ಮೌಲಾನ ವಹೀದುದ್ದೀನ್ ಖಾನ್

1957ರಲ್ಲಿ ರಷ್ಯಾವು ತನ್ನ ಮೊದಲ ಸ್ಪುಟ್ನಿಕ್ಕನ್ನು ಖಗೋಲಕ್ಕೆ ರವಾನಿಸಿತು. ಅಮೇರಿಕಾವು 1981 ಎಪ್ರಿಲ್ 12ರಂದು ಅಂತರಿಕ್ಷ ವಾಹನ(ಕೊಲಂಬಿಯ)ವನ್ನು ಇಬ್ಬರು ಯಾತ್ರಿಕರ ಜೊತೆ ಕಳುಹಿಸಿತು. ನೂರಾರು ಸಲ ಖಗೋಲದಲ್ಲಿ ಸುತ್ತಾಡಿಸಬಹುದಾದ ಬಲಿಷ್ಟವಾಹನವಾಗಿತ್ತು. ಅದರ ತೂಕ 75 ಮೆಟ್ರಿಕ್ ಟನ್ ಆಗಿತ್ತು. ಅಲ್ಲದೆ, ಅದರ ನಿರ್ಮಾಣಕ್ಕೆ ಸರಿಸುಮಾರು ಹತ್ತು ಶತಕೋಟಿ ಡಾಲರ್‍ಗಳನ್ನು ವ್ಯಯಿಸಲಾಗಿತ್ತು. ಒಂಭತ್ತು ವರ್ಷಗಳಲ್ಲಿ ಪೂರ್ತಿಗೊಳಿಸಲಾಗಿದ್ದ ಈ ಕೊಲಂಬಿಯವು ಇಬ್ಬರು ಯಾತ್ರಿಕರೊಂದಿಗೆ ಅಂತರಿಕ್ಷದಲ್ಲಿ ಸಂಚರಿಸ ತೊಡಗಿತು. ಗಂಟೆಗೆ ಇಪ್ಪತ್ತಾರು ಸಾವಿರ ಮೈಲು ವೇಗದಲ್ಲಿ ಓಡಬಲ್ಲ ಈ ವಾಹನ 54 ಗಂಟೆಗಳ ಕಾಲ ಅಂತರಿಕ್ಷದಲ್ಲಿ ತಂಗಿತು. ನಮ್ಮ ಈ ಭೂಮಿಯನ್ನು 36 ಸುತ್ತು ಸುತ್ತಿ ಹತ್ತು ಲಕ್ಷ ಮೈಲು ಸಂಚರಿಸಿ ಎಪ್ರಿಲ್ 14ರಂದು ಹಿಂದಿರುಗಿತು ಮತ್ತು ಹಿಂದಿರುಗುವಾಗ ಪ್ರತ್ಯೇಕ ರಾಡ್ ರಾಕೆಟ್‍ಳಗನ್ನು ಬಳಸಿ ಅದರ ವೇಗವನ್ನು 345 ಕಿಲೋಮೀಟರ್ ಆಗಿ ಕಡಿತಗೊಳಿಸಲಾಯಿತು. ಅದು ವಾಯುಮಂಡಲ ಸೇರಿದಾಗ ಗಾಳಿಯೊಂದಿಗೆ ಘರ್ಷಣೆಗೊಂಡು ಕೆಂಪು ಇಟ್ಟಿಗೆಯಂತಾಯಿತು. ಆ ಸಂದರ್ಭದಲ್ಲಿ ಅದರ ಹೊರಮೈಯ ಶಾಖವು 11500 ಸೆಂಟಿಗ್ರೇಡ್ ತಲುಪಿತ್ತು. ಕೊಲಂಬಿಯದ ಒಳ ಪದರಗಳನ್ನು ಶಾಖ ನಿಯಂತ್ರಕ 31,000 ಟೈಲ್‍ಗಳನ್ನು ಅಳವಡಿಸಲಾಗಿತ್ತು. ಇದರಿಂದಾಗಿ ಒಳಗಿದ್ದ ಯಾತ್ರಿಕರು ಸಂಪೂರ್ಣ ಸುರಕ್ಷಿತರಾಗಿದ್ದರು. ಈ ಕೊಲಂಬಿಯವನ್ನು ಅಮೇರಿಕಾವು ಕ್ಯಾಲಿಫೋರ್ನಿಯಾದ ಮರುಭೂಮಿಯಲ್ಲಿ ಇಳಿಸಿತು. ಬರೇ ಹತ್ತೇ ಸೆಕೆಂಡುಗಳ ಅಂತರದಲ್ಲಿ ಅದು ಧರೆಗಿಳಿಯಿತು. ಎರಡು ಲಕ್ಷ ವೀಕ್ಷಕರ ಸಮೂಹವೇ ಇದರ ವೀಕ್ಷಣೆಗಾಗಿ ಅಲ್ಲಿ ನೆರೆದಿತ್ತು. ವಿದೇಶಗಳಿಂದ ಕೋಟಿಗಟ್ಟಲೆ ಜನರು ಟಿ.ವಿ ಮುಖಾಂತರ ಇದನ್ನು ವೀಕ್ಷಿಸಿದರು. ಕೊಲಂಬಿಯದ ಅಗತ್ಯಗಳನ್ನು ಪೂರೈಸಲು ಇಪ್ಪತ್ತು ಟ್ರಕ್‍ಗಳು ಹಲವಾರು ವಿಮಾನಗಳು ಮತ್ತು ಬೇರೆ ರೀತಿಯ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ಕೊಲಂಬಿಯ ರಾಕೆಟ್ ಒಂದು ಸ್ಥೂಪದ ಆಕಾರದಲ್ಲಿ ಮೇಲೆ ಹಾರಿತು ಮತ್ತು ಒಂದು ಗ್ಲಾಡರ್(ವಿಮಾನ)ದಂತೆ ಧರೆಗಿಳಿಯಿತು. ಕೊಲಂಬಿಯಾದ ಪ್ರಯಾಣಿಕರ ಪೈಕಿ ಒಬ್ಬರಾದ ಜಾನ್ ಯಂಗ್ ರವರ ಪ್ರಾಯವು 50 ಆಗಿತ್ತು. 54 ಗಂಟೆಗಳ ಕಾಲ ಯಾವುದೇ ತೂಕವಿಲ್ಲದ ಅವಸ್ಥೆಯಲ್ಲಿ ಈ ವಿಸ್ಮಯಕಾರಿ ಯಾತ್ರೆಯಿಂದ ಹಿಂತಿರುಗಿ ಕ್ಯಾಲಿಫೋರ್ನಿಯಾಕ್ಕೆ ತಲುಪಿದಾಗ ತನಗರಿವಿಲ್ಲದೆಯೇ, “ಎಷ್ಟೊಂದು ವಿಸ್ಮಯಕರ ಹೀಗೆ ಕ್ಯಾಲಿಫೋರ್ನಿಯಾ ತಲುಪುವುದು” ಎಂದರು. ಮಿಸ್ಟರ್ ಜಾನ್ ಯಂಗ್ ರವರು ಕೊಲಂಬಿಯಾದ ಅಂತರಿಕ್ಷ ಯಾತ್ರೆಯಿಂದ ಕ್ಯಾಲಿಫೋರ್ನಿಯಾಕ್ಕೆ ಬಂದಿಳಿದಾಗ ಅವರಿಗೆ ಈ ವಿಷಯವು ಬಹಳ ವಿಸ್ಮಯಕಾರಿಯಾಗಿ ಕಂಡಿತು. ಆದರೆ, ಈ ಲೋಕದ ಎಲ್ಲಾ ವಸ್ತುಗಳು ವಿಸ್ಮಯಕಾರಿಯಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.

ಮಾನವನು ಸವಾರಿಯಲ್ಲಾಗಲಿ, ಕಾಲ್ನಡಿಗೆಯಲ್ಲಾಗಲಿ ಪ್ರಯಾಣಿಸಿದಾಗ ಅಗಣಿತ ಪ್ರಾಪಂಚಿಕ ಕಾರ್ಯಕಾರಣಗಳು ಸೇರಿಕೊಂಡೇ ಇರುತ್ತದೆ. ಆ ಕುರಿತು ಚಿಂತಿಸಿದಾಗ ಒಂದು ಮಾಮೂಲಿ ಯಾತ್ರೆಯೂ ಕೂಡಾ ವಿಸ್ಮಯಕರವಾಗಿ ಬಿಂಬಿತವಾಗುತ್ತದೆ.

ತನ್ನ ಕಾಲುಗಳಿಂದಲೇ ಇಷ್ಟೊಂದು ದೂರ ನಡೆದು ಇಲ್ಲಿಗೆ ತಲುಪಿದೆನಲ್ಲಾ, ಕೊಲಂಬಿಯಾದಿಂದ ಕ್ಯಾಲಿಫೋರ್ನಿಯಾದಲ್ಲಿ ಇಳಿದಂತೆ. ಸಾಮಾನ್ಯ ಜನರು ಅಸಾಮಾನ್ಯ ಘಟನೆಗಳನ್ನು, ಸಾಮಾನ್ಯ ಘಟನೆಗಳನ್ನು ವಿಸ್ಮಯಕಾರಿಯಾಗಿ ನೋಡುತ್ತಾರೆ. ಸಾಮಾನ್ಯ ಘಟನೆಗಳಲ್ಲೂ ಇದೇ ವಿಸ್ಮಯವನ್ನು ಕಾಣುವವನು ಬುದ್ಧಿವಂತನಾಗಿದ್ದಾನೆ.

ಅನುವಾದ: ತಲ್ಹಾ ಇಸ್ಮಾಯಿಲ್ ಕೆ.ಪಿ 

LEAVE A REPLY

Please enter your comment!
Please enter your name here