ಸಂದರ್ಶನ: ಕುಲ್ಸೂಮ್ ಅಬೂಬಕರ್ ಉಡುಪಿ

ವಿದ್ಯೆ ಮತ್ತು ಉದ್ಯೋಗ ಇವೆರಡೂ ಕನಸು ಕಂಡಷ್ಟು ಸುಲಭವಲ್ಲ… ಅದೇ ರೀತಿಯಲ್ಲಿ ಕೆಲವು ಅಪರೂಪದ ಪ್ರತಿಭೆಗಳಿರುತ್ತವೆ ಅವುಗಳೊಂದಿಗೆ ಜಾಣ್ಮೆ, ಆಸಕ್ತಿ, ಪರಿಶ್ರಮಗಳು ಕೂಡಿದಲ್ಲಿ ಆ ವ್ಯಕ್ತಿಯು ಖಂಡಿತಾ ಅಭಿವೃದ್ಧಿಯ ಮೇರು ಪರ್ವತಕ್ಕೆ ಏರಲು ಸಾಧ್ಯ.
ಫಾಮಿಯಾ ಖಾಝಿ ಮತ್ತು ಸಲೀಮ್ ಟಿ.ಕೆ.ಪಿ. ದಂಪತಿಗಳ ಮಗಳಾದ ಸಲ್ವಾ ಸಲೀಮ್ ಬಾಲ್ಯದಿಂದಲೇ ಬಣ್ಣಗಳೊಂದಿಗೆ ಬೆಳೆದಳು ಎನ್ನುವಂತಹ ಚಿತ್ರಕಲಾವಿದೆ… ಕ್ಯಾನ್ವಾಸ್ ಮೇಲೆ ಹಾಗೂ ಬಾಟಲಿಗಳ ಮೇಲೆ ಆಕೆ ಮಾಡುವ ವರ್ಣ ಲೇಪನಗಳನ್ನು ಕಂಡಾಗ ಅದರ ಒಡತಿಯ ಅದ್ಭುತ ಕಲಾ ವೈಭವದ ಪರಿಚಯವನ್ನು ನೀಡುತ್ತದೆ ಉಡುಪಿಯ ಶಾರದಾ ರೆಸಿಡೆನ್ಶಿಯಲ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಯಾಗಿರುವ ಸಲ್ವಾಳು ತನ್ನ ಕಲ್ಪನೆಗಳಿಗೆ ಬಣ್ಣಗಳ ಮೂಲಕ ಆಕಾರ ನೀಡುವುದ ರಿಂದ ಆ ಪೈಂಟಿಂಗ್‍ಗಳು ನೋಡುಗ ರನ್ನು ತನ್ನತ್ತ ಆಕರ್ಷಿಸುತ್ತವೆ.

ಆಕೆಯೇ ಹೇಳುವಂತೆ- “ಖ್ಯಾತ ಚಿತ್ರ ಕಲಾವಿದ ಬಾಬ್ ರೊಸ್‍ರವರ ಪೈಂಟಿಂಗ್‍ಗಳು ಹಾಗೂ ತಂದೆ ತಾಯಿಯ ಪ್ರೋತ್ಸಾಹವೇ ನನಗೆ ಸ್ಫೂರ್ತಿ” ಎಂದು ಉಡುಪಿಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಹಾಗೂ ಮಹಿಳೆಯರೇ ನಡೆಸುವ “ಪರ್ವ ಪರ್ಬ” ಎಂಬ ಉದ್ಯೋಗ ಮೇಳದಲ್ಲಿ ಸಲ್ವಾ ಸಲೀಮ್‍ರ ಪೈಟಿಂಗ್‍ಗಳು ಗ್ರಾಹಕರನ್ನು ಆಕರ್ಷಿಸಿದ್ದಲ್ಲದೇ ಎಳೆ ಹುಡುಗಿಯ ಕ್ರಿಯಾಶೀಲತೆಯನ್ನು ಕಂಡು ಉತ್ತಮ ಬೆಲೆಗೆ ಮಾರಾಟವಾಗಿದ್ದವು. ಸೃಜನಶೀಲತೆ ಯೊಂದಿಗೆ ಇಂತಹ ಪ್ರತಿಭೆಯನ್ನು ಹೊಂದಿರುವ ಸಲ್ವಾ ಸಲೀಮ್‍ರ ಭವಿಷ್ಯದ ಹಾದಿಯು ಆಕೆಯನ್ನು ಅಭಿವೃದ್ಧಿಯ ಉತ್ತುಂಗತೆಗೆ ಕೊಂಡೊಯ್ಯಲಿ ಎಂಬ ಹಾರೈಕೆಯೊಂದಿಗೆ..

LEAVE A REPLY

Please enter your comment!
Please enter your name here