ಲೇಖಕರು:ಮೌ.ವಹೀದುದ್ದಿನ್ ಖಾನ್

ಅನುವಾದ: ತಲ್ಹಾ ಕೆ.ಪಿ

ಆಮೆಯು 500 ವರ್ಷ ಜೀವಿಸುತ್ತದೆ. ಮರವು 1000 ವರ್ಷ ಭೂಮಿಯ ಮೇಲೆ ನಿಲ್ಲುತ್ತದೆ. ಬೆಟ್ಟ ಮತ್ತು ನದಿಗಳು ಕೋಟಿಗಟ್ಟಲೆ ವರ್ಷ ದರ್ಪದೊಂದಿಗೆ ನೆಲೆ ನಿಲ್ಲುತ್ತದೆ. ಆದರೆ ಮನುಷ್ಯ ಜೀವನವು ಐವತ್ತು ಅಥವಾ ನೂರು ವರ್ಷಕ್ಕಿಂತ ಹೆಚ್ಚುವುದಿಲ್ಲ.ಇತರ ಎಲ್ಲ ಸೃಷ್ಟಿಗಳಿಗಿಂತ ಶ್ರೇಷ್ಟ್ರತೆಯನ್ನು ಹೊಂದಿರುವ ಹಾಗೆ ತೋರಿಕೆ ಮಾಡುವ ಮಾನವನು ಮಾತ್ರ ಬಹಳ ಕಡಿಮೆ ಜೀವಿಸುತ್ತಾನೆ, ಇದಕ್ಕಿಂತಲೂ ವಿಚಿತ್ರವೆಂದರೆ ಈ ಅಲ್ಪ ಜೀವನದಲ್ಲಿಯೂ ಆತ ಕೇವಲ ಸೋಲುಗಳ ದಂತ ಕಥೆಯಾಗಿ ಬಿಡುತ್ತಾನೆಯೇ ಹೊರತು ಬೇರೇನೂ ಅಲ್ಲ. ಮಾನವನ ಜೀವನದಲ್ಲಿ ದುಃಖ ಮತ್ತು ಬೆದರಗಳೇ ಹೊರತು, ಅದರಲ್ಲಿ ಇರುವ ಕೆಲವು ಸಂತಸದ ಗಳಿಗೆಗಳು ಎಚ್ಚರಗೇಡಿತನದ ಅಪನೋಟದ ವಾಸ್ತವವಲ್ಲದೆ ಇನ್ನೇನೂ ಅಲ್ಲ.

ರೋಗ, ಅಪಘಾತ, ವೃದ್ದಪ್ಯಾ ಮತ್ತು ನಿರೀಕ್ಷೆಗಳ ನಿರಂತರ ನಾಶದ ಹೆಸರೇ ಜೀವನ. ಈರೀತಿ ದುಃಖಿತ ಜೀವನವನ್ನು ಕಳೆಯುತ್ತಾ ಒಂದು ದಿನ ಮರಣದ ಮುಂದೆ ಸೋಲಲೇ ಬೇಕಾಗುತ್ತದೆ. ಒಬ್ಬ ಬಡವನು ತನ್ನ ಬಳಿ ದೊಡ್ಡದೊಂದು ಮನೆ ಇಲ್ಲ ಎಂದು ಮತ್ತು ತನ್ನ ಬಳಿ ದೈನಂದಿನ ಬೇಡಿಕೆಗಳನ್ನು ಪೂರೈಸಲು ಸಾಕಷ್ಟು ಹಣವಿಲ್ಲವೆಂದು ಹತಾಶನಾಗುತ್ತಾನೆ. ಆದರೆ ಇನ್ನೊಂದು ಕಡೆಯಲ್ಲಿ ಆತ ಯಾರನ್ನು ಸ್ಪರ್ಧಾ ಮನೋಭಾವದಿಂದ ಕಾಣುತ್ತಾನೋ ಆ ಶ್ರೀಮಂತನಿಗೆ ಸಂಪತ್ತಿರುವುದು ಬಹಳ ಆಳವಾದ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.ಬಡವನಲ್ಲಿ ಹಣವಿಲ್ಲದ ಕರಣ ಅವನಿಗೆ ಅದು ಕಾಣುವುದಿಲ್ಲ.ಒಬ್ಬ ಪ್ರಸಿದ್ಧ ವ್ಯಕ್ತಿಯ ಬಳಿ ಜನರ ಗುಂಪು ನರೆದಿರುತ್ತದೆ ಆದರೆ ಆ ವ್ಯಕ್ತಿಯು ಒಳಗಿನಿಂದ ಬಹಳ ಕಳವಳಕಾರಿಯಾಗುತ್ತಾನೆ. ರಾತ್ರಿ ಆತನಿಗೆ ಮಾತ್ರೆ ಸೇವಿಸದಿದ್ದರೆ ನಿದ್ದೆ ಬರುವುದಿಲ್ಲ. ಅಂದರೆ ಈ ಲೋಕದಲ್ಲಿ ಪ್ರತೀ ವ್ಯಕ್ತಿಯು ಒಂದಲ್ಲ ಒಂದು ಕಾರಣದಿಂದ ದುಃಖಿತನಾಗುತ್ತಾನೆ.

ಒಂದು ವೇಳೆ ಒಬ್ಬ ವ್ಯಕ್ತಿಯು ಅಸಮಂಜಸ ಪರಿಸ್ಥಿತಿಯಿಂದ ರಕ್ಷಿತನಾಗಿ ಆ ಭಾಗ್ಯವನ್ನು ಪಡೆಯುವುದನ್ನು ಸುಖ ಶಾಂತಿ ಎನ್ನುತ್ತಾನೆ.ಆದರೆ ಅದು ಎಷ್ಟು ದಿನವಿರಬಹುದು ?

ಅದೇ ಒಬ್ಬ ವ್ಯಕ್ತಿಯು ಸಾಂಧರ್ಭಿಕ ಕಾರಣಗಳಿಂದ ಸುಖ ಸಂತೋಷದ ಬಂಡಾರವನ್ನೇ ತನ್ನ ಬಳಿ ಸೇರಿಸಿದ್ದನೆಂದು ಎಂದು ಭಾವಿಸೋಣ, ಆ ಸುಖ ಸಂತೋಷವು ಎಷ್ಟು ಸಮಯವಿರಬಹುದು ? ಅದು ಬೆಳಿಗ್ಗೆ ಇಂದ ಸಂಜೆಯ ತನಕ ಮಾತ್ರ ಇರಬಹುದು ಅಷ್ಟೇ. ಇದಾದ ನಂತರ ಕರುಣೆ ಇಲ್ಲದ ಮರಣ ದೇವಧೂತನು ಬಂದು ಹಿಡಿದುಕೊಂಡು ಹೋಗುತ್ತಾನೆ.

ಆತನಿಗೆ ಎಷ್ಟೋ ದೊಡ್ಡ ಸಂಪತ್ತು ಅಥವಾ ಸೈನ್ಯವಿದ್ದರೂ ಆತನನ್ನು ರಕ್ಷಿಸಲಾಗದು. ಒಬ್ಬ ವಿಮಾನ ಯಾತ್ರಿಕನನ್ನು ಮರಣವು ತನ್ನ ವಶಕ್ಕೆ ತೆಗೆದು ಕೊಂಡಂತೆ ಒಬ್ಬ ಪದ ಚಾರಿಯನ್ನು ತನ್ನ ವಶಕ್ಕೆ ತೆಗೆದು ಕೊಳ್ಳುತ್ತದೆ. ಅದು ಅರಮನೆಯನ್ನು ಪ್ರವೇಶಿಸಿದಂತೆಯೇ ಒಂದು ನಿರ್ಗತಿಕ ಮನೆಯನ್ನು ಪ್ರವೇಶಿಸುತ್ತದೆ. ಮರಣವು ಮನುಷ್ಯನ ಅತೀ ದೊಡ್ಡ ದೌರ್ಬಲ್ಯವಾಗಿದೆ.

ಮರಣವು ವ್ಯಕ್ತಿಯನ್ನು ಮಾನವನನ್ನು ಇವತ್ತಿನ ಬಗ್ಗೆ ಚಿಂತಿಸುವುದನ್ನು ಬಿಟ್ಟು ನಾಳೆಯ ಬಗ್ಗೆ ಆಲೋಚಿಸುವಂತೆ ಮಾಡುತ್ತದೆ ಮತ್ತು ವಿಜಯವನ್ನು ಜೀವನದ ಆಚೆದಡದಲ್ಲಿ ಹುಡುಕುವಂತೆ ಮಾಡುತ್ತದೆ.

ಮರಣದಿಂದ ಈ ಪಾಠವನ್ನು ಕಲಿಯುವುದೇ ವಿಜಯವಾಗಿದೆ.ಯಾವ ವ್ಯಕ್ತಿಯು ಈ ಪಾಠವನ್ನು ಕಲಿಯುವುದಿಲ್ಲವೋ ಆತನ ಸಂತೋಷದ ಸಂತೋಷದಗಳಿಗೆಯೂ ಬಹಳ ಬೇಗವಾಗಿ ನಂದಿಹೋಗುತ್ತದೆ.

ಆತ ತನ್ನನ್ನು ಒಂದು ಭಯಾನಕವಾದ ಕತ್ತಲೆಯಲ್ಲಿ ಕಾಣುತ್ತಾನೆ. ಅಲ್ಲಿ ಅವನು ಕಾಲಕಾಲಕ್ಕೂ ಅದರ ನಷ್ಟ ಅನುಭವಿಸುತ್ತಿರುತ್ತಾನೆ ಮತ್ತು ಅವನಿಗೆ ಅದರಿಂದ ರಕ್ಷಣೆ ಪಡೆಯಲು ಸಾಧ್ಯವಿಲ್ಲ.

LEAVE A REPLY

Please enter your comment!
Please enter your name here