ಕವನ

ಓ ಮಾನವ,
ಸತ್ಯವನ್ನು ಯಾರಲ್ಲೂ ಹುಡುಕದಿರು
ನಿನಗೆ ನೀ ಸತ್ಯವಿಶ್ವಾಸಿಯಾಗು
ಅಂದು ನೀ ಕಾಣಬಲ್ಲೆ ಲೋಕವಿಡೀ ಸತ್ಯವಿಶ್ವಾಸಿಗಳ ಮಳೆಯ

ಓ ಮಾನವ,
ಯಾರನ್ನೂ ಕ್ರೂರಿಗಳೆಂದು ನೀ ದೂರದಿರು
ಯಾರು ಕ್ರೂರಿಯಾದರೇನು?
ಆ ನಿನ್ನ ದೂರುವಿಕೆಯೆ ಕ್ರೂರತನಕ್ಕಿಂತ ಮೇಲ್ಮೆ ಅಲ್ಲವೇ
ನೀ ಕ್ಷಮಿಸುವವನಾಗು ನಿನ್ನ ಕ್ಷಮಿಸುವವನು ಇನ್ನೊಬ್ಬನಿರುವನು
ಮರೆಯದಿರು, ಆತನೇ ಲೋಕ ಸಂಪಾಲಕನು

ಓ ಮಾನವ,
ನೀ ನಡೆ ಲೋಕ ಪ್ರವಾದಿವರ್ಯರು ನಡೆಸಿದ ದಾರಿಯಲ್ಲಿ
ಅದಲ್ಲದೆ ಒಂದೆಜ್ಜೆಯು ಮುಂದಿಡುವವನಾಗದಿರು ನಿನ್ನದೆ
ಮಾತಿನಲ್ಲಿ
ನಗುವೊಂದು ಬೀರು ಎಲ್ಲರನ್ಕಂಡು
ಪ್ರೀತಿಯ ಸ್ವರೂಪವೊಂದೆ ಆ ನಗು ಎಂದುಕೊಂಡು

ಓ ಮಾನವ,
ಲೋಕ ಚಂದವು ಆದರೇನು ಪರಲೋಕ ಸೌಂದರ್ಯವು
ಇದು ಒಂದು ನಿಮಿಷದ ಅಶಾಶ್ವತ ಜೀವನ
ನೋಡಲಿದೆ ಕೊನೆಯಿರದ ಆಕಿರಾ ಪಯಣ…
ನೀ ಚಿಂತಿಸದಿರು,
ಮಾಡು ನೀ ಆತನಿಗೆ ಇಬಾದತ್ತ್
ಗಳಿಸು ಆತನ ಮೊಹಬ್ಬತ್ತ್

ಕೇಳಿಲ್ಲಿ ನೀ ಮಾನವ,
ಲೋಕವು ನಿನ್ನದೆ ಪರಲೋಕವು ನಿನ್ನದೆ
ನೀ ಪಡು ಕಷ್ಟದ ಲೋಕಕ್ಕೂ ಪರಲೋಕಕ್ಕೂ
ಸಾಧಿಸಿಯೇ ತೀರು ಭೂಮಿಯಲ್ಲಿ ಆದರೆ,
ಆ ಸಾಧನೆಯ ಒಂದೊಂದು ಹೆಜ್ಜೆ ತುಂಬಿರಲಿ ನಾಳಿನ ನೆನಪಿನಲ್ಲಿ

ಕಬರಿನ ಕಠಿಣ ಪ್ರಶ್ನೆಗಳೆಲ್ಲವೂ
ಇಂದಿನ ಉತ್ತರಗಳ ಸರಮಾಲೆಯೂ…
ಉತ್ತರಗಳನ್ನು ಆದಷ್ಟು ಸರಿಪಡಿಸಲು ಯತ್ನಿಸು
ಪ್ರಶ್ನೆಗಳೆಲ್ಲವು ಸರಳವಾಗುವವು

ಮುಂದೊಂದು ದಿನ,
ನಾವೆಲ್ಲ ಒಟ್ಟು ಸೇರುವ ದಿನ,
ನಫ್‍ಸಿ ಎಂದು ಪ್ರಾರ್ಥಿಸುವ ದಿನ,
ಕರುಣಿಸೆನೆಗೆ
ನಿನ್ನಯ ಕಾಣುವ ಆ ಸುದಿನ.

ಬರೆದವರು: ಸುಹಾನ ಸಫರ್

1 COMMENT

LEAVE A REPLY

Please enter your comment!
Please enter your name here