ಇದು ಅಸಾಧ್ಯ. ನೀವು ಒಪ್ಪದೇ ಇರಬಹುದು. ಆದರೆ, ಸರಳವಾಗಿ ಹೇಳುವುದಾದರೆ ಇದು ಅಸಾಧ್ಯ. ಲೈಂಗಿಕತೆ ಮತ್ತು ಕಲಿಕೆಯು ಜೊತೆಯಾಗಿ ಸಾಗುವುದೇ ಇಲ್ಲ. ಲೈಂಗಿಕ ಶಿಕ್ಷಣದ ಯಾವುದೇ ಪ್ರಮಾಣವು ಲೈಂಗಿಕತೆ ಮತ್ತು ಶಿಕ್ಷಣದ ನಡುವೆ ಒಪ್ಪಂದ ಮಾಡಲು ಆಗದು. ಒಂದೋ ಲೈಂಗಿಕತೆ ಅಥವಾ ಶಿಕ್ಷಣ, ಆದರೆ ಎರಡು ಜಂಟಿಯಾಗಿ ಸಾಧ್ಯವಿಲ್ಲ. ಇದು ಒಂದು ವೈಯಕ್ತಿಕ ಕಾರಣವಲ್ಲ ಬದಲಾಗಿ ವೈಜ್ಞಾನಿಕ ವಾಸ್ತವ. ಮಿದುಳು ವಿಜ್ಞಾನ(ಅಥವಾ ಶಾಸ್ತ್ರ)ದಲ್ಲಿ ಇದಕ್ಕೆ ಪುರಾವೆಗಳಿವೆ.

ಪ್ರೌಢತೆಯ ಆರಂಭದಲ್ಲಿ ಲೈಂಗಿಕ ಆಸಕ್ತಿಯು ಸ್ಷಪ್ಟವಾಗಿ ವಿರುದ್ಧ ಲಿಂಗದೊಂದಿಗೆ ಭಾವೋದ್ರಿಕ್ತ ಪ್ರೇಮವನ್ನು ಹೊಂದಿರುತ್ತದೆ ಮತ್ತು ಅದು ಪೂರ್ಣವಾಗುವವರೆಗು ಬೇಡಿಕೆಯು ಸುಳಿದಾಡುತ್ತಲೇ ಇರುತ್ತದೆ. ಭಾವೋದ್ರಿಕ್ತ ಪ್ರೇಮದಿಂದ ಪೂರ್ಣವಾಗಿ ಆದ್ರ್ರವಾದ ಮಿದುಳು ಮೂರು ಹಿತಕರವಾದ ರಸಾಯನಿಕದ ಚಿಲುಮೆ ಇದ್ದಂತೆ- ಡೋಪಮೈನ್,ಅಥವಾ ಎಪಿನ್ಫ್ರಿನ್ ಮತ್ತು ಸಿರೋಟೋನಿನ್  (ಉಲ್ಲೆಖ: ಡಾ. ಪಾಟ್ರಿಯಾ, ಉಪನ್ಯಾಸಕರು ಮನೋವೈದ್ಯಶಾಸ್ತ್ರ-ಲೊಯೋಲಾ ವಿಶ್ವವಿದ್ಯಾನಿಲಯ). ಅವುಗಳ ಪ್ರಭಾವದಿಂದ ಪ್ರೇಮಿಯು ಉನ್ಮಾದ ಸ್ಥಿತಿಯಲ್ಲಿರುತ್ತಾನೆ. ಬಹುಪಾಲು ಈ ಸ್ಥಿತಿಯು ಡ್ರಗ್ಸ್‍ನಿಂದ ಪ್ರೇರಿತವಾದ ಮಾದಕತೆಯನ್ನೇ ಹೊಲುತ್ತದೆ. ಕೊಕೇನ್ ಸೇದಿದ ಮಿದುಳು ಮತ್ತು ವಿರುದ್ಧ ಲಿಂಗದ ಪ್ರೇಮದಲ್ಲಿ ಆದ್ರ್ರಗೊಂಡ ಮಿದುಳು ಗಮನಾರ್ಹವಾಗಿ ಒಂದೇ ತೆರನಾದುದಾಗಿದೆ. ಡಾ. ಹೆಲೆನ್ ಫಿಶರ್(ಸೈಕೋಲಜಿ ಟುಡೇ)ರವರ ಪ್ರಕಾರವಾಗಿ, ವ್ಯಕ್ತಿಯು ಪ್ರೇಮದಲ್ಲಿರುವಾಗ ಮತ್ತು ತೀವ್ರವಾಗಿ ಕೊಕೇನ್ ಸೇವಿಸಿದಾಗ ಮಿದುಳಿನ ಇದೇ ರಸಾಯನಿಕಗಳು ಮತ್ತು  ನರವೈಜ್ಞಾನಿಕ ಮಾರ್ಗಗಳು ಕಾರ್ಯಪ್ರವೃತ್ತವಾಗುತ್ತವೆ. ಸ್ವೀಕರಿಸಿದ ಸ್ವಲ್ಪ ಸಮಯದ ನಂತರದಲ್ಲಿ ಕೊಕೇನ್‍ನ ಪರಿಣಾಮವು ಇಳಿದುಹೋಗುತ್ತದೆ ಆದರೆ, ಪ್ರೇಮದ ಅಮಲು ದಿನಗಳಿಂದ ವರ್ಷಗಳ ಅವಧಿಯ ವರೆಗೂ ಉಳಿದು ಬಿಡುತ್ತದೆ. ಅದು ಪ್ರೇಮ ಪ್ರಕರಣಗಳು ಹೇಗೆ ತೆರೆದುಕೊಳ್ಳುತ್ತದೆ ಮತ್ತು ಎಷ್ಟು ದೀರ್ಘವಾಗಿರುತ್ತದೆ ಎಂಬುವುದನ್ನು ಅವಲಂಭಿತವಾಗಿದೆ. ನರವಿಜ್ಞಾನಿಯಾಗಿರುವ ಡಾ. ಲ್ಯಾರಿ ಯಂಗ್ ರವರು ತನ್ನ ಬರಹದಲ್ಲಿ “ಪ್ರೇಮ ಚಟ” ಎಂಬ ವಸ್ತುವೊಂದು ಅಸ್ತಿತ್ವದಲ್ಲಿದೆ ಎಂಬುದನ್ನು ಉಲ್ಲೇಖಿಸುತ್ತಾರೆ.

ಪ್ರೇಮದ ಆರಂಭಿಕ ಹಂತದಲ್ಲಿ ಪ್ರೇಮಿಯು ಆತ/ಆಕೆಯ ಸಂಗಡಕ್ಕಾಗಿ ಅವಿವೇಕದ ಬ್ರಾಂತಿಯ ಹಿಡಿತದಲ್ಲಿರುತ್ತಾರೆ. ವಿಶೇಷವಾಗಿ, ತನ್ನ ಅಥವಾ ಆಕೆಯ ಪ್ರೇಮವು ಒಂದೇ ತೀವ್ರತೆಯಲ್ಲಿ ವಿನಿಮಯವಾಗುತ್ತಿದೆಯೇ ಎಂಬುದರ ಬಗ್ಗೆ ಆತ/ಆಕೆಯಲ್ಲಿ ಖಚಿತವಿಲ್ಲದಿರುವಾಗ ಹೀಗಾಗುತ್ತದೆ. ಈ ಬ್ರಾಂತಿಯ ಸ್ಥಿತಿಯು ಸಿರೋಟೋನಿನ್ ಪ್ರಮಾಣವನ್ನು ಪ್ರೇಮಿಯ ಮಿದುಳಿನಲ್ಲಿ ಕುಂಠಿತಗೊಳಿಸುತ್ತದೆ. ಅಬ್ಸೆಸ್ಸಿವ್-ಕಂಪಲ್ಸಿವ್ ನ್ಯೂರೋಟಿಕ್ ಡಿಸ್‍ಆರ್ಡರ್ ಎಂಬ ಸಮಸ್ಯೆಯಲ್ಲಿ ಬಳಲುತ್ತಿರುವ ರೋಗಿಗಳ ಮಿದುಳಿನಲ್ಲಿ ಸಿರೋಟೋನಿನ್ ಪ್ರಮಾಣವು ಕುಂಠಿತವಾಗಿರುವುದಕ್ಕೆ ನರವಿಜ್ಞಾನ ಲ್ಯಾಬ್‍ಗಳಲ್ಲಿ ಪುರಾವೆಗಳಿವೆ. ಆದ್ದರಿಂದ ಭಾವೋದ್ರಿಕ್ತ ಪ್ರೇಮಿಯ ಬ್ರಾಂತಿಯು ಹೆಚ್ಚು-ಕಡಿಮೆ ಔಅಆ ರೋಗಿಯಲ್ಲಿ ಗಮನಿಸಿರುವ ಬ್ರಾಂತಿಯನ್ನೇ ಹೋಲುತ್ತದೆ.

ಪ್ರೇಮಾದ್ರ್ರಗೊಂಡ ಮಿದುಳಿಗೆ ಕಲಿಸುವುದು-ಒಂದು ಕಠಿಣ ಕಾರ್ಯ

ಭಾವೋದ್ರಿಕ್ತ ಪ್ರೇಮಿಯ ಮಿದುಳಿನ ಭಾಗಗಳಾದ ಅಮಿಗ್ಡಾಲ, ಫ್ರಂಟಲ್, ಪ್ರಫ್ರಂಟಲ್ ಮತ್ತು ಕಾರ್ಟಿಸಿಸ್ ಸಮತೋಲನ ತಪ್ಪುತ್ತದೆ ಎಂದು ವೈಜ್ಞಾನಿಕ ಸಾಕ್ಷ್ಯಗಳು ಘೋಷಿಸುವಾಗ, ಶಿಕ್ಷಣ ತಜ್ಞರು ಅದನ್ನು ಕಡೆಗಣಿಸಲು ಸಾಧ್ಯವಿಲ್ಲ. ವಿರುದ್ಧ ಲಿಂಗದ ಪ್ರೇಮ ಕಡುಬಯಕೆ ಸ್ಥಿತಿಯಲ್ಲಿರುವ ವಿದ್ಯಾರ್ಥಿಗಳ ಗುಂಪಿಗೆ ಬೋಧಿಸುವ ಸಂದಿಗ್ಧತೆಯ ಬಗ್ಗೆ ಅವರು ಗಮನಿಸಬೇಕಿದೆ. ಶಿಕ್ಷಕರು ಗಣಿತ ಮತ್ತು ವಿಜ್ಞಾನವನ್ನು ಬೋಧಿಸುವಾಗ ವಿದ್ಯಾರ್ಥಿಗಳಿಗೆ ಅಖಂಡವಾದ, ಭವ್ಯ ಸಮತೋಲನದಲ್ಲಿರುವ ಮಿದುಳಿನ ಫ್ರಂಟಲ್ ಮತ್ತು ಪ್ರಫ್ರಂಟಲ್ ಪಟಲಗಳು ಅಗತ್ಯವಾಗಿದೆ. ಮಿದುಳಿನ ಈ ಭಾಗಗಳು ಸಂಕೀರ್ಣವಾದ ಜ್ಞಾನದ ಸ್ವಭಾವವನ್ನು, ವ್ಯಕ್ತಿತ್ವದ ಅಭಿವ್ಯಕ್ತಿಯನ್ನು, ನಿರ್ಧಾರ ಕೈಗೊಳ್ಳುವಿಕೆ ಮತ್ತು ಸಾಮಾಜಿಕ ನಡವಳಿಕೆಯನ್ನು ಹಿತವಾಗಿಸುವ ಯೋಜನೆಯನ್ನು ರೂಪಿಸುವ ಸಲಕರಣೆಗಳಾಗಿದೆ.

ಅಮಲುಭರಿತ ಫ್ರಂಟಲ್ ಪಟಲವು ಅಗತ್ಯ ಮಿದುಳಿನ ಕಾರ್ಯಗಳಾದ ಭವಿಷ್ಯವನ್ನು ಯೋಜಿಸುವುದು, ತೀರ್ಪು, ನಿರ್ಧಾರ ಕೌಶಲ್ಯ, ಗಮನ ಕೌಶಲ್ಯ ಮತ್ತು ಬಯಸಿದುದನ್ನು ತ್ಯಜಿಸುವವುಗಳಲ್ಲಿ ವಿಫಲವಾಗುತ್ತದೆ. ಯಾವಾಗ ಅಮಿಗ್ಡಾಲವು ಭಾವೋದ್ರಿಕ್ತ ಪ್ರೇಮದಿಂದ ಆದ್ರ್ರಗೊಳ್ಳುತ್ತದೋ, ಆಗ ವಿದ್ಯಾರ್ಥಿಯ ಭಾವಸ್ಥಿತಿಯು ಹುಚ್ಚೆದ್ದು ಬಿಡುತ್ತದೆ. ಉತ್ತಮ ಬೋಧನ ತಂತ್ರಗಳಿಂದ ಆ ಮಿದುಳಿಗೆ ಗಣಿತ ಮತ್ತು ವಿಜ್ಞಾನದ ಪರಿಕಲ್ಪನೆಯನ್ನು ಸುರಿಯುವುದರಲ್ಲಿ ಯಾವ ಲಾಭವಿದೆ?. ಬೋಧನಾ ಪ್ರಕ್ರಿಯೆಗೆ ಪ್ರತಿಕ್ರಿಯೆಯಾಗಿ ವಿದ್ಯಾರ್ಥಿಯ ಮಿದುಳು ಅರ್ಥ ಮತ್ತು ರೂಪಗಳನ್ನು ನಿರ್ಮಿಸುತ್ತದೆ ಮತ್ತು ದಾಖಲಿಸುತ್ತದೆ. ಎಷ್ಟೇ ವಿದ್ಯಾರ್ಥಿ ಕೇಂದ್ರಿತವಾಗಿದ್ದರೂ, ಹೆಚ್ಚಿನ ಬೋಧನಾ ತಂತ್ರಗಳ ವಿಫಲತೆಗೆ ಕಾರಣವೇನೆಂದರೆ- ಲೈಂಗಿಕ ಹಾರ್ಮೋನುಗಳು ಅಪಹರಿಸಿರುವ ವಿದ್ಯಾರ್ಥಿಗಳ ಬುದ್ಧಿಯ ಬಾಗಿಲನ್ನು ತಟ್ಟುವುದರಲ್ಲಿ ಕಾಳಜಿಯಿಂದ ಹೆಣೆದ ತಂತ್ರಗಳು ವಿಫಲವಾಗುತ್ತಿದೆ.

ಪ್ರೇಮ ಪ್ರಕರಣಗಳು ಅಂತಸ್ಥಿನ ಸಂಕೇತಗಳಾದಾಗ ಮತ್ತು ವಿದ್ಯಾರ್ಥಿಗಳ ನಡುವೆ ಮಿತ್ರ ವೃಂದಗಳಲ್ಲಿ ಸ್ವೀಕಾರದ ಅರ್ಹತೆಗಳಾದಾಗ ಪರಿಸ್ಥಿತಿಯು ಅನಿಶ್ಚಿತ ಅಪಾಯಕ್ಕೀಡಾಗುತ್ತದೆ. ಡಾ. ಸಿ.ಜೆ ಜಾನ್ ರವರ ಪ್ರಕಾರವಾಗಿ, “ಮಾಧ್ಯಮಗಳಲ್ಲಿ ರೊಮ್ಯಾನ್ಸ್‍ನ್ನು ವೈಭವೀಕರಿಸಿ ತೋರಿಸುವುದು ಕ್ರೂರ ವಾಸ್ತವಿಕತೆಯಾಗಿದೆ. ಇದು ಯುವ ಮನಸ್ಸುಗಳ ಮೇಲೆ ಎಷ್ಟೊಂದು ಪ್ರಭಾವ ಬೀರುತ್ತದೆಂದರೆ, ಶಾಲೆಯಲ್ಲಿ ಪ್ರಿಯಕರ ಅಥವಾ ಪ್ರಿಯಕರಿ ಇಲ್ಲದಿರುವುದು ಕಳಂಕ ಎಂದು ಭಾವಿಸಲಾಗುತ್ತದೆ. ನಾಯಿ(ಪಪ್ಪಿ) ಪ್ರೇಮ ಪ್ರಕರಣಗಳ ಸಂಭವನೀಯತೆಯ ವಿದ್ಯಾಮಾನಗಳು ಅತೀ ಹೆಚ್ಚಿರುವುದರಿಂದ ಅದನ್ನು ಸೂಕ್ಷ್ಮವಾಗಿ ಬಗೆಹರಿಸಬೇಕಿದೆ. ಅಲ್ಲದೆ, ಶಿಕ್ಷೆಯು ಅದಕ್ಕೆ ಮದ್ದಲ್ಲ”. (ಟೈಮ್ಸ್ ಆಫ್ ಇಂಡಿಯಾ, ದಿನ ಪತ್ರಿಕೆ-ಡಿಸೆಂಬರ್ 24, 2017)

ಪರಿಹಾರ ಏನು?

ವಾಸ್ತವದಲ್ಲಿ ಈ ಉಭಯಸಂಕಟಕ್ಕೆ ಪರಿಹಾರವಿಲ್ಲ. ಪ್ರಕೃತಿಯ ಕರೆಗೆ ನಾವು ಹೇಗೆ ತಡೆಗಟ್ಟಲು ಸಾಧ್ಯ? ವಿರುದ್ಧ ಲಿಂಗದೊಂದಿಗಿನ ಪ್ರೇಮವು ಬದುಕು ಉಳಿಯುವ ಮೌಲ್ಯವಾಗಿದೆ ಮತ್ತು ಅದು ತನ್ನದೇ ಆದ ಚಲನೆಯನ್ನು ಹೊಂದಿದೆ. ಆದರೆ, ಮನುಷ್ಯರನ್ನು ಪ್ರಾಣಿಗಳಿಂದ ಬೇರ್ಪಡಿಸುವ ಪ್ರಮುಖ ಅಂಶವೇನೆಂದರೆ, ಮನುಷ್ಯನು ತನ್ನ ಸಹಜ ಆಸಕ್ತಿ/ಬಯಕೆ(ಲೈಂಗಿಕತೆ, ಪ್ರಣಯ ಇತ್ಯಾದಿ)ಗಳ ಈಡೇರಿಕೆಯನ್ನು ವಿಳಂಬಿಸಬಹುದು. ಅದು ತೀವ್ರತೆಯು ಎಷ್ಟಿದ್ದರೂ ಸರಿಯೇ. ನಾವು ದೇವನು ಕರುಣಿಸಿರುವ ಈ ಕೊಡುಗೆಯನ್ನು ಅವಲಂಭಿಸಬಹುದಾಗಿದೆ.

ಭಾರತದ ಸಂಸ್ಕøತಿಯಂತೆ ಮದುವೆ ಒಡಂಬಡಿಕೆಗೆ ಒಳಪಡುವ ವರೆಗೂ ಇಂದ್ರಿಯಾಸಕ್ತಿಗಳನ್ನು ನಿಗ್ರಹಿಸುವುದನ್ನು ಪ್ರತಿಪದಿಸಲಾಗುತ್ತದೆ, ಈಡೇರಿಕೆಯನ್ನು ವಿಳಂಬಿಸುವುದನ್ನು ಅಭ್ಯಸಿಸುವುದು ಉತ್ತಮ ಆಯ್ಕೆಯಾಗಿದೆ. ಹೌದು, ವಿಜ್ಞಾನವು ಕೂಡಾ ಇಂದ್ರಿಯಾಸಕ್ತಿ ಈಡೇರಿಕಯನ್ನು ವಿಳಂಬಿಸುವ ವೈಯಕ್ತಿಕ ಗುಣವನ್ನು ಬೆಳೆಸುವುದಕ್ಕೆ ಒಲವು ತೋರುತ್ತದೆ. ವೈಯಕ್ತಿಕ ಗುಣಗಳಾದ ಆಸಕ್ತಿ ಈಡೇರಿಸುವುದನ್ನು ವಿಳಂಬಿಸುವುದು ಮತ್ತು ಸ್ವನಿಯಂತ್ರಣಗಳು ಶಾಲೆಯಲ್ಲಿ ಉತ್ತಮ ಫಲಿತಾಂಶ, ಸಾಧನೆ, ಉತ್ತಮ ನಡತೆ ಮತ್ತು ಜೀವನದಲ್ಲಿ ಆತ್ಮತೃಪ್ತಿ ಮುಂತಾದವುಗಳೊಂದಿಗೆ ಬೆಸೆದುಕೊಂಡಿದೆ ಎಂಬುವುದಕ್ಕೆ ಅನೇಕ ಸಾಕ್ಷ್ಯಗಳಿವೆ. (ಉದಾ: ಸೆಂಟ್ರಲ್ ಫ್ಲೊರಿಡಾದ ಜೆ.ಎಸ್ ಹೆರ್ನ್‍ಡನ್ ವಿಶ್ವವಿದ್ಯಾನಿಲಯ, 2011)

ಪ್ರತಿಫಲವನ್ನು ವಿಳಂಬಿಸುವುದು ಅಗತ್ಯ

ಯಾರು ಪ್ರತಿಫಲವನ್ನು ವಿಳಂಬಿಸುವ ಕಲೆಯಲ್ಲಿ ನಿಪುಣತೆಯನ್ನು ಗಳಿಸಿದ್ದಾರೋ ಅವರು ಕಾರ್ಯ ನಿರ್ವಹಣೆಯಲ್ಲಿ ಶ್ರೇಷ್ಠತೆಯನ್ನು ಸಾಧಿಸುತ್ತಾರೆ ಎಂಬ ಸತ್ಯವನ್ನು ಜಗತ್ತು ಗುರುತಿಸಲು ತೊಡಗಿದೆ. ಭಾರತೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ತರಬೇತುದಾರರಾದ ಪುಲ್ಲೇಲಾ ಗೋಪಿಚಂದ್ ರವರು ಹೇಳುತ್ತಾರೆ, ರಿಯೋ ಒಲಂಪಿಕ್ಸ್ ಮುಂಚಿನ ತೀವ್ರವಾದ ಅಭ್ಯಾಸದ ಅವಧಿಯಲ್ಲಿ ಅವರು ಪಿ.ವಿ ಸಿಂಧು ರವರ ಸ್ಮಾರ್ಟ್‍ಫೋನ್‍ನ್ನು ತೆಗೆದಿರಿಸಿಕೊಂಡಿದ್ದರು. ಪಿ.ವಿ ಸಿಂಧು ರವರು ಈ ಕಾರ್ಯ ನೀತಿಗೆ ನಿಖರತೆಯಿಂದ ಅಂಟಿಕೊಂಡಿದ್ದರಿಂದ ಒಲಂಪಿಕ್ಸ್‍ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದರು. ಇದು ಕ್ರೀಡೆಯಲ್ಲಾದರೆ, ಇನ್ನು ಶೈಕ್ಷಣಿಕವಾಗಿ ಜೆ.ಇ.ಇ 2017ರಲ್ಲಿ ರ್ಯಾಂಕ್ ಗಳಿಸಿರುವ ಸರ್ವೇಶ್ ಮೆಹ್ತಾನಿಯಲ್ಲಿ ಆತನ ಕಲಿಕಾ ಅಭ್ಯಾಸದ ಕುರಿತು ವಿಚಾರಿಸಿದಾಗ:

“ನಾನು ಕಳೆದ ಎರಡು ವರ್ಷಗಳಿಂದ ನನ್ನ ಸ್ಮಾರ್ಟ್‍ಫೋನ್‍ನ್ನು ಉಪಯೋಗಿಸಲೇ ಇಲ್ಲ. ಸ್ಮಾರ್ಟ್‍ಫೋನ್ ಉಪಯೋಗಿಸುವಾಗ ನನಗೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ನನಗೆ ನನ್ನ ಹವ್ಯಾಸಗಳನ್ನು ಹೆಚ್ಚಾಗಿ ಸಾಧಿಸಲಾಗಲಿಲ್ಲ. ಅಲ್ಲದೆ, ನಾನು ನನ್ನ ಗೆಳೆಯರೊಂದಿಗೆ ಸುತ್ತಾಡುವುದನ್ನು ಕಡಿತಗೊಳಿಸಿದ್ದೆ”.

ತಮ್ಮ ಕ್ಷೇತ್ರಗಳಲ್ಲಿ ಶ್ರೇಷ್ಠತೆಯನ್ನು ಗಳಿಸಿರುವ ವ್ಯಕ್ತಿತ್ವಗಳು ತಮ್ಮ ಗುರಿಯ ಕಡೆಗೆ ತಮ್ಮ ಗಮನವನ್ನು ಕೇಂದ್ರೀಕರಿಸುವ ಅಗತ್ಯವನ್ನು ಅರಿತುಕೊಂಡಿದ್ದರು. ಉತ್ತಮ ಕಾರ್ಯ ನಿರ್ವಹಣೆಯು 100% ಮಾನಸಿಕ ಮತ್ತು ದೈಹಿಕ ಶಕ್ತಿಯ ವಿನಿಯೋಗವನ್ನು ಬೇಡುತ್ತದೆ. ಆದ್ದರಿಂದ ಕೆಲವು ಪ್ರತಿಫಲವನ್ನು ವಿಳಂಬಿಸುವುದು ಅಗತ್ಯ ಗುಣವಾಗಿದ್ದು, ವಿದ್ಯಾರ್ಥಿಗಳು ಭವಿಷ್ಯ ನಿರ್ಮಾಣಕ್ಕಾಗಿ ಅದನ್ನು ಅತಿಯಾದ ಮಹತ್ವಾಕಾಂಕ್ಷೆಯೊಂದಿಗೆ ಬೆಳೆಸಬೇಕು.

 

“ಈಗ ಬೇಡ” ಎನ್ನಲು ಕಲಿಯುವುದು

ಪ್ರತಿಫಲವನ್ನು ವಿಳಂಬಿಸುವುದಕ್ಕೆ ವಿಶೇಷ ತಂತ್ರಗಾರಿಕೆ ಏನೂ ಇಲ್ಲ. ಪ್ರಾಚೀನ ಗುರುಗಳು ಅವರ ವಿದ್ಯಾರ್ಥಿಗಳಿಗೆ ಕೆಲವು ಮಾರ್ಗದರ್ಶಕ ತತ್ವಗಳನ್ನು ಅನುಸರಿಸಲು ಬೋಧಿಸುವುದರ ಮೂಲಕ ಶಿಸ್ತೀಕರಿಸಿದ್ದರು. ಅವರ ಪ್ರಕಾರವಾಗಿ ವಿದ್ಯಾರ್ಥಿಯು ಬ್ರಹ್ಮಚಾರಿಯಾಗಿರುವುದು ಅಗತ್ಯವಾಗಿತ್ತು. ಇಲ್ಲವಾದಲ್ಲಿ ಆತನು ವಿದ್ಯಾರ್ಥಿಯಾಗಿ ಅರ್ಹತೆ ಪಡೆಯಲು ಸಾಧ್ಯವಿರಲಿಲ್ಲ. ವಿದ್ಯಾರ್ಥಿಗಳಲ್ಲಿ “ಪ್ರತಿಫಲವನ್ನು ವಿಳಂಬಿಸುವ” ಗುಣವನ್ನು ಬೆಳೆಸುವುದು ಆಧುನಿಕ ಶಿಕ್ಷಕರಿಗೆ ಒಂದು ಕಠಿಣ ಕಾರ್ಯವಾಗಬಹುದು. ತಂತ್ರಜ್ಞಾನವು ಜಗತ್ತಿನ ವೇಗವನ್ನು ಭಯಭೀತವಾಗುವಂತೆ ಹೆಚ್ಚಿಸಿರುವುದರಿಂದ, ನವ ಪೀಳಿಗೆಯು “ಪ್ರತಿಫಲವನ್ನು ವಿಳಂಬಿಸುವುದರ” ಹಿಂದಿರುವ ವಿವೇಕದ ಬಗ್ಗೆ ಅಜ್ಞರಾಗಿದ್ದಾರೆ. ಇಡೀ ಜಗತ್ತು ತುರ್ತಾದ ಪ್ರತಿಫಲದ ಕಠಿಣ ಅಲೆಯಲ್ಲಿ ಕಂಪಿಸುತ್ತಿರುವಾಗ, ವಿದ್ಯಾರ್ಥಿಗಳಿಗೆ ಪ್ರತಿಫಲವನ್ನು ವಿಳಂಬಿಸುವುದರ ಅಗತ್ಯವನ್ನು ಅರ್ಥೈಸುವಂತೆ ಮಾಡುವುದು ಅಸಾಧ್ಯವೇ ಸರಿ.

ವಿದ್ಯಾರ್ಥಿಗಳಲ್ಲಿ “ಈಗ ಬೇಡ” ಎಂದು ಹೇಳುವಂತೆ ಮಾಡುವ ಸಾಮಥ್ರ್ಯವನ್ನು ಹೇಗಾದರು ಬೆಳೆಸಬಹುದು. ಯಾವಾಗ ಅವರ ಮುಂದೆ ತುಂಬಾ ತುರ್ತಾದ ಅಥವಾ ಮಹತ್ವದ ಬೇಡಿಕೆಯಿದೆ ಮತ್ತು ಅದಕ್ಕೆ ಅವರಲ್ಲಿ ಒಂದು ಬಲವಾದ “ಒಪ್ಪಿಗೆ” ಇದ್ದಾಗ ಇದು ಸಾಧ್ಯ. ಬೇರೆ ಮಾತಿನಲ್ಲಿ ಹೇಳುವುದಾದರೆ, ಅದು ಅವರ ಮಹತ್ವಾಕಾಂಕ್ಷೆ, ಕನಸು, ಗುರಿಯೆಡೆಗಿರುವ ತೀವ್ರವಾದ ಉತ್ಸಾಹ ಮತ್ತು ಅದರೆಡೆಗಿರುವ ಅವರ ಸಮರ್ಪಣಾಭಾವ ಮುಂತಾದವುಗಳು ಅವರಿಗೆ ಅವರ ಕಲಿಕೆಯೆಡೆಗಿನ ಬದ್ಧತೆಯ ಸ್ಪೂರ್ತಿಯನ್ನು ನಡುಗಿಸುವ ವಿಷಯಗಳಿಗೆ “ಈಗ ಬೇಡ” ಎನ್ನಲು ಸಹಕರಿಸುತ್ತದೆ.

ಒಂದು ಸಮಗ್ರತಾ ದೃಷ್ಟಿಯ ಲೈಂಗಿಕ ಶಿಕ್ಷಣ

ವಾಸ್ತವದಲ್ಲಿ, ಅಂಗರಚನಾಶಾಸ್ತ್ರ ಅಥವಾ ಲೈಂಗಿತೆಯ ಜೀವಶಾಸ್ತ್ರದ ಬಗೆಗಿನ ಜ್ಞಾನವು ಎಲ್ಲಾ ರೀತಿಯಲ್ಲಿಯೂ ಸೈಕೋ-ಸೆಕ್ಸುವಲ್ ಸಮತೋಲನದ ಆರೋಗ್ಯಪೂರ್ಣ ವ್ಯಕ್ತಿಯ ಭರವಸೆಯನ್ನು ನೀಡಬೇಕಾಗಿಲ್ಲ. ಅಂತಿಮವಾಗಿ,  ತಾರ್ಕಿಕ ವಿಚಾರಕ್ಕೆ ಅಂಟಿಕೊಳ್ಳುವುದು ಆದರೆ, ನಿರ್ಭಂದಿತ ಆಯ್ಕೆಗಳನ್ನು ತೊರೆಯುವುದು (ಆತನ ಲೈಂಗಿಕ ಪ್ರಚೋದನೆಗಳೊಂದಿಗೆ ವ್ಯವಹರಿಸುವಾಗ) ಪ್ರತಿಫಲವನ್ನು ವಿಳಂಬಿಸುವ ಕಲೆಯಲ್ಲಿ ನಿಪುಣನಾಗುವುದು ಈ ವಿದ್ಯಾರ್ಥಿಯಾಗಿದ್ದಾನೆ. ಈ ರೀತಿಯಾದ ವಿದ್ಯಾರ್ಥಿಗಳು ಮಾತ್ರ ಆತ/ಆಕೆಯು ಲೈಂಗಿಕ ಶಿಕ್ಷಣ ತರಗತಿಗಳಲ್ಲಿ ಗಳಿಸಿದ ಪಾಠವನ್ನು ನೈಜವಾಗಿ ಅಳವಡಿಸಿಕೊಳ್ಳಬಲ್ಲರು. ವೈಯಕ್ತಿಕ ಜೀವನದಲ್ಲಿ ತಾರ್ಕಿಕ ಆಯ್ಕೆಯನ್ನು ಮಾಡುತ್ತಾರೆಂಬ ನಿಟ್ಟಿನಲ್ಲಿ ಲೈಂಗಿಕ ಶಿಕ್ಷಣವನ್ನು ಮನಸ್ಸುಗಳಿಂದ ಬೇರ್ಪಡಿಸಿ ಕಾಣಲು ಸಾಧ್ಯವಿಲ್ಲ.

ಲೈಂಗಿಕತೆಯು ಮನೋವೈಜ್ಞಾನಿಕ, ಅಸ್ತಿತ್ವವಾದ, ನೈತಿಕತೆ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಪರಿಣಾಮಗಳಿಗೆ ಪೂರಕವಾಗಿಸದಿದ್ದರೆ, ವಿದ್ಯಾರ್ಥಿಗಳ ಲೈಂಗಿಕ ಜೀವಶಾಸ್ತ್ರದ ಜ್ಞಾನವು ಭ್ರಷ್ಟ ರೀತಿಯಲ್ಲಿ ಲೈಂಗಿಕತೆಯನ್ನು ಪ್ರಾಯೋಗಿಸುವ ಸಾಧ್ಯತೆಗಳಿವೆ. ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಕಾರ್ಯಕ್ರಮಗಳು ಅದರ ಉದ್ದೇಶಕ್ಕೆ ಇನ್ನೊಂದು ಆಯಾಮವನ್ನು ಸೇರಿಸಲಿ. ಅದು ಕೆಲವೊಂದು ಪ್ರತಿಫಲವನ್ನು ವಿಳಂಬಿಸುವ ಗುರಿಯೆಡೆಗೆ ವಿದ್ಯಾರ್ಥಿಗಳನ್ನು ಸಬಲೀಕರಿಸಲಿ. ಲೈಂಗಿಕತೆ ಏನು ಎನ್ನುವಷ್ಟೇ ಲೈಂಗಿಕತೆ ಯಾಕೆ ಎಂಬುವುದೂ ಅಗತ್ಯ. ಈ ಪ್ರಶ್ನೆಗೆ ಪ್ರತಿಯೊಂದು ಸಂಸ್ಕøತಿಯಲ್ಲಿ ಅದರದೇ ಆದ ವ್ಯಾಖ್ಯಾನವಿದೆ. ಲೈಂಗಿಕ ಶಿಕ್ಷಣವು ಸೂಕ್ಷವಾಗಿರಬೇಕು.

 

ಕೃಪೆ: ಟೀಚರ್ ಆಫ್ ಇಂಡಿಯಾ

 

 

 

LEAVE A REPLY

Please enter your comment!
Please enter your name here