ಸ್ವಾತಂತ್ರ ದಿನಾಚರಣೆಯ ಹಾರ್ದಿಕ ಶುಭಾಶಯಗಳು

  • ನಸೀಬ ಗಡಿಯಾರ್

ನಾ ಹೆಮ್ಮೆಯಿಂದ ಹೇಳುವೆ
ನಾ ಗರ್ವದಿಂದ ನುಡಿಯುವೆ
ಇದು ನನ್ನ ಭಾರತ…..
ಎದೆಗೂಡಿನ ಮಿಡಿತ
ಬಿಟ್ಟಗಲಲಾರೆ ಎಂದು ಸಾರುತ್ತಾ
ಹೊರೊಡೋಣ ಬಾ ಸ್ನೇಹಿತ
ಮತ್ತೊಮ್ಮೆ ಹೇಳುತಾ
ಇದು ನನ್ನ ಭಾರತಾ||

ಜಾತಿ ಮತವನ್ನು ಮೆಟ್ಟಿ
ಐಕ್ಯತೆಯ ಗೂಡನ್ನು ಕಟ್ಟಿ
ನ್ಯಾಯದ ಪರ ಹೋರಾಡುವ ಎದೆತಟ್ಟಿ
ಧ್ವನಿಯೊಮ್ಮೆ ಬರಲಿ ಮುಗಿಲು ಮುಟ್ಟಿ
ಮತ್ತೊಮ್ಮೆ ಹೇಳುವೆ
ನಾವೇ ಧೀರರು
ನಾವೇ ಎದೆತಟ್ಟಿ ನಿಲ್ಲುವ ಶೂರರು
ನಾವು ಭಾರತೀಯರು

ಹಲವು ವರ್ಣಗಳ ಜನರು
ಭೇದ-ಭಾವ ಮರೆತು ಬದುಕಿದವರು
ನಾವು ಭಾರತೀಯರು
ಹಿಂದೂ, ಮುಸಲ್ಮಾನ ,ಕ್ರೈಸ್ತರ, ತವರು
ನಮ್ಮವರು ,ನಮ್ಮುಸಿರು.. ಎಂದು ಬದುಕುವರು
ಭಾರತೀಯರು…..

ಬಡವನನ ಹಸಿವಿಗೆ ಆಸರೆಯಾದರು ಹಲವರು,
ಪ್ರಕೃತಿ ವಿಕೋಪಕ್ಕೆ ಸೋತವರ ಕೈಹಿಡಿದು ಮೇಲೆತ್ತಿದವರು
ಅನ್ಯಾಯದ ವಿರುದ್ಧ ಜಾತಿಭೇದವೆನ್ನದೆ ಹೋರಾಡಿದವರು
ಹೇಳಿರಿ….
ಇವರಲ್ಲವೇ ನಿಜವಾದ ವೀರರು
ಜಗ ಮೆಚ್ಚುವ ಶೂರರು
ಮತ್ತೊಮ್ಮೆ ಹೇಳುವೆ…
ನಾವು ಭಾರತೀಯರು…..

ನಾ ಹೆಮ್ಮೆಯಿಂದ ಹೇಳುವೆ
ನಾ ಗರ್ವದಿಂದ ನುಡಿಯುವೆ
ಇದು ನನ್ನ ಭಾರತ…..
ಎದೆಗೂಡಿನ ಮಿಡಿತ
ಬಿಟ್ಟಗಲಲಾರೆ ಎಂದು ಸಾರುತ್ತಾ
ಹೊರೊಡೋಣ ಬಾ ಸ್ನೇಹಿತ
ಮತ್ತೊಮ್ಮೆ ಹೇಳುತಾ
ಇದು ನನ್ನ ಭಾರತಾ||

LEAVE A REPLY

Please enter your comment!
Please enter your name here