ಲೇಖಕರು: ಮೌ.ವಹೀದುದ್ದೀನ್ ಖಾನ್

ಅನುವಾದ :ತಲ್ಹಾ ಕೆ.ಪಿ

ಫೋನಿಕ್ಸ್ (ಅಮೇರಿಕಾ) ಆಸ್ಪತ್ರೆಗೆ ಒಬ್ಬನು ದಾಖಲಾದನು. ಆತನ ಹೊಟ್ಟೆಯಲ್ಲಿ ಬಹಳ ನೋವು ಕಾಣಿಸಿಕೊಂಡಿತು. ವೈಧ್ಯರು ಇದನ್ನು ಶಾಸ್ತ್ರ ಚಿಕಿಸ್ಥೆಗೆ ಒಳಪಡಿಸಬೇಕಾದ ಪ್ರಖರಣವೆಂದು ಗುರುತಿಸಿದರು. ಆದರಿಂದ ಆತನ ಹೊಟ್ಟೆಯ ಶಾಸ್ತ್ರ ಚಿಕಿಸ್ತೆ ನಡೆಯಿತು. ವೈಧ್ಯರು ಆತನ ಹೋಟೆಯಲ್ಲಿ ವಜ್ರವಿರುವುದನ್ನು ಗಣಮಿಸಿ ಆಶ್ಚರ್ಯಗೊಂಡರು. ಆತನಿಗೆ ಸಹಿಸಲು ಅಸಾಧ್ಯವ ನೋವಿಗೆ ಕಾರಣವೂ ಇದೇ ವಜ್ರವಾಗಿತ್ತು. ವಜ್ರವನ್ನು ಹೊರತೆಗೆಯಲಾಯಿತು. ಅದರೊಂದಿಗೆ ಒಂದು ಬೀಲ್ (ಚೀಟಿ) ಇತ್ತು, ಅದರಲ್ಲಿ 6500 ಡಾಲರ್ ಎಂದು ಬರೆಯಲಾಗಿತ್ತು.

ತಕ್ಷಣ ಪೊಲೀಸ್’ರನ್ನು ಕರೆಸಿ ಆತನನ್ನು ತನಿಖೆಗೆ ಒಳಪಡಿಸಿದಾಗ ರೋಗಿಯು ವಜ್ರವು ಆತನಿಗೆ ಪ್ರಶಸ್ತಿಯಾಗಿ ದೊರೆತಿರುವುದಾಗಿಯೂ ಮತ್ತು ಅದು ಆತನ ತಪ್ಪಿನಿಂದಾಗಿ ಹೋಟೆಯೊಳಗೆ ಹೊಕ್ಕಿರುವುದಾಗಿ ತಿಳಿಸಿದನು. ಆದರೆ ಕೆಲ ಕ್ಷಣಗಳಲ್ಲಿಯೇ ಅದರ ವಸ್ತವು ಬೇರೆಯೇ ಆಗಿದೆ ಎಂದು ತಿಳಿಯಿತು. ಈ ವ್ಯಕ್ತಿಯು ವಜ್ರದ ಅಂಗಡಿಯೊಳಗೆ ಪ್ರವೇಶಿಸಿ ಒಂದು ವಜ್ರ ಕಳ್ಳತನ ಮಾಡುತ್ತಾನೆ. ಅಂಗಡಿಯಿಂದ ಹೊರಗಡೆ ಹೋಗುವಾಗ ಅಂಗಡಿಯವನಿಗೆ ಸಂದೇಹ ಉಂಟಾಗಿ ಆತನನ್ನು ಹೆಂಬಲಿಸುತ್ತಾನೆ. ಆತನನ್ನು ಹಿಡಿಯುವ ಸಾಧ್ಯತೆಗಳು ಕಂಡುಬಂದಾಗ ಆತನು ಆ ವಜ್ರವನ್ನು ಬಾಯಿಗೆ ಹಾಕಿ ನುಂಗಿದನು. ಪೊಲೀಸರು ಕೂಡ ಆತನ ಹುಡುಕಾಟದಲ್ಲಿದ್ದರು, ಆದರೆ ಅವನು ಅವರ ಕೈಗೆಸಿಗಲಿಲ್ಲ ತದನಂತರ ತಕ್ಷಣ ಆತನನ್ನು ಬಂಧಿಸಲಾಯಿತು.

(ಹಿಂದೂಸ್ತಾನ್ ಟೈಮ್ಸ್ 5 ನವೆಂಬರ್ 1981 )

ಸಮ್ಮತವಲ್ಲದ ರೀತಿಯಿಂದ ಪಡೆಯಲಾಗಿರುವ ವಜ್ರವು ಮಾನವನ ಹೊಟ್ಟೆಯಲ್ಲಿ ಜೀರ್ಣವಾಗುವುದಿಲ್ಲ. ವಿವಶವಾಗಿ ಆತ ಅಡಗಿಸಿಟ್ಟಿರುವ ವಜ್ರವನ್ನು ಹೊರತರುವವನು ಮತ್ತು ಸ್ವತಃ ತನ್ನ ಅಪರಾಧದ ಜೀವಂತ ಪುರಾವೆ ಎಂಬಂತಾಗುವನು. ಇದೇ ವ್ಯವಹಾರವು ಇದಕ್ಕಿಂತ ಕಠಿಣವಾದ ರೀತಿಯಲ್ಲಿ ಜನರೊಂದಿಗೆ ಪರಲೋಕದಲ್ಲಿ ನಡೆಯಲಿರುವುದು. ಪ್ರಪಂಚದಲ್ಲಿ ಮಾನವನು ಇನ್ನೊಬ್ಬ ಮಾನವನ ಹಕ್ಕನ್ನು ಕಸಿಯುವನು.ಆತ ಯಾರಿಗೂ ನಡೆದಂತೆ ತಪ್ಪೊಪ್ಪಿಗೆಯನ್ನು ವಿವರಿಸಲು ಹೋಗುವುದಿಲ್ಲ. ಇದೆಲ್ಲವನ್ನು ಮಾಡಿಯೂ ಮಾನವನು ಈ ಲೋಕದಲ್ಲಿ ವಿಜಯಾಯಿಯಾಗುತ್ತಾನೆ ಶಕ್ತಿ ಮತ್ತು ಚಾಲಕಿಯಿಂದ ಆತ ತನ್ನ ಅಪರಾಧವನ್ನು ಮುಚ್ಚಿಡುತ್ತಾನೆ. ಆದರೆ ಇದೆಲ್ಲವೂ ಕೇವಲ ಮರಣ ಸಂಭವಿಸುದಕ್ಕಿಂತ ಮುಂಚೆ ನಡೆಯುತ್ತದೆ . ಮರಣವು ಎಲ್ಲ ಮಾನವನಿಗೆ ಪ್ರಕೃತಿಯ ಒಂದು ಶಾಸ್ತ್ರ ಚಿಕಿಸ್ತೆ ಇದ್ದಂತೆ, ಅದು ಆತನ ಒಳಗಡೆ ಇರುವುದನ್ನು ಹೊರಗಡೆ ತರುತ್ತದೆ, ಇದೇ ರೀತಿ ಆತ ಮುಚ್ಚಿಟ್ಟದ್ದನ್ನು ತೆರೆದಿಡುತ್ತದೆ ಯವರಿ ರೀತಿ ವಜ್ರವು ಮಾನವನ ಹೋಟೆಯಲ್ಲಿ ಜೀರ್ಣವಾಗುವುದಿಲ್ಲವೋ, ಅದೇರೀತಿ ಅಕ್ರಮ ಮತ್ತು ಅನ್ಯಾಯವೂ ದೇವನ ಲೋಕದಲ್ಲಿ ಯಾವತ್ತೂ ಸ್ವೀಕಾರಾರ್ಹವಲ್ಲ.

ಮಾನವನ ಮೇಲೆ ವಾಸ್ತವವನ್ನು ತೆರೆದಿಡುವ ದೇವಾ-ಶಾಸ್ತ್ರ ಚಿಕಿಸ್ಥೆಯ ಕಾಲ ಬರಲಿದೆ ಅಲ್ಲಿ ಅಪರಾಧವನ್ನು ಒಪ್ಪದೇ ಹೊರತು ಬೇರೆ ದಾರಿ ಇರಲಿಕ್ಕಿಲ್ಲ.

LEAVE A REPLY

Please enter your comment!
Please enter your name here