• ಇಸ್ಮತ್ ಪಜೀರ್

ಇಂದು ಹುತಾತ್ಮ ದಿನ

ಅಂದು ಮೇ ೪.. ೧೭೯೯..

ಬ್ರಿಟಿಷ್ ಪಾಳಯದಲ್ಲಿ ನಡೆಯುತ್ತಿದ್ದ ಸಂತೋಷಕೂಟದಲ್ಲಿ ಬ್ರಿಟಿಷ್ ಗವರ್ನರ್ ಜನರಲ್ ರಿಚರ್ಡ್ ವೆಲ್ಲೆಸ್ಲಿ
ಕೈಯಲ್ಲಿ ಮದ್ಯದ ಲೋಟವನ್ನು ಎತ್ತಿಕೊಂಡು ಸಭೆಯ ಮಧ್ಯಕ್ಕೆ ಬಂದು ” ಚಿಯರ್ಸ್” ಲೇಡೀಸ್ ಎಂಡ್ ಜಂಟ್ಲ್‌ಮೆನ್ ಮದ್ಯದ ಈ ಗುಟುಕು ಇಂಡಿಯಾದ ಹೆಣಕ್ಕೆ…” ಎನ್ನುತ್ತಾ ಗಹಗಹಿಸಿ‌‌ ನಕ್ಕ….
ಆತ ಮೈಸೂರಿನ ಹೆಣ ಎನ್ನಲಿಲ್ಲ..‌ಇತಿಹಾಸದ ಪುಟಗಳಲ್ಲಿ ಬಹಳ ಸ್ಪಷ್ಟವಾಗಿ ದಾಖಲಾಗಿದ್ದೂ ಹಾಗೆಯೇ ” ಇಂಡಿಯಾದ ಹೆಣ…”

ಆದರೆ ಟಿಪ್ಪುವಿನ ವೀರಾಧಿವೀರ ಚರಿತ್ರೆಯನ್ನು ಸಂಪೂರ್ಣವಾಗಿ ತಿರುಚಿ ಅವರ ವ್ಯಕ್ತಿತ್ವವನ್ನು ಸಂಕುಚಿತಗೊಳಿಸುವ, ವಿರೂಪಗೊಳಿಸುವ ಕುಪ್ರಯತ್ನ ಸ್ವಾತಂತ್ರ್ಯ ಪೂರ್ವದಿಂದಲೂ ನಡೆಯುತ್ತಾ ಬಂದಿದೆ..‌ಮೊದಲು ಬ್ರಿಟಿಷರು ತಮ್ಮ ಪರಮ ಶತ್ರು ಟಿಪ್ಪು ಸುಲ್ತಾನರ ವಿರುದ್ಧ ಕುಪ್ರಚಾರದಲ್ಲಿ ತೊಡಗಿದರೆ…‌ಆ ಬಳಿಕ ಆ ಜವಾಬ್ದಾರಿಯನ್ನು ಅವರ ಬೂಟು ನೆಕ್ಕುವ ವರ್ಗಕ್ಕೆ ವಹಿಸಿಕೊಟ್ಟರು.. ಈ ಬೂಟುನೆಕ್ಕಿಗಳು ಬ್ರಿಟಿಷರಿಗೆ ಹೆದರಿ ಅವರಿಂದ ಕ್ಷಮಾಪಣೆ ಯಾಚಿಸಿದವರೇ ಹೊರತು ಅವರ ವಿರುದ್ಧ ಕನಿಷ್ಠ ಧ್ವನಿಯೆತ್ತಿದವರೂ ಅಲ್ಲ. ಬೂಟು ನೆಕ್ಕಿಗಳ ಸ್ವಂತದ ಲೇಖಕನಾದ ಕೇಶವ ಚಂದ್ರ ಸೇನ್ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಅದ್ಯಾವ ಪರಿ ಹೊಗಳುತ್ತಾನೆಂಬುವುದಕ್ಕೆ ಒಂದು ಉದಾಹರಣೆ ನೋಡಿ..
“ಭಾರತದಲ್ಲಿ‌ ಇಂಗ್ಲಿಷ್ ರಾಜ್ಯದ ಉದಯ..
‌ಅಗಲಿದ ದಾಯಾದಿಗಳ ಪುನರ್ಮಿಲನವಷ್ಟೇ…”

ಇಂದು ಈ ಬೂಟು ನೆಕ್ಕಿಗಳು ಮೈಸೂರು ಹುಲಿ ಹಝ್ರತ್ ಟಿಪ್ಪು ಸುಲ್ತಾನರ ದೇಶಭಕ್ತಿಗೆ ಪುರಾವೆ ಕೇಳುತ್ತಿರುವುದು ಇತಿಹಾಸ ಹಿಂದೆಂದೂ ಕಂಡರಿಯದ ಅದ್ಭುತ ಜೋಕ್ ಅಲ್ಲವೇ….?
ಹುಲಿ ಬದುಕಿದ್ದರೂ ಹುಲಿ..
ಸತ್ತರೂ ಹುಲಿ…

ಟಿಪ್ಪು ಬದುಕಿದ್ದ ಕಾಲದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಇನ್ನಿಲ್ಲದಂತೆ ಕಾಡಿದರು…
ಇದೀಗ ಅವರು ಹುತಾತ್ಮರಾಗಿ ಇನ್ನೂರ ಇಪ್ಪತ್ತೊಂದು ವರ್ಷಗಳ ಬಳಿಕ ಅದೇ ಬ್ರಿಟಿಷರ ಬೂಟುನೆಕ್ಕಿಗಳ ಶನಿ‌ಸಂತಾನವನ್ನು‌ ಕಾಡುತ್ತಿದ್ದಾರೆ…

ಹಂ‌‌ ಅಪ್ನಿ ಆಝಾದಿ ಕೋ‌ ಯೂ ಮಿಟಾ ಸಕ್ತೇ ನಹೀ…
ಸರ್ ಕಟಾ ಸಕ್ತೇ ಹೈ….
ಲೇಕಿನ್
ಸರ್ ಜುಕಾ ಸಕ್ತೇ ನಹೀ…

LEAVE A REPLY

Please enter your comment!
Please enter your name here