ಭಾಗ – ೨

ರವಿ ನವಲಹಳ್ಳಿ (ವಿದ್ಯಾರ್ಥಿ)

“ದೆಹಲಿ ಅಥವಾ ಸಾರನಾಥದಲ್ಲಿ ಅಂತ್ಯವಿಧಿಯನ್ನು ಮಾಡುವುದೆಂದು ಕೆಲವರು ಹೇಳುತ್ತಿದ್ದರು. ಆದರೆ ಮುಂಬೈ ನಗರವೇ ಸಾಹೇಬರ ಕರ್ಮಭೂಮಿಯಾಗಿರುವುದರಿಂದ ಮುಂಬೈಯಲ್ಲಿಯೇ ಅಂತಿಮ ಸಂಸ್ಕಾರವನ್ನು ಮಾಡಬೇಕೆಂಬ ಹಟವನ್ನು ನಾನು ಹಿಡಿದೆನು”. ಸವಿತಾಬಾಯಿಯವರು ಕೇವಲ ಅಪರಾಧ ಭಾವನೆಯಿಂದ ಈ ಸಂಗತಿಗಳನ್ನು ಸೃಷ್ಟಿಸುತ್ತಿದ್ದಾರೆಂಬುದು ಅನೇಕ ಸಾಕ್ಷಿಗಳ ಆಧಾರದಿಂದ ನಮಗೆ ಸ್ಪಷ್ಟವಾಗಿ ತೋರುತ್ತದೆ. ಅದರಿಂದ ಮತ್ತೆ ಅವರು ಸಾಕಷ್ಟು ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಂಡರು ಅನಕ್ಷರಸ್ಥರಂತೂ ಅದಾಗಲೆ ಅವರನ್ನು ಕೊಲೆಗಡುಕಿ ಎಂದು ಕರೆದು ಮುಗಿಸಿದ್ದರು ! ಹಾಡುಗಳ ಮೂಲಕ ಅದನ್ನು ಎಲ್ಲ ಕಡೆಗೆ ಪ್ರಚಾರವನ್ನೂ ಮಾಡಿದರು ! ‘ಡಾ. ಬಾಬಾಸಾಹೇಬ ಅಂಬೇಡ್ಕರ ಹಾಗೂ ಅವರ ಪ್ರಥಮ ಪತ್ನಿಯವರ ಪೋಟೋಗಳು ಪ್ರತಿ ಮನೆಗಳಲ್ಲೂ ಕಂಡು ಬರುತ್ತವೆ . ಆದರೆ , ಸವಿತಾ ಬಾಯಿಯವರ ಫೋಟೋ ಯಾರ ಮನೆಯಲ್ಲಿಯೂ ಕಾಣಿಸುವುದಿಲ್ಲವೆಂದು ಟೆರಿ ಪಿಲಿಕ್‌ರವರು ಎರಡನೆಯ ಹೆಂಡತಿಯ ಬಗ್ಗೆ , ಉದ್ಧಾರವೆತ್ತಿರುವುದು ಸರಿಯಾಗಿಯೇ ಇದೆ. “ಈ ಸವಿತಾಬಾಯಿಯವರು ಬಾಬಾಸಾಹೇಬ ಅನುಯಾಯಿಗಳಲ್ಲಿ ಜನಪ್ರಿಯತೆಯನ್ನು ಪಡೆದಿರಲಿಲ್ಲ. ನಾನು ಮೇಲಿಂದ ಮೇಲೆ ಅವರ ಪ್ರಥಮ ಪತ್ನಿಯ ಫೋಟೋಗಳನ್ನು ನೋಡಿದೆ. ಬಹುಶಃ ಅವರನ್ನು ಮಾತ್ರ ಜನರು ಸ್ವೀಕರಿಸಿದ್ದಾರೆ. ಅವರಿಬ್ಬರ ಫೋಟೋಗಳು ಬೌದ್ಧ ಅನುಯಾಯಿಗಳ ಮನೆಗಳಲ್ಲಿ ನೇತು ಹಾಕಿರಲಾಗುತ್ತದೆ. ಅವು ಅವರ ನಿಷ್ಠೆ, ಧೈರ್ಯ ಮತ್ತು ಸಮರ್ಪಣಾ ಭಾವಗಳ ಪ್ರತಿರೂಪದಲ್ಲಿವೆ. ಆದರೆ ಜನಸಾಮಾನ್ಯರ ತಲೆಯಲ್ಲಿ ಅವರ ಎರಡನೆಯ ಹೆಂಡತಿಯ ಬಗ್ಗೆ ತೀವ್ರ ವಿರೋಧ ಮತ್ತು ದ್ವೇಷಯುಕ್ತ ಭಾವನೆಗಳು ತುಂಬಿಕೊಂಡಿವೆ.” ಬಾಬಾಸಾಹೇಬರ ಕೈಬೆರಳುಗಳಿಂದ ಪರೀಕ್ಷೆ ಮಾಡುವುದಕ್ಕಾಗಿ ಎರಡು ಹನಿ ರಕ್ತವನ್ನು ತೆಗೆದುಕೊಳ್ಳಲು ಸವಿತಾಬಾಯಿ ಬಿಡಲಿಲ್ಲ ಏಕೆ ? ಈ ವಿಷಯ ಪ್ರಸ್ತಾಪವಾಗುತ್ತಿದ್ದಂತೆಯೇ ಅವರು ಅಖಂಡ ತಾಂಡವ ನೃತ್ಯವನ್ನೇ ಪ್ರಾರಂಭಿಸಿದರು . ಏಕೆ ? ತಮ್ಮ ಮೇಲಿನ ಹತ್ಯೆಯ ಕಳಂಕವನ್ನು ನಿವಾರಿಸಿಕೊಳ್ಳುವುದಕ್ಕಾಗಿಯಾದರೂ ಒಪ್ಪಿಕೊಳ್ಳಬೇಕಾಗಿತ್ತು ; ಒಪ್ಪಿಕೊಳ್ಳಲಿಲ್ಲ ಏಕೆ ? ಈ ವಿಷಯಗಳಿಂದ ಸ್ಪಷ್ಟವಾಗುವುದೇನೆಂದರೆ , ಸವಿತಾಬಾಯಿಯವರೇ ಆ ಹತ್ಯೆಯನ್ನು ಮಾಡಿದ್ದಾರೆ.

ಡಾ. ಮಾಲವಣಕರರು ದೆಹಲಿಯ ಬಾಬಾಸಾಹೇಬರ ಮನೆಗೆ ಸಾಕಷ್ಟು ಸಲ ಹೋಗುತ್ತಿದ್ದರು. ಅವರ ಹಾಗೂ ಬಾಬಾಸಾಹೇಬರ ನಡುವೆ ನಡೆದ ಕೊನೆಯ ಮಾತುಕತೆ ಯಾವುದು ? ಅವರ ಮಧ್ಯೆ ಯಾವ ಸಂಭಾಷಣೆಯೂ ಆಗಲಿಲ್ಲವೆಂದು ದಾಖಲೆಗಳು ಹೇಳುತ್ತವೆ. ಕುಟುಂಬ ವೈದ್ಯರು ಈ ರೀತಿ ಏಕೆ ನಡೆದುಕೊಂಡರು? ಡಾ. ಮಾಲವಣಕರರು ಡಾ. ಬಾಬಾಸಾಹೇಬರ ಮನೆಯಿಂದ ಹಿಂದಿನ ದಿನವೆ ಆಕಸ್ಮಿಕವಾಗಿ ಅದು ಹೇಗೆ ಮರೆಯಾದರು ? ಬೈರ ಮೋಡೆಯವರು ರತ್ತುರವರಿಂದ ವಿಷಯವನ್ನು ಸಂಗ್ರಹಿಸಿ ಹೀಗೆ ಬರೆದಿದ್ದಾರೆ. “ ಡಾ . ಮಾಲವಣಕರ ಹೋಗುವುದಕ್ಕಾಗಿ ವಿಮಾನ ನಿಲ್ದಾಣಕ್ಕೆ ಹೋಗಿದ್ದಾರೆ. ಅವರು ಬಾಬಾಸಾಹೇಬರೊಂದಿಗೆ ಚಕಾರ ಶಬ್ದವನ್ನೂ ಮಾತನಾಡಲಿಲ್ಲ ” ಮಾಲವಣಕರರು ಏನನ್ನು ಏಕೆ ಮಾತನಾಡಲಿಲ್ಲ ? ಅವರು ತಟಸ್ಥರಾಗಿರಲು ಏನು ಕಾರಣ ? ಡಾ . ಮಾಲವಣಕರ ಹಾಗೂ ಸವಿತಾರವರು ದೀರ್ಘ ಸಮಯದವರೆಗೆ ದೆಹಲಿ ಮಾರುಕಟ್ಟೆಯಲ್ಲಿ ಏನು ಮಾಡುತ್ತಿದ್ದರು ? ಬಾಬಾಸಾಹೇಬರ ಹತ್ಯೆಯ ಷಡ್ಯಂತ್ರವನ್ನು ಕಾರ್ಯರೂಪಕ್ಕೆ ಹೇಗೆ ತರುವುದೆಂಬುದನ್ನು ಅಲ್ಲಿ ಅವರು ನಿರ್ಧರಿಸುತ್ತಿದ್ದರೆ ? ಅದೇ ರೀತಿ ಹಿಂದಿನ ದಿನವೇ ಸವಿತಾರವರ ತಂದೆ ಕೆ.ವಿ. ಕಬೀರ ಸಹೋದರ ಬಾಳು ಕಬೀರ ಹಾಗೂ ಬಾಬಾಸಾಹೇಬರ ಮನೆಯ ಕೆಲಸದವನಾದ ಶಾಮುಜಾಧವ ಆಕಸಿಕವಾಗಿ ಹೇಗೆ ಮಾಯವಾದರು ? ಶಾಮು ಜಾಧವರು 2004 ರಲ್ಲಿ ಮರಣ ಹೊಂದಿದರು. ಅವರು ಕೋಲ್ಲಾಪುರದವರು. ಸವಿತಾಬಾಯಿಯವರು ಶಾಮು ಜಾಧವರ ಹತ್ತಿರ ಅದೂ ಹತ್ತಿರ ಬಾಬಾಸಾಹೇಬರ ನಿಧನನಂತರ ಹೋಗಿ ಬರುವುದನ್ನು ಇಟ್ಟುಕೊಂಡಿದ್ದರು. ಅಷ್ಟೇ ಏಕೆ ? ಅವನೊಂದಿಗೆ ದೀರ್ಘಕಾಲದವರೆಗೆ ಪತ್ರವ್ಯವಹಾರವನ್ನು ಮುಂದುವರಿಸಿದ್ದರು. ಶಾಮು ಜಾಧವರ ಮಗನಾದ ಪ್ರಾ. ರಾಜರತ್ನ ಜಾಧವರ ಒಂದುನೂರಾ ಹತ್ತರಕ್ಕಿಂತ ಹೆಚ್ಚು ಪತ್ರಗಳಿವೆ. ಅವುಗಳಲ್ಲಿ ಸವಿತಾರವರು ಜಾಧವನಿಗೆ ಬರೆದ ಪತ್ರಗಳು ಅಧಿಕವಾಗಿವೆ. ಆದರೆ ಶಾಮು ಜಾಧವರ ಮಗ ರಾಜರತ್ನ ಜಾಧವ ಮತ್ತು ಅವರ ಜೊತೆಗಾರರಾದ ನಿಂಗಳುಕರ ಮತ್ತು ಬ್ರಾಹ್ಮಣನಾದ ಚೌಸಾಳಕರರು ಆ ಪತ್ರಗಳನ್ನು ನಾಶಮಾಡಲು ಬಯಸುತ್ತಿದ್ದರೆಂಬುದು ನಮಗೆ ಈ ಸಂಶೋಧನೆಯ ಕೊನೆಗೆ ತಿಳಿಯಿತು ! ಮುಖ್ಯವಾದ ವಿಷಯವೇನೆಂದರೆ, ಬಾಬಾಸಾಹೇಬರ ನಿಧನವನ್ನು ಕುರಿತು ಡಿ.ಐ.ಜಿ. ಸಕ್ಸೆನಾರವರು ಎಲ್ಲರಿಂದ ಆ ಹೇಳಿಕೆಗಳನ್ನು ಪಡೆದರು. ಸಂದರ್ಭದಲ್ಲಿ ಹೇಳಿಕೆ ನೀಡಿದವರೆಲ್ಲರೂ ಮೋಸದಿಂದ ಬಾಬಾಸಾಹೇಬರ ಅಂತ್ಯವಾಗಿದೆ ಎಂದು ಹೇಳಿದರೆ ಶಾಮೂ ಜಾಧವ ಮಾತ್ರ ಅದನ್ನು ನೈಸರ್ಗಿಕ ಎಂದು ಹೇಳಿದನು. ತಾಯಿಯವರ ಸಲಹೆಯ ಮೇರೆಗೆ ಜಾಧವ ಅಲ್ಲಿಂದ ಓಡಿ ಹೋಗುವುದು, ದೆಹಲಿಯ ಬಾಬಾಸಾಹೇಬರ ಮನೆಯಲ್ಲಿ ಆತ ಇಲ್ಲದಿದ್ದ ಸಂದರ್ಭದಲ್ಲಿ ಅವರ ಸಾವು ನೈಸರ್ಗಿಕವಾಯಿತೆಂದು ಹೇಳುವುದು ಆತನ ಈ ಎರಡೂ ವಿಷಯಗಳು ವಿರೋಧಭಾಸವನ್ನು ಹೊಂದಿವೆ. ಶಾಮು ಜಾಧವ ಮನೆಯಲ್ಲಿಯೇ ಇರಲಿಲ್ಲವೆಂದ ಮೇಲೆ ಆತನ ಹೇಳಿಕೆಗೆ ಯಾವ ಬೆಲೆಯೂ ಇಲ್ಲ . ಪತ್ರಕಾರರಾದ (‘ಪ್ರಭಾತ ‘ ಮರಾಠಿ ದಿನಪತ್ರಿಕೆ ) ವಸಂತ ಕಾಂಬಳೆಯವರು 2002 ರಲ್ಲಿ ಜಾಧವನೊಂದಿಗೆ ಸಂದರ್ಶನವನ್ನು ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಇನ್ನೊಬ್ಬ ವ್ಯಕ್ತಿಯೂ ಉಪಸ್ಥಿತರಿದ್ದರು. ಜಾಧವನಲ್ಲಿ ಇದ್ದ ಪತ್ರಗಳನ್ನು ನಾವು ಅಧ್ಯಯನ ಮಾಡಲು ಕೋಲ್ಲಾಪುರಕ್ಕೆ ಹೋಗಿದ್ದೆವು. ಹಿಂದಿನ ಸಂದರ್ಶನದ ಸಂದರ್ಭದಲ್ಲಿ ಇದ್ದ ವ್ಯಕ್ತಿಯು ನಮಗೆ ಆಶ್ಚರ್ಯದ ವಿಷಯವೊಂದನ್ನು ಹೇಳಿದರು . ಆ ಸಂದರ್ಭದಲ್ಲಿ ಆತ ವಿದ್ಯಾರ್ಥಿಯಾಗಿದ್ದರು . ಬಾಬಾಸಾಹೇಬರ ನಿಧನವನ್ನು ಕುರಿತು ಪತ್ರಕಾರರು ಜಾಧವನಿಗೆ ಪ್ರಶ್ನೆಯನ್ನು ಕೇಳಿದಾಗ “ ಈ ಮಾತನ್ನು ಮುದ್ರಿಸುವುದಿಲ್ಲವೆಂಬ ನಿಯಮಕ್ಕೆ ನೀವು ಒಳಗಾಗುವುದಾದರೆ ಹೇಳುತ್ತೇನೆ ‘ ಎಂದನು. ಶಾಮೂ ಜಾಧವ ಮತ್ತು ವಸಂತ ಕಾಂಬಳೆ ಕಾಂಗ್ರೆಸ್ಸಿಗರಾಗಿದ್ದುದರಿಂದ ಸತ್ಯವನ್ನು ಮುದ್ರಿಸಲಿಲ್ಲ, ಹತ್ತಿಕ್ಕಿದರು. ಸಂದರ್ಶನದ ಸಮಯದಲ್ಲಿ ಪ್ರಸ್ತುತರಿದ್ದ

ಮೂರನೆಯ ವ್ಯಕ್ತಿಯೇ ಪ್ರೊ. ಡಾ. ಕಾಂಬಳೆ, ಆ ಸಂದರ್ಭದ ವಿವರಣೆಯನ್ನು ಲಿಖಿತವಾಗಿ ಅವರು ನಮಗೆ ನೀಡಿದ್ದಾರೆ. ಅದು ಹೀಗೆ ಇದೆ. “ಡಾ. ಬಾಬಾಸಾಹೇಬ ಅಂಬೇಡ್ಕರರ ಒಬ್ಬ ಅನುಯಾಯಿಯೆಂದು ಶಾಮರಾವ ಜಾಧವರ ಸಂದರ್ಶನವನ್ನು ತೆಗೆದುಕೊಳ್ಳಲಾಗಿತ್ತು. ಬಾಬಾಸಾಹೇಬರ ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಿದ ನಂತರ ಪತ್ರಕಾರರು ಕೊನೆಯಲ್ಲಿ ಅವರ ನಿಧನ ಹೇಗಾಯಿತೆಂದು ಕೇಳಿದರು. ಆಗ, ಶಾಮರಾವ ಜಾಧವರವರು’ ನಾನು ಒಂದು ವೇಳೆ ಬಾಬಾಸಾಹೇಬರ ನಿಧನದ ಬಗ್ಗೆ ಬಾಯಿ ಬಿಟ್ಟರೆ ಇಡೀ ಭಾರತ ಹೊತ್ತಿ ಉರಿಯುತ್ತದೆ ! ” ಎಂಬ ಪ್ರಕ್ರಿಯೆಯನ್ನು ನೀಡಿದರು. ಶಾಮೂ ಜಾಧವರು ಒಂದು ಕಡೆ ತಮ್ಮನ್ನು ಅಂಬೇಡ್ಕರರ ಅನುಯಾಯಿ ಎಂದು ಕರೆದುಕೊಳ್ಳುತ್ತಾರೆ. ಇನ್ನೊಂದು ಕಡೆಗೆ ಸತ್ಯವನ್ನು ಹುಗಿದುಹಾಕುವ ಕಾರ್ಯವನ್ನು ಮಾಡುತ್ತಾರೆ. ಇಂಥ ನಡತೆಗೆ ಅರ್ಥವೇನಿದೆ ? ಇದರ ಸ್ಪಷ್ಟ ಅರ್ಥವೇನೆಂದರೆ ಡಾ. ಬಾಬಾಸಾಹೇಬರ ಅಂಬೇಡ್ಕರರ ನಿಧನವು ಮೋಸದಿಂದ ಆಗಿದೆ. ಆ ಪಾಪದಲ್ಲಿ ಶಾಮೂ ಜಾಧವರೂ ಸಹಭಾಗಿಯಾಗಿರುವುದರಿಂದ ಅದನ್ನು ಮುಚ್ಚಿ ಹಾಕಲು ಅವರು ಪ್ರಯತ್ನಿಸಿದ್ದಾರೆ . ಇದಕ್ಕೆ ವಿರುದ್ಧವಾಗಿ ಸುದಾಮಾ ಗಂಗಾವಣೆಯವರು ಪರಿಸ್ಥಿತಿಯನ್ನು ಚೆನ್ನಾಗಿ ವರ್ಣನೆ ಮಾಡಿದ್ದಾರೆ.

ಹೀಗಾಗಿ ಈ ವಿಷಯದಲ್ಲಿ ನಿಗೂಢತೆಯ ಒಂದು ಪರದೆ ಎಳೆಯಲ್ಪಟ್ಟಿದೆ, ಆ ಪರದೆಯನ್ನು ಸರಿಸುವ ಅವಕಾಶ ವಿಫುಲವಾಗಿದ್ದವು. ಎಲ್ಲಾ ಸಾಕ್ಷಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅದರಲ್ಲೂ ವಿಶೇಷವಾಗಿ, ಡಿಸೆಂಬರ್ 5 ರ ದುರ್ದೈವಿ ರಾತ್ರಿಯಲ್ಲಿ ಡಾ.ಅಂಬೇಡ್ಕರರು ಮಲಗುವುದಕ್ಕೂ ಮೊದಲು, ಕೊನೆಯ ಘಳಿಗೆಯವರೆಗೂ ಡಾ.ಅಂಬೇಡ್ಕರರ ಜತೆಯಲ್ಲಿ ವಾಸಿಸುತ್ತಿದ್ದ ವೈಯಕ್ತಿಕ ಮತ್ತು ಕೌಟುಂಬಿಕ ಆಳುಗಳ ಸಾಕ್ಷಿಗಳನ್ನು ದಾಖಲಿಸುವಂತಹ ತನಿಖೆಯ ಆಯೋಗವೊಂದನ್ನು ನೇಮಿಸಬೇಕೆಂದು ಭಾರತ ಸರ್ಕಾರವನ್ನು ಕೋರಿಕೊಳ್ಳಲಾಯಿತು. ಸರ್ಕಾರವು ಅಂಬೇಡ್ಕರರ ಶವ ಪರೀಕ್ಷೆ ( Post Mortem ) ನಡೆಸಲು ವಿಫಲವಾಗಿದ್ದರೂ ಸಹ, ಈಗಲೂ ಅವರ ಸಾವನ್ನು ಸುತ್ತುವರೆದಿರುವ ವಿಚಿತ್ರ ಸನ್ನಿವೇಶಗಳ ಬಗ್ಗೆ ತನಿಖೆಯೊಂದನ್ನು ನಡೆಸಲು ಸಾಕಷ್ಟು ವಿಷಯಗಳಿದ್ದವು.

ಮುಗಿಯಿತು

LEAVE A REPLY

Please enter your comment!
Please enter your name here