency morals) ಒಂದು ಅಧ್ಯಾಯ ವಿದೆ ಅದರಲ್ಲಿ Negligent act likely to spread infection of disease dangerous to life.
270-Malignant act likely to spread infection of disease dangerous to life ಈ ಎರಡು ಸೆಕ್ಷನ್‍ನಲ್ಲಿ ತಲಾ 6 ತಿಂಗಳು ಹಾಗೂ 2 ವರ್ಷ ದಂಡದೊಂದಿಗೆ ಶಿಕ್ಷೆ ವಿಧಿಸುತ್ತದೆ.

Secttion 271 ಪ್ರಕಾರ ಇಂತಹಾ ಸಂಕ್ರಾಮಿಕ ರೋಗದ ಸಮಯದಲ್ಲಿ ಸರ್ಕಾರ ದಿಗ್ಬಂಧನ ಮಾಡುವ ಅಧಿಕಾರವಿರುತ್ತದೆ. ಈ ಕಾನೂನಿನ ಪ್ರಕಾರ ದಿಗ್ಬಂಧನ ಉಲ್ಲಂಘಿಸಿದವರಿಗೆ 6 ತಿಂಗಳ ಸಜೆಯಾಗಬಹುದು. ಸೆಕ್ಷನ್ 188ರಲ್ಲಿ ಕೂಡ ಇದರಲ್ಲಿ ಬರುತ್ತದೆ. ಇದರ ಪ್ರಕಾರ ಅಧಿಕಾರಿಗಳ ಆಜ್ಞೆಯನ್ನು ಉಲ್ಲಂಘಿಸಿದವರಿಗೆ 6 ತಿಂಗಳ ಸಜೆಯಾಗುತ್ತದೆ.

ಜನರು ಜೀವಿಸುವುದು ಮತ್ತು ಜನರ ಆರೋಗ್ಯ ಇದು ಜನರ ಹಕ್ಕಾಗಿದೆ.

ಇದು Article 21 ( Protection of Life and Personal liberty) ಯ ಅಡಿಯಲ್ಲಿ ಬರುತ್ತದೆ. ಜನರ ಆರೋಗ್ಯದ ಬಗ್ಗೆ ಜವಾಬ್ದಾರಿ ವಹಿಸುವುದು ಸರಕಾರದ ಜವಾಬ್ದಾರಿಯಾಗಿದೆ.

ಈ ಎಲ್ಲಾ ಘಟನೆಯಲ್ಲಿ ತಪ್ಪು / ನಿರ್ಲಕ್ಷ್ಯ/ ಬೇಜವಾಬ್ಧಾರಿತನ ಎಲ್ಲ ಕಡೆಯಿಂದ ನಡೆದಿದೆ. ಅದು ಡಬ್ಲ್ಯೂ. ಎಚ್. ಒ. ಆಗಿರಬಹುದು. (ತನ್ನ ತಡವಾದ ಪ್ರತಿಕ್ರಿಯೆ) ಸರಕಾರ (ತನ್ನ ತಡವಾದ ದಿಗ್ಬಂಧನ ಮತ್ತು ವಿದೇಶಿಯರಿಗೆ ಮರಳಲು ಅನುಮತಿಸಿದ್ದು, ವಿವಿಧ ಧಾರ್ಮಿಕ ಕೇಂದ್ರಗಳು, ಮತ್ತು ಸಾರ್ವಜನಿಕ ಕಾರ್ಯಕ್ರಮಗಳು ಆಗಿರಬಹುದು. ಇದನ್ನು ನಾವು ನಿರ್ಲಕ್ಷ್ಯತನ/ ಬೇಜವಾಬ್ದಾರಿತನ ಎಂದು ಕರೆಯುತ್ತೇವೆ ಹೊರತು ಪೂರ್ವ ಯೋಜಿತ ಕೃತ್ಯ ಅಲ್ಲಾ.

ಇಂತಹಾ ಘಟನೆಗಳನ್ನು ಮೇಲೆ ತಿಳಿಸಿದ ಕಾನೂನಿನ ಅಡಿಯಲ್ಲಿ ಪರಿಶೀಲಿಸಬೇಕು ಮತ್ತು ಕೇವಲ ಒಂದು ಘಟನೆಯಲ್ಲ ಎಲ್ಲಾ ಘಟನೆಯನ್ನು ಪರಿಶೀಲಿಸಬೇಕು ಮತ್ತು ಇದನ್ನು ಒಂದು ಪೂರ್ವಯೋಜಿತ ಕೃತ್ಯ ಅಥವಾ ಕೊರೋನಾ ಜಿಹಾದ್ ಮತ್ತು ಮಾಧ್ಯಮಗಳು ನಿರ್ಮಿಸುವ ಹೊಸ ಹೊಸ ಕಟ್ಟು ಕಥೆಗಳನ್ನು ನಿಲ್ಲಿಸಬೇಕು. ಮಾಧ್ಯಮಗಳು ಅವರ ಹೊಣೆಗಾರಿಕೆಯಾದ ಸತ್ಯವನ್ನು ತೋರಿಸಬೇಕು. ಪಕ್ಷಪಾತ ದೋರಣೆಯಿಂದ ದೂರ ಸರಿಯಬೇಕು. ಕೊರೋನ ದಿಂದ ದೇಶವನ್ನು ರಕ್ಷಿಸಲು ಪಣ ತೊಟ್ಟಂತೆ ಕೋಮು ವೈರೆಸ್ ನಿಂದ ದೇಶ ರಕ್ಷಿಸಲು ಹೋರಾಡಬೇಕು

(ಮಾಹಿತಿ ಸಂಗ್ರಹ: ಫೈಝಾನ್ ಮುಸ್ತಫಾರವರ ಕಾನೂನು ಜಾಗೃತಿ ವೆಬ್ ಸಿರೀಸಿನಿಂದ)

LEAVE A REPLY

Please enter your comment!
Please enter your name here